ಸಂಬಂಧಿಕರ ಮದುವೆಗೆಂದು ಹೋಗಿ ನಾಪತ್ತೆಯಾಗಿದ್ದ ಪ್ರಿಯಾಂಕಳ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಕೆರೆಯ ಬಳಿ ಬಟ್ಟೆ ಬ್ಯಾಗ್ ಎಸೆದು ತಾನು ಸತ್ತಂತೆ ಬಿಂಬಿಸಿ, ಪ್ರಿಯಕರನೊಂದಿಗೆ ಪರಾರಿಯಾಗಲು ಆಕೆ ರೂಪಿಸಿದ್ದಳು. ಆದರೆ, ಪೊಲೀಸರ ತನಿಖೆಯಿಂದ ಆಕೆಯ ನಾಟಕ ಬಯಲಾಗಿದೆ.
ಮೊನ್ನೆ ಒಂದು ಮಿಸ್ಸಿಂಗ್ ಕೇಸ್ ಬಗ್ಗೆ ಹೇಳಿದ್ವಿ. ಸಂಬಂಧಿಕರ ಮದುವೆ ಅಂತ ಕುಣಿಗಲ್ನ ಗೃಹಿಣಿ ಚಿಕ್ಕಮಗಳೂರಿಗೆ ಹೋಗಿದ್ದಳು. ಮದುವೆ ಮುಗಿಸಿ ತನ್ನ ತವರು ಮನೆಗೆ ಹೋಗಿದ್ಲು. ಸಂಜೆಯಾಗುತ್ತಲೇ ಗಂಡನ ಮನೆಗೆ ಹೊರಟಳು. ಆದ್ರೆ ಆಕೆ ಗಂಡನ ಮನೆ ತಲುಪಿರೋದಿಲ್ಲ. ಆಕೆ ನಿಗೂಢವಾಗಿ ನಾಪತ್ತೆಯಾಗಿರ್ತಾಳೆ. ನಂತರ ಆಕೆಯ ಬಟ್ಟೆ ಬ್ಯಾಗು ಒಂದು ಕೆರೆಯ ಬಳಿ ಸಿಗುತ್ತೆ. ಗಂಡ ಯಾರೋ ಆಕೆ ಹಾಕಿದ್ದ ಒಡವೆಗಾಗೇ ಕೊಂದು ಕೆರೆಗೆ ಹಾಕಿದ್ದಾನೆ ಅಂದಿದ್ದ. ಪೊಲೀಸರು ಆ ಕೆರೆಯಲ್ಲೆ ಅವಳ ಮೃತದೇಹ ಸಿಗಬಹುದು ಅಂತ. ಕೆರೆಯನ್ನೆಲ್ಲಾ ಜಾಲಾಡಿದ್ರು, ಆದ್ರೆ ಇದೇ ಕೇಸ್ಗೆ ಈಗ ಟ್ವಿಸ್ಟ್ ಸಿಕ್ಕಿದೆ. ಕೆರೆಯ ಬಳಿ ನಾಪತ್ತೆಯಾಗಿದ್ದ ಮಹಿಳೆ ಸಿಕ್ಕಿದ್ದಾಳೆ. ಹಾಗಾದ್ರೆ ಆಕೆಗೆ ಏನಾಯ್ತು? ಎಲ್ಲಿ ಸಿಕ್ಕಿದಳು? ಕೆರೆಯ ಬಳಿ ಆವತ್ತು ರಾತ್ರಿ ಏನಾಯ್ತು? ಒಂದು ಮಿಸ್ಸಿಂಗ್ ಕೇಸ್ ಹಿಂದಿನ ರೋಚಕ ಇನ್ವೆಸ್ಟಿಗೇಷನ್ ಕಥೆಯೇ ಇವತ್ತಿನ ಎಫ್.ಐ.ಆರ್.
ಗಂಡನಿಗೆ ಮಂಕುಬೂದಿ ಎರಚಿದ್ದ ಪ್ರಿಯಾಂಕಾ
ಬಂಗಾರದಂತ ಗಂಡ ಇದ್ರೂ ಪ್ರಿಯಾಂಕಾ ಮತ್ತೊಬ್ಬನ ಸಹವಾಸ ಮಾಡಿದ್ಲು. ತಾನು ಕೆಲಸಕ್ಕೆ ಹೋಗುತ್ತಿದ್ದ ಫ್ಯಾಕ್ಟರಿಯ ಮ್ಯಾನೇಜರ್ ಒಬ್ಬನ ಜೊತೆ ಗೆಳೆತನ ಬೆಳಸಿಕೊಂಡಳು. ಒಂದುವರೆ ವರ್ಷ ಆತನ ಜೊತೆಗೆ ಸುತ್ತಾಡಿದ್ಲು. ಆದ್ರೆ ಇದ್ಯಾವುದೂ ಗಂಡನಿಗೆ ಗೊತ್ತಾಗೋದೇ ಇಲ್ಲ. ಆಕೆ ನಾಪತ್ತೆಯಾದಾಗಲು ಹೆಂಡತಿಯನ್ನ ಕೊಂದುಬಿಟ್ಟಿದ್ದಾರೆ ಅಂತಲೇ ಅಂದುಕೊಂಡಿದ್ದ. ಆದ್ರೆ ಈಕೆ ಆತನ ಜೊತೆ ಎಸ್ಕೇಪ್ ಆಗಲು ಒಂದು ಬಿಗ್ ಸ್ಕೆಚ್ ಅನ್ನೇ ರೆಡಿ ಮಾಡಿದ್ಲು. ಸಂಬಂದಿಕರ ಮದುವೆಯ ನೆಪದಲ್ಲಿ ಮನೆಯಲ್ಲಿದ್ದ ಒಡವೆಗಳನ್ನೆಲ್ಲಾ ಹೊತ್ತುಕೊಂಡು ಪ್ರಿಯಕರನ ಜೊತೆ ಎಸ್ಕೇಪ್ ಆದಳು. ಆದ್ರೆ ಯಾರಿಗೂ ಸಂಶಯ ಬರಬಾರದು ಅಂತ ಕೆರೆಯ ಬಳಿ ಬಟ್ಟೆ ಬ್ಯಾಗ್ ಅನ್ನ ಎಸೆದು ತಾನು ಸತ್ತಿರೋ ಹಾಗೆ ಬಿಂಬಿಸಲು ಹೊರಟಿದ್ದಳು. ಆದರೆ ಪೊಲೀಸರು ಇವಳ ನಾಟಕಕ್ಕೆ ಫುಲ್ ಸ್ಟಾಪ್ ಇಟ್ಟಿದ್ರು.
ಇವಳು ನಿಜಕ್ಕೂ ಖತರ್ನಾಕ್ ಚೆಲುವೆನೇ . ಗಂಡನಿಗೆ ಮತ್ತು ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಹೋಗಿ ಈಗ ತಗ್ಲಾಕಿಕೊಂಡಿದ್ದಾಳೆ. ಸಂಬಂದಿಕರ ಮದೆವೆ ಇದೆ ಅಂತ ಹೋದ ಪ್ರಿಯಾಂಕಾ ನಿಗೂಢವಾಗಿ ನಾಪತ್ತೆಯಾಗಿದ್ದಳು. ಗಂಡ ಹುಡುಕಬಾರದ ಜಾಗದಲ್ಲೆಲ್ಲಾ ಹುಡುಕಾಡಿದ್ದ. ಕೊನೆಗೆ ಪೊಲೀಸರ ಬಳಿ ಕೂಡ ಹೋದ. ಆದರೆ ಎಲ್ಲೂ ಆಕೆಯ ಸುಳಿವಿಲ್ಲ. ಆದರೆ ಅವಳ ಬಟ್ಟೆ ಬ್ಯಾಗು ಬೇಲೂರಿನ ಕಲ್ಕೆರೆಯಲ್ಲಿ ಸಿಕ್ಕಿತ್ತು.
ಯಾವಾಗ ಬಟ್ಟೆ ಸುಳಿವು ಕೆರೆಯ ಬಳಿ ಸಿಗ್ತೋ ಪೊಲೀಸರ ತಂಡ ಕೆರೆಯಲ್ಲಿ ಹುಡುಕಾಟ ನಡೆಸಿತ್ತು. ಆದ್ರೂ ಯಾವುದೆ ಮಾಹಿತಿ ಸಿಗೋದಿಲ್ಲ. ಆದ್ರೆ ಪೊಲೀಸರು ಸುಮ್ಮನೆ ಕೂರೋದಿಲ್ಲ. ಮತ್ತಿನೆರಡು ಟೀಂ ಆಕೆ ಫೋನ್ ಲೊಕೇಷನ್ ಮತ್ತು ಕಾಲ್ ಡಿಟೇಲ್ಸ್ ಹಿಂದೆ ಬಿತ್ತು. ಆಗಲೇ ನೋಡಿ ಈ ಖತರ್ನಾಕ್ ಲೇಡಿ ಎಲ್ಲಿದ್ದಾಳೆ ಅನ್ನೋದು ಗೊತ್ತಾಗೋದು. ನಾಪತ್ತೆ ಕಥೆ ಕಟ್ಟಿದ್ದ ಪ್ರಿಯಾಂಕಾಾಳಿಗೆ ಬೇರೊಬ್ಬನ ಜೊತೆ ಲವ್ ಇತ್ತು. ಈಗಾಗಿ ಪ್ರಿಯಕರನ ಜೊತೆ ಓಡಿ ಹೋಗಲು ಈ ರೀತಿ ನಾಟಕ ಮಾಡಿದ್ದಳು ಅನ್ನೋದು ಗೊತ್ತಾಗಿದೆ.
ಎಸ್ಕೇಪ್ ಆಗುವ ಮೊದಲೇ ಪೊಲೀಸರಿಗೆ ಸಿಕ್ಕಿಬಿದ್ದ ಜೋಡಿ
ನಾಪತ್ತೆ ನಾಟಕವಾಡಿದ್ದ ಪ್ರಿಯಾಂಕಾ ತನ್ನ ಪ್ರಿಯಕರನ ಜೊತೆಗೂಡಿ ಬಿಹಾರಕ್ಕೆ ಓಡಿ ಹೋಗುವ ಸ್ಕೇಚ್ ಹಾಕಿದ್ಲು. ಅದಕ್ಕಾಗಿ ಮೊದಲೇ ಕುಣಿಗಲ್ನ ಗೊಟ್ಡಿಗೆರೆಲ್ಲಿರುವ ತನ್ನ ಪ್ರಿಯಕರ ಡೇವಿಡ್ ಮನೆ ಸೇರಿಕೊಂಡಿದ್ಲು. ನಂತರ ಮನೆಯವರು ಮಿಸ್ಸಿಗ್ ಕಂಪ್ಲೆಂಟ್ ದಾಖಲಿಸುತ್ತಿದ್ದಂತೆ ತನಿಖೆ ಆರಂಭಿಸಿದ ಪೊಲೀಸರು ಆಕೆ ಮೊಬೈಲ್ ಪರಿಶೀಲಿದಾಗ ಡೇವಿಡ್ ಜೊತೆ ಗಂಟೆಗಟ್ಟಲೇ ಮಾತನಾಡಿರೋದು ಗೊತ್ತಾಗಿದೆ. ಪೊಲೀಸರು ಇದನ್ನ ಬೆನ್ನತ್ತಿ ಹೋದಾಗ ಪ್ರಿಯಕರ ಡೇವಿಡ್ ಜತೆಗೆ ಸಿಕ್ಕಿಬಿದ್ದಿದ್ದಾಳೆ. ಅಲ್ಲದೇ ಪ್ರಿಯಕರನಿಗಾಗಿ ಮಿಸ್ಸಿಂಗ್ ಕಹಾನಿ ಸೃಷ್ಟಿಸಿದ್ದಾಗಿ ಪ್ರಿಯಾಂಕಾ ಬಾಯ್ಬಿಟ್ಟಿದ್ದಾಳೆ.
ಪ್ರಿಯಾಂಕಾ ತನ್ನ ಪ್ರಿಯಕರನೊಂದಿಗೆ ಕುಣಿಗಲ್ಗೆ ಬಂದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಖತರ್ನಾಕ್ ಜೋಡಿ ಚಲನ ವಲನವೆಲ್ಲಾ ಅಸಲಿ ಸತ್ಯ ಬಿಚ್ಚಿಡ್ತಿವೆ. ಈ ಪ್ರಕಾರ ಜೋಡಿ ಫೆಬ್ರವರಿ 14ರ ಶನಿವಾರ ಬೆಳಿಗ್ಗೆಯೇ ಬಿಹಾರಕ್ಕೆ ತೆರಳಲು ಇಬ್ಬರೂ ಸಿದ್ಧತೆ ನಡೆಸಿದ್ದರಂತೆ. ಜೊತೆಗೆ ಪ್ರಯಾಣಕ್ಕೆ ಅಗತ್ಯವಾದ ವ್ಯವಸ್ಥೆಗಳನ್ನೂ ಮಾಡಿಕೊಂಡಿದ್ದರಂತೆ. ಅದಕ್ಕಾಗಿ ಕುಣಿಗಲ್ನಲ್ಲಿ ಇರುವ ಡೇವಿಡ್ ಮನೆಯಲ್ಲಿ ಸೇರಿ ಪ್ಲಾನ್ ರೂಪಿಸಿದ್ರು.
ಆದರೆ ಅದಕ್ಕೂ ಮುನ್ನವೇ, ಶುಕ್ರವಾರ ರಾತ್ರಿ ಬೇಲೂರು ಪೊಲೀಸರು ಚಾಕಚಕ್ಯದಿಂದ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ. ಪೊಲೀಸರು ಒಂದು ರಾತ್ರಿ ತಡಮಾಡಿದ್ರು ಈ ಜೋಡಿಗಳು ಬಿಹಾರಕ್ಕೆ ಓಡಿ ಹೋಗಿ ತಲೆ ಮರೆಸಿಕೊಳ್ಳುತ್ತಿದ್ದರು, ಆದ್ರೆ ಜೋಡಿಗಳ ಲೆಕ್ಕಚಾರವನ್ನು ಬೇಲೂರು ಪೊಲೀಸರು ತೆಲೆಕೆಳಗಾಗುವಂತೆ ಮಾಡಿದ್ದಾರೆ.
ಈ ಜೋಡಿ ಸಿಕ್ಕಿಬಿದ್ದಿದ್ದು ಹೇಗೆ ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ಗಾಗಿ ಈ ವಿಡಿಯೋ ಜೋಡಿ


