ಜ್ಯೋತಿಷಿ ಕಮಲಾಕರ ಮತ್ತು ರೀಲ್ಸ್ ರಾಣಿ ಸುಚಿತ್ರಾ ಅವರ ಅಪರಾಧದ ಹಿನ್ನೆಲೆ ಬಯಲಾಗಿದೆ. ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಇವರಿಬ್ಬರ ಹಿಂದೆ ಹಲವು ಮದುವೆಗಳು, ಮೋಸದ ಜಾಲ ಹಾಗೂ ಸುಪಾರಿ ನೀಡಿದ ಕರಾಳ ಕಥೆಯಿದೆ. ಸುಚಿತ್ರಾಳ ಆಪ್ತೆಯೇ ಇವರ ಸಂಬಂಧ ಮತ್ತು ಅಪರಾಧದ ಬಗ್ಗೆ ಸತ್ಯ ಬಾಯಿಬಿಟ್ಟಿದ್ದಾಳೆ.

ಈ ಜ್ಯೋತಿಷಿ ಕಮಲಾಕರ ಮತ್ತು ರೀಲ್ಸ್​​ ರಾಣಿ ಸುಚಿತ್ರಾ ಕಥೆ ಸದ್ಯಕ್ಕೆ ಮುಗಿಯಂಗೆ ಕಾಣ್ತಿಲ್ಲ. ಅವರಿಬ್ಬರೂ ಜೈಲಿಗೆ ಹೋಗಿ ಒಂದು ವಾರವಾದ್ರೂ ಅವರ ಲೀಲೆಗಳ ಸರಣಿ ನಿಲ್ಲುತ್ತಿಲ್ಲ. ಈಗ ಹೊಸ ಅಪ್​ಡೇಟ್​​ ಏನು ಅಂದರೆ ಈ ಕಮಲಾಕರ್​​ ಎಂಥ ಕಲಾಕರ್​​ ಅನ್ನೋದು ಬಯಲಾಗಿದೆ. ಅಷ್ಟೇ ಅಲ್ಲ ಈ ರೀಲ್​​ ರಾಣಿ ಸುಚಿತ್ರಾ ಎಂಥ ಪಾತರಗಿತ್ತಿ ಅನ್ನೋದನ್ನ ಆಕೆಯ ಆಪ್ತೆಯೇ ಬಾಯಿಬಿಟ್ಟಿದ್ದಾಳೆ. ಅಂದಹಾಗೆ ಇಷ್ಟು ದಿನ ನಾವು ಇದು ಸೆಕೆಂಡ್​ ಹ್ಯಾಂಡ್​ ಜೋಡಿ ಅಂತ ಅಂದುಕೊಂಡಿದ್ವಿ. ಆದ್ರೆ ಇಬ್ಬರ ಕಥೆ ಇನ್ನೂ ದೊಡ್ಡದಿದೆ ಅನ್ನೋದು ಗೊತ್ತಾಗ್ತಿದೆ. ಹಾಗಾದ್ರೆ ಈ ರೋಮೊಯೋ ಜೂಲಿಯಟ್‌ನ ಹೊಸ ಕಥೆ ಏನು? ಇವರಿಬ್ಬರ ಫ್ಲ್ಯಾಷ್​​ ಬ್ಯಾಕ್​ ಎಂಥದ್ದು ಗೊತ್ತಾ? ನೋಡೋಣ ಬನ್ನಿ.

ಅಬ್ಬಬ್ಬಾ. ಕಮಲಾಕರ ಭಟ್ಟ ಯಕ್ಷಗಾನದವರ ರೀತಿ ಕುಣಿಯುವುದನ್ನು ಏನಾದ್ರೂ ನಮ್ಮ ಯಕ್ಷಗಾನ ಕಲಾವಿದರು ನೋಡಿಬಿಟ್ಟಿದ್ದಿದ್ರೆ ಒಂದು ಕ್ಷಣ ಶಾಕ್​ ಆಗಿಬಿಡ್ತಿದ್ರು. ಹಂಗೆ ಸ್ಟೆಪ್​ಗಳನ್ನ ಹಾಕ್ತಿದ್ದಾನೆ ನಮ್ಮ ಕಲಾಕರ್​​ ಕಮಲಾಕರ. ನೀವು ಏನೇ ಹೇಳಿ ಈ ಕಮಲಾಕರ ಒಂಥರಾ ಸಕಲಕಲಾವಲ್ಲಭ. ಇದು ಈತನ ಸ್ಟೈಲ್​ ಆದ್ರೆ ಈತನ ಹುಡುಗಿ ಸಾರಿ ಆಂಟಿಯದ್ದು ಮತ್ತೊಂದು ಲೋಕ ಬಿಡಿ. ಆಕೆ ಕ್ಯಾಮರಾ ಮುಂದೆ ಬಂದುಬಿಟ್ರೆ ಯಾವ ನಟಿಗೂ ಕಮ್ಮಿ ಇಲ್ಲ. ಅಷ್ಟು ಭಯಾನಕವಾಗಿ ರೀಲ್ಸ್​ಗಳನ್ನ ಮಾಡ್ತಾಳೆ. ಈಕೆಯ ಈ ರೀಲ್ಸ್​ಗಳಿಗೆ ಮನಸೋತ ಹುಡುಗರ ಲೆಕ್ಕಾ ಬೇಜಾನ್​​ ಇದೆ. ಇನ್ನೂ ನಮ್ಮ ಕಮಲಾಕರನ ಹೆಂಡತಿಯರ ಲಿಸ್ಟ್​​ ಕೂಡ ಅಷ್ಟೇ ದೊಡ್ಡದಿದೆ. ಅದ್ರೆ ಅವಗಳ ಬಗ್ಗೆ ಹೇಳೋದಕ್ಕೂ ಮೊದಲು ಇವರಿಬ್ಬರು ಜೈಲಿಗೆ ಸೇರಿದ ಕಥೆ ಇನ್ನೂ ಭಯಂಕರವಾಗಿದೆ.

ಈ ಅಂಟಿ. ಕಮಲಾಕರನನ್ನ ಭೇಟಿಯಾಗಿದ್ದು ಜಸ್ಟ್​​ 1 ವರ್ಷದ ಹಿಂದೆ. ಮನೆಯಲ್ಲಿ ಗಂಡನ ಜೊತೆ ಸದಾ ಗಲಾಟೆ ಮಾಡ್ತಿದ್ರಿಂದ ಈ ಆಂಟಿ ಶಾಂತಿ ಮಾಡಿಸಬೇಕು ಅಂತ ಸ್ನೇಹಿತೆಯೊಬ್ಬಳನ್ನ ಕೇಳ್ತಾರೆ.. ಆಗ ಆ ಸ್ನೇಹಿತೆ ಒಬ್ಬ ಜ್ಯೋತಿಷಿಯ ನಂಬರ್​​ ಕೊಡ್ತಾರೆ. ಆ ಜ್ಯೋತಿಷಿ ಓನ್ಸಗೈನ್​ ಇದೇ ಕಮಲಾಕರ. ಹೀಗೆ ಸುಮಾ ಅನ್ನೋರ ಮೂಲಕ ಕಮಲಾಕರನ ನಂಬರ್​​ ಪಡೆದ ಸುಚಿತ್ರಾ ಒಂದೇ ವಾರದಲ್ಲಿ ಅವರೊಂದಿಗೆ ಕ್ಲೋಸ್​​ ಆಗಿಬಿಟ್ಟಿದ್ದಳಂತೆ. ಅಷ್ಟೇ ಅಲ್ಲ ಅದಾಗಿ ನಾಲ್ಕು ತಿಂಗಳಲ್ಲೇ ಸುಚಿತ್ರಾ ಗಂಡನನ್ನ ಬಿಟ್ಟು ಮಕ್ಕಳನ್ನ ಕರೆದುಕೊಂಡು ಕಮಲಾಕರನ ಮನೆ ಸೇರಿದ್ದಳು.

ಹೀಗೆ ಗಂಡನನ್ನ ಬಿಟ್ಟು ಗುರೂಜಿ ಮನೆ ಸೇರಿದ ಸುಚಿತ್ರಾ. ಹೆಂಡತಿಯಂತೆಯೇ ಇರುತ್ತಾಳೆ. ಕಮಲಾಕರ ನಡೆಸುತ್ತಿದ್ದ ಕಾಲ್​ ಸೆಂಟರ್‌ನ ವ್ಯವಹಾರವನ್ನೆಲ್ಲಾ ಈ ಸುಚಿತ್ರಾ ನೋಡಿಕೊರ್ಳಳುತ್ತಿರುತ್ತಾಳೆ. ಇನ್ನೂ ಈಕೆಗಾಗಿ ಕಮಲಾಕರ ಬುಲೆಟ್​ ಬೈಕ್​​, ಥಾರ್​​ ಕಾರ್‌ಗಳನ್ನೂ ಕಮಲಾಕರ ಭಟ್ಟ ಕೊಡಿಸಿದ್ದನಂತೆ.

ಆವತ್ತು ಗಂಡ ಮಹೇಶನ ಮನೆಗೆ ಗ್ಯಾಂಗ್​ ಕಟ್ಟಿಕೊಂಡು ಬಂದ ಸುಚಿತ್ರಾ ಮತ್ತು ಕಮಲಾಕರ. ಮಹೇಶ ಮತ್ತು ಆತನ ಅಣ್ಣ ವಸಂತನ ಮೇಲೆ ಅಟ್ಯಾಕ್​ ಮಾಡಿಯೇಬಿಡ್ತಾರೆ. ಈ ಗಲಾಟೆಯಲ್ಲಿ ವಸಂತ ಹೆಣವಾಗಿಬಿಡ್ತಾನೆ. ಆದ್ರೆ ಯಾವಾಗ ವಸಂತ ಸತ್ತನೋ ಸುಚಿತ್ರಾ ಗ್ಯಾಂಗ್​ ಎಸ್ಕೇಪ್​ ಆಗೋಕೆ ನೋಡುತ್ತೆ. ಆದ್ರೆ ಅಷ್ಟರಲ್ಲೇ ಪೊಲೀಸರು ಎಂಟ್ರಿ ಕೊಡ್ತಾರೆ. ಆವತ್ತೇ ಪೊಲೀಸರು ಕೇಸ್​ ದಾಖಲಿಸಿಕೊಂಢು ಈ ಅಂಕಲ್​ ಆಂಟಿಯನ್ನ ಸೇರಿ 7 ಮಂದಿಯನ್ನ ಅರೆಸ್ಟ್​​ ಮಾಡಿದ್ರು. ಆದರೆ ನಿನ್ನೆ 8ನೇ ಆರೋಪಿಯಾಗಿದ್ದ ವಿನಯ್​ ಅನ್ನೋನ ಅರೆಸ್ಟ್​ ಮಾಡಿದ್ದಾರೆ. ಇನ್ನೂ ಈ ವಿನಯ್​ ಇನ್ವಾಲ್ವ್​ಮೆಂಟ್​​ ಬಗ್ಗೆ ಹೇಳಲೇಬೇಕು. ಯಾವಾಗ ಮಹೇಶನ ಮನೆಗೆ ಹೋಗಬೇಕು ಅಲ್ಲಿ ಜಗಳ ಮಾಡಬೇಕು ಮಹೇಶನ ಕಥೆ ಮುಗಿಸಬೇಕು ಅಂತ ಅಂದುಕೊಳ್ತಾರೊ ಆಗ ಈ ಆಂಟಿಯ ನೆನಪಿಗೆ ಬರೋದೇ ಈ ವಿನಯ್​​​..

ಯಾರು ಈ ಶಿವಮೊಗ್ಗ ವಿನಯ್?

ಈ ವಿನಯ್​​ ಶಿವಮೊಗ್ಗದಲ್ಲಿ ಕೊಂಚ ಹೆಸರು ಮಾಡಿದ್ದ. ಹೀಗಾಗಿ ಅವನನ್ನ ಕರೆದು ಸುಚಿತ್ರಾ ಮತ್ತು ಕಮಲಾಕರ್​ ಇಬ್ಬರೂ ಸೇರಿ ಡೀಲ್​​ ಕೊಡ್ತಾರೆ. ಮಹೇಶನನ್ನ ಮುಗಿಸಿದ್ರೆ ಮೂರು ಲಕ್ಷ ಹಣ ಕೊಡೋದಾಗಿ ಹೇಳ್ತಾರೆ. ಆಗಲೇ ನೋಡಿ ಈ ವಿನಯ್​ ಉಳಿದ ಆರೋಪಿಗಳ ಗ್ಯಾಂಗ್​ನ ಇವರ ಜೊತೆ ಕಳಿಸೋದು. ಆವತ್ತು ಈ ಗ್ಯಾಂಗ್​ ಬಂದಿದ್ದು ಮಹೆಶನನ್ನ ಮುಗಿಸೋದಕ್ಕೆ ಆದ್ರೆ ಹೋಗಿದ್ದು ವಸಂತನ ಪ್ರಾಣ. ಆದರೆ ಇಷ್ಟಕ್ಕೇ ಈ ಕಥೆ ಮುಗಿಯೋದಿಲ್ಲ. ಇಲ್ಲಿ ಸುಚಿತ್ರಾ ಮತ್ತು ಕಮಲಾಕರನ ಅಸಲಿ ಮುಖ ಅನಾವರಣಗೊಳ್ಳೋದಕ್ಕೆ ಶುರುವಾಗುತ್ತೆ. ಆವತ್ತು ಸೈಲೆಂಟಾಗಿದ್ದ ಈ ಇಬ್ಬರ ಲವ್ವರ್​ಗಳು ಹೊರಬಂದಿದ್ದಾರೆ. ಅವರಿಗಾದ ಮೋಸದ ಬಗ್ಗೆ ಮಾತನ್ನಾಡಿದ್ದಾರೆ.. ಹಾಗಾದರೆ ಈ ಸುಚಿತ್ರಾ ಮತ್ತು ಕಮಲಾಕರನ ಲವ್​ ಸ್ಟೋರಿಗಳು ಏನು ನೋಡೋಣ ಬನ್ನಿ.

ಕಮಲಾಕರ ಭಟ್ ಹಾಗೂ ಸುಚಿತ್ರಾ ಒಬ್ಬರಿಗಿಂತ ಒಬ್ಬರು ಖತರ್‌ನಾಕ್‌ಗಳು!

ಕಮಲಾಕರ್ ಭಟ್​ ಮತ್ತು ಸುಚಿತ್ರಾ ಒಬ್ಬರಿಗಿಂತ ಒಬ್ಬರು ಖತರ್ನಾಕ್‌ಗಳೆ. ಈ ಪಾತರಗಿತ್ತಿ ಸುಚಿತ್ರಾ 18 ವರ್ಷಕ್ಕೇ ಗರ್ಭಿಣಿಯಾಗಿದ್ಲು. ನಂತರ ಮದುವೆಯಾಗಿ ಮೂರನೇ ವರ್ಷಕ್ಕೇ ತನ್ನ ರಂಗೀನ್​ ಆಟವನ್ನ ಶುರುಮಾಡಿದ್ಲು. ಇಬ್ಬರು ಹುಡುಗರನ್ನ ಮದುವೆಯಾಗಿಲ್ಲ ಅಂತ ಯಾಮಾರಿಸಿದ್ಲು. ಇನ್ನೂ ಈ ಕಲಾಕಾರ್​​​ ಕಮಲಾಕರ ಈ ಹಿಂದೆ ಮೂರು ಮದುವೆಯಾಗಿದ್ದ. ನಾಲ್ಕನೇಯವಳೇ ಈ ಸುಚಿತ್ರಾ. ಕಮಲಾಕರ್​ ಸಿಕ್ಕ ಸಿಕ್ಕ ಹೆಣ್ಮಕ್ಕಳಿಗೆ ಗಾಳ ಹಾಕೊಂಡ್ ತಿರುಗ್ತಿದ್ರೆ. ಸುಚಿತ್ರಾ ಹಣವಂತ ಗಂಡಸರನ್ನ ಕೆಡ್ಡಾಗೆ ಕೆಡವಿ ಸುಲಿಗೆ ಮಾಡೋದನ್ನೇ ಪ್ರವೃತ್ತಿ ಮಾಡಿಕೊಂಡಿದ್ಲು.

ಇನ್ನೂ ಈ ಕಮಲಾಕರ ಮೊದಲು ಒಂದು ಮದುವೆಯಾಗಿದ್ದ. ಆದ್ರೆ ಮದುವೆಯಾಗಿ ಕೆಲವೇ ತಿಂಗಳಲ್ಲಿ ಆಕೆ ಈತನನ್ನ ಬಿಟ್ಟು ಹೋಗಿದ್ಲಂತೆ. ನಂತರ ಮತ್ತೊಂದು ಮದುವೆಯಾಗಿದ್ದನಂತೆ. ಆಗ ಒಂದು ಹೆಣ್ಣು ಮಗು ಆಗಿತ್ತು. ಆ ಮಗಳು ಈಗ ಬೆಂಗಳೂರಿನಲ್ಲಿ ಡಿಗ್ರಿ ಓದುತ್ತಿದ್ದಾಳೆ. ಆದ್ರೆ ಎರಡನೇ ಹೆಂಡತಿ ಮತ್ತು ಮಗಳನ್ನ ಬೆಂಗಳೂರಿನಲ್ಲಿ ಬಿಟ್ಟಿದ್ದ ಕಮಲಾಕರ ಭಟ್ಟ ಶಿವಮೊಗ್ಗದಲ್ಲಿ ಮುಸ್ಲಿಂ ಮಹಿಳೆ ಜೊತೆ ಸರಸ ಸುರು ಮಾಡಿದ್ದ.

ಒಬ್ಬ ಮುಸ್ಲಿಂ ಮಹಿಳೆಯನ್ನ ಗುಟ್ಟಾಗಿ ಮದುವೆಯಾಗಿದ್ದನಂತೆ ಈ ಕಲಾಕರ್​ ಭಟ್ಟ.

ಹೆಂಡ್ತಿ ಮಗಳನ್ನು ಬೆಂಗಳೂರಲ್ಲಿ ಬಿಟ್ಟಿದ್ದ ಭಟ್ಟ ಶಿವಮೊಗದ್ದಲ್ಲಿ ಕುಚುಕುಚು ಆಟ ಶುರು ಮಾಡಿದ್ನಂತೆ. ಸಾಗರ ಮೂಲದ ಮುಸ್ಲಿಂ ಮಹಿಳೆಯನ್ನು ಮದ್ವೆ ಮಾಡಿಕೊಂಡು ಸಂಸಾರ ನಡೆಸುತ್ತಿದ್ನಂತೆ. ಸುಚಿತ್ರಾ ಎಂಟ್ರಿ ಬಳಿಕ ಆ ಮುಸ್ಲಿಂ ಮಹಿಳೆಗೆ ಕೈಕೊಟ್ಟಿದ್ದ ಭಟ್ಟ. ಆ ಮುಸ್ಲಿಂ ಆಂಟಿ ಗಲಾಟೆ ಮಾಡಿದ್ದಕ್ಕೆ 50 ಲಕ್ಷ ಕೊಟ್ಟು ಸೆಟ್ಲ್​ಮೆಂಟ್ ಮಾಡಿದ್ನಂತೆ.

ಶನಿಶಾಂತಿ ಮಾಡಿ ಅಂದ್ರೆ, ಶನಿಯಂತೆ ಹೆಗಲೇರಿದ!

ಸುಚಿತ್ರಾ ಗೆಳತಿ ಸುಮಾ ಮೊದಲು ಕಮಲಾಕರ್ ಭಟ್‌ನನ್ನು ಟಿವಿಯಲ್ಲಿ ನೋಡಿ, ತಮ್ಮ ಮಕ್ಕಳ ಶ್ರೇಯೋಭಿವೃದ್ಧಿಗಾಗಿ 'ಶನಿಶಾಂತಿ' ಪೂಜೆ ಮಾಡಿಸಲು ಸಂಪರ್ಕಿಸಿದ್ರಂತೆ. ಈ ವೇಳೆ ಸುಚಿತ್ರಾಳ ಆಟಗಳನ್ನು ನೋಡಿದ್ದ ಸುಮಾ ಕಮಲಾಕರನಿಗೆ ಆಕೆಯಿಂದ ದೂರ ಇರುವಂತೆ ಹೇಳಿದ್ರಂತೆ. ಇದನ್ನು ಕೇಳಿ ಕೋಪಗೊಂಡ ಸುಚಿತ್ರಾ ಸುಮಾಗೆ ಕ್ಲಾಸ್ ತೆಗೆದುಕೊಂಡಿದ್ಲಂತೆ. ಆವತ್ತು ಸುಮಾ ಮಾತನ್ನ ಕಮಲಾಕರ ಕೇಳಿದ್ದಿದ್ರೆ ಇವತ್ತು ಆತ ಇನ್ನೊಂದಷ್ಟು ಜನಕ್ಕೆ ಭವಿಷ್ಯ ಹೇಳ್ತಾ ತೆಪ್ಪಗೆ ಮನೆಯಲ್ಲಿರುತ್ತಿದ್ದ. ಆದ್ರೆ ಇವತ್ತು ಸುಚಿತ್ರಾಳ ಸಹವಾಸ ಮಾಡಿ ಅವಳ ಜೊತೆ ಈತನೂ ಜೈಲು ಸೇರಿದ್ದಾನೆ.