ಸಾಕಷ್ಟು ದೇಶಗಳು ಬಂಗಾರ ಖರೀದಿ ಮಾಡಿದ್ರೂ ಕೂಡ ಭಾರತ ಮಾತ್ರ ಬಂಗಾರ ಖರೀದಿ ಮಾಡ್ತಿಲ್ಲ. ಇದರ ಹಿಂದಿನ ಕಾರಣ ಏನು?
ಇಡೀ ವಿಶ್ವ ಬಂಗಾರ ಖರೀದಿಸಲು ಮುಗಿ ಬೀಳ್ತಿದೆ. ಇಂದು ಬಂಗಾರದ ಬೆಲೆ ಗಗನಕ್ಕೆ ಏರಿದೆ. ಹೀಗಾಗಿ ಕೇಂದ್ರ ಬ್ಯಾಂಕುಗಳು ಚಿನ್ನವನ್ನು ಖರೀದಿಸುತ್ತಿವೆ. ಬೇರೆ ದೇಶಗಳು ಚಿನ್ನ ಖರೀದಿ ಮಾಡ್ತಿದ್ರೂ ಕೂಡ, ಭಾರತ ಮಾತ್ರ ಅಷ್ಟಾಗಿ ಚಿನ್ನ ಖರೀದಿ ಮಾಡ್ತಿಲ್ಲ. ಕಳೆದ ಎರಡು ತಿಂಗಳಿಂದ ಭಾರತೀಯ ರಿಸರ್ವ್ ಬ್ಯಾಂಕ್ ಒಂದು ಗ್ರಾಂ ಚಿನ್ನವನ್ನೂ ಖರೀದಿಸಿಲ್ಲ. ಹಾಗಾದರೆ ಭಾರತದ ನಡೆಗೆ ಕಾರಣ ಏನು?
ಗೋಲ್ಡ್ ಖರೀದಿ ಮಾಡ್ತಿಲ್ಲ!
ವಿಶ್ವವೇ ಚಿನ್ನದ ಹಿಂದೆ ಬಿದ್ದಿರುವಾಗ ಆರ್‌ಬಿಐ ಮಾತ್ರ ಸ್ವರ್ಣದಿಂದ ಅಂತರ ಕಾಯ್ದುಕೊಂಡಿದೆ. 2026ರ ಹಣಕಾಸು ವರ್ಷ ಶುರುವಾಗಿ 3 ತಿಂಗಳಾಯ್ತು. ಆದರೆ ಆರ್‌ಬಿಐ ಮಾತ್ರ ಚಿನ್ನ ಖರೀದಿ ಮಾಡಿಲ್ಲ. ಮುಂದಿನ ದಿನಗಳಲ್ಲಿ ಬಂಗಾರದ ಬೆಲೆ ಇಳಿಯುತ್ತದೆ ಎಂದು ಆರ್‌ಬಿಐ ಈ ರೀತಿ ಮಾಡಿದಂತಿದೆ. ರಾಜಕೀಯ ಅಸ್ಥಿರತೆ, ಜಾಗತಿಕ ವ್ಯಾಪಾರ, ಯುದ್ಧದಿಂದ ಚಿನ್ನದ ಬೆಲೆ ಸಿಕ್ಕಾಪಟ್ಟೆ ಏರಿಕೆಯಾಗಿದೆ. ಹೀಗಾಗಿ ಚಿನ್ನದ ರೇಟ್ ಕಡಿಮೆ ಆಗಬಹುದು. ಹೀಗಾಗಿ ಭಾರತ ಕೂಡ ಗೋಲ್ಡ್ ಖರೀದಿ ಮಾಡ್ತಿಲ್ಲ ಎನ್ನಲಾಗಿದೆ.
ಚಿನ್ನದ ಇಳಿಕೆಯಾಗಲು ಕಾರಣ ಏನು?
ಈಗ ಆರ್‌ಬಿಐ ಬಳಿ 880 ಮೆಟ್ರಿಕ್ ಟನ್ ಚಿನ್ನ ಇದೆ. ಇಷ್ಟು ಕಾಲ ಬಂಗಾರ ಖರೀದಿ ಮಾಡದೆ ಇರೋದು ಮೊದಲ ಸಲ ಎನ್ನಲಾಗಿದೆ. ಚಿನ್ನದ ಬೆಲೆ ಔನ್ಸ್‌ಗೆ 3,445 ಡಾಲರ್‌ನಿಂದ ಇಳಿಯಲಿದೆ ಎಂದು ಸಿಟಿ, ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್, ಫಿಚ್ ರಿಸರ್ಚ್ ಡಿವಿಷನ್, ಐಸಿಐಸಿಐ ಬ್ಯಾಂಕ್‌ಗಳು ಎಂದು ಭವಿಷ್ಯ ನುಡಿದಿವೆ. ಅಷ್ಟೇ ಅಲ್ಲದೆ ಗೋಲ್ಡ್ ರೇಟ್ ಇದಕ್ಕಿಂತ ಹೆಚ್ಚು ಏರೋದಿಲ್ವಂತೆ. ಚಿನ್ನದ ಬೆಲೆ ಇಳಿಯಲು ಕಾರಣ ಏನು ಎಂದು ಹುಡುಕಿದಾಗ, ಜಾಗತಿಕ ರಾಜಕೀಯ ಉದ್ವಿಗ್ನತೆಗಳಲ್ಲಿನ ಸಂಭಾವ್ಯ ಕಡಿತ, ಅಮೆರಿಕದ ಫೆಡರಲ್ ರಿಸರ್ವ್‌ನಿಂದ ನಿರೀಕ್ಷಿತ ಬಡ್ಡಿದರ ಕಡಿತ ಎನ್ನಲಾಗಿದೆ.
55- 60 ಸಾವಿರ ರೂಪಾಯಿ ಆಸುಪಾಸಿಗೆ ಈ ಹಿಂದೆಯೇ ಬಂಗಾರದ ರೇಟ್ ಕುಸಿಯಲಿದೆ ಎಂದು ಅಮೆರಿಕ ಮೂಲದ ಮಾರ್ನಿಂಗ್ ಸ್ಟಾರ್‌ನ ವಿಶ್ಲೇಷಕ ಜಾನ್ ಮಿಲ್ಸ್ ಭವಿಷ್ಯ ಹೇಳಿದ್ದರು. ಈಗ ಇರುವ ಬೆಲೆಯಲ್ಲಿ ಶೇ.38ರಷ್ಟು ಕುಸಿತ ಕಾಣಲಿದೆ ಎಂದು ಹೇಳಿದ್ದರು. ಅಂದರೆ 70 ಸಾವಿರ ರೂಪಾಯಿಗಿಂತ ಕಡಿಮೆ ದರದಲ್ಲಿ 10 ಗ್ರಾಂ ಚಿನ್ನ ಸಿಗಲಿದೆಯಂತೆ. 2026ರಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ ಕಾಣಲಿದೆ ಎಂದು ಲೇಯ್ಟನ್ ಅವರು ಹೇಳಿದ್ದರು.
ಆರ್‌ಬಿಐ ನಿರ್ಧಾರದ ಹಿಂದೆ ಬಂಗಾರದ ಬೆಲೆ ಇಳಿಯುವ ನಿರೀಕ್ಷೆ ಇದೆ ಎಂದು ಭಾವಿಸಲಾಗಿದೆ. “ಕಬ್ಬಿಣ ಬಿಸಿಯಿದ್ದಾಗಲೇ ಬಡಿಯಬೇಕು" ಎನ್ನುವಂತೆ "ಚಿನ್ನದ ಬೆಲೆ ಇಳಿದಾಗಲೇ ಖರೀದಿಸಬೇಕು" ಎಂದು ಆರ್‌ಬಿಐ ಫಾಲೋ ಮಾಡಿದಂತಿದೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇಳಿಯುತ್ತಾ ಕಾದು ನೋಡಬೇಕು.


