ಜಮಖಂಡಿ ತಾಲೂಕಿನಲ್ಲಿ ಹೊಸ ಕಾರು ಖರೀದಿಸಿದ ಯುವಕನನ್ನು, ಅನೈತಿಕ ಸಂಬಂಧದ ವೈಷಮ್ಯದ ಹಿನ್ನೆಲೆಯಲ್ಲಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಯುವಕನ ವಾಟ್ಸ್‌ಆ್ಯಪ್‌ ಸ್ಟೇಟಸ್‌ ನೋಡಿ ಹೊಂಚು ಹಾಕಿ, ಚಾಕು ಇರಿದು, ಕಾರಿನೊಂದಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆೆ.

ಬಾಗಲಕೋಟೆ: ಹೊಸ ಕಾರು ಖರೀದಿಸಿ ಖುಷಿಯಲ್ಲಿ ಗ್ರಾಮಕ್ಕೆ ಬಂದ ಯುವಕ ಮನೆ ಸೇರುವ ಮೊದಲೇ ಆತನನ್ನು ಚಾಕು ಇರಿದು, ಕಾರಿನೊಂದಿಗೆ ಆತನಿಗೂ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಸುಟ್ಟು ಹಾಕಿದ ಘಟನೆ ಜಮಖಂಡಿ ತಾಲೂಕಿನ ಕನ್ನೋಳಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.

ಕನ್ನೋಳ್ಳಿ ಗ್ರಾಮದ ಸೋಮು ಅಲಿಯಾಸ್‌ ಸೋಮಲಿಂಗಪ್ಪ ಪಡಸಲಗಿ (36) ಕೊಲೆಯಾದ ಯುವಕ. ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಗ್ರಾಮದ ಸದಾಶಿವ ಪಡಸಲಗಿ, ಹಿರೇಪಡಸಲಗಿ ಗ್ರಾಮದ ರವಿ ಪಾಟೀಲ, ಚಿಕ್ಕಪಡಸಲಗಿ ಗ್ರಾಮದ ಮಹಾವೀರ ಧರೆಪ್ಪನವರ ಹಾಗೂ ಭೀರಪ್ಪ ಅಡಿಹುಡಿ, ಅಡಿಹುಡಿ ಗ್ರಾಮದ ಮಲ್ಲು ನಾವಿ ಎಂಬ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅಂದು ಆಗಿದ್ದೇನು?

ಏ.20ರ ಸೋಮವಾರ ಸೋಮು ಪಡಸಲಗಿ ಜಮಖಂಡಿಯಲ್ಲಿ ಹೊಸ ಕಾರು ಖರೀದಿಸಿ ಗ್ರಾಮಕ್ಕೆ ಮರಳುತ್ತಿದ್ದ. ಶೋರೂಂನಲ್ಲಿ ಹೊಸ ಕಾರು ಖರೀದಿ ವೇಳೆಯ ಫೋಟೋಗಳನ್ನು ವಾಟ್ಸ್‌ಆ್ಯಪ್‌ ಸ್ಟೇಟಸ್‌ನಲ್ಲಿ ಹಂಚಿಕೊಂಡಿದ್ದ. ಅನೈತಿಕ ಸಂಬಂಧ ವಿಷಯವಾಗಿ ಸೋಮು ಜೊತೆಗೆ ವೈಷಮ್ಯ ಹೊಂದಿದ್ದ ಆರೋಪಿಗಳು ಸ್ಟೇಟಸ್‌ ನೋಡಿ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ್ದಾರೆ. 

ಇದನ್ನೂ ಓದಿ: ಸರಗೂರು ಕೊ*ಲೆಯ ರಹಸ್ಯ ಬಿಚ್ಚಿಟ್ರು ಎಸ್‌ಪಿ; ಅಮೃತಾ-ಸಿದ್ದೇಶ್ ಪ್ಲಾನ್ ಏನಾಗಿತ್ತು?

ಗ್ರಾಮದ ಬಸ್‌ ನಿಲ್ದಾಣದಲ್ಲಿ ಹೊಂಚು ಹಾಕಿ ಕಾಯ್ದು ಸೋಮವಾರ ಸಂಜೆ 7.35ರ ಸುಮಾರಿಗೆ ಕಾರು ಬರುತ್ತಿದ್ದಂತೆಯೇ ಅಡ್ಡಗಟ್ಟಿದರು. ನಂತರ ಸೋಮುನನ್ನು ಹೊರಗೆಳೆದು ಚಾಕುವಿನಿಂದ ಇರಿದು ಹತ್ಯೆ ಮಾಡಿ ರಸ್ತೆ ಮೇಲೆಯೇ ಕಾರು ಹಾಗೂ ರಕ್ತದ ಮಡುವಿನಲ್ಲಿ ಬಿದ್ದ ಸೋಮು ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿದ್ದಾರೆ.ಸಾವಳಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: 28ರ ಜಿಮ್ ಟ್ರೈನರ್‌ಗೆ 42ರ ಮಹಿಳೆ ಜೊತೆ ಸಂಬಂಧ? ಯುವಕನ ಸಾವಿನ ಹಿಂದೆ ಆಂಟಿ ಕರಿನೆರಳು

Scroll to load tweet…