boy sues parents over name: ಅಮೆರಿಕಾದ ಯುವಕನೊಬ್ಬ, ತನಗೆ ಪೋಷಕರು 'ಗೇಲಾರ್ಡ್' ಎಂದು ಇಟ್ಟ ಕೆಟ್ಟ ಹೆಸರಿಟ್ಟಿದ್ದರಿಂದ ತೀವ್ರ ಅವಮಾನ ಹಾಗೂ ಭಾವನಾತ್ಮಕ ಯಾತನೆಯಾಗಿದೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದು, 150 ಸಾವಿರ ಡಾಲರ್ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾನೆ.

ಹೆಸರು ಅಜ್ಜನದ್ದು, ನೋವು ಮೊಮ್ಮಗನದ್ದು

ಹೆಸರಲ್ಲೇನಿದೆ ಎಂದು ಅನೇಕರು ಕೇಳುವುದನ್ನು ನೋಡಬಹುದು. ಆದರೆ ಹೆಸರಲ್ಲೇ ಎಲ್ಲಾ ಇದೆ. ನಿಮಗಿಟ್ಟ ಹೆಸರು ಕೆಟ್ಟದಾಗಿದ್ದರೆ ಅದು ನಿಮಗೆ ಮಾನಸಿಕ ಯಾತನೆ ನೀಡುವುದು ನಿಮ್ಮ ನಿಮ್ಮೆದಿ ಕೆಡಿಸುವುದು. ಹಾಗೆಯೇ ಇಲ್ಲೊಬ್ಬ ಯುವಕನಿಗೆ ಪೋಷಕರಿಟ್ಟ ಹೆಸರೇ ದೊಡ್ಡ ತಲೆನೋವಾಗಿ ಕಾಡಿದೆ.

ಹೊಸದಾಗಿ ಹುಟ್ಟಿದ ಮಕ್ಕಳ ಹೆಸರನ್ನು ಅವರೇ ನಿರ್ಧರಿಸಲಾಗದು. ಬೇಕಿದ್ದಲ್ಲಿ ಒಂದು ವಯಸ್ಸಿನ ನಂತರ ಪೋಷಕರು ತಮ್ಮಗಿಟ್ಟ ಹೆಸರು ಚೆನ್ನಾಗಿಲ್ಲ ಎಂದೆನಿಸಿದರೆ ಮಕ್ಕಳು ಆ ಹೆಸರನ್ನು ವಕೀಲರ ಮೂಲಕ ಅಫಿಡವಿಟ್ ಮಾಡಿಸಿ ಬದಲಾಯಿಸಿಕೊಳ್ಳಬಹುದು. ಆದರೆ ಇಲ್ಲೊಂದು ಕಡೆ ಯುವಕನೋರ್ವ ತನಗೆ ಪೋಷಕರು ಕೆಟ್ಟದಾಗಿ ಹೆಸರಿಟ್ಟಿದ್ದಾರೆ ಎಂದು ಕೋರ್ಟ್ ಮೊರೆ ಹೋಗಿದ್ದಲ್ಲದೇ ಪೋಷಕರಿಂದ ತನಗೆ 150 ಸಾವಿರ ಡಾಲರ್ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದ್ದಾನೆ.

ತನಗೆ ಕೆಟ್ಟದಾಗಿ ಹೆಸರಿಟ್ಟ ಪೋಷಕರ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಯುವಕ

ಇಂತಹದೊಂದು ವಿಚಿತ್ರ ಘಟನೆ ನಡೆದಿರೋದು ಅಮೆರಿಕಾದ ಸ್ಪ್ರಿಂಗ್‌ಫೀಲ್ಡ್‌ನ ಮಿಸೌರಿ ಎಂಬಲ್ಲಿ. ಮಿಸೌರಿಯ ಸ್ಪ್ರಿಂಗ್‌ಫೀಲ್ಡ್‌ನ 19 ವರ್ಷದ ಯುವಕ ತಾನು ಜನಿಸಿದ ಸಮಯದಲ್ಲಿ ತನಗೆ ಪೋಷಕರು ಕೆಟ್ಟದಾಗಿ ಹೆಸರಿಟ್ಟಿದ್ದಾರೆ. ಅವರಿಟ್ಟ ಹೆಸರಿನಿಂದ ತನಗೆ ತೀವ್ರ ಹಾನಿಯಾಗಿದೆ ಎಂದು ಆರೋಪಿಸಿ ಕೋರ್ಟ್‌ ಮೆಟ್ಟಿಲೇರಿದ್ದು, ತನಗಾದ ನಷ್ಟಕ್ಕೆ 150 ಸಾವಿರ ಡಾಲರ್ ಪರಿಹಾರ ನೀಡಬೇಕು ಎಂದು ಆತ ಆಗ್ರಹಿಸಿದ್ದಾನೆ.

ಹಾಗಾದ್ರೆ ಆತನಿಗೆ ಪೋಷಕರು ಇಟ್ಟ ಹೆಸರೇನು?

ಕೋರ್ಟ್‌ನಲ್ಲಿ ದಾಖಲಾದ ಪ್ರಕರಣದ ಮಾಹಿತಿಯ ಪ್ರಕಾರ, ಯುವಕನ ಜನನದ ಸಮಯದಲ್ಲಿ ಪೋಷಕರು ಆತನಿಗೆ ಗೇಲಾರ್ಡ್ ಥಾಮ್ಸನ್‌ ಎಂದು ಹೆಸರಿಟ್ಟಿದ್ದರು ಎಂದು ವರದಿಯಾಗಿದೆ. ಆ ಹೆಸರಿನಿಂದ ತನಗೆ ಸಾಕಷ್ಟು ವರ್ಷಗಳಿಂದ ಭಾವನಾತ್ಮಕವಾದ ಯಾತನೆ ಉಂಟಾಗಿದೆ. ನನ್ನ ಹಸೆರಿನ ಕಾರಣಕ್ಕೆ ನನ್ನ ಸಹಪಾಠಿಗಳು ಆತ್ಮೀಯರು ತನ್ನನ್ನು ನಿರಂತರವಾಗಿ ಛೇಡಿಸುತ್ತಾ, ತಮಾಷೆ ಮಾಡುತ್ತಾ ಬಂದಿದ್ದಾರೆ. ಅಲ್ಲದೇ ತರಗತಿಯಲ್ಲಿ ಶಿಕ್ಷಕರು ಹಾಜರಾತಿ ಕರೆಯುವ ವೇಳೆ ನನ್ನ ಹೆಸರನ್ನು ಓದಿದ ತಕ್ಷಣ ಕೆಲ ನಿಮಿಷ ಗೊಂದಲದಿಂದ ನಿಲ್ಲುತ್ತಾರೆ. ಇದೇನು ತಮಾಷೆಯ ಎಂದು ಭಾವಿಸುತ್ತಾರೆ ಹಾಗೂ ಈ ರೀತಿ ತನ್ನ ಹೆಸರಿನ ಮೇಲಿನ ತಮಾಷೆಯಿಂದಾಗಿ ತನ್ನ ಅಧ್ಯಯನದಲ್ಲಿ ಏರುಪೇರಾಗಿದೆ ಎಂದು ಆ ವಿದ್ಯಾರ್ಥಿ ತಾನು ಪೋಷಕರ ವಿರುದ್ಧ ಕೋರ್ಟ್‌ಗೆ ಹಾಕಿದ ದೂರಿನಲ್ಲಿ ತಿಳಿಸಿದ್ದಾರೆ. ಈ ವಿದ್ಯಾರ್ಥಿ ಕಿಕಾಪೂ ಹೈ ಸ್ಕೂಲ್‌ನಲ್ಲಿ ಹಿರಿಯ ವಿದ್ಯಾರ್ಥಿಯಾಗಿ ಓದುತ್ತಿದ್ದ.

1.25 ಕೋಟಿ ರೂ. ಪರಿಹಾರ ಕೇಳಿ ಕೋರ್ಟ್ ಮೆಟ್ಟಿಲೇರಿದ ಮಗ

ತನ್ನ ಪೋಷಕರು ತನಗೆ ಸರಿಯಾದ ಹೆಸರಿಡುವುದರಲ್ಲಿ ಅಸಮರ್ಥರಾಗಿದ್ದಾರೆ. ವಿಶೇಷವಾಗಿ ಆಧುನಿಕ ಸಾಮಾಜಿಕ ವಾತಾವರಣದಲ್ಲಿ ಸಮಂಜಸವಾದ ಹೆಸರನ್ನು ಇಡುವಲ್ಲಿ ವಿಫಲರಾಗಿದ್ದಾರೆ ಎಂದು ಆ ವಿದ್ಯಾರ್ಥಿ ಆರೋಪಿಸಿದ್ದಾರೆ. ಆತನ ತಂದೆ ಟ್ರಕ್ ಚಾಲಕರಾಗಿದ್ದು, ತಾಯಿ ಚರ್ಚೊಂದರ ಕಾರ್ಯದರ್ಶಿಯಾಗಿ ಆ ಸಮಯದಲ್ಲಿ ಕೆಲಸ ಮಾಡುತ್ತಿದ್ದರು. ಬಾಲಕನ ಅಜ್ಜನ ಮೇಲಿನ ಗೌರವದಿಂದ ಮಗನಿಗೆ ಆ ರೀತಿಯ ಹೆಸರಿಟ್ಟೆವು ಆದರೆ ಆ ಹೆಸರು ಈ ರೀತಿ ಅವಾಂತರ ಸೃಷ್ಟಿಸಬಹುದು ಎಂಬ ನಿರೀಕ್ಷೆ ನಮಗಿರಲಿಲ್ಲ ಎಂದು ಅವರು ಕೋರ್ಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಕೇವಲ ಒಂದು ದಿನ ಖಡ್ಗಮೃಗ ಮರಿಯ ಎಂದಾದರೂ ನೋಡಿದ್ದೀರಾ? IFS ಅಧಿಕಾರಿ ಹಂಚಿಕೊಂಡ ಅಪರೂಪದ ವೀಡಿಯೋ

ಕೆಲವು ವರ್ಷಗಳ ಹಿಂದೆ ನಡೆದ ಈ ಘಟನೆ ಈಗ ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದ್ದು, ನೆಟ್ಟಿಗರಿಂದ ಸ್ವಾರಸ್ಯಕರವಾದ ಕಾಮೆಂಟ್‌ಗಳಿಗೆ ಕಾರಣವಾಗಿದೆ.

ಅಂದಹಾಗೆ ಗೇಲಾರ್ಡ್ ಪದದ ಅರ್ಥ ಏನು?

ಮೂಲತಃ ಗೇಲಾರ್ಡ್ ಎಂಬುದು ಪ್ರಾಥಮಿಕವಾಗಿ ಫ್ರೆಂಚ್/ಸೆಲ್ಟಿಕ್ ಮೂಲದ ಪುಲ್ಲಿಂಗ ಹೆಸರಾಗಿದ್ದು, ಇದರ ಅರ್ಥ ಉತ್ಸಾಹಭರಿತ ಅಥವಾ ಸಂತೋಷಭರಿತ ಪ್ರಭು (ದೇವರು) ಎಂದರ್ಥ. ಆದರೆ ಬದಲಾದ ಕಾಲಮಾನದಲ್ಲಿ ಈ ಹೆಸರು ಬೇರೆಯದೇ ಅರ್ಥವನ್ನು ನೀಡುತ್ತಾರೆ. ಗೇ ಎಂದರೆ ಸಲಿಂಗಕಾಮಿ ಎಂಬ ಅರ್ಥವಿದ್ದು, ಗೇಲಾರ್ಡ್ ಎಂದರೆ ಸಲಿಂಗಕಾಮಿ ಪ್ರಭು ಎಂಬ ಅರ್ಥವನ್ನು ನೀಡುತ್ತದೆ. ಸಲಿಂಗಿಗಳನ್ನು ಸಮಾಜದಲ್ಲಿ ನೋಡುವ ರೀತಿ ವಿಭಿನ್ನವಾಗಿದ್ದು, ಇದರಿಂದಾಗಿ ಈ ಹೆಸರು ಸಹಜವಾಗಿಯೇ ಜನರ ಗಮನ ಸೆಳೆಯುವುದಕ್ಕೆ ಕಾರಣವಾಗಿರುವುದಲ್ಲದೇ ಹೆಸರು ಹೊಂದಿರುವವರನ್ನು ವಿಲಕ್ಷಣವಾಗಿ ನೋಡುವುದಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಬಾಲ್ಯದ ನೆನಪು ಕೆದಕಿದ 'ಅತ್ತೆ-ಸೊಸೆಯ' ಪ್ರೀತಿ:ಗಂಡನ ಮನೆಗೆ ಹೋಗಬೇಡ ಎಂದು ಸೋದರತ್ತೆಯ ತಬ್ಬಿ ಹಿಡಿದು ಅತ್ತ ಪುಟಾಣಿ