Job Loss : ಒಬ್ಬ ವ್ಯಕ್ತಿ ಒಳ್ಳೆ ಕೆಲ್ಸ, ಉತ್ತಮ ಸಂಪಾದನೆ ಮಾಡ್ತಿದ್ದರೆ ಮಾತ್ರ ಆತನಿಗೆ ಎಲ್ಲ ಕಡೆ ಗೌರವ ಸಿಗುತ್ತೆ. ಕೆಲ್ಸ, ಹಣ ಇಲ್ಲ ಅಂದ್ರೆ ನೋಡುವವರ ಸೃಷ್ಟಿಯೇ ಬದಲಾಗುತ್ತೆ. ಇದೇ ಸ್ಥಿತಿಯಲ್ಲಿರುವ ವ್ಯಕ್ತಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ತನ್ನ ದುಃಖ ತೋಡಿಕೊಂಡಿದ್ದಾನೆ.
ಭಾರತದಲ್ಲಿ ಹಣಕ್ಕಿರುವ ಮಹತ್ವ ಸಂಬಂಧಕ್ಕಿಲ್ಲ. ಆಪ್ತ ಸಂಬಂಧಿಕರಾಗಿರಲಿ ಇಲ್ಲ ಕರುಳ ಬಳ್ಳಿಯಾಗಿರಲಿ ಕೈನಲ್ಲಿ ಹಣ ಇಲ್ಲ ಅಂದ್ರೆ ತಾತ್ಸಾರ ಮಾಡೋರೇ ಹೆಚ್ಚು. ಸಾಲ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಪಾಲಕರ ಮುಂದಿನ ಗುರಿ ಮಕ್ಕಳ ಉದ್ಯೋಗ. ಮಕ್ಕಳು ಉತ್ತಮ ಸಂಬಳ ಬರುವ ದೊಡ್ಡ ಕೆಲ್ಸದಲ್ಲಿರಬೇಕು ಅಂತ ಅನೇಕ ಪಾಲಕರು ಬಯಸ್ತಾರೆ. ಸರಿಯಾದ ಟೈಂಗೆ ಮಕ್ಕಳಿಗೆ ಕೆಲ್ಸ ಸಿಕ್ಕಿಲ್ಲ ಎಂದಾಗ ಬರೀ ಅಕ್ಕಪಕ್ಕದವರು ಮಾತ್ರವಲ್ಲ ಪಾಲಕರು, ಮಕ್ಕಳನ್ನು ನೋಡುವ ದೃಷ್ಟಿ ಬದಲಾಗುತ್ತೆ. ಮಕ್ಕಳನ್ನು ದಂಡಪಿಂಡದಂತೆ ನೋಡಲು ಶುರು ಮಾಡ್ತಾರೆ. ನಿರುದ್ಯೋಗಿಗಳಿಗೆ ಇದ್ರ ಅನುಭವ ಚೆನ್ನಾಗಿದೆ. ಇನ್ನು ಓದು ಮುಗ್ಸಿ, ಕೆಲ್ಸ ಗಿಟ್ಟಿಸಿಕೊಂಡು ಉತ್ತಮ ಸಂಪಾದನೆ ಮಾಡುವ ಜನರಿಗೆ ಇದ್ರ ಅರಿವಿರೋದಿಲ್ಲ. ಅಪ್ಪ – ಅಮ್ಮನ ಪ್ರೀತಿಯನ್ನು ಅವರು ಸಂಪೂರ್ಣ ಪಡೆದಿರ್ತಾರೆ. ಮಕ್ಕಳು ಕೆಲ್ಸ ಮುಗಿಸಿ ಮನೆಗೆ ಬರ್ತಿದ್ದಂತೆ ಪಾಲಕರ ಪ್ರೀತಿ ಡಬಲ್ ಆಗುತ್ತೆ. ಅವರ ಆರೈಕೆ ಹೆಚ್ಚಾಗುತ್ತೆ. ಕೈತುಂಬಾ ಸಂಪಾದನೆ ಮಾಡುವ ಮಗ ಒಂದು ದಿನ ಕೆಲ್ಸ ಕಳೆದುಕೊಂಡು ಮನೆಗೆ ಬಂದಾಗ್ಲೇ ಪಾಲಕರ ಬಣ್ಣ ಬಯಲಾಗೋದು.
ಕೆಲ್ಸ ಇಲ್ಲದ ಮಗನಿಗೆ ಪಾಲಕರಿಂದ ಸಿಕ್ಕಿದ್ದು ಬರೀ ನೋವು :
ಪ್ರೀತಿ (love)ಯಷ್ಟೆ ಹಣ ಕೂಡ ಮುಖ್ಯ. ಹಣವಿಲ್ಲದೆ ಬದುಕು ನಡೆಯೋದಿಲ್ಲ. ಆದ್ರೆ ಸಿಕ್ಕ ಕೆಲ್ಸ ಶಾಶ್ವತ ಅಲ್ವೇ ಅಲ್ಲ. ದೊಡ್ಡ ಉದ್ಯೋಗದಲ್ಲಿರುವವರು ಕೂಡ ಏಕಾಏಕಿ ಕೆಲ್ಸ ಕಳೆದುಕೊಂಡು ಮನೆಯಲ್ಲಿರುವ ಸ್ಥಿತಿ ಇದೆ. ಆಗ ಕುಟುಂಬಸ್ಥರ ಧೈರ್ಯ, ಸಾಂತ್ವಾನ ಬಹಳ ಮುಖ್ಯ. ಕೆಲ್ಸ ಕಳೆದುಕೊಂಡ ನೋವು, ಆಘಾತದ ಮಧ್ಯೆ ಕುಟುಂಬಸ್ಥರ ತಾತ್ಸಾರ ಮನುಷ್ಯನನ್ನು ಕುಗ್ಗಿಸುತ್ತೆ. ಅನೇಕರು ಜೀವ ಕಳೆದುಕೊಳ್ಳುವ ಬಗ್ಗೆ ಆಲೋಚನೆ ಮಾಡ್ತಾರೆ. ಕೆಲ್ಸ ಕಳೆದುಕೊಂಡ ವ್ಯಕ್ತಿ ಮತ್ತೆ ಹೊಸ ಕೆಲ್ಸ ಹುಡುಕಿಕೊಂಡು ಬದುಕು ನಡೆಸಬೇಕೆಂದ್ರೆ ಕುಟುಂಬಸ್ಥರ ಬೆಂಬಲ ಅತ್ಯಗತ್ಯವಾಗುತ್ತದೆ. ಆದ್ರೆ ಎಲ್ಲ ಪಾಲಕರಿಂದ ಇದನ್ನು ಬಯಸೋದು ಕಷ್ಟ. ಕೆಲ ಪಾಲಕರು ಮಕ್ಕಳಿಗಿಂತ ಮಕ್ಕಳ ಕೆಲ್ಸ, ಹಣವನ್ನು ಪ್ರೀತಿಸ್ತಾರೆ. ಕೆಲ್ಸ ಕಳೆದುಕೊಂಡಾಗ ಪಾಲಕರ ಪ್ರತಿಕ್ರಿಯೆ ಹೇಗಿರುತ್ತೆ ಎಂಬುದನ್ನು ಕಂಟೆಂಟ್ ಕ್ರಿಯೆಟರ್ ಒಬ್ಬರು ಹೇಳಿದ್ದಾರೆ. ಅವ್ರ ವಿಡಿಯೋ ವೈರಲ್ ಆಗಿದೆ.
ಉದ್ಯೋಗ ಕಡಿತದ ನೋವು ತೋಡಿಕೊಂಡ ಮ್ಯಾನೇಜರ್, 70 ಲಕ್ಷ ರೂ ವೇತನದಿಂದ ಈಗ ಝಿರೋ
ನಿರ್ದೇಶಕ ದಯಾಳ್ (director dayal) ತಮ್ಮ ಇನ್ಸ್ಟಾದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲಿ ಕೆಲ್ಸ ಕಳೆದುಕೊಂಡ ಮೂರೇ ದಿನದಲ್ಲಿ ಮನೆ ವಾತಾವರಣ ಹೇಗಾಗಿದೆ ಎಂಬುದನ್ನು ವಿವರಿಸಿದ್ದಾರೆ. ಕೆಲ್ಸದಲ್ಲಿದ್ದಾಗ, ಅಮ್ಮ ಇನ್ನೆರಡು ರೊಟ್ಟಿ ಹೆಚ್ಚು ಹಾಕಿಕೊಳ್ಳುವಂತೆ ಒತ್ತಾಯ ಮಾಡ್ತಿದ್ದರು. ಅದೇ ಕೆಲ್ಸ ಕಳೆದುಕೊಂಡು ಮನೆಗೆ ಬಂದಾಗ ರೊಟ್ಟಿ ಕೇಳೋರಿಲ್ಲ. ಬಾಯ್ಬಿಟ್ಟು ಎರಡು ರೊಟ್ಟಿ ಹೆಚ್ಚು ಬೇಕು ಅಂತ ಕೇಳಿದ್ರೆ, ಅಪ್ಪ ಎಲ್ಲರ ಮುಂದೆ ಅಪಹಾಸ್ಯ ಮಾಡಿದ್ರು. ಇನ್ನರೆಡು ರೊಟ್ಟಿ ಬೇಕಂತೆ ಹಾಕು ಅಂದ್ರು. ಉದ್ಯೋಗ ಕಳೆದುಕೊಂಡ ನೋವಿಗಿಂತ ಇದು ಮತ್ತಷ್ಟು ನೋವು ನೀಡುತ್ತದೆ ಅಂತ ತಮ್ಮ ದುಃಖ ತೋಡಿಕೊಂಡಿದ್ದಾರೆ. ನಿಮ್ಮ ಬಳಿ ಹಣವಿದ್ದಾಗ, ಎಲ್ಲರೂ ನಿಮ್ಮನ್ನು ಗೌರವಿಸುತ್ತಾರೆ. ನಿಮ್ಮ ಕುಟುಂಬವೂ ಸಹ. ನಿಮ್ಮ ಬಳಿ ಏನೂ ಇಲ್ಲದಿದ್ದಾಗ ನಿಮ್ಮ ಮನೆಯವರೂ ನಿಮ್ಮನ್ನು ವಿಭಿನ್ನವಾಗಿ ನೋಡ್ತಾರೆ ಅಂತ ದಯಾಳ್ ಹೇಳಿದ್ದಾರೆ.
ಭಾರತದ ಹೊಸ 4 ಕಾರ್ಮಿಕ ಸಂಹಿತೆ ಜಾರಿಗೆ, ಕನಿಷ್ಠ ವೇತನ, 1 ವರ್ಷದದಲ್ಲಿ
ಅವರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಜನರು ದಯಾಳ್ ಗೆ ಸಾಂತ್ವಾನ ಹೇಳಿದ್ದಾರೆ. ಆದಷ್ಟು ಬೇಗ ನಿಮಗೆ ಕೆಲ್ಸ ಸಿಗಲಿ ಅಂತ ಹರಸಿದ್ದಾರೆ. ಬರೀ ಹುಡುಗನಿಗೆ ಮಾತ್ರವಲ್ಲ ಕೆಲ್ಸ ಕಳೆದುಕೊಂಡ, ಏನೂ ಕೆಲ್ಸ ಮಾಡದ ಹುಡುಗಿಯನ್ನೂ ಜನರು ಹೀಗೇ ನೋಡೋದು ಅಂತ ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ.


