-ಸಾಧ್ವಿ ಪ್ರಗ್ಯಾಸಿಂಗ್‌ ಕಬ್ಬಡಿ ಆಡುತ್ತಿರುವ ವಿಡಿಯೋ ವೈರಲ್‌-ವಿಡಿಯೋ ಮಾಡಿ ಹರಿಬಿಟ್ಟವರನ್ನು 'ರಾವಣ' ಎಂದ ಸಾಧ್ವಿ- ಭೋಪಾಲ್‌ ಸಂಸದೆ ರಾವಣನ ಸಿದ್ಧಾಂತ ಪಾಲಿಸುತ್ತಾರೆ ಎಂದ ಕಾಂಗ್ರೇಸ್‌ ನಾಯಕರು 

ಭೋಪಾಲ್‌ (ಅ. 16) : ಇತ್ತಿಚೇಗೆ ಬಿಜೆಪಿ ನಾಯಕಿ ಸಾಧ್ವಿ ಪ್ರಗ್ಯಾಸಿಂಗ್‌ ಠಾಕೂರ್‌ (Praghya Singh Thakur) ಭೋಪಾಲ್‌ನ ಕಾಳಿ ದೇವಾಲಯದ ಆವರಣದಲ್ಲಿ ಕಬ್ಬಡಿ ಆಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿತ್ತು. ಈ ವಿಡಿಯೋವನ್ನು ಚಿತ್ರೀಕರಿಸಿ ಜಾಲತಾಣಗಳಲ್ಲಿ ಹರಿಬಿಟ್ಟ ವ್ಯಕ್ತಿಯನ್ನು ಪ್ರಗ್ಯಾಸಿಂಗ್‌ ʼರಾವಣʼ(Ravana) ಎಂದು ಕರೆದಿದ್ದಾರೆ. ಅಲ್ಲದೇ ಆ ವ್ಯಕ್ತಿಯ ವೃದ್ಧಾಪ್ಯ ಜೀವನ ಮತ್ತು ಮುಂದಿನ ಜನ್ಮ ಕಷ್ಟಕರವಾಗಲಿದೆ ಎಂದು ಹೇಳಿದ್ದಾರೆ. ಭೋಪಾಲ್ ಸಂಸದೆ ಅನೇಕ ವರ್ಷಗಳನ್ನು ಗಾಲಿ ಕುರ್ಚಿಯ ಮೇಲೆ ಕಳೆದಿದ್ದರು. ಪ್ರಗ್ಯಾಸಿಂಗ ಕಬ್ಬಡಿ ಆಡುತ್ತಿರುವ ವಿಡೀಯೊವನ್ನು ಮಧ್ಯಪ್ರದೇಶದ ಕಾಂಗ್ರೇಸ್‌ ವಕ್ತಾರ ನರೇಂದ್ರ ಸಿಂಗ್‌ ಟ್ವೀಟರ್‌ನಲ್ಲಿ (Twitter) ಹಂಚಿಕೊಂಡಿದ್ದರು. ಭೋಪಾಲದ ಸಂತ ನಗರದಲ್ಲಿ ನಡೆಯುತ್ತಿದ್ದ ದಸರಾ ಹಬ್ಬದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಗ್ಯಾಸಿಂಗ್ ಈ ಹೇಳಿಕೆಯನ್ನು ನೀಡಿದ್ದಾರೆ. 

Scroll to load tweet…

ನನ್ನ ಶತ್ರುಗಳೇ ಯಾರೋ ವಿಡಿಯೋ ಮಾಡಿದ್ದಾರೆ!

ʼಎರಡು ದಿನಗಳ ಹಿಂದೆ ದುರ್ಗಾ ಮಂಟಪದಲ್ಲಿ ನಾನು ಆರತಿ ಮಾಡಲು ಹೋಗಿದ್ದೆ. ಆಗ ಮೈದಾನದಲ್ಲಿ ಕಬ್ಬಡಿ ಆಡುತ್ತಿದ್ದ ಆಟಗಾರರು ನನ್ನನ್ನು ಕಬ್ಬಡಿ ಆಡುವಂತೆ ಒತ್ತಾಯಿಸಿದರು. ಆವಾಗ ನನ್ನ ವಿಡಿಯೋ ಚಿತ್ರೀಕರಿಸಿಲಾಗಿದ್ದು, ಮಾಧ್ಯಮಗಳಲ್ಲಿ ಅದನ್ನು ಪ್ರಸಾರ ಮಾಡಲಾಗಿದೆ. ನಾನು ಆಟವಾಡುವಾಗ ಯಾರಾದರು ಕೋಪಗೊಂಡಿದ್ದರೆ ಅದು ನಿಮ್ಮೊಳಗಿರುವ ರಾವಣ ಅಷ್ಟೇ...! ನನ್ನ ಶತ್ರುಗಳು ಯಾರೋ ಹೀಗೆ ಮಾಡಿದ್ದಾರೆ. ನಾನು ಅವರಿಗೆ ಶತ್ರು ಆದರೆ ಅವರು ನನಗೆ ಶತ್ರುವಲ್ಲ. ಅವರ ಬಳಿಯಿಂದ ನಾನು ಏನ್ನನ್ನು ಕದ್ದಿದ್ದೇನೊ ಗೊತ್ತಿಲ್ಲ...! ರಾವಣ ಎಲ್ಲಿ ಬೇಕಾದರು ಇರಬಹುದುʼ ಎಂದು ಪ್ರಗ್ಯಾಸಿಂಗ್ ಕಿಡಿಕಾರಿದ್ದಾರೆ. 

ಅನಾರೋಗ್ಯದ ಕಾರಣಕ್ಕೆ ಬೇಲ್.. ಟೀಕೆಗೆ ಸಿಕ್ಕ ಸಾಧ್ವಿ ಕಬಡ್ಡಿ ವಿಡಿಯೋ ವೈರಲ್!

ʼಸಂಸ್ಕಾರ ಕಳೆದುಕೊಂಡಿರುವ ಇಂಥಹ ವ್ಯಕ್ತಿಗೆ ನಾನು ಸುಧಾರಿಸಿಕೊ ಎಂದು ಹೇಳುತ್ತಿದ್ದೇನೆ. ಇಲ್ಲದಿದ್ದರೆ ನಿನ್ನ ವೃದ್ಧಾಪ್ಯ ಮತ್ತು ಮುಂದಿನ ಜನ್ಮ ಅತ್ಯಂತ ಕಷ್ಟಕರವಾಗಿರಲಿವೆ. ದೇಶಭಕ್ತರು, ಕ್ರಾಂತಿಕಾರಿಗಳು ಎಲ್ಲದರ ಮೇಲಾಗಿ ಸಾಧು-ಸಂತರ ವಿರುದ್ಧ ಯಾರು ಹಗೆ ಸಾಧಿಸಿದ್ದಾರೋ ಅವರು ಯಾರೂ ಉಳಿದಿಲ್ಲ. ಅದು ರಾವಣನೇ ಅಗಿರಲಿ ಅಥವಾ ಕಂಸನೇ ಆಗಿರಲಿ. ಅಧರ್ಮವನನ್ನು ಪಾಲಿಸುತ್ತಿರುವವರು ಉಳಿಯುವುದಿಲ್ಲʼಎಂದು ಪ್ರಗ್ಯಾ ಸಿಂಗ್‌ ಹೇಳಿದ್ದಾರೆ.

ಪ್ರಗ್ಯಾಸಿಂಗ್‌ ರಾವಣನ ಸಿದ್ಧಾಂತ ಪಾಲಿಸುತ್ತಾರೆ!

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೇಸ್‌ ವಕ್ತಾರ ಕೆ ಕೆ ಮಿಶ್ರಾ ʼರಾವಣನ ಸಿದ್ಧಾಂತವನ್ನು ಪಾಲಿಸುವವರೇ ಎಲ್ಲೆಡೆ ರಾವಣನ್ನು ನೋಡುತ್ತಾರೆ. ಭೋಪಾಲ್‌ ಸಂಸದೆ ರಾಕ್ಷಸರ ಮತ್ತು ದುಷ್ಟ ಶಕ್ತಿಗಳ ಸಿದ್ಧಾಂತವನ್ನು ಪಾಲಿಸುತ್ತಾರೆ ಎಂದು ಹೇಳಿದ್ದಾರೆ. ಪ್ರಗ್ಯಾಸಿಂಗ್‌ ಬಹಳಷ್ಟು ಮುಖವಾಡಗಳನ್ನು ಹೊಂದಿದ್ದಾರೆ. ಕೆಲವು ಬಾರಿ ಅವರು ವ್ಹೀಲ್‌ ಚೇರ್‌ ಮೇಲೆ ಕುಳಿತರೆ ಕೆಲವು ಬಾರಿ ಕಬ್ಬಡಿ ಮತ್ತು ಗರ್ಭಾ ನೃತ್ಯ ಕೂಡ ಮಾಡುತ್ತಾರೆ ಎಂದು ಮಧ್ಯಪ್ರದೇಶದ ಕಾಂಗ್ರೇಸ್‌ ನಾಯಕರರು ಟೀಕಿಸಿದ್ದಾರೆ.

ಬಾಸ್ಕೆಟ್ ಬಾಲ್ ಆಡಿ ಸರ್ಪ್ರೈಸ್ ನೀಡಿದ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್!

ಮಲೇಂಗಾವ್ ಸ್ಫೋಟ ಪ್ರಕರಣದಲ್ಲಿ ಠಾಕೂರ್ ಜೈಲಿನಲ್ಲಿರಬೇಕಾದ ಪರಿಸ್ಥಿತಿ ಬಂದಿತ್ತು. ನಂತರ ಬದಲಾದ ವ್ಯವಸ್ಥೆಯಲ್ಲಿ ರಾಜಕಾರಣ ಪ್ರವೇಶ ಮಾಡಿ ಸಂಸತ್ ಸದಸ್ಯೆಯಾದರು. ನವರಾತ್ರಿ ಸಂದರ್ಭದಲ್ಲಿ ಪ್ರಗ್ಯಾಸಿಂಗ್‌ ಗರ್ಭಾ ನೃತ್ಯ ಮಾಡಿದ್ದ ವಿಡಿಯೋ ಕೂಡ ವೈರಲ್‌ ಆಗಿತ್ತು. 51 ವರ್ಷದ ಠಾಕೂರ್ ಅವರನ್ನು ಮಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಸುಮಾರು ಒಂಭತ್ತು ವರ್ಷ ಜೈಲಿನಲ್ಲಿದ್ದು 2017 ರಲ್ಲಿ ಬಿಡುಗಡೆಯಾಗಿದ್ದರು. ಮಲೇಗಾಂವ್ ಸ್ಫೋಟ ಸೆ. 29, 2008ರಲ್ಲಿ ನಡೆದಾಗ ಆರು ಜನ ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದರು. ರಾಷ್ಟ್ರೀಯ ತನಿಖಾ ದಳದ ವ್ಯಾಪ್ತಿಗೆ ತನಿಖೆ ಬಂದಿತ್ತು. ಅನಾರೋಗ್ಯದ ಕಾರಣ ನೀಡಿ ಜಾಮೀನು ಪಡೆದುಕೊಂಡಿರುವ ಸಿಂಗ್ ಈಗ ಆರೋಗ್ಯವಾಗಿದ್ದಾರೆಯೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.