ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆ 'ಆಪರೇಷನ್ ಸಿಂದೂರ್' ಮೂಲಕ ಪಾಕಿಸ್ತಾನದ ಒಂಬತ್ತು ಉಗ್ರ ನೆಲೆಗಳನ್ನು ನಾಶಗೊಳಿಸಿದೆ. ಹಲವು ಉಗ್ರರು ಹತರಾಗಿದ್ದಾರೆ. ದೇಶಾದ್ಯಂತ ಸೇನೆಯ ಕ್ರಮಕ್ಕೆ ಬೆಂಬಲ ವ್ಯಕ್ತವಾಗಿದ್ದು, ಚಿತ್ರನಟರು ಸಾಮಾಜಿಕ ಜಾಲತಾಣಗಳಲ್ಲಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಮಿತಾಭ್ ಬಚ್ಚನ್ ಮಾತ್ರ ಅಸ್ಪಷ್ಟ ಪೋಸ್ಟ್‌ಗೆ ಟೀಕೆಗೊಳಗಾಗಿದ್ದಾರೆ.
2025 ಮೇ 7 ರ ಬೆಳಗ್ಗೆ ಭಾರತೀಯ ವಾಯುಪಡೆ ಪಾಕಿಸ್ತಾನದ ಮೇಲೆ ವಾಯುದಾಳಿ ನಡೆಸಿ ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದೆ. ಏಪ್ರಿಲ್ 22 ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಈ ಕಾರ್ಯಾಚರಣೆ ನಡೆಸಲಾಯಿತು. ಇದರಲ್ಲಿ ಭಾರತೀಯ ಅಮಾಯಕ 26 ಪ್ರವಾಸಿಗರನ್ನು ಕ್ರೂರವಾಗಿ ಹತ್ಯೆ ಮಾಡಲಾಗಿತ್ತು. ಇದಕ್ಕೀಗ ಭಾರತ ತಕ್ಕ ಉತ್ತರ ಕೊಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಈ ಕಾರ್ಯಾಚರಣೆಗೆ ʼಆಪರೇಷನ್ ಸಿಂಧೂರʼ ಎಂದು ಹೆಸರಿಟ್ಟಿದ್ದಾರೆ. ಸೇನೆಯ ಈ ಕ್ರಮವನ್ನು ಇಡೀ ದೇಶವು ಆಚರಿಸುತ್ತಿದೆ. ಕೇವಲ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡು ಅತ್ಯಂತ ನಿಖರತೆಯಿಂದ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಭಾರತೀಯ ಸೇನೆ ಘೋಷಿಸಿದೆ. ಈ ಮಿಂಚಿನ ದಾಳಿಯಿಂದ ಉಗ್ರರು ತತ್ತರಿಸಿದ್ದಾರೆ. ಹಲವಾರು ಉಗ್ರರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 9 ಸ್ಥಳಗಳಲ್ಲಿ ಉಗ್ರರ ನೆಲೆಗಳ ಮೇಲೆ ಭಾರತೀಯ ವಾಯುಪಡೆ ದಾಳಿ ನಡೆಸಿದೆ. ದಕ್ಷಿಣ ಭಾರತ ಸೇರಿದಂತೆ ಬಾಲಿವುಡ್ ಸೆಲೆಬ್ರಿಟಿಗಳು ಸಹ ಇದರ ಬಗ್ಗೆ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ಈ ಮಧ್ಯೆ, ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಪೋಸ್ಟ್‌ಗಾಗಿ ಟೀಕೆಗೆ ಗುರಿಯಾಗಿದ್ದಾರೆ.
ಅಮಿತಾಭ್ ಬಚ್ಚನ್ ತಮ್ಮ ಪೋಸ್ಟ್‌ನಲ್ಲಿ ಏನು ಬರೆದಿದ್ದಾರೆ?
ವಾಸ್ತವವಾಗಿ, ಅಮಿತಾಭ್ ಬಚ್ಚನ್ ತಡರಾತ್ರಿ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಕೇವಲ ಸಂಖ್ಯೆಯನ್ನು ಹಾಕಿದ್ದಾರೆ, ಆದರೆ ಅದರ ಮುಂದೆ ಏನನ್ನೂ ಬರೆದಿಲ್ಲ. ಅಮಿತಾಭ್ ಅವರ ಪೋಸ್ಟ್ "T 5371 -" ಬಿಗ್ ಬಿ ಅವರ ಈ ಪೋಸ್ಟ್ ಅನ್ನು ಜನರು ಆಪರೇಷನ್ ಸಿಂಧೂರದ ಬಗ್ಗೆ ಅವರ ಪ್ರತಿಕ್ರಿಯೆ ಎಂದು ನೋಡುತ್ತಿದ್ದಾರೆ ಮತ್ತು ಅವರನ್ನು ಟೀಕಿಸುತ್ತಿದ್ದಾರೆ.
ಆಪರೇಷನ್ ಸಿಂಧೂರ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಏನು ಹೇಳಿದರು
ಆಪರೇಷನ್ ಸಿಂಧೂರ ಬಗ್ಗೆ ರಿತೇಶ್ ದೇಶಮುಖ್ ಅವರು, “ಜೈ ಹಿಂದ್ ಕಿ ಸೇನಾ... ಭಾರತ ಮಾತಾ ಕಿ ಜೈ, #OperationSindoor” ಎಂದು ಬರೆದಿದ್ದಾರೆ.
ಸೋನು ನಿಗಮ್ ಕೂಡ ಆಪರೇಷನ್ ಸಿಂಧೂರ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. “ಮನೆಯೊಳಗೆ ನುಗ್ಗಿ ಹೊಡೆದಿದ್ದೇವೆ, ನಿಮ್ಮ ಸಮಾಧಿ ತೋಡಿದ್ದೇವೆ, ಭಾರತದ ಸಿಂಹಾಸನದ ಮೇಲೆ ಕುಳಿತವನು ನಿಮ್ಮ ತಂದೆ ಮೋದಿ. ಅರ್ಥವಾಯಿತೇ ಮಗನೇ ಪಾಕಿಸ್ತಾನ #OperationSindoor.
ನಿರ್ದೇಶಕ ಮಧುರ್ ಭಂಡಾರ್ಕರ್ ಈ ದಾಳಿಯ ಬಗ್ಗೆ ಪ್ರತಿಕ್ರಿಯಿಸುತ್ತಾ “ನಮ್ಮ ಪ್ರಾರ್ಥನೆಗಳು ನಮ್ಮ ಸೇನೆಯೊಂದಿಗೆ ಇವೆ. ಒಂದು ರಾಷ್ಟ್ರವಾಗಿ ನಾವೆಲ್ಲರೂ ಒಟ್ಟಾಗಿ ನಿಂತಿದ್ದೇವೆ. ಜೈ ಹಿಂದ್, ವಂದೇ ಮಾತರಂ” ಎಂದು ಹೇಳಿದ್ದಾರೆ.
ನಿಮ್ರತ್ ಕೌರ್ ಕೂಡ “ ನಮ್ಮ ಸೇನೆಯೊಂದಿಗೆ ಒಗ್ಗಟ್ಟು. ಒಂದು ದೇಶ. ಒಂದು ಧ್ಯೇಯ. ಜೈ ಹಿಂದ್, ಆಪರೇಷನ್ ಸಿಂಧೂರ” ಎಂದಿದ್ದಾರೆ.
ರವಿ ಕಿಶನ್ ಅವರು, “ಜೈ ಹಿಂದ್, ಜೈ ಹಿಂದ್ ಕಿ ಸೇನಾ. ಭಾರತ್ ಮಾತಾ ಕಿ ಜೈ” ಎಂದಿದ್ದಾರೆ.
ದೇವೊಲೀನಾ ಭಟ್ಟಾಚಾರ್ಜಿ, ಮನೋಜ್ ತಿವಾರಿ, ಕಮಾಲ್ ಆರ್ ಖಾನ್, ರಿತೇಶ್ ಪಾಂಡೆ, ಹೀನಾ ಖಾನ್, ಅಮಿತಾಭ್ ಬಚ್ಚನ್ ಮುಂತಾದವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ನಟ ಮಮ್ಮೂಟಿ ಅವರು, “ದೇಶಕ್ಕೆ ಹೆಮ್ಮೆಯ ವಿಷಯ. ಜೀವಗಳನ್ನು ಉಳಿಸಿದ್ದಕ್ಕೆ ಮತ್ತು ಭರವಸೆಯನ್ನು ಮರಳಿ ತಂದಿದ್ದಕ್ಕೆ ಧನ್ಯವಾದಗಳು” ಎಂದು ಮಮ್ಮೂಟಿ ಬರೆದಿದ್ದಾರೆ. “ನಮ್ಮ ನಿಜವಾದ ನಾಯಕರಿಗೆ ಸಲಾಂ! ರಾಷ್ಟ್ರ ಕರೆದಾಗ ಭಾರತೀಯ ಸೇನೆ ಉತ್ತರಿಸುತ್ತದೆ ಎಂದು ಆಪರೇಷನ್ ಸಿಂದೂರ್ ಮತ್ತೊಮ್ಮೆ ಸಾಬೀತುಪಡಿಸಿದೆ. ಜೀವಗಳನ್ನು ಉಳಿಸಿದ್ದಕ್ಕೆ ಮತ್ತು ಭರವಸೆಯನ್ನು ಮರಳಿ ತಂದಿದ್ದಕ್ಕೆ ಧನ್ಯವಾದಗಳು. ದೇಶಕ್ಕೆ ಹೆಮ್ಮೆಯ ವಿಷಯ. ಜೈ ಹಿಂದ್' ಎಂದು ಮಮ್ಮೂಟಿ ಬರೆದಿದ್ದಾರೆ.
ಜ್ಯೂನಿಯರ್ ಎನ್‌ಟಿಆರ್ ಅವರು, “ಭಾರತೀಯ ಸೇನೆಗೆ ಇನ್ನಷ್ಟು ಶಕ್ತಿ ದೊರೆಯಲಿ. ಅವರ ಕ್ಷೇಮಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. ಆಪರೇಷನ್ ಸಿಂಧೂರ.. ಜೈ ಹಿಂದ್” ಎಂದು ಹೇಳಿದ್ದಾರೆ.
“ಸಹಿಸಲು ಸಾಧ್ಯವಿಲ್ಲ” ಎಂದು ಸಾಯಿ ಧರಂ ತೇಜ್ ಅವರು ಪೋಸ್ಟ್ ಮಾಡಿದ್ದಾರೆ. “ಉಗ್ರವಾದವನ್ನು ಸಹಿಸಲು ಸಾಧ್ಯವಿಲ್ಲ” ಎಂದು ಅರ್ಥವಾಗುವಂತೆ ಸಾಯಿ ಧರಂ ತೇಜ್ ಪೋಸ್ಟ್ ಮಾಡಿದ್ದಾರೆ.
'ಯೋಧರ ಹೋರಾಟ ಆರಂಭವಾಗಿದೆ. ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೂ ಅವರನ್ನು ತಡೆಯಲು ಯಾರೂ ಇಲ್ಲ. ಇಡೀ ದೇಶ ನಿಮ್ಮೊಂದಿಗೆ ಇದೆ. ಆಪರೇಷನ್ ಸಿಂಧೂರ.. ಜೈ ಹಿಂದ್' ಎಂದು ಸೂಪರ್‌ಸ್ಟಾರ್ ರಜನಿಕಾಂತ್ ಟ್ವೀಟ್ ಮಾಡಿದ್ದಾರೆ.
ಆಪರೇಷನ್ ಸಿಂದೂರ್ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಸರಳವಾಗಿ ಜೈ ಹಿಂದ್ ಎಂದು ಪೋಸ್ಟ್ ಮಾಡಿದ ಚಿರಂಜೀವಿ ಪರೋಕ್ಷವಾಗಿ ಭಾರತೀಯ ಸೇನೆಯನ್ನು ಶ್ಲಾಘಿಸಿದ್ದಾರೆ.
ಪಹಲ್ಗಾಮ್ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಆಪರೇಷನ್ ಸಿಂದೂರ್ ಅನ್ನು ಯಶಸ್ವಿಯಾಗಿ ಕೈಗೊಂಡಿದೆ. ಭಾರತೀಯ ವಾಯುಪಡೆ ಮತ್ತು ಭಾರತೀಯ ಸೇನೆ ಒಟ್ಟಾಗಿ ಒಂಬತ್ತು ಉಗ್ರರ ನೆಲೆಗಳ ಮೇಲೆ ಮಿಂಚಿನ ದಾಳಿ ನಡೆಸಿ ನಾಶಪಡಿಸಿದವು. ಈ ದಾಳಿಯಲ್ಲಿ ಹಲವಾರು ಉಗ್ರರು ಹತರಾಗಿದ್ದಾರೆ ಎಂದು ವರದಿಯಾಗಿದೆ. ಇದರಿಂದಾಗಿ ಇಡೀ ದೇಶ ಭಾರತೀಯ ಸೇನೆಗೆ ಜೈಕಾರ ಹಾಕುತ್ತಿದೆ. ಪಹಲ್ಗಾಮ್ ದಾಳಿಗೆ ಇದು ಸೂಕ್ತ ಪ್ರತೀಕಾರ ಎಂದು ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ.


