ನಟಿ ರಶ್ಮಿಕಾ ಅವರು ತಮಗೆ ಅತ್ಯಂತ ನೋವಾದಾಗ, ಹಾರ್ಟ್ ಬ್ರೇಕಿಂಗ್ ಪರಿಸ್ಥಿತಿ ಇದ್ದಾಗ ತಾವು ಸುಮ್ಮನೇ ನಗುವುದಾಗಿ ಹೇಳಿಕೊಂಡಿದ್ದಾರೆ. ಆ ರಕ್ಷಣಾ ಮೆಕಾನಿಸಂ ಅನುಸರಿಸುವ ಮೂಲಕ ನಟಿ ರಶ್ಮಿಕಾ ಅವರು ತಮ್ಮ ಮನಸ್ಸಿಗೆ ಆಗಿರುವ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಾರಂತೆ. ಈ ಸ್ಟೋರಿ ನೋಡಿ.
ರಶ್ಮಿಕಾ ಮಂದಣ್ಣ ‘ಚುಮ್ಮಾ ಲಾಫಿಂಗ್’ ವೈರಲ್!
ನಟಿ, ಕನ್ನಡದತಿ ರಶ್ಮಿಕಾ ಮಂದಣ್ಣ (Rashmika Mandanna) ಮಾತನ್ನಾಡಿರುವ ಬಾಲಿವುಡ್ ಸಂದರ್ಶನವೊಂದು ಇದೀಗ ವೈರಲ್ ಅಗಿದೆ. ಅದರಲ್ಲಿ ರಶ್ಮಿಕಾ ಬಳಿಸಿರುವ ಆ ಒಂದು ಪದ ಹಿಂದಿ ಭಾಷಿಕರಿಗೆ ಅಪಾರ್ಥ ಆಗಿದೆ. ತಕ್ಷಣವೇ ಅದನ್ನು ಸರಿಪಡಿಸಿಕೊಂಡು ರಶ್ಮಿಕಾ ತಮ್ಮ ಆಂಗಲ್‌ನಿಂದ ಸರಿಯಾದ ಅರ್ಥ ಹೇಳಿದ್ದಾರೆ. ಹಾಗಿದ್ದರೆ ಅಲ್ಲಿ ಆಗಿದ್ದೇನು? ಹೇಳಿದ್ದೇನು ಅನ್ನೋದಕ್ಕೆ ಈ ಸ್ಟೋರಿ ನೋಡಿ..
'ಚುಮ್ಮಾ ಲಾಫಿಂಗ್'
'ನನಗೆ ತುಂಬಾ ದುಃಖ ಹಾಗೂ ತುಂಬಾ ತುಂಬಾ ಸಂಕಟ ಅನ್ನಿಸಿದಾಗ ನಾನು ಸುಮ್‌ಸುಮ್ನೆ ನಗ್ತೀನಿ.. ಅದು ನನ್ನ ಡಿಫೆನ್ಸ್ ಮೆಕ್ಯಾನಿಸಂ..' ಎಂದಿದ್ದಾರೆ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ. ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ಅವರು ಇತ್ತೀಚೆಗೆ ಬಾಲಿವುಡ್ ಸಂದರ್ಶನದಲ್ಲಿ ಮಾತನಾಡುತ್ತ ಈ ಸಂಗತಿ ರಿವೀಲ್ ಮಾಡಿದ್ದಾರೆ. ಅಚ್ಚರಿ ಎಂದರೆ, ನಟಿ ರಶ್ಮಿಕಾ ಮಂದಣ್ಣ ಅವರು ಸಮ್ನೆ ನಗ್ತೀನಿ ಅಂತ ಹೇಳೋದಕ್ಕೆ 'ಚುಮ್ಮಾ ಲಾಫಿಂಗ್' ಎಂದಿದ್ದಾರೆ. ಅದನ್ನು ಕೇಳಿದ ಹಿಂದಿ ಸಂದರ್ಶಕರಿಗೆ ಅರ್ಥವೇ ಆಗಿಲ್ಲ.
ತಕ್ಷಣವೇ 'ಚುಮ್ಮಾ ಲಾಫಿಂಗ್' ಅಂತ ತಾವು ಬಳಸಿರುವ ಪದ ಹಿಂದಿ ಭಾಷಿಕರಿಗೆ ಬೇರೆ ಅರ್ಥ ಕೊಡುತ್ತಿದೆ ಎಂದು ಅರಿತ ನಟಿ ರಶ್ಮಿಕಾ ಮಂದಣ್ಣ ಅವರು 'ಸಾರಿ, ಚುಮ್ಮಾ ಅಂದ್ರೆ ತೆಲುಗು-ತಮಿಳು ಭಾಷಿಗರಿಗೆ ಸಿಂಪ್ಲೀ ಅಂತ ಅರ್ಥ ಆಗುತ್ತೆ' ಎಂದು ವಿವರಣೆ ಕೊಟ್ಟಿದ್ದಾರೆ. ಕನ್ನಡದಲ್ಲಿಯೂ ಕೂಡ ಅದು ಸುಮ್ನೆ ಅನ್ನೋ ಅರ್ಥವನ್ನೇ ಕೊಡುತ್ತೆ.. ಆದರೆ, ಹಿಂದಿಯಲ್ಲಿ ಅದಕ್ಕೆ 'ಕಿಸ್' ಎನ್ನುವ ಅರ್ಥ ಇದೆ ಎಂಬುದು ಹಲವರಿಗೆ ಗೊತ್ತು. ನಟಿ ರಶ್ಮಿಕಾಗೆ ಮಾತನಾಡುವ ಫ್ಲೋ ಮಧ್ಯೆ 'ಚುಮ್ಮಾ' ಬಂದಿದ್ದರೂ ಅದನ್ನು ಅವರು ಕ್ಲಾರಿಟಿ ಕೊಟ್ಟು ಅಪಾರ್ಥ ಆಗೋದನ್ನು ತಪ್ಪಿಸಿಕೊಂಡು ತಮ್ಮ ಹೇಳಿಕೆಯ ಉದ್ದೇಶಕ್ಕೆ ಬದ್ಧವಾಗಿ ನಡೆದುಕೊಂಡಿದ್ದಾರೆ.
ನಟಿ ರಶ್ಮಿಕಾ ಅವರು ತಮಗೆ ಅತ್ಯಂತ ನೋವಾದಾಗ, ಹಾರ್ಟ್ ಬ್ರೇಕಿಂಗ್ ಪರಿಸ್ಥಿತಿ ಇದ್ದಾಗ ತಾವು ಸುಮ್ಮನೇ ನಗುವುದಾಗಿ ಹೇಳಿಕೊಂಡಿದ್ದಾರೆ. ಆ ಮೆಕಾನಿಸಂ ಅನುಸರಿಸುವ ಮೂಲಕ ನಟಿ ರಶ್ಮಿಕಾ ಅವರು ತಮ್ಮ ಮನಸ್ಸಿಗೆ ಆಗಿರುವ ನೋವನ್ನು ಮರೆಯುವ ಪ್ರಯತ್ನ ಮಾಡುತ್ತಾರೆ ಎಂಬುದನ್ನು ಸ್ವತಃ ಅವರೇ ಈ ಮೂಲಕ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾಗಿ ಯಶಸ್ವೀ ಪ್ರದರ್ಶನ ಕಾಣುತ್ತಿರುವ 'ದಿ ಗರ್ಲ್‌ಫ್ರೆಂಡ್' ಸಿನಿಮಾ ಪ್ರೆಸ್‌ಮೀಟ್ ವೇಳೆ ಹಲವು ಸಂಗತಿಗಳನ್ನು ರಶ್ಮಿಕಾ ಹಂಚಿಕೊಂಡಿದ್ದಾರೆ.
ಹಳೆಯ ಬಾಯ್‌ಫ್ರೆಂಡ್ 'ಟಾಕ್ಸಿಕ್' ಮನಸ್ಥಿತಿಯವರು
ತಮ್ಮ ಹಳೆಯ ಬಾಯ್‌ಫ್ರೆಂಡ್ 'ಟಾಕ್ಸಿಕ್' ಮನಸ್ಥಿತಿಯವರು ಎಂಬುದನ್ನು ಸಹ ಹೇಳಿಕೊಂಡಿದ್ದಾರೆ ನಟಿ ರಶ್ಮಿಕಾ. ಆದರೆ, ಈಗ ಸಿಕ್ಕಿರುವ ಬಾಯ್‌ಫ್ರೆಂಡ್ ವಿಜಯ್ ದೇವರಕೊಂಡ ಅವರು ತಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಷ್ಟೇ ಅಲ್ಲ, ತಾವು ಮಾಡದ ಹಳೆಯ ಗಾಯವನ್ನೂ ಕೂಡ 'ಹೀಲ್' ಮಾಡಿದ್ದಾರೆ ಎಂದಿದ್ದಾರೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ನಟಿ ರಶ್ಮಿಕಾ ಮಂದಣ್ಣ ಅವರು ತೆಲುಗು ನಟ ವಿಜಯ್ ದೇವರಕೊಂಡ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಫೆಬ್ರವರಿ 26, 2026ರಂದು ಉದುಪುರದಲ್ಲಿ ಅವರಿಬ್ಬರ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ.


