ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಮತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಸಮರ್ಥಿಸಿಕೊಂಡ ಅವರು, ರಾಜ್ಯಕ್ಕೆ ಆಗುತ್ತಿರುವ ಜಿಎಸ್‌ಟಿ ನಷ್ಟದ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ.

ಹಾಸನ (ಡಿ.6): ಮುಖ್ಯಮಂತ್ರಿ ಸಿದ್ಧರಾಮಯ್ಯ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ಕೇಂದ್ರ ಸಚಿವ ನಿರ್ಮಲಾ ಸೀತಾರಾಮನ್‌ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಒಂದು ಹಂತದಲ್ಲಂತೂ ನಿರ್ಮಲಾ ಸೀತಾರಾಮನ್‌ ಅವರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿಗಳನ್ನು ಸಮರ್ಥನೆ ಮಾಡಿಕೊಂಡು ಅವರು ಮಾತನಾಡಿದ್ದಾರೆ.

ಅಹಿಂದ ಸಂಘಟನೆ ಮಾಡಿದ್ದು‌ ನಾನು. ಭಾಗ್ಯಗಳು, ಗ್ಯಾರೆಂಟಿ ಯೋಜನೆಗಳನ್ನ ಮಾಡಿರೋದು ಯಾರಿಗೆ.. ಬಡವರಿಗೆ ದಲಿತರಿಗೆ ಹಿಂದುಳಿದವರಿಗೆ ಇದು ಅಹಿಂದಕ್ಕಾಗಿ ಅಲ್ವಾ. ಅಹಿಂದಕ್ಕೆ ಅವರದ್ದೇನು ಕೊಡುಗೆ. ರೈತನ ಮಗನ ಮಗ ಅಷ್ಟೇ ಅಲ್ವಾ ಎಂದು ಹೇಳುವ ಮೂಲಕ ಎಚ್‌ಡಿ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.

ಮೇಕೆದಾಟಿಗೆ ಒಪ್ಪಿಗೆ ಕೊಡೊಸೋಕೆ ಅವರಿಗೆ ಆಗಿಲ್ಲ. ಜಿಎಸ್‌ಟಿ ಕಡಿಮೆ ಮಾಡಿದ್ದಕ್ಕೆ ನಮಗೆ ನಷ್ಟ ಎಷ್ಟು ಗೊತ್ತಾ? ಜಿಎಸ್‌ಟಿ ತಂದಿದ್ದು ನರೇಂದ್ರ ಮೋದಿ. ಮಧ್ಯದಲ್ಲಿ ಅದನ್ನ ಕಡಿಮೆ‌ ಮಾಡಿದ್ದಾರೆ. 12% ಗ್ರೋತ್ ಇತ್ತು, ಈಗ 3% ಗೆ ಬಂದಿದೆ. ಇದನ್ನೆಲ್ಲಾ ನೀವು ಕೇಳೋದೆ‌ ಇಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ ಮಿಸಸ್ ನಿರ್ಮಲಾ ಸೀತಾರಾಮನ್ ಹೇಳಿದ್ಲು ಎಂದು ಹೇಳುವ ಮೂಲಕ ಏಕವಚನದಲ್ಲಿಯೇ ವಾಗ್ದಾಳಿ ಮಾಡಿದರು.

ಬಜೆಟ್‌ನಲ್ಲೂ ಅದು ಪಾಸ್ ಆಗಿದೆ. ಇದರ ಬಗ್ಗೆ ಮೇಕೆದಾಟು ಬಗ್ಗೆ ಕುಮಾರಸ್ವಾಮಿ‌ ಮಾತನಾಡಿದ್ದಾರಾ? ನಮ್ಮ ನೆರವಿಗೆ ಬಂದಿದ್ದು ನ್ಯಾಯಾಲಯ. ಕಾವೇರಿ ಅಥಾರಿಟಿಯಲ್ಲಿ ಇವತ್ತಿನವರೆಗೆ ಪಾಸ್ ಮಾಡೋದಕ್ಕೆ ಆಗಿಲ್ಲ.ಇದು ಯಾರಿಗೆ ಅನ್ಯಾಯ ಇದು ಮಂಡ್ಯಕ್ಕೆ ಅನ್ಯಾಯ ಅಲ್ವಾ? 12 ಸಾವಿರ ಕೋಟಿ ನಷ್ಟ ಆಗಬಹುದು ಎಂಬ ನಿರೀಕ್ಷೆ ಇದೆ.88 ಸಾವಿರ ಕೋಟಿ ತಲುಪೋದು ಕೂಡ ಕಷ್ಟ ಆಗುತ್ತಿದೆ ಎಂದು ಸಿಎಂ ಹೇಳಿದ್ದಾರೆ.

ಸಿದ್ದರಾಮಯ್ಯ ಅಹಿಂದಾಕ್ಕೆ‌ ಏನು ಮಾಡಿದ್ರು.. ಇದನ್ನೆಲ್ಲಾ ಯಾರು ಮಾಡಿರೋದು? ಇದರ ಬಗ್ಗೆ ಯಾವತ್ತಾದ್ರೂ ಪಾರ್ಲಿಮೆಂಟ್ ನಲ್ಲಿ‌ಮಾತಾಡಿದ್ದಾರಾ. ನಾವು ಗ್ಯಾರೆಂಟಿಗಾಗಿ ಲಕ್ಷ ಕೋಟಿ ಹಣ ನೀಡಿದ್ದೇವೆ. ಬೇಕಿದ್ರೆ ವೆರಿಫಿಕೇಷನ್ ಮಾಡಲಿ. ಮೋದಿ‌ ಈ ಯೋಜನೆಯನ್ನ‌ ನೀಡೋದಕ್ಕೆ ಆಗೊಲ್ಲ ಎಂದು ಹೇಳಿದ್ದರು. ಕರ್ನಾಟಕ ಆರ್ಥಿಕ ದಿವಾಳಿ ಆಗುತ್ತೆ ಎಂದು ಹೇಳಿದ್ರು ಈಗ ನಾವು ಕೊಟ್ಟಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ.

ಅವಿಶ್ವಾಸಕ್ಕೆ ಹೆದರೋದಿಲ್ಲ ಎಂದ ಸಿಎಂ

ಯಾವ ಅವಿಶ್ವಾಸವಾದ್ರೂ ತರಲಿ, ಏನಾದ್ರು ತರಲಿ ನಾವು ಎದುರಿಸಲು ತಯಾರಾಗಿದ್ದೇವೆ. ನಾವು ತೆರೆದ ಪುಸ್ತಕ ಎಲ್ಲವನ್ನೂ ಎದುರಿಸೋದಕ್ಕೆ‌ ಸಿದ್ಧರಿದ್ದೇವೆ ಎಂದು ಸಿಎಂ ಹೇಳಿದ್ದಾರೆ.