ರಾಹುಲ್ ಗಾಂಧಿ ಮಾಡಿದ ಮತ ಕಳ್ಳತನ ಆರೋಪ ಕುರಿತು ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ಮೂಲಕ ಉತ್ತರ ನೀಡಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನ, ಮತದಾರರನ್ನು ದಾರಿ ತಪ್ಪಿಸುವ ಕೆಲಸವಾಗುತ್ತಿದೆ ಎಂದು ಆಯೋಗ ಹೇಳಿದೆ. ಈ ಮೂಲಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿದೆ.

ನವದೆಹಲಿ (ಆ.17) ದೇಶಾದ್ಯಂತ ರಾಹುಲ್ ಗಾಂಧಿ ಹಾಗೂ ವಿಪಕ್ಷಗಳು ಮತಕಳ್ಳತನ ಆರೋಪ ಮಾಡಿ ಪ್ರತಿಭಟನೆ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮತಕಳ್ಳತನದ ಮೂಲಕ ಅಧಿಕಾರಕ್ಕೇರಿದೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗ ಹಾಗೂ ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಕೇಂದ್ರ ಚುನಾವಣಾ ಆಯೋಗ ಸುದ್ದಿಗೋಷ್ಠಿ ಮೂಲಕ ಉತ್ತರಿಸಿದೆ. ಮತಗಳ್ಳತನ ಆರೋಪ ಪ್ರಜಾಪ್ರಭುತ್ವಕ್ಕೆ, ಸಂವಿಧಾನಕ್ಕೆ ಮಾಡಿದ ಅವಮಾನ ಎಂದು ಕೇಂದ್ರ ಚುನಾವಣಾ ಆಯೋಗ ಮುಖ್ಯಸ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ ರಾಹುಲ್ ಗಾಂಧಿ ಪ್ರತಿ ಆರೋಪಗಳಿಗೆ ತರುಗೇಟು ನೀಡಿದ್ದಾರೆ.

ಮತಗಳ್ಳತನ ಆರೋಪ ಆಧಾರ ರಹಿತ

ರಾಹುಲ್ ಗಾಂಧಿ ಹಾಗೂ ವಿಪಕ್ಷಗಳು ನಡೆಸುತ್ತಿರುವ ಆರೋಪ ಆಧಾರ ರಹಿತವಾಗಿದೆ. ಚುನಾವಣೆಗೆ ಮೊದಲು ಮತದಾರರ ಪಟ್ಟಿ ಪರಿಷ್ಕರಣೆ ಆಯೋಗದ ಕರ್ತವ್ಯವಾಗಿದೆ. ನಿಯಮದ ಅನುಸಾರ ಮತದಾರರ ಪಟ್ಟಿ ಪರಿಷ್ಕರಣೆಯಾಗುತ್ತದೆ. ಮತದಾರರ ಪಟ್ಟ ಪರಿಷ್ಕರಣೆಯಾದ ಬಳಿಕ ಇಂತಿಷ್ಟು ಕಾಲದಲ್ಲಿ ಅಕ್ಷೇಪ, ತಪ್ಪುಗಳಿದ್ದರೆ ದೂರು ನೀಡಬಹುದು. ಚುನಾವಣಾ ಆಯೋಗ ಈ ಕುರಿತು ಗಂಭೀರವಾಗಿ ಪರಿಗಣಿಸುತ್ತದೆ. ಆದರೆ ಅಂದು ಯಾವುದೇ ಆರೋಪ ಯಾರಿಗೂ ಇರಲಿಲ್ಲ. ಇದೀಗ ಆದಾರವಿಲ್ಲದೆ ಆರೋಪ ಮಾಡಲಾಗುತ್ತಿದೆ. ಜೊತೆಗೆ ಮತ ಕಳ್ಳತನ ಆರೋಪ ಮಾಡುತ್ತಿದ್ದಾರೆ. ಇದು ದೇಶದ ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಮಾನ ಎಂದು ಜ್ಞಾನೇಶ್ ಕುಮಾರ್ ಹೇಳಿದ್ದಾರೆ.

ಚುನಾವಣಾ ಆಯೋಗಕ್ಕೆ ಎಲ್ಲಾ ಪಕ್ಷ ಒಂದೆ

ಕೇಂದ್ರ ಚುನಾವಣಾ ಆಯೋಗಕ್ಕೆ ವಿಪಕ್ಷ, ದೊಡ್ಡ ಪಾರ್ಟಿ, ಸಣ್ಣ ಪಕ್ಷ ಎಂದಿಲ್ಲ. ಎಲ್ಲಾ ಪಕ್ಷಗಳು ಒಂದೆ. ಎಲ್ಲರಿಗೂ ಒಂದೇ ನಿಯಮ. ಇಲ್ಲಿ ಯಾರನ್ನು ತಾರತಮ್ಯದಿಂದ ನೋಡಲಾಗುವುದಿಲ್ಲ. ಸಂವಿಧಾನ, ನಿಯಮಕ್ಕೆ ಅನುಸಾರ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ. ಆರೋಪಗಳಿಗೆ ಹೆದರುವುದಿಲ್ಲ, ನಮ್ಮ ಕರ್ತವ್ಯ ನಿಲ್ಲಿಸುವುದಿಲ್ಲ ಎಂದು ಜ್ಞಾನೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಬಿಹಾರದ ಮತದಾರ ಪಟ್ಟಿ ಪರಿಷ್ಕರಣೆ ವಿರುದ್ಧವೂ ಅಪಪ್ರಚಾರ

ಬಿಹಾರದ ಮತದಾರರ ಪಟ್ಟಿಯಲ್ಲಿ ಮೃತರ ಹೆಸರು, ಸ್ಥಳಾಂತರಗೊಂಡಿರುವ ಹೆಸರು ತೆಗೆದು ಪಟ್ಟ ಪರಿಷ್ಕರಣೆ ಮಾಡಲಾಗುತ್ತದೆ. ಇದರ ವಿರುದ್ಧವೂ ಕೆಲ ಪಕ್ಷಗಳು ನಾಯಕರು ಅಪಪ್ರಚಾರ ಮಾಡುತ್ತಿದ್ದಾರೆ. ಬಿಹಾರದ ಜನತೆಗೆ ಈ ಪರಿಷ್ಕರಣೆಗೆ ಸಹಕರಿಸಿದ್ದಾರೆ. ತಿಂಗಳ ಕಾಲ ಯಾವುದೇ ಅಕ್ಷೇಪಣೆಗೆ ಅವಕಾಶವಿದೆ. ಚುನಾವಣಾ ಆಯೋಗ ಯಾರೇ ಆಕ್ಷೇಪ ವ್ಯಕ್ತಪಡಿಸಿದರೂ ಪರಿಗಣಿಸಲಿದೆ. ರಾಜಕೀಯ ಪಕ್ಷಗಳ ಬೂತ್ ಎಜೆಂಟ್, ಬೂತಲ್ ಲೆವೆಲ್ ಆಫೀಸರ್, ಅಧಿಕಾರಿಗಳು ತಯಾರಿಸಿದ ಪಟ್ಟಿ ಇದು. ತಪ್ಪುಗಳಾಗಿದ್ದರೆ ಸರಿಪಡಿಸುವ ಅವಕಾಶವೂ ಇದೆ. ಆದರೆ ಈ ಪರಿಷ್ಕರಣೆಯೇ ಸರಿಯಲ್ಲ ಅನ್ನೋ ಅಪಪ್ರಚಾರ ಸರಿಯಲ್ಲ. ಪರಿಷ್ಕರಣೆ ಮಾಡಿದ ಳಿಕ ಯಾವುದೇ ಆಕ್ಷೇಪ ಇಲ್ಲ ಎಂದು ಇದೀಗ ಮತ ಕಳ್ಳತನ ಆರೋಪ ಮಾಡುತ್ತಿದ್ದಾರೆ ಎಂದಿದ್ದಾರೆ.

1 ಕೋಟಿ ಅಧಿಕಾರಿಗಳು, 10 ಲಕ್ಷ ಬೂತ್ ಲೆವೆಲ್, 20 ಲಕ್ಷ ಪೋಲಿಂಗ್ ಎಜೆಂಟ್

ಲೋಕಸಭಾ ಚುನಾವಣೆಯಲ್ಲಿ 1 ಕೋಟಿ ಅಧಿಕಾರಿಗಳಿರುತ್ತಾರೆ. 10 ಲಕ್ಷ ಬೂತ್ ಎಜೆಂಟ್ ಗಳಿರುತ್ತಾರೆ, 20 ಲಕ್ಷ ಪೋಲಿಂಗ್ ಬೂತ್ ಎಜೆಂಟ್ ಇರುತ್ತಾರೆ. ಪಾರದರ್ಶಕವಾಗಿ ಮತದಾನ ಪ್ರಕ್ರಿಯೆ ನಡೆಯುತ್ತದೆ. ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಮತದಾನ ಮಾಡಿದ್ದಾರೆ ಅನ್ನೋ ಆರೋಪ ಮಾಡಿದ್ದಾರೆ. ಇದಕ್ಕೆ ಸಾಕ್ಷಿ ಕೊಡಿ ಎಂದರೆ ಇದುವರೆಗೂ ಕೊಟ್ಟಿಲ್ಲ. ಮಹಾರಾಷ್ಟ್ರ ಚುನಾವಣೆ ನಡೆದು ಹಲವು ತಿಂಗಳಾಗಿದೆ. ಈಗ ಆರೋಪ ಮಾಡುತ್ತಿದ್ದಾರೆ. ಸರಿ ಆರೋಪದ ಕುರಿತು ಮಹಾರಾಷ್ಟ್ರ ಚುನಾವಣಾ ಅಧಿಕಾರಿಗೆ ಇದುವರೆಗೂ ಒಂದೇ ಒಂದು ದೂರು ನೀಡಿಲ್ಲ. ಮತದಾರ ಪಟ್ಟಿ ಪರಿಷ್ಕರಣೆ ವೇಳೆ ದೂರು ಇರಲಿಲ್ಲ. ಫಲಿತಾಂಶ ಬಂದು 8 ತಿಂಗಳ ಬಳಿಕ ಇದೀಗ ಆರೋಪ ಮಾಡುತ್ತಿದ್ದಾರೆ ಎಂದು ಆಯೋಗದ ಅಧ್ಯಕ್ಷ ಗರಂ ಆಗಿ ಉತ್ತರಿಸಿದ್ದಾರೆ.