ಫೋನ್ ಸ್ವಿಚ್ ಆಫ್ ಆಗಿ ನೆರವೂ ಸಿಗಲಿಲ್ಲ, ಇಬ್ಬರು ಕಾನೂನು ವಿದ್ಯಾರ್ಥಿಗಳ ದುರಂತ ಸಾವು, ಒಬ್ಬನ ಬಳಿ ಫೋನ್ ಇರಲಿಲ್ಲ, ಮತ್ತೊಬ್ಬನ ಫೋನ್ ಸ್ವಿಚ್ ಆಫ್. ಇಷ್ಟೇ ನೆರವಿಗೆ ಕರೆ ಮಾಡಲು ಸಾಧ್ಯವಾಗದೆ ಸಾವು ಕಂಡಿದ್ದಾರೆ. 

ನಾಗಪುರ (ಏ.17) ಕಾನೂನು ವಿದ್ಯಾರ್ಥಿಗಳಿಬ್ಬರು ಬೈಕ್ ಸ್ಕಿಡ್ ಆಗಿ ಅಪಘಾತಕ್ಕೀಡಾಗಿದ್ದಾರೆ. ಆದರೆ ಕೈಯಲ್ಲಿ ಫೋನ್ ಇದ್ದರೂ ಸ್ವಿಚ್ ಆಫ್ ಆಗಿದ್ದ ಕಾರಣ ನೆರವು ಸಿಗದೆ ದುರಂತ ಅಂತ್ಯ ಕಂಡ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಇಬ್ಬರು ಕಾನೂನು ವಿದ್ಯಾರ್ಥಿಗಳು ರಾತ್ರಿ ಹೊಟೆಲ್‌ಗೆ ತೆರಳಿ ಊಟ ಮಾಡಿ ಮರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಆದರೆ ಫೋನ್ ಸ್ವಿಚ್ ಆಫ್ ಆದ ಕಾರಣ ನೆರವು ಸಿಗದೇ ಸಾವು ಕಂಡ ಘಟನೆ ನಡೆದಿದೆ.

ಮೂರನೇ ವರ್ಷದ ಕಾನೂನು ವಿದ್ಯಾರ್ಥಿಗಳು ಸಾವು

ಹೊಟೆಲ್‌ನಲ್ಲಿ ಊಟಕ್ಕ ತೆರಳಿ ಮರಳುವಾದ ಮಹಾರಾಷ್ಟ್ರ ಲಾ ಕಾಲೇಜಿನ ಸಕ್ಷಮ್ ಬನ್ಸೋದ್ (20), ಆರ್ಯನ್ ಸೊಂಟಕ್ಕೆ(20) ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಪೋಷಕರು ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ಮಾಹಿತಿ ಕೇಳಿ ವಿದ್ಯಾರ್ಥಿಗಳ ಪೋಷಕರು ಕಂಗಾಲಾಗಿದ್ದಾರೆ.

ಫೋನ್ ಸ್ವಿಚ್ ಆಗಿ ವಿದ್ಯಾರ್ಥಿಗಳು ಮೃತಪಟ್ಟಿದ್ದು ಹೇಗೆ

ನಾಗಪುರದ ಹೊಟೆಲ್‌ಗೆ ರಾತ್ರಿ ಇಬ್ಬರು ವಿದ್ಯಾರ್ಥಿಗಳು ತೆರಳಿದ್ದಾರೆ. ಈ ಹೊಟೆಲ್‌ನಲ್ಲಿ ಫೋನ್‌ಗೆ ಅವಕಾಶವಿಲ್ಲ. ಹೀಗಾಗಿ ಒರ್ವ ವಿದ್ಯಾರ್ಥಿ ಫೋನ್ ಕೊಠಡಿಯಲ್ಲೇ ಇಟ್ಟು ತೆರಳಿದ್ದರೆ, ಮತ್ತೊರ್ವ ವಿದ್ಯಾರ್ಥಿ ಫೋನ್ ತೆಗೆದುಕೊಂಡು ಹೋಗಿದ್ದಾನೆ. ಹೊಟೆಲ್‌ನಲ್ಲಿ ಊಟ ಮುಗಿಸಿ ಬೈಕ್ ಮೂಲಕ ಮರಳಿದ್ದಾರೆ. ಆದರೆ ವಾರ್ಸಿಟಿ ಕ್ಯಾಂಪಸ್ ಪಕ್ಕದ ರಸ್ತೆಯಲ್ಲಿ ಬರುವಾಗ ಬೈಕ್ ಸ್ಕಿಡ್ ಆಗಿದೆ.

ರಸ್ತೆಯ ಎರಡೂ ಬದಿಯಲ್ಲಿ ಸಣ್ಣ ಕಾಡು, ಕುರುಚಲು ಗಿಡಗಳಿಂದ ತುಂಬಿದ್ದು. ಬೈಕ್ ಸ್ಕಿಡ್ ಆದ ಪರಿಣಾಮ ವಿದ್ಯಾರ್ಥಿಗಳು ಈ ಕುರುಚಲು ಪೊದೆಗಳ ಪಕ್ಕದಲ್ಲಿದ್ದ ಗುಂಡಿಗೆ ಬಿದ್ದಿದ್ದಾರೆ. ಇಬ್ಬರಿಗೆ ತೀವ್ರವಾಗಿ ಗಾಯವಾಗಿದೆ. ಎದ್ದು ಬರಲು ಸಾಧ್ಯವಾಗದ ಪರಿಸ್ಥಿತಿ. ಇತ್ತ ಬೈಕ್ ಕೂಡ ಕಾಡಿನಲ್ಲಿ ಬಿದ್ದಿದೆ. ಈ ರಸ್ತೆಯಲ್ಲಿ ಸಾಗುವಾಗ ಇಲ್ಲೊಂದು ಅಪಘಾತವಾಗಿದೆ ಅನ್ನೋ ಯಾವುದೇ ಕುರುಹು, ಸುಳಿವು ಸಿಗುತ್ತಿರಲಿಲ್ಲ. ಹೀಗಾಗಿ ಯಾರಿಗೂ ಗೊತ್ತೇ ಆಗಲಿಲ್ಲ. ಇತ್ತ ಇಬ್ಬರು ವಿದ್ಯಾರ್ಥಿಗಳ ಪೈಕಿ ಓರ್ವನಲ್ಲಿದ್ದ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಹೀಗಾಗಿ ತಾವು ಅಪಘಾತವಾಗಿ ಸಿಲುಕಿದ್ದೇವೆ ನೆರವು ನೀಡಿ ಎಂದು ಹೇಳಲು, ತಮ್ಮ ಲೋಕೇಶನ್ ಹೇಳಲು ಸಾಧ್ಯವಾಗಲಿಲ್ಲ. ಕೂಗಿಕೂಂಡರು ಯಾರಿಗೂ ಗೊತ್ತಾಗಲಿಲ್ಲ. ಪರಿಣಾಮ ಇದೇ ಗುಂಡಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ.