Jio discontinued plan : ಜಿಯೋ ತನ್ನ ಗ್ರಾಹಕರಿಗೆ ಮತ್ತೊಮ್ಮೆ ನಿರಾಸೆಗೊಳಿಸಿದೆ. ತನ್ನ ಅಗ್ಗದ ಪ್ಲಾನ್ ಒಂದನ್ನು ಜಿಯೋ ಸ್ಥಗಿತಗೊಳಿಸಿದೆ. ಆ ಪ್ಲಾನ್ ಯಾವ್ದು, ಅದ್ರ ಬದಲು ಗ್ರಾಹಕರು ಯಾವ ಪ್ಲಾನ್ ಖರೀದಿಸಬಹುದು ಎಂಬ ಮಾಹಿತಿ ಇಲ್ಲಿದೆ.
ಅಗ್ಗದ ಪ್ಲಾನ್ ನೀಡಿ ಕೋಟ್ಯಾಂತರ ಗ್ರಾಹಕರನ್ನು ತನ್ನತ್ತ ಸೆಳೆದುಕೊಂಡಿದ್ದ ಜಿಯೋ (Jio) ಈಗ ಗ್ರಾಹಕರಿಗೆ ಒಂದಾದ್ಮೇಲೆ ಒಂದರಂತೆ ಶಾಕ್ ನೀಡ್ತಿದೆ. ಜಿಯೋ ಪ್ಲಾನ್ಸ್ ಶೀಘ್ರವೇ ದುಬಾರಿಯಾಗಲಿದೆ ಎನ್ನುವ ಸುದ್ದಿ ಬೆನ್ನಲ್ಲೆ, ಜಿಯೋ ಅಗ್ಗದ ಪ್ಲಾನ್ ಗಳನ್ನು ಸ್ಥಗಿತಗೊಳಿಸ್ತಿದೆ. ಕೆಲ ದಿನಗಳ ಹಿಂದೆ ಜಿಯೋ 1GB ದೈನಂದಿನ ಡೇಟಾದ ತನ್ನ ಆರಂಭಿಕ ಹಂತದ ಪ್ರಿಪೇಯ್ಡ್ ಪ್ಲಾನ್ ಸ್ಥಗಿತಗೊಳಿಸಿತ್ತು. ಈಗ ಕಂಪನಿ ಮತ್ತೊಂದು ಪ್ಲಾನ್ ಸ್ಥಗಿತಗೊಳಿಸಿದೆ.
ಜಿಯೋದ ಈ ಅಗ್ಗದ ಪ್ಲಾನ್ ಬಂದ್ : ಜಿಯೋ 799 ರೂಪಾಯಿ ಪ್ಲಾನ್ ಸ್ಥಗಿತಗೊಂಡಿದೆ. ಜಿಯೋ ಈ ಪ್ಲಾನ್ ನಲ್ಲಿ ಪ್ರತಿ ದಿನ ಗ್ರಾಹಕರಿಗೆ 1.5GB ಡೇಟಾ ನೀಡ್ತಿತ್ತು. ಈ ಯೋಜನೆ 84 ದಿನಗಳ ವ್ಯಾಲಿಡಿಟಿ ಹೊಂದಿತ್ತು. ಇದಲ್ದೆ ಈ ಪ್ಲಾನ್ ನಲ್ಲಿ ಪ್ರತಿದಿನ ಅನಿಯಮಿತ ಕರೆ ಮತ್ತು 100 ಉಚಿತ ಎಸ್ ಎಂಎಸ್ ( SMS) ಸೌಲಭ್ಯ ಗ್ರಾಹಕರಿಗೆ ಸಿಗ್ತಿತ್ತು. ಈ ಪ್ಲಾನ್ ಗೆ ರಿಚಾರ್ಜ್ ಮಾಡಿದ ಗ್ರಾಹಕರು JioSaavn Pro ನ ಉಚಿತ ಸಬ್ಸ್ಕ್ರೈಬ್ ಪಡೆಯುತ್ತಿದ್ದರು.
ಜಿಯೋದ ಈ ಪ್ಲಾನನ್ನು ಕಂಪನಿಯ ಅಧಿಕೃತ ವೆಬ್ಸೈಟ್ನಿಂದ ತೆಗೆದುಹಾಕಲಾಗಿದೆ. 1.5GB ದೈನಂದಿನ ಡೇಟಾ ಹೊಂದಿರುವ ಪ್ಲಾನ್ ಪಟ್ಟಿಯಲ್ಲಿ ಈ ಯೋಜನೆ ನಿಮಗೆ ಲಭ್ಯವಿಲ್ಲ. ನಿಮಗೆ ಪ್ರತಿ ದಿನ 1.5 ಜಿಬಿ ಡೇಟಾ ಬೇಕು ಎಂದಾದ್ರೆ ನೀವು ಹೆಚ್ಚುವರಿ ಹಣ ಪಾವತಿ ಮಾಡ್ಬೇಕು. ದೀರ್ಘಾವಧಿಯ ಮಾನ್ಯತೆಯೊಂದಿಗೆ ಪ್ರತಿದಿನ 1.5GB ದೈನಂದಿನ ಡೇಟಾ ಪಡೆಯಲು ನೀವು 889 ರೂಪಾಯಿ ಪ್ಲಾನ್ ಖರೀದಿ ಮಾಡ್ಬೇಕು. ಜಿಯೋದಲ್ಲಿ 889 ರೂಪಾಯಿಗಿಂತ ಕಡಿಮೆ ಬೆಲೆಯ ಪ್ಲಾನ್ ಇದೆ. ನೀವು 666 ರೂಪಾಯಿ ಪ್ಲಾನ್ ಖರೀದಿ ಮಾಡ್ಬಹುದು. ಆದ್ರೆ ಇದ್ರ ವ್ಯಾಲಿಡಿಟಿ ಕಡಿಮೆ. ಹೆಚ್ಚಿನ ಡೇಟಾ ಹಾಗೂ ವ್ಯಾಲಿಡಿಟಿಗೆ ನೀವು 889 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಹಣದ ಪ್ಲಾನ್ ಖರೀದಿ ಮಾಡೋದು ಅನಿವಾರ್ಯವಾಗಿದೆ.
889 ರೂ. ಪ್ಲಾನ್ ನಲ್ಲಿ ಏನೆಲ್ಲ ಸಿಗುತ್ತೆ? : 1.5 ಜಿಬಿ ಡೇಟಾ ನಿಮಗೆ ಈ ಪ್ಲಾನ್ ನಲ್ಲಿ ಸಿಗಲಿದೆ. ಅನಿಯಮಿತ ಕರೆ ಮತ್ತು ದಿನಕ್ಕೆ 100 ಉಚಿತ SMS ಈ ಪ್ಲಾನ್ ನಲ್ಲಿ ಸಿಗಲಿದೆ. ಇದರ ವ್ಯಾಲಿಡಿಟಿ 84 ದಿನಗಳು. ಈ ಯೋಜನೆಯಲ್ಲೂ ನೀವು JioSaavn Pro ಉಚಿತ ಸಬ್ಸ್ಕ್ರೈಬ್ ಸೌಲಭ್ಯ ಪಡೆಯುತ್ತೀರಿ. ಇದ್ರ ಜೊತೆ JioHotstar ನ ಉಚಿತ ಸಬ್ಸ್ಕ್ರೈಬ್ ನಿಮಗೆ ಲಭ್ಯವಾಗಲಿದೆ.
666 ರೂ. ಯೋಜನೆಯಲ್ಲಿ ಏನೆಲ್ಲ ಸಿಗಲಿದೆ? : ನೀವು ಜಿಯೋದ 666 ರೂಪಾಯಿ ಪ್ಲಾನ್ ರಿಚಾರ್ಜ್ ಮಾಡ್ತೀರಿ ಎಂದಾದ್ರೆ ನಿಮಗೆ ಈ ಪ್ಲಾನ್ ನಲ್ಲಿ 1.5 ಜಿಬಿ ಡೇಟಾ ಸಿಗಲಿದೆ. ಆದ್ರೆ ಈ ಪ್ಲಾನ್ ವ್ಯಾಲಿಡಿಟಿ 70 ದಿನಗಳವರೆಗೆ ಮಾತ್ರ ಇರಲಿದೆ. ಇದರಲ್ಲಿ ಅನಿಯಮಿತ ಕರೆ ಮತ್ತು 100 ಉಚಿತ SMS ಗಳನ್ನು ಸಹ ನೀಡಲಾಗುತ್ತದೆ. ಇದರಲ್ಲಿ JioHotstar ನ ಉಚಿತ ಸಬ್ಸ್ಕ್ರೈಬ್ ಲಭ್ಯವಿದೆ. 1.5 ಜಿಬಿ ಡೇಟಾ ಪ್ಲಾನ್ ಬಯಸುವ ಗ್ರಾಹಕರಿಗೆ ಜಿಯೋದಲ್ಲಿ ಇನ್ನಷ್ಟು ಪ್ಲಾನ್ ಲಭ್ಯವಿದೆ. ಆದ್ರೆ ಅದ್ರ ಬೆಲೆ ಹೆಚ್ಚು. ಜಿಯೋ ನಂತ್ರ ಏರ್ಟೆಲ್ ಮತ್ತು ವೊಡಾಫೋನ್ ಐಡಿಯಾ ಕೂಡ ತಮ್ಮ ಪ್ಲಾನ್ ಗಳನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ.


