ಸತತ 2ನೇ ದಿನ ಪಾಕಿಸ್ತಾನ ಡ್ರೋನ್ ಹಾಗೂ ಕ್ಷಿಪಣಿ ದಾಳಿ ಪ್ರಯತ್ನ ನಡೆಸಿದೆ. ಭಾರತದ ಹಲವು ನಗರ, ಶ್ರೀನಗರ ವಿಮಾನ ನಿಲ್ದಾಣ ಸೇರಿದಂತೆ ಹಲವು ಕಡೆ ಟಾರ್ಗೆಟ್ ಮಾಡಿ ದಾಳಿ ಮಾಡಿದೆ. ಭಾರತದ 26 ಗಂಟೆ 100 ಡ್ರೋನ್ ಮೂಲಕ ದಾಳಿಗೆ ಯತ್ನ ನಡೆಸಿದೆ. ಆದರೆ ಪಾಕಿಸ್ತಾನದ ಪ್ರತಿ ದಾಳಿಗೆ ತಿರುಗೇಟು ನೀಡಲಾಗಿ

ನವದೆಹಲಿಮ(ಮೇ.10) ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಆಪರೇಶನ್ ಸಿಂದೂರ್ ಪಾಕಿಸ್ತಾನವನ್ನು ಬೆಚ್ಚಿ ಬೀಳಿಸಿದೆ. ಇದರಿಂದ ದಿಕ್ಕಾಪಾಲಾಗಿರುವ ಪಾಕಿಸ್ತಾನ ಇದೀಗ ಭಾರತದ ವಿರುದ್ದ ಸತತ ಡ್ರೋನ್ ದಾಳಿ ನಡೆಸುತ್ತಿದೆ. ಮೇ.7 ರಂದು ಭಾರತ ನಡೆಸಿದ ಆಪರೇಶನ್ ಸಿಂದೂರ್ ದಾಳಿ ಬೆನ್ನಲ್ಲೇ ಪಾಕಿಸ್ತಾನ ದಾಳಿ ನಡೆಸುತ್ತಿದೆ. ಇದು ಸತತ 3ನೇ ದಿನವೂ ಮುಂದುವರಿದಿ. ಇಂದು ಪಾಕಿಸ್ತಾನ ನಡೆಸಿದ ಡ್ರೋನ್ ದಾಳಿ ಜಮ್ಮು ಕಾಶ್ಮೀರದ ಬಾರಾಮುಲ್ಲದಿಂದ ಗುಜರಾತಿನ ಭುಜ್ ವರೆಗೆ ವ್ಯಾಪಿಸಿದೆ ಎಂದು ರಕ್ಷಣಾ ಪಡೆಗಳು ತಿಳಿಸಿವೆ. 

ಜಮ್ಮು ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಪಾಕ್ ಡ್ರೋನ್‌ಗಳು ಕಾಣಿಸಿಕೊಂಡಿವೆ. ಪಂಜಾಬಿನ ಫಿರೋಜ್‌ಪುರದಲ್ಲಿ ಮಾತ್ರ ಪಾಕ್ ಡ್ರೋನ್ ದಾಳಿ ಯಶಸ್ವಿಯಾಗಿದೆ. ಒಂದು ಮನೆಯ ಮೇಲೆ ಬಿದ್ದ ಡ್ರೋನ್ ದೊಡ್ಡ ಬೆಂಕಿ ಅವಘಡಕ್ಕೆ ಕಾರಣವಾಯಿತು. ಓರ್ವ ಮಹಿಳೆಗೆ ತೀವ್ರ ಸುಟ್ಟ ಗಾಯಗಳಾಗಿವೆ. ಗಾಯಗೊಂಡ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ದಾಳಿ ಮುಂದುವರಿದಂತೆ ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಇಂದು ಜಮ್ಮುವಿಗೆ ಮಾತ್ರ 100 ಡ್ರೋನ್‌ಗಳು ಬಂದಿವೆ ಎಂದು ತಿಳಿದುಬಂದಿದೆ. ಕಾಶ್ಮೀರ ಕಣಿವೆಯ ಬಾರಾಮುಲ್ಲದಿಂದ ಗುಜರಾತಿನ ಭುಜ್ ವರೆಗೆ 26 ಸ್ಥಳಗಳಲ್ಲಿ ಪಾಕ್ ಡ್ರೋನ್‌ಗಳು ಕಾಣಿಸಿಕೊಂಡಿವೆ. ಬಾರಾಮುಲ್ಲ, ಶ್ರೀನಗರ, ಅವಂತಿಪುರ, ನಗ್ರೋಟ, ಜಮ್ಮು, ಫಿರೋಜ್‌ಪುರ, ಪಠಾಣ್‌ಕೋಟ್, ಫಾಜಿಲ್ಕಾ, ಲಾಲ್‌ಗಢ್, ಜಾಟ್, ಜೈಸಲ್ಮೇರ್, ಬಾರ್ಮರ್, ಭುಜ್, ಕಾರ್ಬೆಟ್, ಲಾಖಿ ನಾಲ್ ಮುಂತಾದ ಸ್ಥಳಗಳಲ್ಲಿ ದಾಳಿ ನಡೆದಿದೆ.

Scroll to load tweet…

ಮೊದಲು ದಾಳಿ ನಡೆದ ಜಮ್ಮು ನಗರದಲ್ಲಿ ಈಗ ಅಪಾಯದ ಮುನ್ಸೂಚನೆಯನ್ನು ಹಿಂಪಡೆಯಲಾಗಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ವಿದ್ಯುತ್ ಕಡಿತಗೊಂಡಿದ್ದ ಈ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯನ್ನು ಪುನಃಸ್ಥಾಪಿಸಲಾಗಿದೆ. ಆದರೆ ಪಾಕ್ ಪ್ರಚೋದನೆ ರಾತ್ರಿ ಮುಂದುವರಿಯಬಹುದು ಎಂದು ಭಾವಿಸಲಾಗಿದೆ. ಟರ್ಕಿ ಮತ್ತು ಚೀನಾದಿಂದ ಪಾಕಿಸ್ತಾನ ಖರೀದಿಸಿದ ಡ್ರೋನ್‌ಗಳನ್ನು ಭಾರತದ ನಿರಾಯುಧ ನಾಗರಿಕರನ್ನು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಹಾರಿಸಲಾಗುತ್ತಿದೆ ಎಂದು ತಿಳಿದುಬಂದಿದೆ. ಎರಡು ದಿನಗಳಿಂದ ನಡೆಯುತ್ತಿರುವ ದಾಳಿಯಲ್ಲಿ ಇಂದು ಮಾತ್ರ ಒಂದು ಡ್ರೋನ್ ನೆಲಕ್ಕೆ ಬಿದ್ದಿದೆ. ಉಳಿದವುಗಳನ್ನು ಭಾರತದ ವಾಯು ರಕ್ಷಣಾ ವ್ಯವಸ್ಥೆಗಳು ನಾಶಪಡಿಸಿವೆ.