Astrologer Kamalakar Bhat: ಜ್ಯೋತಿಷಿ ಕಮಲಾಕರ್‌ ಭಟ್‌ ಅವರಿಂದ ನನಗೆ ಮಾರಕ ರೋಗ ಬಂದಿದೆ ಎಂದು ಸಂತ್ರಸ್ತೆಯೋರ್ವರು ಮಾಧ್ಯಮದ ಮುಂದೆ ಬಂದು ಹೇಳಿದ್ದಾರೆ. ನನಗೆ ಕಮಲಾಕರ್‌ ಭಟ್‌ ಅವರು ತಾಳಿ ಕಟ್ಟಿದ್ದಾರೆ ಎಂದು ಆ ಮಹಿಳೆ ಆರೋಪ ಮಾಡಿದ್ದಾರೆ.

ಜ್ಯೋತಿಷಿ ಕಮಲಾಕರ್‌ ಭಟ್‌ ( Astrologer Kamalakar Bhat ) ಅವರ ವಿರುದ್ಧ ಇನ್ನೋರ್ವ ಬುರ್ಕಾದಾರಿ ಸ್ತ್ರೀ ಕಿಡಿಕಾರಿದ್ದಾರೆ. ಹೌದು, ಕಮಲಾಕರ್‌ ಭಟ್‌ ಅವರು ನನ್ನನ್ನು ಮದುವೆಯಾಗಿದ್ದಾರೆ ಎಂದು ಸ್ತ್ರೀ ಹೇಳಿದ್ದಾರೆ. ಅಷ್ಟೇ ಅಲ್ಲದೆ ಕಮಲಾಕರ್‌ ಭಟ್‌ ಅವರಿಗೆ ಮಾರಕಕಾರಿ ರೋಗ ಇದೆ ಎಂದು ಅವರು ಹೇಳಿದ್ದಾರೆ.

ಮಾರಕಕಾರಿ ರೋಗ

“ಕಮಲಾಕರ್‌ ಭಟ್‌ ಅವರಿಗೆ ಪದೇ ಪದೇ ವಾಂತಿ, ಭೇದಿ ಆಗುತ್ತಿತ್ತು. ಇದರ ಬಗ್ಗೆ ಕಾರಣ ಕೇಳಿದಾಗ ಅವರು ಏನೂ ಹೇಳಲಿಲ್ಲ. 2020 ಆಗಸ್ಟ್‌ನಲ್ಲಿ ಎಂದು ಸ್ತ್ರೀ ಎಚ್ಚರಿಕೆ ಕೊಟ್ಟಿದ್ದಾರೆ. ಪಾಸಿಟಿವ್‌ ಬಂತು, ಕಮಲಾಕರ್‌ ಭಟ್‌ ಬಳಿ ನನ್ನ ತಂಗಿ, “ನಮ್ಮ ಅಕ್ಕನಿಗೆ ಯಾವುದೇ ಸಂಪರ್ಕ ಇಲ್ಲ” ಎಂದು ನನ್ನ ತಂಗಿ ಹೇಳಿದ್ದಳು. ಆಗ ಅವರು, “ಕಾಯಿಲೆ ಮನುಷ್ಯನಿಗೆ ಬರದೆ, ಮರಕ್ಕೆ ಬರುತ್ತದಾ?” ಎಂದು ಪ್ರಶ್ನೆ ಮಾಡಿದ್ದರು. ಹೆಂಡ್ತಿಗೆ ಖಾಯಿಲೆ ಬಂದರೂ ಕೂಡ, ಅವರು ಕೂಗಾಡಿದ್ದಾರೆ” ಎಂದು ಸ್ತ್ರೀ ಹೇಳಿದ್ದಾರೆ.

ಒಂದು ನೈಟ್‌ಗೆ ಅಷ್ಟು ರೂಪಾಯಿ ಎಂದು ಪೋಸ್ಟ್

ಪದೇ ಪದೇ ನನಗೆ ಹುಷಾರು ಇರುತ್ತಿರಲಿಲ್ಲ. ಪದೇ ಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದೆ, ಆಗಲೂ ಕೂಡ ಅವರು ಕಾಲ್‌ ಮಾಡುತ್ತಿರಲಿಲ್ಲ. ಆಮೇಲೆ ಬೇರೆ ಬೇರೆ ಹುಡುಗರಿಗೆ ಹೇಳಿ ಕಾಲ್‌ ಮಾಡಿಸಿದ್ದರು. ನಾನು ಇವರಿಗೆ ಫೋನ್‌ ಮಾಡಿದಾಗ, ಸುಚಿತ್ರಾ ಮಾತನಾಡೋದು ಕೇಳಿಸುತ್ತಿತ್ತು. ಅವಳು ಸುಚಿತ್ರಾ ಎನ್ನೋದು ನನಗೆ ಆಮೇಲೆ ಗೊತ್ತಾಗಿದೆ. ಸೋಶಿಯಲ್‌ ಮೀಡಿಯಾದಲ್ಲಿ ನನ್ನ ಫೋಟೋ ಹಾಕಿ, ಒಂದು ರಾತ್ರಿಗೆ ಇಷ್ಟು ರೂಪಾಯಿ ಅಂತೆಲ್ಲ ಪೋಸ್ಟ್‌ ಹಾಕಿದ್ದಳು ಎಂದು ಸ್ತ್ರೀ ಹೇಳಿದ್ದಾರೆ.

“ನನಗೋಸ್ಕರ ಅವರು ಸಾಲ ಮಾಡಿದ್ದರು. ಹಣ ಇದ್ದರೂ ಕೂಡ ನೀವು ಯಾಕೆ ಸಾಲ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಆಗ ಅವರು ಏನೋ ಹಾರಿಕೆ ಉತ್ತರ ಕೊಟ್ಟಿದ್ದರು. ನನಗೆ ತಾಳಿ ಕಟ್ಟಿದ ಗಂಡ ಕಮಲಾಕರ್‌ ಭಟ್‌ ನನಗೆ ಕಾಯಿಲೆ ಕೊಟ್ಟು, ಸಾಲಕ್ಕೆ ಹಣ ಕೂಡ ಕೊಡಲಿಲ್ಲ. ಕಮಲಾಕರ್‌ ಭಟ್‌ ಕಾಯಿಲೆಗೆ ಎಷ್ಟು ಹೆಣ್ಣು ಮಕ್ಕಳು ಬಲಿಯಾಗಿದ್ದಾರೋ ಏನೋ! ಸುಚಿತ್ರಾಗೆ ನಾನು ವಾರ್ನ್‌ ಮಾಡಿದರೂ ಕೂಡ ಅವಳು ಕೇಳಲಿಲ್ಲ. ಕಷ್ಟ ಎಂದು ಬಂದ ಹೆಣ್ಣು ಮಕ್ಕಳಿಗೆ ಅವನು ಲೈ*ಂಗಿಕ ಕ್ರಿಯೆ ನಡೆಸುತ್ತಾನೆ. ನನಗೆ ಮಕ್ಕಳಿವೆ, ಬದುಕೋದು ಕಷ್ಟ, ದೇವರು ನನ್ನ ತಗೊಳ್ಳಲಿ ಎಂದು ಕಾಯುತ್ತಿದ್ದೇನೆ ಎಂದು ಸಂತ್ರಸ್ಥೆ ಹೇಳಿದ್ದಾರೆ.

ಏನಿದು ಘಟನೆ?

ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನಾದ್ಯಂತ ಸಂಚಲನ ಮೂಡಿಸಿದ್ದ ವಸಂತ ನಾಯ್ಕ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಜ್ಯೋತಿಷಿ ಕಮಲಾಕರ ಭಟ್ಟ ಹಾಗೂ ಸುಚಿತ್ರಾ ಸೇರಿದಂತೆ ಒಟ್ಟು ಐವರು ಆರೋಪಿಗಳಿಗೆ ಫೆ. 21ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಸಿದ್ದಾಪುರ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಬಂಧಿತ 8 ಆರೋಪಿಗಳ ಪೈಕಿ ಈ ಐವರ ನ್ಯಾಯಾಂಗ ಬಂಧನದ ಅವಧಿ ಬುಧವಾರಕ್ಕೆ ಮುಕ್ತಾಯವಾಗಿತ್ತು.

ಬುಧವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಐವರು ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಒಳಪಡಿಸಿದರು. ಬಳಿಕ, ನ್ಯಾಯಾಂಗ ಬಂಧನದ ಅವಧಿಯನ್ನು ಫೆ.21ರವರೆಗೆ ವಿಸ್ತರಿಸಿ, ಆದೇಶ ನೀಡಿದರು. ಉಳಿದ ಮೂವರು ಆರೋಪಿಗಳು ಪೊಲೀಸ್‌ ಕಸ್ಟಡಿಯಲ್ಲಿದ್ದು, ಫೆ.13ಕ್ಕೆ ಅವರ ಪೊಲೀಸ್‌ ಕಸ್ಟಡಿಯ ಅವಧಿ ಮುಕ್ತಾಯವಾಗಲಿದೆ.