ಫ್ಲೋರಿಡಾದಲ್ಲಿ ಮನೆಯ ಬಾಗಿಲಿನಲ್ಲಿರುವ ಕ್ಯಾಮರಾದಲ್ಲಿ ಎರಡು ಮೊಸಳೆಗಳು ಸೆರೆಯಾಗಿವೆ. ಒಂದು ಮೊಸಳೆ ಬಾಗಿಲು ತಳ್ಳಲು ಯತ್ನಿಸುತ್ತಿರುವಂತೆ, ಇನ್ನೊಂದು ವಿಶ್ರಾಂತಿ ಪಡೆಯುತ್ತಿತ್ತು. ಮನೆಮಾಲೀಕರು ವಿಡಿಯೋ ಹಂಚಿಕೊಂಡಿದ್ದು, ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ. ಫ್ಲೋರಿಡಾದಲ್ಲಿ ಮೊಸಳೆಗಳು ಮನೆಯೊಳಗೆ ನುಗ್ಗುವ ಘಟನೆಗಳು ಹಿಂದೆಯೂ ವರದಿಯಾಗಿವೆ.

ಅಪರೂಪಕ್ಕೆ ಗೋಡೆ ಮೇಲೆ ಹಲ್ಲಿ ಕಂಡ್ರೆ ಭಯವಾಗುತ್ತೆ. ಅದನ್ನು ಮನೆಯಿಂದ ಹೊರಗೆ ಓಡಿಸುವವರೆಗೂ ನಿದ್ರೆ ಬರೋದಿಲ್ಲ. ಇನ್ನು ಅಪಾಯಕಾರಿ ಮೊಸಳೆ (crocodile) ಮನೆ ಮುಂದೆ ಬಂದು ಬಾಗಿಲ ಬಳಿ ನಿಂತ್ರೆ ಎದೆ ಬಡಿತ ಜೋರಾಗೋದ್ರಲ್ಲಿ ಡೌಟೇ ಇಲ್ಲ. ಮೊಸಳೆಯಲ್ಲ ಮನೆಯವರೆಗೆ ಹೇಗೆ ಬರುತ್ತೆ ಅಂತ ನೀವು ಕೇಳ್ಬಹುದು. ಆದ್ರೆ ಪ್ಲೋರಿಡಾ (Florida)ದಲ್ಲಿ ಇಂಥ ಘಟನೆ ಆಗಾಗ ನಡೆಯುತ್ತಿರುತ್ತೆ. ಈಗ ಮನೆ ಡೋರ್ ಬೆಲ್ ಬಳಿ ಇರುವ ಕ್ಯಾಮರಾದಲ್ಲಿ ಇಂಥ ದೃಶ್ಯವೊಂದು ಸೆರೆಯಾಗಿದೆ. ಕ್ಯಾಮರಾದಲ್ಲಿ ಎರಡು ಅಲಿಗೇಟರ್ (alligator) ಮೊಸಳೆ ಪತ್ತೆಯಾಗಿದೆ. ಇದನ್ನು ನೋಡಿದ ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಒಂದು ಮೊಸಳೆ ಅಕ್ಷರಶಃ ಮನುಷ್ಯರಂತೆ ಮಾಡ್ತಿದೆ. ಗೋಡೆಗೆ ತನ್ನ ಕೈ ಚಾಚಿ ನಿಂತಿರುವ ಅಲಿಗೇಟರ್, ಡೋರ್ ಬೆಲ್ (door bell) ಮಾಡ್ತಿರುವಂತೆ ಕಾಣ್ತಿದೆ. 

ಘಟನೆ ನಡೆದಿರೋದು ಅಮೆರಿಕಾದ ಸನ್ಶೈನ್ ಸ್ಟೇಟ್ ನಲ್ಲಿ. ಮನೆ ಮಾಲೀಕ ತನ್ನ ರೆಡ್ಡಿಟ್ ಪೋಸ್ಟ್ ನಲ್ಲಿ ಇದ್ರ ವಿಡಿಯೋ ಹಂಚಿಕೊಂಡಿದ್ದಾನೆ. ಡೋರ್ ಬೆಲ್ ಕ್ಯಾಮರಾದಲ್ಲಿ ಈ ಎರಡು ಅಲಿಗೇಟರ್ ಸೆರೆಯಾಗಿದೆ. ಅವು ಮನೆಯೊಳಗೆ ನುಗ್ಗಲು ಪ್ರಯತ್ನ ನಡೆಸುತ್ತಿವೆ. ಒಂದು ಅಲಿಗೇಟರ್ ಬಾಗಿಲು ತಳ್ಳಿ ಒಳಗೆ ಹೋಗುವ ಪ್ರಯತ್ನ ನಡೆಸುತ್ತಿದೆ. ಒಂದು ಬಾರಿ ಆ ಕಡೆ, ಇನ್ನೊಂದು ಬಾರಿ ಈ ಕಡೆ ಬರುವ ಅಲಿಗೇಟರ್, ಬಾಗಿಲನ್ನು ನೂಕುವ ಪ್ರಯತ್ನದಲ್ಲಿದೆ. ಇದನ್ನು ನೋಡಿದ್ರೆ ಮನೆಗೆ ಬಂದ ಅತಿಥಿಯಂತೆ ಕಾಣುತ್ತೆ. ಡೋರ್ ಬೆಲ್ ಮಾಡಿ, ಇನ್ನೂ ಯಾರೂ ಬಂದಿಲ್ಲ ಅಂತ ನಾವು ಬಗ್ಗಿ ನೋಡುವಂತೆ ಅದು ನೋಡ್ತಿದೆ. ಇನ್ನೊಂದು ಅಲಿಗೇಟರ್ ಆರಾಮವಾಗಿ ಮಲಗಿರೋದನ್ನು ವಿಡಿಯೋದಲ್ಲಿ ಕಾಣ್ಬಹುದು.

ಚೀನಾ ಮ್ಯಾರಥಾನ್‌ನಲ್ಲಿ ರೋಬೋಟ್‌ಗಳ ಓಟ, ಬಾಲವಿಲ್ಲದ

ಮನೆಯಲ್ಲಿ ಬೆಲ್ ಕ್ಯಾಮರಾ ಇಲ್ಲ ಅಂತ ಊಹಿಸಿಕೊಳ್ಳಿ. ಬಾಗಿಲು ತಟ್ಟುತ್ತಿದ್ದಂತೆ ನೀವು ಡೋರ್ ತೆಗೆದ್ರೆ ಕಣ್ಮುಂದೆ ಎರಡು ದೊಡ್ಡ ಅಲಿಗೇಟರ್ ನಿಂತಿದ್ರೆ ನಿಮ್ಮ ಸ್ಥಿತಿ ಏನಾಗಬೇಡ ಅಂತ ಬಳಕೆದಾರ ತನ್ನ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾನೆ. ಸದ್ಯ ರೆಡ್ಡಿಟ್ ಪೋಸ್ಟ್ ಡಿಲಿಟ್ ಆಗಿದ್ದು, ಕಮೆಂಟ್ ಮಾತ್ರ ಹಾಗೇ ಇದೆ. 

ಈ ಪೋಸ್ಟ್ ಗೆ ಅನೇಕ ಭಿನ್ನ ಕಮೆಂಟ್ ಮಾಡಿದ್ದಾರೆ. ಬಹುತೇಕರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಎರಡು ಅಲಿಗೇಟರ್ ದಾಳಿ ಭಯ ಹುಟ್ಟಿಸುತ್ತದೆ ಎಂದು ಬರೆದಿದ್ದಾರೆ. ಮತ್ತೆ ಕೆಲವರು ತಮಾಷೆ ಮಾಡಿದ್ದಾರೆ. ಅಲಿಗೇಟರನ್ನು ಪಕ್ಕದ ಮನೆಯ ವ್ಯಕ್ತಿಯಂತೆ ನೋಡಿದ್ದಾರೆ. ನಿಮ್ಮ ಮನೆಯಲ್ಲಿ ಸಕ್ಕರೆ ಇದ್ಯಾ ಅಂತ ಕೇಳೋಕೆ ಬಂದಿರ್ಬೇಕು ಅಂತ ಕಮೆಂಟ್ ಹಾಕಿದ್ದಾರೆ. ಅಲಿಗೇಟರ್ ತುಂಬಾ ಬುದ್ಧಿವಂತ ಪ್ರಾಣಿ. ಜೀವಂತ ಡೈನೋಸಾರ್ ಅಂದ್ರೆ ತಪ್ಪಾಗೋದಿಲ್ಲ ಅಂತ ವ್ಯಕ್ತಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. 

ಮೀನುಗಳ ಜೊತೆ ವಾಕಿಂಗ್ ಬರ್ತಾನೆ ಈ ವ್ಯಕ್ತಿ!

ಫ್ಲೋರಿಡಾದಲ್ಲಿ ಇದೇ ಮೊದಲಲ್ಲ. ಈ ಹಿಂದೆ ಕೂಡ ಇಂಥ ಘಟನೆ ನಡೆದಿದೆ. ಕೆಲ ದಿನಗಳ ಹಿಂದಷ್ಟೆ ಮಹಿಳೆಯೊಬ್ಬಳ ಮನೆಯೊಳಗೆ ಅಲಿಗೇಟರ್ ನುಗ್ಗಿತ್ತು. ಮನೆಗೆ ಯಾರೋ ಅತಿಥಿ ಬಂದಿರಬೇಕು ಅಂತ ಮಹಿಳೆ ಭಾವಿಸಿದ್ದಳು. ಆದ್ರೆ ಲೀವಿಂಗ್ ರೂಮಿಗೆ ಈಗಾಗಲೇ ಎಂಟ್ರಿ ನೀಡಿದ್ದ ಅಲಿಗೇಟರ್ ನೇರವಾಗಿ ಅಡುಗೆ ಮನೆಗೆ ಬಂದಿತ್ತು. ಮುಂದಿದ್ದ ಅಲಿಗೇಟರ್ ನೋಡಿ ಮಹಿಳೆ ದಂಗಾಗಿದ್ದಳು. ಹೇಗೋ ಅಲ್ಲಿಯೇ ಇದ್ದ ಫೋನ್ ಎತ್ತಿಕೊಂಡಿದ್ದ ಮಹಿಳೆ ತನ್ನ ಪ್ರಾಣ ರಕ್ಷಿಸಿಕೊಂಡಿದ್ದಳು. ದೂರಿನ ಮೇಲೆ ಅಲ್ಲಿಗೆ ಬಂದ ಕೌಂಟಿ ಶೆರಿಫ್ಗಳು ಮತ್ತು ಫ್ಲೋರಿಡಾ ಮೀನು ಮತ್ತು ವನ್ಯಜೀವಿ ಸಂರಕ್ಷಣಾ ಆಯೋಗದ ಸದಸ್ಯರು ಅಲಿಗೇಟರ್ ಬಂಧಿಸಿ ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

View post on Instagram