ಮರಣದಂಡಣೆ ಶಿಕ್ಷೆಗೆ ಒಳಗಾಗಿರುವ ಕೈದಿಗಳನ್ನು ನೇಣುಗೇರಿಸುವ ಕೆಲಸ ಮಾಡಿಕೊಂಡಿರುವ ನಾಯಕ ಮಾದೇವನ ಜೀವಕ್ಕೆ ನಾಯಕಿ ಪಾರ್ವತಿ ಪ್ರವೇಶಿಸುತ್ತಾಳೆ.
ಆರ್.ಕೇಶವಮೂರ್ತಿ
ಮಾಸ್ ಜತೆಗೆ ಸೆಂಟಿಮೆಂಟ್ಗೆ ಹೆಚ್ಚು ಮಹತ್ವ ನೀಡಿರುವುದು ವಿನೋದ್ ಪ್ರಭಾಕರ್ ಮಾದೇವದ ಹೊಸತನ. ತಾಯಿ ಸೆಂಟಿಮೆಂಟು, ಪ್ರೀತಿಸಿ ಮದುವೆ ಆದವಳ ಸೆಂಟಿಮೆಂಟು, ಈ ನಡುವೆ ನಾಯಕನ ಬಾಲ್ಯದ ಸೆಂಟಿಮೆಂಟು.... ಇವಿಷ್ಟೂ ಭಾವನಾತ್ಮಕ ವಿಚಾರಗಳು ಸೇರಿಕೊಂಡು ಒಬ್ಬ ವ್ಯಕ್ತಿಯನ್ನು ಕಲ್ಲಾಗಿಸಿದ್ದು ಹೇಗೆ ಎಂಬುದಕ್ಕೆ ಈ ಚಿತ್ರ ನೋಡಬೇಕು.
ಹಸಿವು, ಅಸಹಾಯಕತೆಯನ್ನು ಬಾಲ್ಯದಿಂದಲೇ ಅನುಭವಿಸಿರುವ ನಾಯಕ. ಮರಣದಂಡಣೆ ಶಿಕ್ಷೆಗೆ ಒಳಗಾಗಿರುವ ಕೈದಿಗಳನ್ನು ನೇಣುಗೇರಿಸುವ ಕೆಲಸ ಮಾಡಿಕೊಂಡಿರುವ ನಾಯಕ ಮಾದೇವನ ಜೀವಕ್ಕೆ ನಾಯಕಿ ಪಾರ್ವತಿ ಪ್ರವೇಶಿಸುತ್ತಾಳೆ. ಆಕೆಯ ತಾಯಿ ಕೂಡ ಕೈದಿಯಾಗಿ ಜೈಲಿನಲ್ಲಿದ್ದಾಳೆ. ಈಗ ಸಂಬಂಧಗಳು, ಪ್ರೀತಿ, ಸ್ನೇಹ ಇತ್ಯಾದಿಗಳನ್ನು ಕಂಡರೆ ಆಗದ ಮಾದೇವನ ಬದುಕಿನಲ್ಲಿ ಏನೆಲ್ಲ ಘಟನೆಗಳು ಸಂಭವಿಸುತ್ತವೆ ಎಂಬುದನ್ನು ಒಂದೊಂದಾಗಿ ಹೇಳುತ್ತಾ ಹೋಗುತ್ತಾರೆ ನಿರ್ದೇಶಕ ನವೀನ್ ರೆಡ್ಡಿ.
ಚಿತ್ರ: ಮಾದೇವ
ತಾರಾಗಣ: ವಿನೋದ್ ಪ್ರಭಾಕರ್, ಸೋನಾಲ್ ಮಾಂಥೆರೋ, ಶ್ರುತಿ, ಅಚ್ಯುತ್ ಕುಮಾರ್, ಶ್ರೀನಗರ ಕಿಟ್ಟಿ, ಬಲರಾಜವಾಡಿ
ನಿರ್ದೇಶನ: ನವೀನ್ ರೆಡ್ಡಿ
ರೇಟಿಂಗ್ : 3
ಈ ಕತೆಯನ್ನು ಮತ್ತಷ್ಟು ಗಾಢವಾಗಿ ಹೇಳುವ ಅವಕಾಶ ಇತ್ತು. ಕತೆಯಲ್ಲಿ ಸಾಹಸಕ್ಕೆ ಪ್ರಮುಖ ಸ್ಥಾನ. ತಣ್ಣನೆಯ ಕೌರ್ಯದ ಪ್ರತೀಕವಾಗಿ ಶ್ರುತಿ ಅವರು ಹೆಚ್ಚಿನ ಸ್ಕ್ರೋರ್ ಮಾಡುತ್ತಾರೆ. ಖಳನಾಯಕನಾಗಿ ಕಾಣಿಸಿಕೊಂಡಿರುವ ಶ್ರೀನಟಗರ ಕಿಟ್ಟಿ ಅವರಿಗೆ ನಟನೆಯ ಮತ್ತೊಂದು ದಾರಿ ತೆರೆದಿಟ್ಟಿದೆ.


