ಬೆಂಗಳೂರಿನ ಬಸವೇಶ್ವರ ನಗರದಲ್ಲಿ, ವಿಚ್ಛೇದನ ಪ್ರಕರಣದ ವಿಚಾರಣೆ ಮುಗಿಸಿ ಬಂದ ಪತಿ ಬಾಲ ಮುರುಗನ್, ಪತ್ನಿ ಭುವನೇಶ್ವರಿ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ದಾಂಪತ್ಯ ಕಲಹ ಮತ್ತು ಅನುಮಾನವೇ ಈ ಕೃತ್ಯಕ್ಕೆ ಕಾರಣವಾಗಿದ್ದು, ಆರೋಪಿ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

 ಬೆಂಗಳೂರು: ನಗರದ ಬಸವೇಶ್ವರ ನಗರದ ವೆಸ್ಟ್ ಇನ್ ಹೋಟೆಲ್ ಸಮೀಪ ಭಾನುವಾರ ಸಂಜೆ ನಡೆದ ಭೀಕರ ಘಟನೆಯಲ್ಲಿ, ಗಂಡನೊಬ್ಬ ತನ್ನ ಪತ್ನಿಯ ಮೇಲೆ ಗನ್‌ನಿಂದ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ವರದಿಯಾಗಿದೆ. ಪತಿ–ಪತ್ನಿಯ ನಡುವೆ ನಡೆಯುತ್ತಿದ್ದ ವಿಚ್ಛೇದನ (ಡೈವೋರ್ಸ್) ಪ್ರಕರಣವೇ ಈ ದಾರುಣ ಅಂತ್ಯಕ್ಕೆ ಕಾರಣವಾಗಿದೆ.

ಮೃತ ಮಹಿಳೆಯನ್ನು ಭುವನೇಶ್ವರಿ ಎಂದು ಗುರುತಿಸಲಾಗಿದ್ದು, ಆರೋಪಿಯಾದ ಪತಿ ಬಾಲ ಮುರುಗನ್ ಘಟನೆ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಇಬ್ಬರ ನಡುವೆ ಕಳೆದ ಕೆಲವು ಸಮಯದಿಂದ ಗಂಭೀರ ವೈಮನಸ್ಸು ಉಂಟಾಗಿದ್ದು, ಈ ಸಂಬಂಧ ನ್ಯಾಯಾಲಯದಲ್ಲಿ ಡೈವೋರ್ಸ್ ಪ್ರಕರಣ ನಡೆಯುತ್ತಿತ್ತು.

ತಮಿಳುನಾಡಿನ ಸೇಲಂ ಮೂಲದ ದಂಪತಿಗಳು ಬೆಂಗಳೂರಿನಲ್ಲಿ ನೆಲೆಸಿದ್ದರು. ಬಾಲಮುರುಗನ್ ಸಾಫ್ಟ್ ವೇರ್ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ಇತ್ತೀಚೆಗೆ ರಿಸೈನ್ ಮಾಡಿದ್ದ. ಪತ್ನಿ ಭುವನೇಶ್ವರಿ ಬ್ಯಾಂಕ್ ಉದ್ಯೋಗಿ ಆಗಿದ್ದರು. ಪತ್ನಿ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಿದ್ದೆ ಕೊಲೆಗೆ ಕಾರಣ ಎನ್ನಲಾಗಿದೆ.

ಕೋರ್ಟ್ ವಿಚಾರಣೆ ಬಳಿಕ ನಡೆದ ದಾಳಿ

ಪೊಲೀಸರು ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ಭಾನುವಾರ ಬಾಲ ಮುರುಗನ್ ಮತ್ತು ಭುವನೇಶ್ವರಿ ಇಬ್ಬರೂ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಡೈವೋರ್ಸ್ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದರು. ವಿಚಾರಣೆ ಮುಗಿಸಿಕೊಂಡು ಹೊರಬಂದ ನಂತರ, ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದೆ. ಈ ಜಗಳ ಕ್ರಮೇಣ ತಾರಕಕ್ಕೇರಿದ್ದು, ಏಕಾಏಕಿ ಬಾಲ ಮುರುಗನ್ ತನ್ನ ಬಳಿ ಹೊಂದಿದ್ದ ಪಿಸ್ತೂಲ್ ತೆಗೆದು ಪತ್ನಿಯ ಮೇಲೆ ಗುಂಡು ಹಾರಿಸಿದ್ದಾನೆ.

ಈ ಘಟನೆ ಬಸವೇಶ್ವರ ನಗರದ ವೆಸ್ಟ್ ಇನ್ ಹೋಟೆಲ್ ಸಮೀಪ ಸಾರ್ವಜನಿಕ ಸ್ಥಳದಲ್ಲಿ ನಡೆದಿರುವುದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು. ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡ ಭುವನೇಶ್ವರಿಯನ್ನು ತಕ್ಷಣ ಶಾನುಭೋಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ.

ಠಾಣೆಗೆ ತೆರಳಿ ಶರಣಾದ ಪತಿ

ಘಟನೆ ನಡೆಸಿದ ಬಳಿಕ ಆರೋಪಿ ಬಾಲ ಮುರುಗನ್ ಸ್ವತಃ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಮಾಹಿತಿ ಪಡೆದ ತಕ್ಷಣ ಮಾಗಡಿ ರಸ್ತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ರಮ ಪಿಸ್ತೂಲ್ ತನಿಖೆ ಮುಂದುವರಿಕೆ

ಆರೋಪಿ ಬಳಸಿದ ಪಿಸ್ತೂಲ್ ಅಕ್ರಮವಾಗಿ ತರಿಸಿಕೊಂಡಿದ್ದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಪೊಲೀಸರು ಆರೋಪಿಯಿಂದ ಗನ್ ವಶಪಡಿಸಿಕೊಂಡಿದ್ದು, ಕೊಲೆ ಪ್ರಕರಣದ ಜೊತೆಗೆ ಅಕ್ರಮ ಶಸ್ತ್ರಾಸ್ತ್ರ ಹೊಂದಿಕೆ ಸಂಬಂಧವೂ ಪ್ರತ್ಯೇಕವಾಗಿ ಪ್ರಕರಣ ದಾಖಲಾಗಲಿದೆ.

14 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ

ಒಂದುವರೆ ವರ್ಷದಿಂದ ಇಬ್ಬರು ಬೇರೆಯಾಗಿದ್ರು. ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದ ಬಾಲಮುರುಗನ್. ಇದರಿಂದ ಬೇಸತ್ತು ವಿಚ್ಚೇದನ ಪಡೆಯಲು ಮುಂದಾಗಿದ್ದ ಪತ್ನಿ ಭುವನೇಶ್ವರಿ. 6 ತಿಂಗಳ ಹಿಂದೆ ವೖಟ್ ಫೀಲ್ಡ್ ಬ್ರಾಂಚ್ ಗೆ ಟ್ರಾನ್ಸಫರ್ ಅಗಿದ್ದರು. ಗಂಡನಿಗೆ ಅಕೆಯ ಬಗ್ಗೆ ಹಾಗೂ ಮಕ್ಕಳ ಬಗ್ಗೆ ಏನೂ ಗೊತ್ತಿರಲಿಲ್ಲ. ಭುವನೇಶ್ವರಿ ಕೆಪಿ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ರು. 4 ತಿಂಗಳ ಹಿಂದೆ ಇಲ್ಲಿ ಮನೆ ಮಾಡಿದ್ದ ಭುವನೇಶ್ವರಿ ಒಂದುವಾರದ ಹಿಂದೆ ಡಿವೋರ್ಸ್ ನೋಟಿಸ್ ಕಳುಹಿಸಿದ್ದರು. ಇವತ್ತು ಆಫೀಸ್ ನಿಂದ ಮನೆಗೆ ಬರ್ತಿದ್ದ ಭುವನೇಶ್ವರಿಯನ್ನು ದಾರಿಯಲ್ಲಿ ಕಾದು ನಿಂತಿದ್ದ ಆರೋಪಿ ಬಾಲಮುರುಗನ್ ಬರ್ತಿದ್ದಂತೆ ದಾರಿ ಮಧ್ಯೆಯೇ ಗುಂಡು ಹಾರಿಸಿ ಹತ್ಯೆ. ಅನಂತರ ನೇರವಾಗಿ ಮಾಗಡಿ ರೋಡ್ ಠಾಣೆಗೆ ನಡೆದು ಕೊಂಡು ಬಂದಿದ್ದ ಆರೋಪಿ. ಹೆಂಡತಿಗೆ ಗುಂಡು ಹಾರಿಸಿರೋದಾಗಿ ಹೇಳಿದ್ದ. 5 ಗುಂಡು ಹಾರಿಸಿದ್ದ ಬಾಲಮುರುಗನ್. ಅದ್ರಲ್ಲಿ 2 ಗುಂಡು ತಲೆಗೆ ಹಾಗೂ 2 ಗುಂಡು ಕೖ ಗೆ ತಗುಲಿದ

ಪಶ್ಚಿಮ ವಿಭಾಗ ಡಿಸಿಪಿ ಗಿರೀಶ್ ಹೇಳಿಕೆ

ಇಂದು ಸಂಜೆ 6:30 ರ ಸುಮಾರಿಗೆ ಕೊಲೆ ನಡೆದಿದೆ. ಬಾಲಮುರುಗನ್ ಸಾಫ್ಟ್ ವೇರ್ ಇಂಜಿನಿಯರ್ . 4 ತಿಂಗಳಿಂದ ಈತ ಯಾವುದೇ ಕೆಲಸ ಮಾಡ್ತಿಲ್ಲ. ಭುವನೇಶ್ವರಿಯನ್ನ ಬಾಲಮುರುಗನ್ ಕೊಲೆ ಮಾಡಿದ್ದಾನೆ. ಮೊದಲು ವೖಟ್ ಫೀಲ್ಡ್ ನಲ್ಲಿ ಇವರು ವಾಸವಾಗಿದ್ರು. ಅನಂತರ ಇಬ್ಬರು ವೖಟ್ ಫೀಲ್ಡ್ ನಲ್ಲಿ ಬೇರೆ ಬೇರೆ ವಾಸಿಸುತ್ತಿದ್ರು. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಹೆಂಡತಿಯ ಮೇಲೆ ಅನುಮಾನ ಪಟ್ಟು ಕೊಲೆ ಮಾಡಿದ್ದಾನೆ. ನಾಲ್ಕು ಬಾರಿ ಪತ್ನಿಯ ಮೇಲೆ ಗುಂಡು ಹಾರಿಸಿದ್ದಾನೆ. 2 ಗುಂಡು ತಲೆಗೆ ಹಾಗೂ ಕೖ ಗೆ ತಗುಲಿದೆ. ಬ್ಯಾಂಕ್ ನಿಂದ ಬರುವಾಗ ಕೊಲೆ ಮಾಡಿದ್ದಾನೆ.

ನಗರದಲ್ಲಿ ಆತಂಕ

ಸಾರ್ವಜನಿಕ ಸ್ಥಳದಲ್ಲಿ ನಡೆದ ಈ ಗುಂಡೇಟು ಪ್ರಕರಣದಿಂದ ಸ್ಥಳೀಯರಲ್ಲಿ ಭೀತಿ ಉಂಟಾಗಿದ್ದು, ದಾಂಪತ್ಯ ಕಲಹಗಳು ಹಿಂಸಾತ್ಮಕ ಅಂತ್ಯಕ್ಕೆ ತಲುಪುತ್ತಿರುವುದು ಗಂಭೀರ ಚಿಂತೆ ಮೂಡಿಸಿದೆ. ಈ ಸಂಬಂಧ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯಲಿದೆ.