Viral Teacher Dance: ಶಾಲೆಯೊಂದರ ವಾರ್ಷಿಕೋತ್ಸವದಲ್ಲಿ ಶಿಕ್ಷಕಿಯೊಬ್ಬರು ಪ್ರಭುದೇವ ಅವರ ಸೂಪರ್ ಹಿಟ್ ಹಾಡು ಮುಕ್ಕಾಬುಲ್ಲಾಗೆ ಹೆಜ್ಜೆ ಹಾಕುವ ಮೂಲಕ ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಿದ್ದಾರೆ. ಸೀರೆಯುಟ್ಟಿದ್ದರೂ ಸಹ ಲೀಲಾಜಾಲವಾಗಿ ನೃತ್ಯ ಮಾಡಿದ ಇವರ ವಿಡಿಯೋ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕಿಯ ನೃತ್ಯದ ವಿಡಿಯೋವೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಶಾಲೆಯ ಕಾರ್ಯಕ್ರಮವೊಂದರಲ್ಲಿ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕುತ್ತಿರುವ ದೃಶ್ಯ ಈ ವಿಡಿಯೋದಲ್ಲಿದೆ. ವಿಶೇಷವೆಂದರೆ ಈ ನೃತ್ಯದಲ್ಲಿ ಶಿಕ್ಷಕಿ ತನ್ನ ವಿದ್ಯಾರ್ಥಿಗಳನ್ನೇ ಮೀರಿಸುವಂತೆ ಅಪ್ರತಿಮ ಪ್ರದರ್ಶನ ನೀಡಿದ್ದಾರೆ. ವೇದಿಕೆಯ ಮೇಲೆ ಅವರು ತೋರಿದ ಆ ಅದ್ಭುತ ನೃತ್ಯವನ್ನು ಕಂಡು ನೆರೆದಿದ್ದವರೆಲ್ಲಾ ಬೆರಗಾಗಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ಶಾಲೆಯ ವಾರ್ಷಿಕೋತ್ಸವದ (Annual Fest) ಸಂದರ್ಭದಲ್ಲಿ ಮಕ್ಕಳು ವೇದಿಕೆಯ ಮೇಲೆ ನೃತ್ಯ ಮಾಡುತ್ತಿರುವಾಗ ಅವರೊಂದಿಗೆ ಸಾಥ್ ನೀಡಲು ಶಿಕ್ಷಕಿ ಕೂಡ ವೇದಿಕೆ ಏರುತ್ತಾರೆ. ಆದರೆ ಅವರು ಈ ಪಾಠಿ ಭರ್ಜರಿಯಾಗಿ ನೃತ್ಯ ಮಾಡುತ್ತಾರೆ ಎಂದು ಶಾಲೆಯಲ್ಲಿ ಯಾರು ಕೂಡ ಊಹಿಸಿರಲಿಲ್ಲ.
ಪ್ರಭುದೇವ ಹಾಡಿಗೆ ಸಖತ್ ಸ್ಟೆಪ್ಸ್
ಮಕ್ಕಳೊಂದಿಗೆ ಶಿಕ್ಷಕಿ ವೇದಿಕೆಯ ಮೇಲೆ ನಿಂತಾಗ ಡಿಜೆಯಲ್ಲಿ ಭಾರತದ ಮೈಕೆಲ್ ಜಾಕ್ಸನ್ ಖ್ಯಾತಿಯ ಪ್ರಭುದೇವ (Prabhudeva) ಅವರ ಸೂಪರ್ ಹಿಟ್ ಹಾಡು Mukkala Mukkabala ಸಾಂಗ್ ಪ್ಲೇ ಆಗುತ್ತದೆ. ಈ ಹಾಡು ಶುರುವಾಗುತ್ತಿದ್ದಂತೆ ಮೇಡಂ ತಮ್ಮ ಪವರ್‌ಫುಲ್ ಹಾಗೂ ಕಾನ್ಫಿಡೆನ್ಸ್ ನೃತ್ಯದ ಮೂಲಕ ಎಲ್ಲರೂ ಹುಬ್ಬೇರುವಂತೆ ನೃತ್ಯ ಮಾಡುತ್ತಾರೆ. ಶಿಕ್ಷಕಿಯ ಎಂಟ್ರಿಯಿಂದಾಗಿ ಶಾಲೆಯ ಇಡೀ ವಾತಾವರಣವೇ ಸಂಭ್ರಮದಿಂದ ತುಂಬಿಹೋಗುತ್ತದೆ. ಅವರ ಜೋಶ್ ಮತ್ತು ಎನರ್ಜಿ ಕಂಡು ಅಲ್ಲಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾ ಸಂಭ್ರಮಿಸಿದ್ದಾರೆ. ಸದ್ಯ ಸೀರೆಯುಟ್ಟುಕೊಂಡೇ ಶಿಕ್ಷಕಿ ಡಾನ್ಸ್ ಮಾಡಿರುವುದು ನೆಟ್ಟಿಗರ ಗಮನ ಸೆಳೆದಿದೆ. ಪ್ರಭುದೇವ ಅವರ ಹಾಡಿಗೆ ಸ್ಟೆಪ್ಸ್ ಹಾಕುವುದು ಸುಲಭದ ಮಾತಲ್ಲ. ಜಿಮ್ ಅಥವಾ ಕಂಫರ್ಟಬಲ್ ಬಟ್ಟೆಗಳಲ್ಲೇ ಕಷ್ಟವಾಗುವ ಅಂತಹ ವೇಗದ ಮೂವ್ಸ್ ಅನ್ನು ಸೀರೆಯಲ್ಲಿ ಅತ್ಯಂತ ಲೀಲಾಜಾಲವಾಗಿ ಮಾಡಿದ್ದಾರೆ ಟೀಚರ್. ಭಾರತೀಯ ಸಂಪ್ರದಾಯದ ಉಡುಗೆಯಲ್ಲಿದ್ದರೂ, ಆಧುನಿಕ ಪಾಪ್ ಹಾಡಿಗೆ ನೃತ್ಯ ಮಾಡಿದ ರೀತಿ ಜನರನ್ನು ಸದ್ಯ ಬೆರಗುಗೊಳಿಸಿದೆ.
ಅಂದಹಾಗೆ Mukkabala ಸಾಂಗ್ ಭಾರತೀಯ ಸಿನಿಮಾ ರಂಗದಲ್ಲಿಯೇ ಐಕಾನಿಕ್ ಹಾಡುಗಳಲ್ಲಿ ಒಂದು. ಎ.ಆರ್. ರೆಹಮಾನ್ ಸಂಗೀತ ಮತ್ತು ಪ್ರಭುದೇವ ಅವರ ಅಪ್ರತಿಮ ನೃತ್ಯದಿಂದಾಗಿ ಈ ಹಾಡು ದಶಕಗಳಿಂದಲೂ ಜನಪ್ರಿಯವಾಗಿದೆ. ಪ್ರಭುದೇವ ಅವರಷ್ಟೇ ವೇಗವಾಗಿ ಮತ್ತು ಪವರ್‌ಫುಲ್ ಆಗಿ ಸೀರೆಯುಟ್ಟು ಶಿಕ್ಷಕಿ ನೃತ್ಯ ಮಾಡಿರುವುದು ಈ ವಿಡಿಯೋ ಇಷ್ಟು ದೊಡ್ಡ ಮಟ್ಟದಲ್ಲಿ ವೈರಲ್ ಆಗಲು ಮುಖ್ಯ ಕಾರಣ. ಒಬ್ಬ ಶಿಕ್ಷಕಿ ಇಷ್ಟು ಪ್ರೊಫೆಷನಲ್ ಆಗಿ ಡ್ಯಾನ್ಸ್ ಮಾಡುತ್ತಾರೆ ಎಂದು ಯಾರೂ ನಿರೀಕ್ಷಿಸಿರುವುದಿಲ್ಲ, ಹಾಗಾಗಿ ಜನರು ಇದನ್ನು ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇರ್ ಮಾಡುತ್ತಿದ್ದಾರೆ.
ಜಬರ್‌ದಸ್ತ್ ಪರ್‌ಫಾರ್ಮೆನ್ಸ್‌ಗೆ ನೆಟ್ಟಿಗರ ಪ್ರತಿಕ್ರಿಯೆ
ಕೆಲವರು ಈ ಅದ್ಭುತ ನೃತ್ಯವನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಅಂತರ್ಜಾಲದಲ್ಲಿ ಹಂಚಿಕೊಂಡಿದ್ದಾರೆ. motivone.in ಎಂಬ ಇನ್‌ಸ್ಟಾಗ್ರಾಮ್ ಖಾತೆಯಿಂದ ಹಂಚಿಕೊಳ್ಳಲಾದ ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿದೆ. ಪ್ರಭುದೇವ ಅವರೇ ಮೆಚ್ಚುವಂತಹ ರೀತಿಯಲ್ಲಿ ಶಿಕ್ಷಕಿ ಸ್ಟೆಪ್ಸ್ ಹಾಕಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಶಿಕ್ಷಕಿಯ ಪ್ರತಿಭೆಯನ್ನು ಶ್ಲಾಘಿಸುತ್ತಿದ್ದಾರೆ. ಒಟ್ಟಿನಲ್ಲಿ, ಈ ಶಿಕ್ಷಕಿಯ ನೃತ್ಯವು ಪ್ರಸ್ತುತ ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸುತ್ತಿರುವುದಂತೂ ಸುಳ್ಳಲ್ಲ.
ಸಾಮಾನ್ಯವಾಗಿ ನಾವು ಶಿಕ್ಷಕರನ್ನು ಗಂಭೀರವಾಗಿ, ಶಿಸ್ತಿನಿಂದ ಇರುವುದನ್ನು ನೋಡಿರುತ್ತೇವೆ. ಆದರೆ ಈ ವಿಡಿಯೋದಲ್ಲಿ ಶಿಕ್ಷಕಿ ತನ್ನ ಗಂಭೀರತೆಯನ್ನು ಬದಿಗಿಟ್ಟು, ಮಕ್ಕಳೊಂದಿಗೆ ಬೆರೆತು ನೃತ್ಯ ಮಾಡಿರುವುದು ಎಲ್ಲರಿಗೂ ಇಷ್ಟವಾಗಿದೆ. ಇದು ಶಿಕ್ಷಕ ಮತ್ತು ವಿದ್ಯಾರ್ಥಿಗಳ ನಡುವಿನ ಸುಂದರ ಬಾಂಧವ್ಯವನ್ನು ತೋರಿಸುತ್ತದೆ.
ಇಲ್ಲಿದೆ ನೋಡಿ ವಿಡಿಯೋ