ಪ್ರಧಾನಿ ನರೇಂದ್ರ ಮೋದಿಯವರು  ಲೋಕಸಭೆ ಮತ್ತು ರಾಜ್ಯಸಭೆ ಸಂಸದರೊಂದಿಗೆ ವಿಶೇಷ ಸಭೆ ನಡೆಸಿದರು. ಈ ಸಭೆಯಲ್ಲಿ ಪಕ್ಷ ಸಂಘಟನೆ, ಸಾರ್ವಜನಿಕ ಸಂಪರ್ಕ, ಸಾಮಾಜಿಕ ಮಾಧ್ಯಮದ ಪರಿಣಾಮಕಾರಿ ಬಳಕೆ ಹಾಗೂ ಕ್ಷೇತ್ರದ ಕಾರ್ಯಶೀಲತೆ ಕುರಿತು ಮಾರ್ಗದರ್ಶನ ನೀಡಿದರು.

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಂಗಳವಾರ ಸಂಸತ್ ಭವನದ ಸಭಾಂಗಣದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರಿಗೆ ಸುಮಾರು 45 ನಿಮಿಷಗಳ ಕಾಲ ವಿಶೇಷ ಸಭೆ ನಡೆಸಿ, ಪಕ್ಷದ ಸಂಘಟನೆ, ಸಾರ್ವಜನಿಕ ಸಂಪರ್ಕ, ಸಾಮಾಜಿಕ ಮಾಧ್ಯಮದ ಬಳಕೆ ಮತ್ತು ಕ್ಷೇತ್ರದ ಕಾರ್ಯಶೀಲತೆ ಕುರಿತು ಸ್ಪಷ್ಟ ಮಾರ್ಗದರ್ಶನ ನೀಡಿದರು. ಕರ್ನಾಟಕದ ಸದ್ಯದ ರಾಜಕೀಯ ಪರಿಸ್ಥಿತಿ, ಸರ್ಕಾರದ ವೈಫಲ್ಯಗಳು ಮತ್ತು ವಿರೋಧ ಪಕ್ಷದ ಪಾತ್ರಗಳ ಕುರಿತು ಮಾತನಾಡಿದರು.

ಸಭೆಯ ಆರಂಭದಲ್ಲೇ ಮೋದಿ, “ಪ್ರಧಾನಮಂತ್ರಿ ಮ್ಯೂಸಿಯಂ ನೋಡಿದ್ದೀರಾ? ನಿಮ್ಮ ಕುಟುಂಬಕ್ಕೂ ತೋರಿಸಿದ್ದೀರಾ?” ಎಂದು ಕೇಳಿ, ಸಂಸದರು ರಾಷ್ಟ್ರದ ಇತಿಹಾಸವನ್ನು ತಿಳಿದುಕೊಳ್ಳುವ ಅಗತ್ಯವಿದೆ ಎಂದು ಸಂದೇಶ ನೀಡಿದರು.

ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದೀರಾ? ಯಾರು ಏನು ಮಾಡುತ್ತಿದ್ದಾರೆ ಎಂಬುದು ತಿಳಿದುಕೊಂಡರು. ಇಂದು ಜನರು ಸೋಶಿಯಲ್ ಮೀಡಿಯಾ ಮೂಲಕ ಎಲ್ಲರನ್ನೂ ನೋಡುತ್ತಾರೆ. ನೀವು ಏನು ಕೆಲಸ ಮಾಡಿದ್ಧೀರಿ ಮಾಡಿಲ್ಲ ಗಮನಿಸುತ್ತಾರೆ. ತಕ್ಷಣ ನೀವು ರಿಯಾಕ್ಟ್ ಮಾಡಬೇಕು. ಜನರಿಗೆ ನೀವು ನಾಟಕ ಮಾಡುತ್ತಿದ್ದೀರಿ ಎನಿಸಿಬಾರದು. ನಿಮ್ಮ ಕ್ಷೇತ್ರದಲ್ಲಿ ಒಬ್ಬ 70 ವರ್ಷದ ವೃದ್ದನಿಗೆ ಆಗಬೇಕಾದ ಕೆಲಸ ನೀವೆ ಹೋಗಿ ಮಾಡಿಕೊಡಿ. ಚುನಾವಣೆಯಲ್ಲಿ ಅದೇ ವ್ಯಕ್ತಿ ನಿಮ್ಮ ಪರ ಪ್ರಚಾರ ಮಾಡುತ್ತಾನೆ.

ಕೇಂದ್ರದ ಯೋಜನೆಗಳನ್ನು ನಿಮ್ಮ ನಿಮ್ಮ ಕ್ಷೇತ್ರಗಳಿಗೆ ತೆಗೆದುಕೊಂಡು ಹೋಗಿ? ನಿಮ್ಮ ಕುಟುಂಬಕ್ಕೆ ಸಮಯ ಕೊಡ್ತಾ ಇದ್ದೀರಾ? ಎಂದೆಲ್ಲ ವಿಚಾರಿಸಿದರು. ಸಂಸದರ ಜೊತೆ ಅರ್ಧಗಂಟೆಗೂ ಹೆಚ್ಚು ಕಾಲ ಮೋದಿ ಚರ್ಚಿಸಿದರು. ಸಂಸತ್ ಭವನದ ಹಾಲ್ ನಲ್ಲಿ ಕರ್ನಾಟಕ ಲೋಕಸಭಾ ಮತ್ತು ರಾಜ್ಯಸಭಾ ಸಂಸದರಿಗೆ ನಾಯಕತ್ವದ ಪಾಠ ಮಾಡಿದರು. ಈ ಮೂಲಕ ಕಾರ್ಯಕರ್ತರ ಜೊತೆ ಸಂಪರ್ಕದಲ್ಲಿರಿ ಎಂದು ಒತ್ತಿ ಹೇಳಿದರು. ಸಂಸದರ ಕ್ಷೇತ್ರ ಕಾರ್ಯದಲ್ಲಿ ಖುದ್ದಾಗಿ ಇದ್ದು ಕೆಲಸ ಮಾಡಬೇಕೆಂದು ಒತ್ತಿ ಹೇಳಿದರು. ಜನರಿಗೆ ನೀವು ನಾಟಕ ಮಾಡುತ್ತಿದ್ದೀರಿ ಎನಿಸಬಾರದು. ಪ್ರಮಾಣಿಕವಾಗಿ ಕೆಲಸ ಮಾಡಿ ಎಂದರು.,

ರಾಹುಲ್ ಗಾಂಧಿ ಬಗ್ಗೆ ಜನ ಏನ್ ಹೇಳ್ತಾರೆ?

ರಾಹುಲ್ ಗಾಂಧಿಯನ್ನು ನಾವು ಯುವರಾಜ ಎನ್ನುತ್ತೇವೆ. ಅದರಿಂದ ಹೊರಬರಲು ರಾಹುಲ್ ಮೋಟರ್ ಬೈಕ್ ರಿಪೇರಿ ಅದು ಇದು ಮಾಡ್ತಾ ಇರ್ತಾರೆ. ಆದರೆ ಜನರು ಈಗ ಅದನ್ನೂ ಡ್ರಾಮ ಎನ್ನುತ್ತಾರೆ. ಯುವರಾಜ ಪಟ್ಟದಿಂದ ಕೆಳಗೆ ಬರಲು ಅವರು ಶ್ರಮಿಸುತ್ತಿದ್ದಾರೆ. ಹೀಗಾಗಿ ತಾವೆಲ್ಲರೂ ಜನರ ಜೊತೆ ಅವರ ಕಷ್ಟದ ಜೊತೆ ಸದಾ ಇರಬೇಕು. ಮದುವೆಗೆ, ಹಲವು ಕಾರ್ಯಕ್ರಮಗಳಿಗೆ ಎಲ್ಲಾದಕ್ಕೂ ನೀವು ಹೋಗುತ್ತೀರಿ. ಸರಿ, ಅದನ್ನು ಹೊರತುಪಡಿಸಿ ಜನರ ಜೊತೆ ಹೇಗೆ ಕನೆಕ್ಟ್ ಆಗಬಹುದು ಎಂದು ಯೋಚಿಸಿ ನೋಡಿ. ಸೋಶಿಯಲ್ ಮೀಡಿಯಾ ವ್ಯಾಪಕವಾಗಿ ಬಳಸಿ, ಇಂದು ಜನರು ಉಳಿದ ಮಾಧ್ಯಮಕ್ಕಿಂತ ಸೋಶಿಯಲ್ ಮೀಡಿಯಾ ಹೆಚ್ಚು ಬಳಸುತ್ತಾರೆ.

ಒಂದು ಸರ್ಕಾರ ತಪ್ಪು ಮಾಡಿದಾಗ ಅದನ್ನು ವಿರೋಧ ಪಕ್ಷ ಎನ್‌ಕ್ಯಾಶ್ ಮಾಡಿಕೊಳ್ಳಬೇಕು? ಕೇವಲ ಪಾಸಿಂಗ್ ರಿಮಾರ್ಕ್ ಮಾಡಿದರೂ ಸರ್ಕಾರದ ವೈಫಲ್ಯಗಳ ಬಗ್ಗೆ ಮಾತನಾಡುವುದು ಬಹಳ ಮುಖ್ಯ ಎಂದರು.

ಸೋಶಿಯಲ್ ಮೀಡಿಯಾ ಬಳಕೆ, ಕಾಲದ ಅಗತ್ಯ

 ಇಂದು ಭಾರತದಲ್ಲಿ ಜನರು ಟಿವಿಗಿಂತ, ಪತ್ರಿಕೆಗೆ ಹೋಲಿಸಿದರೆ ಸೋಶಿಯಲ್ ಮೀಡಿಯಾವನ್ನು ಹೆಚ್ಚು ಬಳಸುತ್ತಾರೆ. ನೀವು ಯಾವುದನ್ನೂ ಪೋಸ್ಟ್ ಮಾಡದೇ ಇದ್ದರೆ ಜನರಿಗೆ ಅದು ಗೊತ್ತಾಗುತ್ತದೆ. ರಿಯಾಕ್ಟ್ ಆಗಬೇಕಾದ ಸಮಯಕ್ಕೆ ತಕ್ಷಣ ಪ್ರತಿಕ್ರಿಯಿಸಬೇಕು ಎಂದರು.

ಸಭೆಯ ಅಂತ್ಯದಲ್ಲಿ ಪ್ರಧಾನಿ ಮೋದಿ ಸಂಸದರ ವರದಿ ಕಾರ್ಡ್ ಪ್ರಶ್ನಿಸಿದರು. ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು? ಪಕ್ಷಕ್ಕೆ ನಿಮ್ಮ ಕೊಡುಗೆ ಏನು? ಕಾರ್ಯಕರ್ತರಿಗೆ ನಿಮ್ಮ ಕೊಡುಗೆ ಏನು? ಅಂತಿಮವಾಗಿ ನಿಮ್ಮ ಕುಟುಂಬಕ್ಕೆ ನಿಮ್ಮ ಕೊಡುಗೆ ಏನು? ಈ ಪ್ರಶ್ನೆಗಳು ಸಂಸದರ ಹೊಣೆಗಾರಿಕೆ, ಕೆಲಸದ ಪ್ರಮಾಣಿಕತೆ ಮತ್ತು ಸಾರ್ವಜನಿಕ ಸಂಪರ್ಕದ ಕುರಿತು ಗಂಭೀರ ಚಿಂತನೆ ಹುಟ್ಟಿಸಿದವು.