ಈಗಾಗಲೇ ಬಡತನ, ಸಾಲ, ಉದ್ವಿಗ್ನತೆ, ಭಾರತದ ಭಯದಿಂದ ಕಂಗೆಟ್ಟಿರುವ ಪಾಕಿಸ್ತಾನ ಈ ಬೇಸಿಗೆಯಲ್ಲಿ ಮತ್ತಷ್ಟು ಬಳಲಲಿದೆ. ಈ ವಾರ ಪಾಕಿಸ್ತಾನದ ತಾಪಮಾನ 50 ಡಿ.ಸೆ. ತಲುಪುವ ನಿರೀಕ್ಷೆಯಿದ್ದು, ಹೀಗಾದಲ್ಲಿ, ಇದು ಜಗತ್ತಿನಲ್ಲೇ ಏಪ್ರಿಲ್ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪವಾಗಿರಲಿದೆ.
ಇಸ್ಲಾಮಾಬಾದ್ (ಮೇ.1): ಈಗಾಗಲೇ ಬಡತನ, ಸಾಲ, ಉದ್ವಿಗ್ನತೆ, ಭಾರತದ ಭಯದಿಂದ ಕಂಗೆಟ್ಟಿರುವ ಪಾಕಿಸ್ತಾನ ಈ ಬೇಸಿಗೆಯಲ್ಲಿ ಮತ್ತಷ್ಟು ಬಳಲಲಿದೆ. ಈ ವಾರ ಪಾಕಿಸ್ತಾನದ ತಾಪಮಾನ 50 ಡಿ.ಸೆ. ತಲುಪುವ ನಿರೀಕ್ಷೆಯಿದ್ದು, ಹೀಗಾದಲ್ಲಿ, ಇದು ಜಗತ್ತಿನಲ್ಲೇ ಏಪ್ರಿಲ್ ತಿಂಗಳಲ್ಲಿ ದಾಖಲಾದ ಗರಿಷ್ಠ ತಾಪವಾಗಿರಲಿದೆ.
ಈಗಾಗಲೇ ದೇಶದ ಮಧ್ಯ ಹಾಗೂ ದಕ್ಷಿಣ ಭಾಗದಲ್ಲಿ ತಾಪಮಾನ 48 ಡಿ.ಸೆ. ತಲುಪಿದ್ದು, ಇದು ಇನ್ನೂ ಅಧಿಕವಾಗಲಿದೆ. 2018ರಲ್ಲಿ ನವಾಬ್‌ಶಾ ಪ್ರದೇಶದಲ್ಲಿ 50 ಡಿ.ಸೆ. ಉಷ್ಣಾಂಶ ದಾಖಲಾಗಿದ್ದು, ಈ ವರ್ಷ ಈ ದಾಖಲೆಯನ್ನು ಮುರಿಯುವಷ್ಟು ಬಿಸಿಲಿರಲಿದೆ ಎನ್ನಲಾಗಿದೆ.
ಪಾಕಿಸ್ತಾನದ ಹವಾಮಾನ ಇಲಾಖೆಯು ಏ.26ರಿಂದ 30ರ ನಡುವೆ ಉಷ್ಣ ಗಾಳಿ ಸಂಭವಿಸುವ ಎಚ್ಚರಿಕೆ ನೀಡಿದ್ದು, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳುವಂತೆ ಜನರಿಗೆ ಎಚ್ಚರಿಸಿತ್ತು.
ಇದನ್ನೂ ಓದಿ: ಪಾಕಿಸ್ತಾನ ಪ್ರಜೆ ಬಳಿ ಭಾರತದ ಆಧಾರ್, ವೋಟಿಂಗ್ ಮತ್ತು ರೇಷನ್ ಕಾರ್ಡ್!
ಗಾಯದ ಮೇಲೆ ಬರೆ ಎಂಬಂತೆ, ಕಾಶ್ಮೀರದಲ್ಲಿ ನಡೆದ ಪಹಲ್ಗಾಂ ಉಗ್ರದಾಳಿಯ ಬೆನ್ನಲ್ಲೇ, ಭಾರತದಿಂದ ಪಾಕಿಸ್ತಾನಕ್ಕೆ ಹರಿಯುತ್ತಿದ್ದ ಸಿಂಧೂ ಉಪನದಿಗಳ ನೀರಿನ ಹರಿವನ್ನು ತಡೆಹಿಡಿಯುವ ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಮರಾಲ ಪ್ರದೇಶದಲ್ಲಿ ಚಿನಾಬ್ ನದಿ ನೀರಿನ ಪ್ರಮಾಣದಲ್ಲಿ ಅರ್ಧದಷ್ಟು ಇಳಿಕೆಯಾಗಿದೆ. ಇದು ಪಾಕಿಸ್ತಾನವನ್ನು ಇನ್ನಷ್ಟು ಬಾಯಾರುವಂತೆ ಮಾಡಲಿದೆ.

