Breaking ಪಿಕ್‌ನಿಕ್ ಹೊರಟ ಶಾಲಾ ವಿದ್ಯಾರ್ಥಿಗಳ ಬಸ್ ಅಪಘಾತ, ಹಲವರಿಗೆ ಗಾಯ, ಖಾಸಗಿ ಶಾಲೆ ವಿದ್ಯಾರ್ಥಿಗಳ ಪ್ರವಾಸದ ವೇಳೆ ಈ ದುರ್ಘಟನೆ ನಡೆದಿದೆ. 60 ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳ ಬಸ್ ಪಲ್ಟಿಯಾಗಿದೆ.
ಹೈದರಾಬಾದ್ (ಡಿ.25) ಒಂದೆಡೆ ಕ್ರಿಸ್ಮಸ್ ಹಬ್ಬದ ರಜೆ ಮತ್ತೊಂದೆಡೆ ಶಾಲಾ ಮಕ್ಕಳಿಗೆ ಇದು ಪ್ರವಾಸದ ಸಮಯ. ಸಾಲು ಸಾಲು ರಜೆ ಹೊಸ ವರ್ಷದ ಸಂಬ್ರಮದ ಕಾರಣ ಪ್ರವಾಸ, ತವರಿಗೆ ಮರಳುತ್ತಿರುವ ಸಂಖ್ಯೆ ಹೆಚ್ಚಿದೆ. ಹೀಗಾಗಿ ರಸ್ತೆಗಳಲ್ಲಿ ಭಾರಿ ವಾಹನ, ಸಂಚಾರ ದಟ್ಟಣೆ ಸಹಜ. ಈ ಸಂದರ್ಭದಲ್ಲಿ ಅತೀವ ಕಾಳಜಿ ಅಗತ್ಯವಿದೆ. ಆದರೆ ಸಂಚಾರ ದಟ್ಟಣೆ ನಡುವೆ ವೇಗವಾಗಿ ತೆರಳುತ್ತಿದ್ದ ಶಾಲಾ ಮಕ್ಕಳ ಪ್ರವಾಸ ಬಸ್ ಪಲ್ಟಿಯಾದ ಘಟನೆ ಹೈದರಾಬಾದ್ ಸಮೀಪದ ಶಂಶಾಬಾದ್ ರಸ್ತೆಯಲ್ಲಿ ನಡೆದಿದೆ . 60 ವಿದ್ಯಾರ್ಥಿಗಳು, ಶಿಕ್ಷಕರು, ಸಿಬ್ಬಂದಿಗಳು ಹೊರಟಿದ್ದ ಬಸ್ ಪಲ್ಟಿಯಾದ ಪರಿಣಾಮ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರಿಗೆ ಡಿಕ್ಕಿಯಾದ ಕಾರು
ಮೆಹಬೂಬನಗರ ಜಿಲ್ಲೆಯ ಬಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶಂಶಾಬಾದ್ ರಸ್ತೆ ಮೂಲಕ ಹೈದರಾಬಾದ್‌ನ ಜಲಿವಾಹರಕ್ಕೆ ಪ್ರವಾಸ ಹೊರಟಿದ್ದ ಬಸ್‌ಗೆ ಹಿಂಭಾಗದಿಂದ ವೇಗವಾಗಿ ಬಂದ ಕಾರು ಡಿಕ್ಕಿಯಾಗಿದೆ. ಅತೀ ವೇಗದಿಂದ ಬಂದ ಕಾರು ಡಿಕ್ಕಿಯಾದ ಕಾರಣ ಬಸ್ ಚಾಲಕನ ನಿಯಂತ್ರಣ ತಪ್ಪಿದೆ. ಹೀಗಾಗಿ ಬಸ್ ರಸ್ತೆಯಲ್ಲಿಟ್ಟಿದ್ದ ಬ್ಯಾರಿಕೇಡ್‌ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ. ವಿದ್ಯಾರ್ಥಿಗಳು ಪ್ರವಾಸ ಎಂಜಾಯ್ ಮಾಡತ್ತಿರುವಾಗಲೇ ಈ ದುರ್ಘಟನೆ ನಡೆದಿದೆ. ಹಲವು ವಿದ್ಯಾರ್ಥಿಗಳು ಬಸ್‌ನಲ್ಲಿ ನಿಂತು ಪ್ರವಾಸ ಆನಂದಿಸುತ್ತಿದ್ದರು. ಹೀಗಾಗಿ ಹಲವು ಮಕ್ಕಳು ಗಾಯಗೊಂಡಿದ್ದಾರೆ.
ವಿದ್ಯಾರ್ಥಿಗಳನ್ನು ಸ್ಥಳೀಯ ಆಸ್ಪತ್ರೆ ದಾಖಲು
ಬಸ್ ಪಲ್ಟಿಯಾದ ಕಾರಣ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಇತ್ತ ಶಿಕ್ಷಕರು ಸಿಬ್ಬಂದಿಗಳು ಕೂಡ ಗಾಯಗೊಂಡಿದ್ದಾರೆ. ತಕ್ಷಣವೇ ಸ್ಥಳೀಯರು, ಇತರ ವಾಹನ ಸವಾರರು ನೆರವಿಗೆ ಧಾವಿಸಿದ್ದಾರೆ. ಬಸ್‌ನಿಂದ ವಿದ್ಯಾರ್ಥಿಗಳನ್ನು ಹೊರೆತೆಗೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ವಿದ್ಯಾರ್ಥಿಗಳು ಬಸ್‌ನಡಿ ಸಿಲುಕಿದ್ದರು. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬಸ್ ಅಡಿಯಲ್ಲಿ ಸಿಲುಕಿದ ವಿದ್ಯಾರ್ಥಿಗಳನ್ನು ಆಸ್ಪತ್ರೆ ದಾಖಲಿಸಲಾಗಿದೆ.


