ಆಂಧ್ರಪ್ರದೇಶದಲ್ಲಿ ಪ್ರಕಾಶಂ ಬ್ಯಾರೇಜ್‌ಗೆ ಮೂರು ದೋಣಿಗಳು ಡಿಕ್ಕಿ ಹೊಡೆದ ಪರಿಣಾಮ ಬ್ಯಾರೇಜ್‌ನ ಒಂದು ಗೇಟ್ ಹಾನಿಗೊಳಗಾಗಿದ್ದು, ಭಾರೀ ಪ್ರಮಾಣದ ನೀರು ಹೊರಬಿದ್ದಿದೆ. ಇದರಿಂದಾಗಿ ವಿಜಯವಾಡ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಮತ್ತೆ ಪ್ರವಾಹದ ಆತಂಕ ಎದುರಾಗಿದೆ.
ಅಮರಾವತಿ: ಕಂಡು ಕೇಳರಿಯದ ಪ್ರವಾಹಕ್ಕೆ ಸಿಲುಕಿರುವ ಆಂಧ್ರಪ್ರದೇಶದ ವಿಜಯವಾಡ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಮತ್ತೊಂದು ಆತಂಕ ಎದುರಾಗಿದೆ. ನಗರದ ತಪ್ಪಲಿನಲ್ಲಿ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಪ್ರಕಾಶಂ ಬ್ಯಾರೇಜ್ ಗೆ ಮೂರು ದೋಣಿಗಳು ಡಿಕ್ಕಿ ಹೊಡೆದ ಪರಿಣಾಮ ಅದರ 69ನೇ ಗೇಟ್ ಹಾನಿಯಾಗಿದೆ. ಪರಿಣಾಮ 11.25 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗಿದೆ. ಹೀಗಾಗಿ ಎನ್‌ಟಿಆರ್. ಗುಂಟೂರು ಮತ್ತು ವಿಜಯವಾಡ ಜಿಲ್ಲೆಗಳಿಗೆ ಮತ್ತಷ್ಟು ಪ್ರವಾಹದ ಆತಂಕ ಮನೆಮಾಡಿದೆ. ತುಂಗಭದ್ರಾ ಡ್ಯಾಂ ಗೇಟ್ ರಿಪೇರಿ ನಿರ್ವಹಿಸಿದ್ದ ಕನ್ನಯ್ಯ ನಾಯ್ಡು ಅವರಿಗೆ ಇದರ ರಿಪೇರಿ ಹೊಣೆ ನೀಡಲಾಗಿದೆ.
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಯಲ್ಲಿ ನೀರಿನ ಒಳಹರಿವು ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ. ಪರಿಣಾಮ ನದಿಯಲ್ಲಿ ಕಾರ್ಯಾಚರಣೆ ನಡೆಸುವ ದೋಣಿಗಳನ್ನು ಕಟ್ಟಿಹಾಕಲಾಗಿತ್ತು. ಆದರೆ ನೀರಿನ ತೀವ್ರತೆ ತಡೆಯದ ಮೂರು ದೋಣಿಗಳು ಕಟ್ಟು ಬಿಡಿಸಿಕೊಂಡು 40 ಕಿಲೋಮೀಟರ್ ವೇಗದಲ್ಲಿ ಡ್ಯಾಂಗೆ ಅಪ್ಪಳಿಸಿದೆ. ಹೀಗಾಗಿ 69ನೇ ಗೇಟ್ ಭದ್ರ ತೆಗೆ ನಿರ್ಮಿಲಾಗಿದ್ದ ಕಾಂಕ್ರಿಟ್ ಪೀಠ ತೀವ್ರ ವಾಗಿ ಹಾನಿಯಾಗಿದೆ. ಇದರ ಅಪಾಯ ತಪ್ಪಿಸಲು ಬ್ಯಾರೇಜ್‌ಗೆ ಸಾರ್ವಜನಿಕ ಪ್ರವೇಶ ನಿರ್ಬಂಧಿಸಲಾಗಿದೆ.
ಪ್ರವಾಹ ಸ್ಥಳಕ್ಕೆ ಕಾಪ್ಟರ್ ಮೂಲಕ ಆಹಾರ ಪೂರೈಕೆ
ವಿಜಯವಾಡದಲ್ಲಿ ಪ್ರವಾಹಕ್ಕೆ ತುಂಗಭದ್ರಾ ಅಣೆಕಟ್ಟಿನ 19ನೇ ಗೇಟ್ ಮುರಿದುಹೋದಾಗ ಅದರ ರಿಪೇರಿಯನ್ನು ಇದೇ ಕನ್ನಯ್ಯ ನಾಯ್ಡು ಅವರಿಗೆ ನೀಡಲಾಗಿತ್ತು. ಈಗ ಪ್ರಕಾಶಂ ಬ್ಯಾರೇಜ್ ರಿಪೇರಿ ತುತ್ತಾಗಿರುವ ಪ್ರದೇಶಗಳಿಗೆ ನೌಕಾಪಡೆ, ವಾಯು ಪಡೆಯ 6 ಹೆಲಿಕಾಪ್ಟರ್ ಮತ್ತು ಡ್ರೋನ್‌ಗಳ ಮೂಲಕ ಆಹಾರ ಪೊಟ್ಟಣ, ಅಗತ್ಯ ವಸ್ತುಗಳನ್ನು ವಿತರಿಸಲಾಗುತ್ತಿದೆ.
ತಲ್ಲಣ ಸೃಷ್ಟಿಸಿದೆ ಗೇಟ್ ನಂ.19 ಸೀಕ್ರೆಟ್! ಛಿದ್ರವಾಗಿದ್ದು ಒಂದೇ ಗೇಟ್.. ಆದ ನಷ್ಟ ಎಷ್ಟು ಗೊತ್ತಾ..?
ಆಂಧ್ರ, ತೆಲಂಗಾಣದಲ್ಲಿ ನೆರೆ ಇಳಿಮುಖ
ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಸುರಿಯುತ್ತಿದ್ದ ಭಾರೀ ಮಳೆ ಮಂಗಳವಾರ ಕೊಂಚ ಇಳಿಮುಖವಾದ ಕಾರಣ ರಸ್ತೆಗಳಲ್ಲಿ ನಿಂತಿದ್ದ ನೀರು ಕಡಿಮೆಯಾಗಿದ್ದು, ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ಒದಗಿಸುವ ಕಾರ್ಯಕ್ಕೆ ಸರ್ಕಾರಗಳು ಚುರುಕು ನೀಡಿವೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮುಳುಗಡೆಯಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಇದರ ಬೆನ್ನಲ್ಲೇ ಸಚಿವರು ಮತ್ತು ಅಧಿಕಾರಿಗಳ ಸಭೆ ಕರೆದ ಸಿಎಂ ರೆಡ್ಡಿ, ಜಲಮೂಲಗಳನ್ನು ಅತಿಕ್ರಮಣ ಮಾಡಲಾಗಿರುವ ಸ್ಥಳಗಳ ವರದಿ ತಯಾರಿಸುವಂತೆ ಸೂಚಿಸಿದ್ದಾರೆ.
ಜೊತೆಗೆ ಪ್ರವಾಹದಿಂದ ಉಂಟಾಗಿರುವ ನಷ್ಟದ ಬಗ್ಗೆಯೂ ವರದಿ ತಯಾರಿಸಿ, ನಿಂತ ನೀರಿನಿಂದ ಹರಡಬಲ್ಲ ರೋಗಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಮಳೆಯಿಂದಾಗಿ ಈವರೆಗೆ ಎರಡೂ ರಾಜ್ಯಗಳಲ್ಲಿ 33 ಮಂದಿ ಸಾವನ್ನಪ್ಪಿದ್ದು, ಅಪಾರ ಹಾನಿಯುಂಟಾಗಿದೆ.
ತುಂಗಭದ್ರಾ ಡ್ಯಾಂಗೆ ಗೇಟ್ ಇಟ್ಟವರಿಗೆ ಸರ್ಕಾರದಿಂದ ಪ್ರಶಸ್ತಿ ಪ್ರದಾನ: ಡಿ.ಕೆ.ಶಿವಕುಮಾರ್
