01:26 PM (IST) Feb 13

Karnataka Liveಬಿಗ್ ಬಾಸ್ ಮನೆಯ ಚಿಕ್ಕವ್ವ ದೊಡ್ಡವ್ವ ಜೊತೆ ನಿತ್ಕೊಂಡು ಗಿಲ್ಲಿ ನಟನ ಕಿವಿ ಹಿಂಡಿದ ಒಳ್ಳೆ ಹುಡುಗ ಪ್ರಥಮ್!

ಬಿಗ್ ಬಾಸ್ ಸೀಸನ್ 4ರ ವಿಜೇತ ಪ್ರಥಮ್, ಸೀಸನ್ 12ರ ಸ್ಪರ್ಧಿಗಳಾದ ಅಶ್ವಿನಿ ಗೌಡ ಮತ್ತು ಜಾಹ್ನವಿ ಜೊತೆ ಕಾಣಿಸಿಕೊಂಡಿದ್ದಾರೆ. ಗಿಲ್ಲಿ ನಟ ಅವರಿಬ್ಬರನ್ನು 'ದೊಡ್ಡವ್ವ-ಚಿಕ್ಕವ್ವ' ಎಂದು ಕರೆದಿದ್ದನ್ನು ಪ್ರಶ್ನಿಸಿ, ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

Read Full Story
01:21 PM (IST) Feb 13

Karnataka Liveಹೊಸಕೋಟೆ ದುರಂತ - ಸಿದ್ದಿಸಲಿಲ್ವಾ ಶಾಂತಿ ಹೂಮ, ಪೂಜೆಯ ಹೂವು ಬಾಡುವ ಮುನ್ನವೇ ಅದೇ ಜಾಗದಲ್ಲಿ 7 ಜನರ ಬಲಿ!

ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿ ನಡೆದ ಭೀಕರ ಸರಣಿ ಅಪಘಾತದಲ್ಲಿ ಆರು ವಿದ್ಯಾರ್ಥಿಗಳು ಸೇರಿದಂತೆ ಏಳು ಮಂದಿ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಅಪಘಾತಗಳನ್ನು ತಡೆಯಲು ಇದೇ ಸ್ಥಳದಲ್ಲಿ ಗ್ರಾಮಸ್ಥರು ಶಾಂತಿ ಪೂಜೆ ನಡೆಸಿದ್ದರು.

Read Full Story
01:11 PM (IST) Feb 13

Karnataka Liveಬೀದರ್ - ಸಾಲಬಾಧೆ ತಾಳಲಾರದೇ ಬಾವಿಗೆ ಜಿಗಿದು ವ್ಯಕ್ತಿ ಆತ್ಮ೧ಹತ್ಯೆ!

ಬೀದರ್ ತಾಲೂಕಿನ ಯದಲಾಪುರ ಗ್ರಾಮದಲ್ಲಿ, ಸಾಲದ ಸುಳಿಗೆ ಸಿಲುಕಿದ್ದ ಶಿವಕುಮಾರ್ ಮೇತ್ರೆ (42) ಎಂಬುವವರು ಬಾವಿಗೆ ಹಾರಿ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಮನೆ ನಿರ್ಮಾಣ ಹಾಗೂ ಆಸ್ಪತ್ರೆ ವೆಚ್ಚಕ್ಕಾಗಿ ಸುಮಾರು 5 ಲಕ್ಷ ಸಾಲ ಮಾಡಿಕೊಂಡಿದ್ದ ಅವರು, ಮಾನಸಿಕ ಖಿನ್ನತೆಯಿಂದ ಈ ದುರಂತ ನಿರ್ಧಾರ

Read Full Story
01:10 PM (IST) Feb 13

Karnataka Liveದಾಸನ ಬರ್ತಡೇಗೂ ಮುನ್ನ ಗುಡ್ ನ್ಯೂಸ್ - ಕಾನೂನಿನ ಆ ಅವಕಾಶ ಬಳಸಿಕೊಂಡು ಜೈಲಿನಿಂದ ಹೊರಬರಲು ದಿನಾಂಕ ಫಿಕ್ಸ್?

ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಅವರ ಹುಟ್ಟುಹಬ್ಬವನ್ನು ಅಭಿಮಾನಿಗಳು 'ಡಿ ಉತ್ಸವ'ವಾಗಿ ಆಚರಿಸುತ್ತಿದ್ದಾರೆ. ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ಮುಗಿದ ನಂತರ, ಈ ವರ್ಷದ ಮಧ್ಯಭಾಗದಲ್ಲಿ ದರ್ಶನ್‌ಗೆ ಷರತ್ತುಬದ್ಧ ಜಾಮೀನು ಸಿಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Read Full Story
12:46 PM (IST) Feb 13

Karnataka Liveಹೊಸಕೋಟೆ ಭೀಕರ ದುರಂತ - ಎಲ್ಲಾ ಏರ್‌ಬ್ಯಾಗ್ ಧ್ವಂಸ, ಕಾರು ಅದೆಷ್ಟು ವೇಗದಲ್ಲಿ ಇತ್ತು ಎಂಬುದಕ್ಕೆ ಸಾಕ್ಷಿ!

ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಕ್ಯಾಂಟರ್, ಬೈಕ್ ಮತ್ತು ಎಕ್ಸ್‌ಯುವಿ ಕಾರಿನ ನಡುವಿನ ಡಿಕ್ಕಿಯಿಂದಾಗಿ, ಕಾರಿನಲ್ಲಿದ್ದ ಆರು ಮಂದಿ ಹಾಗೂ ಬೈಕ್ ಸವಾರ ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Read Full Story
12:15 PM (IST) Feb 13

Karnataka Liveಚಿಕ್ಕಮಗಳೂರು - ಬಿರುಗಾಳಿಗೆ ಹಾರಿಹೋದ ಶಾಲೆಯ ಛಾವಣಿ ಹೆಂಚುಗಳು; ಇಬ್ಬರು ಮಕ್ಕಳಿಗೆ ಗಾಯ, ತಪ್ಪಿದ ಭಾರೀ ಅನಾಹುತ!

ಚಿಕ್ಕಮಗಳೂರು ತಾಲೂಕಿನ ಬೆಳವಾಡಿ ಗ್ರಾಮದ ಸರ್ಕಾರಿ ಶಾಲೆಯ ಮೇಲ್ಛಾವಣಿ ಭೀಕರ ಬಿರುಗಾಳಿಗೆ ಹಾರಿಹೋಗಿದೆ. ಊಟದ ಸಮಯದಲ್ಲಿ ಘಟನೆ ನಡೆದಿದ್ದರಿಂದ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಇಬ್ಬರು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read Full Story
12:10 PM (IST) Feb 13

Karnataka Liveಆರ್‌ಎಸ್‌ಎಸ್‌ಗೆ ಬೌದ್ಧಿಕ ನೆಲಗಟ್ಟು ಕೊಟ್ಟ ಗುರೂಜಿ

ಹಿಂದೂ ಸಮಾಜದ ಜಾತೀಯತೆ, ಅಸ್ಪೃಶ್ಯತೆಯ ವಿಷಜಾಲ ಭೇದಿಸುವ ತಂತ್ರ ಹೇಳಿದ ಆರ್‌ಎಸ್‌ಎಸ್‌ ಸರಸಂಘಚಾಲಕ

ಯಾವುದೋ ಕಾಲಘಟ್ಟದಲ್ಲಿ ಹಿಂದೂ ಸಮಾಜದ ಭಾಗವಾಗಿರುವ ಜಾತಿ, ಅಸ್ಪೃಶ್ಯತೆಯಂತಹ ಅನಿಷ್ಟ ಪದ್ಧತಿಯನ್ನು ತೊಲಗಿಸಲು ಪ್ರತಿಯೊಬ್ಬ ಇಂದು ಸಂಕಲ್ಪ ಮಾಡಬೇಕೆಂಬ ಸಂದೇಶ ನೀಡಿದ್ದರು.

Read Full Story
12:04 PM (IST) Feb 13

Karnataka Liveಶ್ರೀರಾಮನ ಜನ್ಮನಕ್ಷತ್ರದಲ್ಲಿ ಹುಟ್ಟಿದ ಅವಳಿ ಮಕ್ಕಳಿಗೆ ಅರ್ಥಪೂರ್ಣ ಹೆಸರಿಟ್ಟ ರಾಮ್‌ ಚರಣ್‌ ತೇಜ, ಉಪಾಸನಾ!

Actor Ram Charan Teja And Upasana Konidela Babies: ಮೆಗಾಸ್ಟಾರ್‌ ಚಿರಂಜೀವಿ ಆಸೆಯಂತೆ ಅವರ ಮನೆಗೆ ವಾರಸುದಾರ ಬಂದಿದ್ದಾನೆ. ರಾಮ್‌ ಚರಣ್‌ ತೇಜ ಹಾಗೂ ಉಪಾಸನಾ ದಂಪತಿಯು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಈಗ ಈ ಮಕ್ಕಳಿಗೆ ನಾಮಕರಣ ಆಗಿದೆಯಂತೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

Read Full Story
11:29 AM (IST) Feb 13

Karnataka Liveಹೊಸಕೋಟೆ ಭೀಕರ ಅಪಘಾತ - 7 ಮಂದಿ ಮೃತರ ಗುರುತು ಪತ್ತೆ, ಸಾವನ್ನಪ್ಪಿದವರು 17 ವರ್ಷದ ವಿದ್ಯಾರ್ಥಿಗಳು!

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಬಳಿ ಶುಕ್ರವಾರ ನಡೆದ ಭೀಕರ ಸರಣಿ ರಸ್ತೆ ಅಪಘಾತದಲ್ಲಿ ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕ್ಯಾಂಟರ್, ಬೈಕ್ ಮತ್ತು ಎಕ್ಸ್‌ಯುವಿ ಕಾರಿನ ನಡುವೆ ನಡೆದ ಈ ದುರಂತದಲ್ಲಿ ಮೃತಪಟ್ಟವರಲ್ಲಿ ಆರು ವಿದ್ಯಾರ್ಥಿಗಳು ಮತ್ತು ಓರ್ವ ಬೈಕ್ ಸವಾರ ಸೇರಿದ್ದಾರೆ.
Read Full Story
11:27 AM (IST) Feb 13

Karnataka Liveಪಾರ್ವತಮ್ಮ ರಾಜ್‌ಮಾರ್ ತಂಗಿ ಪುತ್ರ ಸಂತೋಷ್ ಕುಮಾರ್ Yuva Sarkar Movie ಸೇರ್ಕೊಂಡ ಬಿಗ್‌ ಬಾಸ್‌ ಜಾಹ್ನವಿ

ವೀರೆನ್ ಕೇಶವ್, ಧರ್ಮ ಕೀರ್ತಿರಾಜ್, ಜಾಹ್ನವಿ ನಟನೆಯ ಯುವ ಸರ್ಕಾರ್‌ ಸಿನಿಮಾದ ಸುದ್ದಿಗೋಷ್ಠಿ ನಡೆದಿದೆ. ಈ ಬಗ್ಗೆ ಸಿನಿಮಾ ತಂಡವು ಮಾಧ್ಯಮದ ಮುಂದೆ ಬಂದು, ಮಾತನಾಡಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Read Full Story
11:11 AM (IST) Feb 13

Karnataka LiveWorld Radio Day 2026 ರೇಡಿಯೋ, ಶ್ರವಣೇಂದ್ರಿಯ ಮಾಧ್ಯಮಕ್ಕೆ ಎಐ ಸವಾಲು! ಭಾವನಾತ್ಮಕ ಸಂಪರ್ಕಕ್ಕೆ ನಿರೂಪಕನೇ ಬೆಸ್ಟ್‌

ವಿಶ್ವ ಬಾನುಲಿ ದಿನದ ಅಂಗವಾಗಿ, ಈ ಲೇಖನವು ರೇಡಿಯೋ ಮಾಧ್ಯಮದ ಮೇಲೆ ಕೃತಕ ಬುದ್ಧಿಮತ್ತೆಯ (AI) ಪ್ರಭಾವವನ್ನು ಪರಿಶೀಲಿಸುತ್ತದೆ. AI ತಂತ್ರಜ್ಞಾನವು ಕಾರ್ಯಕ್ರಮ ನಿರ್ಮಾಣ, ವೈಯಕ್ತೀಕರಣ ಮತ್ತು ಭಾಷಾಂತರದಲ್ಲಿ ಕ್ರಾಂತಿಯನ್ನು ತರುತ್ತಿದ್ರೂ ಮಾನವ ಉದ್ಯೋಗ ಮತ್ತು ಭಾವನಾತ್ಮಕ ಸ್ಪರ್ಶದ ಬಗ್ಗೆ ಕಳವಳಗಳಿವೆ.

Read Full Story
10:49 AM (IST) Feb 13

Karnataka Liveಫೂಟ್‌ಬಾತ್‌ನಲ್ಲಿ ಬಂದ ವ್ಯಕ್ತಿಗೆ ಸೆಟೆದು ನಿಂತು ಗ್ರಹಚಾರ ಬಿಡಿಸಿದ ಅಜ್ಜಿ; ಭೇಷ್‌ ಎಂದ ನಟಿ ಸುಹಾಸಿನಿ!

Grandma Video: ಪುರುಷನೋರ್ವ ಫೂಟ್‌ಬಾತ್‌ನಲ್ಲಿ ಸ್ಕೂಟಿಯಲ್ಲಿ ಬಂದಿದ್ದನು. ಇದನ್ನು ವೃದ್ಧೆಯೋರ್ವರು ತಡೆದಿದ್ದಾರೆ. ನಿಯಮ ಉಲ್ಲಂಘನೆ ಮಾಡಿದ ಪುರುಷನಿಗೆ ವೃದ್ಧೆ ಬುದ್ಧಿ ಕಲಿಸಿದ್ದಾರೆ.

Read Full Story
10:45 AM (IST) Feb 13

Karnataka Liveಚಿನ್ನ ಬೆಳ್ಳಿ ಖರೀದಿಸುವವರಿಗೆ ಶುಭ ಶುಕ್ರವಾರ; ಮಹಾ ಕುಸಿತ ಕಂಡ ಬಂಗಾರದ ಬೆಲೆ! ಇಂದಿನ ಚಿನ್ನದ ರೇಟ್ ಎಷ್ಟು?

ಬೆಂಗಳೂರು: ಚಿನ್ನ ಬೆಳ್ಳಿ ಖರೀದಿಸುವವರ ಪಾಲಿಗೆ ಇಂದು ಶುಭ ಶುಕ್ರವಾಗಿ ಪರಿಣಮಿಸಿದ್ದು, ಇಂದು ಚಿನ್ನ ಹಾಗೂ ಬೆಳ್ಳಿ ಬೆಲೆಯಲ್ಲಿ ಭರ್ಜರಿ ಕುಸಿತ ಕಂಡಿದೆ. ಫೆಬ್ರವರಿ 14ರ ಶುಕ್ರವಾರ ಬೆಳ್ಳಂಬೆಳಗ್ಗೆ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ನೋಡೋಣ ಬನ್ನಿ.

Read Full Story
10:16 AM (IST) Feb 13

Karnataka Liveಹಗಲಲ್ಲಿ ಚಿರತೆ ಭಯ, ರಾತ್ರಿಯಲ್ಲಿ ಕರಡಿ ಕಾಟ - ಕೊಪ್ಪಳ ಜಿಲ್ಲೆಯಲ್ಲಿ ವನ್ಯಜೀವಿಗಳ ಆರ್ಭಟಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು.

ಕೊಪ್ಪಳ ಜಿಲ್ಲೆಯ ಕುಷ್ಟಗಿ ಮತ್ತು ಕನಕಗಿರಿ ತಾಲೂಕುಗಳಲ್ಲಿ ಚಿರತೆ ಹಾಗೂ ಕರಡಿಗಳ ಹಾವಳಿ ಹೆಚ್ಚಾಗಿದ್ದು, ಜನವಸತಿ ಪ್ರದೇಶಗಳಲ್ಲಿ ಆತಂಕ ಸೃಷ್ಟಿಸಿದೆ. ಚಿರತೆಯೊಂದು ಕಾಡುಹಂದಿಯನ್ನು ಬಲಿ ಪಡೆದರೆ, ಆಹಾರ ಅರಸಿ ಕರಡಿಯೊಂದು ಗ್ರಾಮಕ್ಕೆ ನುಗ್ಗಿದ್ದು, ಅರಣ್ಯ ಇಲಾಖೆ ಜನರಿಗೆ ಎಚ್ಚರಿಕೆ ನೀಡಿದೆ.
Read Full Story
10:07 AM (IST) Feb 13

Karnataka Liveಇದು ವಿಶ್ವದ ದುಬಾರಿ ಅಣಬೆ, ಕೆಜಿಗೆ ಬರೋಬ್ಬರಿ ₹ 15 ಲಕ್ಷ!

ಇದು, ಅಂತಿಂಥ ಅಣಬೆಯಲ್ಲ, ಜಗತ್ತಿನ ದುಬಾರಿ ಅಣಬೆಯಾಗಿದೆ. ಯರ್ಸಗುಂಬಾ (yarsagumba) ಎಂದು ಕರೆಯಲ್ಪಡುವ ಈ ಅಣಬೆ ಕೆಜಿಗೆ ಬರೋಬ್ಬರಿ ₹15 ಲಕ್ಷ! ಕೊಪ್ಪಳ ನಗರದ ತೋಟಗಾರಿಕಾ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿರುವ ಹಣ್ಣು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಇಡಲಾಗಿದ್ದು, ಜನರ ಗಮನ ಸೆಳೆಯುತ್ತಿದೆ.

Read Full Story
09:02 AM (IST) Feb 13

Karnataka LiveByrathi Basavaraj ಬಿಕ್ಲು ಶಿವ ಹತ್ಯೆ ಪ್ರಕರಣ - ರಾತ್ರೋರಾತ್ರಿ ಅರೆಸ್ಟ್ ಪ್ರೊಸೆಸ್ ಕಂಪ್ಲೀಟ್; ಇಂದು ಕೋರ್ಟ್‌ಗೆ ಹಾಜರು!

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಬೈರತಿ ಬಸವರಾಜ್ ಅವರನ್ನು ಸಿಐಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಯ ಪ್ರಮುಖ ಆರೋಪಿ ಜಗ್ಗನೊಂದಿಗೆ ನಿಕಟ ಸಂಪರ್ಕ, ಜಮೀನು ವೈಷಮ್ಯ, ಮತ್ತು ಫೋನ್ ಕರೆಗಳಂತಹ ಸಾಕ್ಷ್ಯಗಳ ಆಧಾರದ ಮೇಲೆ ಅವರ ವಿರುದ್ಧ ತನಿಖೆ ನಡೆಯುತ್ತಿದೆ.
Read Full Story
08:34 AM (IST) Feb 13

Karnataka LiveHampi Utsav 2026 - ಮೂರು ದಿನಗಳ ಹಂಪಿ ಉತ್ಸವಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಚಾಲನೆ;

ವಿಶ್ವಪರಂಪರೆ ತಾಣ ಹಂಪಿಯು ಮೂರು ದಿನಗಳ ಉತ್ಸವಕ್ಕೆ ಸಜ್ಜಾಗಿದ್ದು, ವಿಜಯನಗರ ಸಾಮ್ರಾಜ್ಯದ ಭವ್ಯ ಪರಂಪರೆಯನ್ನು ಸ್ಮರಿಸಲಿದೆ. ಕಲೆ, ಸಾಹಿತ್ಯ, ಸಂಗೀತದ ಈ ಮಹಾಸಂಗಮದಲ್ಲಿ ಖ್ಯಾತ ತಾರೆಯರ ಮನರಂಜನೆ, ಧ್ವನಿ ಮತ್ತು ಬೆಳಕು ಪ್ರದರ್ಶನ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.
Read Full Story
08:21 AM (IST) Feb 13

Karnataka LiveHebbal-Sarjapur metro line - ಬೆಂಗಳೂರು ಡಬಲ್ ಡೆಕ್ಕರ್ ಪ್ಲಾನ್‌ಗೆ ರೆಡ್ ಸಿಗ್ನಲ್!

ಹೆಬ್ಬಾಳ-ಸರ್ಜಾಪುರ ಸಂಪರ್ಕಿಸುವ ನಮ್ಮ ಮೆಟ್ರೋದ ಕೆಂಪು ಮಾರ್ಗದ ಡಬಲ್‌ ಡೆಕ್ಕರ್‌ ವಿನ್ಯಾಸಕ್ಕೆ ಕೇಂದ್ರ ಸರ್ಕಾರ ಎರಡನೇ ಬಾರಿಗೆ ಆಕ್ಷೇಪ ವ್ಯಕ್ತಪಡಿಸಿದೆ. ಈ ವಿನ್ಯಾಸವು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ದುರ್ಬಲಗೊಳಿಸಬಹುದು ಎಂದು ಕೇಂದ್ರ ಆತಂಕ ವ್ಯಕ್ತಪಡಿಸಿದೆ.

Read Full Story