ಮೋಟಾರು ವಾಹನ ತೆರಿಗೆ ಪಾವತಿಸದೆ ವಂಚಿಸಿದ್ದ ಐಷಾರಾಮಿ ಕಾರಿನ ಮಾಲೀಕರಿಗೆ ಬಿಸಿ ಮುಟ್ಟಿಸಿದ ಬೆಂಗಳೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, 1.41 ಕೋಟಿ ರು. ತೆರಿಗೆ ವಸೂಲಿ ಮಾಡಿದ್ದಾರೆ.
ಬೆಂಗಳೂರು : ಮೋಟಾರು ವಾಹನ ತೆರಿಗೆ ಪಾವತಿಸದೆ ವಂಚಿಸಿದ್ದ ಐಷಾರಾಮಿ ಕಾರಿನ ಮಾಲೀಕರಿಗೆ ಬಿಸಿ ಮುಟ್ಟಿಸಿದ ಬೆಂಗಳೂರು ದಕ್ಷಿಣ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು, 1.41 ಕೋಟಿ ರು. ತೆರಿಗೆ ವಸೂಲಿ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ನೋಂದಣಿಯಾಗಿದ್ದ ಫೆರಾರಿ ಸಂಸ್ಥೆಯ ಅಂದಾಜು 7 ಕೋಟಿ ರು. ಮೌಲ್ಯದ ಕಾರು ನಿಯಮದಂತೆ ತೆರಿಗೆ ಪಾವತಿಸದೇ ಸಂಚರಿಸುತ್ತಿತ್ತು. 2023ರ ಸೆಪ್ಟೆಂಬರ್ನಿಂದ ವಾಹನವು ತೆರಿಗೆ ಪಾವತಿಸದೆ ಓಡಾಡುತ್ತಿದೆ. ಮೋಟಾರು ವಾಹನ ತೆರಿಗೆ ಪಾವತಿಸದೇ ಸಂಚರಿಸುತ್ತಿರುವುದು ಸಂಚಾರ ಪೊಲೀಸರು ಕಾರಿನ ದಾಖಲೆ ಪರಿಶೀಲನೆ ವೇಳೆ ಪತ್ತೆ ಮಾಡಿರುವ ವಿಷಯವನ್ನು ಬೆಂಗಳೂರು ದಕ್ಷಿಣ ಆರ್ಟಿಒ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಈ ಮಾಹಿತಿ ಆಧರಿಸಿ ಆರ್ಟಿಒ ಅಧಿಕಾರಿಗಳು ಶುಕ್ರವಾರ ಕಾರನ್ನು ವಶಕ್ಕೆ ಪಡೆದು ಸಂಜೆಯೊಳಗೆ ದಂಡ ಸಹಿತ ತೆರಿಗೆ ಪಾವತಿಸುವಂತೆ ಮಾಲೀಕರಿಗೆ ನೋಟಿಸ್ ನೀಡಿದ್ದರು. ಜತೆಗೆ ದಂಡ ಸಹಿತ ತೆರಿಗೆ ಪಾವತಿಸದಿದ್ದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿಯೂ ಎಚ್ಚರಿಕೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಕಾರು ಮಾಲೀಕ ಶುಕ್ರವಾರ ಸಂಜೆ ವೇಳೆಗೆ 1.41 ಕೋಟಿ ರು. ದಂಡ ಸಹಿತ ತೆರಿಗೆ ಬಾಕಿ ಪಾವತಿಸಿದ್ದಾರೆ. ನಂತರ ಆರ್ಟಿಒ ಅಧಿಕಾರಿಗಳು, ಕಾರನ್ನು ಮಾಲೀಕರಿಗೆ ವಾಪಸ್ ನೀಡಿದ್ದಾರೆ.
ವಿಶ್ವದ ಅತ್ಯಂತ ದುಬಾರಿ ಐಷಾರಾಮಿ ಫೆರಾರಿ ಕಾರುಗಳಿವು
ಕಾರುಗಳು ಎಂದರೆ ಅನೇಕರಿಗೆ ಅದೊಂತರ ಕ್ರೇಜ್ ಅವುಗಳ ಬಗ್ಗೆ ಇನ್ನಷ್ಟು ಮತ್ತಷ್ಟು ತಿಳಿದುಕೊಳ್ಳುವ ಕುತೂಹಲ. ಅಂತಹವರಿಗಾಗಿ ಇಲ್ಲಿ ವಿಶ್ವದ ಐಷಾರಾಮಿ ಕಾರುಗಳಲ್ಲಿ ಒಂದೆನಿಸಿರುವ ಫೆರಾರಿ ಕಾರುಗಳಲ್ಲಿ ಅತೀ ದುಬಾರಿ ಎನಿಸಿರುವ ಕಾರುಗಳು ಹಾಗೂ ಅವುಗಳ ಸಾಮರ್ಥ್ಯದ ಬಗ್ಗೆ ಇಲ್ಲಿದೆ ಮಾಹಿತಿ
ಫೆರಾರಿ 12ಸಿಲಿಂಡ್ರಿ(Ferrari 12Cilindri): ಫೆರಾರಿ 12ಸಿಲಿಂಡ್ರಿ 6.5-ಲೀಟರ್ V12 ಎಂಜಿನ್ ಹೊಂದಿದ್ದು, ಇದು 819 hp ಮತ್ತು 678 Nm ನ ಗರಿಷ್ಠ ಶಕ್ತಿ ಮತ್ತು ಟಾರ್ಕ್ ಔಟ್ಪುಟ್ ಅನ್ನು ಹೆಚ್ಚಿಸುತ್ತದೆ.. ಇದು 3.5 ಕೋಟಿ ರೂ.ಗಳ (ಎಕ್ಸ್-ಶೋರೂಂ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
ಫೆರಾರಿ ಪುರೋಸಾಂಗ್(Ferrari Purosangue):ಫೆರಾರಿ ಪುರೋಸಾಂಗ್ 6.5-ಲೀಟರ್ ಸ್ವಾಭಾವಿಕವಾಗಿ ಮಹತ್ವಾಕಾಂಕ್ಷೆಯ V12 ಎಂಜಿನ್ ಹೊಂದಿದ್ದು, ಇದು 715 hp ಮತ್ತು 716 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದು 3.7 ಕೋಟಿ ರೂ.ಗಳ ( (ಎಕ್ಸ್-ಶೋರೂಂ ಬೆಲೆ) ಆರಂಭಿಕ ಬೆಲೆಯಲ್ಲಿ ಲಭ್ಯವಿದೆ.
ಫೆರಾರಿ SF90(Ferrari SF90): ಫೆರಾರಿ SF90 ಆರಂಭಿಕ ಬೆಲೆ ರೂ. 5.1 ಕೋಟಿ (ಎಕ್ಸ್-ಶೋರೂಂ) ನಲ್ಲಿ ಲಭ್ಯವಿದೆ. ಇದು ಟ್ವಿನ್-ಟರ್ಬೋಚಾರ್ಜ್ಡ್ 4.0-ಲೀಟರ್ V-8 ಅನ್ನು ಹೊಂದಿದ್ದು ಅದು 769 hp ಮತ್ತು 800 Nm(nanometers) ಅನ್ನು ನೀಡುತ್ತದೆ.


