ನಗರದ 75 ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದ್ದು, ಈ ಪೈಕಿ ಅರ್ಧದಷ್ಟು ಜಂಕ್ಷನ್‌ಗಳಲ್ಲಿ ಈವರೆಗೆ ಕಾಮಗಾರಿಯೇ ಶುರುವಾಗಿಲ್ಲ. ಇನ್ನೂ ಕಾಮಗಾರಿ ಆರಂಭಿಸಲಾದ 12 ಜಂಕ್ಷನ್‌ಗಳಲ್ಲಿ ಕೇವಲ ಶೇ.25 ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ.
ಬೆಂಗಳೂರು : ನಗರದ 75 ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಆರಂಭಿಸಲಾಗಿದ್ದು, ಈ ಪೈಕಿ ಅರ್ಧದಷ್ಟು ಜಂಕ್ಷನ್‌ಗಳಲ್ಲಿ ಈವರೆಗೆ ಕಾಮಗಾರಿಯೇ ಶುರುವಾಗಿಲ್ಲ. ಇನ್ನೂ ಕಾಮಗಾರಿ ಆರಂಭಿಸಲಾದ 12 ಜಂಕ್ಷನ್‌ಗಳಲ್ಲಿ ಕೇವಲ ಶೇ.25 ರಷ್ಟು ಕಾಮಗಾರಿ ಪೂರ್ಣಗೊಂಡಿಲ್ಲ.
ಎರಡು ವರ್ಷದ ಹಿಂದೆ 100 ಕೋಟಿ ರು. ವೆಚ್ಚದಲ್ಲಿ ಯೋಜನೆ
ಕಳೆದ ಎರಡು ವರ್ಷದ ಹಿಂದೆ 100 ಕೋಟಿ ರು. ವೆಚ್ಚದಲ್ಲಿ ನಗರದ 75 ಜಂಕ್ಷನ್‌ಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಯೋಜನೆ ರೂಪಿಸಲಾಗಿದೆ. ಈ ಪೈಕಿ ಈವರೆಗೆ 39 ಜಂಕ್ಷನ್‌ಗಳಲ್ಲಿ ಕಾಮಗಾರಿ ಆರಂಭಿಸಲಾಗಿದ್ದು, 37 ಜಂಕ್ಷನ್‌ಗಳಲ್ಲಿ ಈವರೆಗೆ ಕಾಮಗಾರಿ ಆರಂಭಿಸಿಲ್ಲ. ಕಾಮಗಾರಿ ಆರಂಭಿಸಲಾದ ಜಂಕ್ಷನ್‌ಗಳಲ್ಲಿ ಒಂದೇ ಒಂದು ಜಂಕ್ಷನ್‌ನಲ್ಲಿಯೂ ಕಾಮಗಾರಿ ಪೂರ್ಣಗೊಂಡಿಲ್ಲ. 12 ಜಂಕ್ಷನ್‌ಗಳಲ್ಲಿ ಕಾಮಗಾರಿಯೂ ಕೇವಲ ಶೇ.25 ರಷ್ಟು ಪೂರ್ಣಗೊಂಡಿದೆ.
ನಾಲ್ಕು ಜಂಕ್ಷನ್‌ಗಳಲ್ಲಿ ಶೇ40 ರಷ್ಟು, ನಾಲ್ಕು ಜಂಕ್ಷನ್‌ಗಳಲ್ಲಿ ಶೇ.54ರಷ್ಟು, 7 ಜಂಕ್ಷನ್‌ಗಳಲ್ಲಿ ಶೇ. 60 ರಷ್ಟು, 4 ಜಂಕ್ಷನ್‌ಗಳಲ್ಲಿ ಶೇ.73 ರಷ್ಟು, 4 ಜಂಕ್ಷನ್‌ಗಳಲ್ಲಿ ಶೇ.75 ರಷ್ಟು, ನಾಲ್ಕು ಜಂಕ್ಷನ್‌ಗಳಲ್ಲಿ ಶೇ.84 ರಷ್ಟು ಕಾಮಗಾರಿ ಈವರೆಗೆ ಪೂರ್ಣಗೊಂಡಿದೆ.
ಅಭಿವೃದ್ಧಿ ಕೈಗೊಳ್ಳಬೇಕಿರುವ ಜಂಕ್ಷನ್‌ಗಳಿಗೆ ಮುಖ್ಯ ಅಭಿಯಂತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪ್ರಸ್ತುತ ಇರುವ ವಿನ್ಯಾಸದಲ್ಲಿ ಯಾವುದೇ ಮಾರ್ಪಾಡು ಅಗತ್ಯವಿದ್ದರೆ ಅದನ್ನು ತಕ್ಷಣ ಪರಿಷ್ಕರಿಸಿ, ತ್ವರಿತವಾಗಿ ಕೆಲಸ ಪ್ರಾರಂಭಿಸಿ ಶೀಘ್ರದಲ್ಲಿ ಪೂರ್ಣಗೊಳಿಸಬೇಕು.
ನಗರ ಪಾಲಿಕೆಗಳಲ್ಲಿ ಕೈಗೆತ್ತಿಕೊಳ್ಳಲಾಗಿರುವ ಜಂಕ್ಷನ್‌ಗಳ ಅಭಿವೃದ್ಧಿ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕು. ನಿರಂತರ ಮೇಲ್ವಿಚಾರಣೆ ನಡೆಸಿ, ಪಾಲಿಕೆವಾರು ಪರಿಶೀಲನಾ ಸಭೆಗಳನ್ನು ಆಯೋಜಿಸಿ, ಪ್ರಗತಿ ವರದಿಯನ್ನು ಕಾಲಕಾಲಕ್ಕೆ ಸಲ್ಲಿಸಲು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ನಿರ್ದೇಶಿಸಿದ್ದಾರೆ.
ಅಭಿವೃದ್ಧಿಯಾದ ಜಂಕ್ಷನ್‌ಗಳು:
ಹಡ್ಸನ್ ವೃತ್ತ, ಎನ್.ಆರ್. ಚೌಕ, ಹಡ್ಸನ್ ವೃತ್ತ, ಡೈರಿ ವೃತ್ತ, ಗುಬ್ಬಿ ತೋಟದಪ್ಪ ವೃತ್ತ, ಗಾಲ್ಫ್ ಕ್ಲಬ್, ಕೆಎಚ್. ವೃತ್ತ, ರಾಜೀವ್ ಗಾಂಧಿ ವೃತ್ತ, ಬ್ರಿಗೇಡ್ ವೃತ್ತ, ಅಶೋಕ ಪಿಲ್ಲರ್ ವೃತ್ತ, ಗುಟ್ಟಹಳ್ಳಿ ವೃತ್ತ, ಟೌನ್ ಹಾಲ್, ಮೇಯೊ ಹಾಲ್, ನೆಹರು ವೃತ್ತ ಹಾಗೂ ಉಪ್ಪಾರಪೇಟೆ ವೃತ್ತಗಳಲ್ಲಿ ಜಂಕ್ಷನ್‌ಗಳ ಅಭಿವೃದ್ಧಿ ಕಾರ್ಯಗಳು ಬಹುತೇಖ ಪೂರ್ಣಗೊಂಡಿದೆ.
ಪಾಲಿಕೆವಾರು ಜಂಕ್ಷನ್ ವಿವರ
ನಗರ ಪಾಲಿಕೆಒಟ್ಟು ಜಂಕ್ಷನ್‌ಕಾಮಗಾರಿ ಪ್ರಗತಿಬಾಕಿ
ಬೆಂ.ದಕ್ಷಿಣ1082
ಬೆಂ.ಕೇಂದ್ರ 18414
ಬೆಂ.ಉತ್ತರ1165
ಬೆಂ.ಪಶ್ಚಿಮ15510
ಬೆಂ.ಪೂರ್ವ945


