ಒಂದೇ ಒಂದು ಬಿಗ್ಬಾಸ್ನಿಂದ ಪಡೆಯುವ ಸಂಭಾವನೆ ದೇಶದ ಪ್ರತಿಯೊಬ್ಬ ನಾಗರಿಕರಿಗೂ ತಲಾ ಒಂದು ಕೋಟಿ ನೀಡಬಹುದಾಗಿದೆ ಎನ್ನುವ ಮಾತೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಆಗ್ತಿದೆ. ಏನಿದು ವಿಷಯ?
ಸದ್ಯ ಕನ್ನಡ ಮತ್ತು ಹಿಂದಿ ಕಿರುತೆರೆಯಲ್ಲಿ ಬಿಗ್ಬಾಸ್ನ ಹವಾ ಜೋರಾಗಿ ನಡೆದಿದೆ. ಕನ್ನಡದಲ್ಲಿ 12ನೇ ಸೀಸನ್ ಆದರೆ, ಹಿಂದಿಯಲ್ಲಿ 19ನೇ ಸೀಸನ್ ಆಗಲಿದೆ. ಟಿವಿಗೂ ಮುನ್ನ ಈ ಬಾರಿಯ ಬಿಗ್ಬಾಸ್ ಓಟಿಟಿಯಲ್ಲಿ ಪ್ರಸಾರ ಆಗಲಿದ್ದು, ಬರೋಬ್ಬರಿ ಐದು ತಿಂಗಳು ತೆರೆ ಕಾಣಲಿದೆ ಎನ್ನಲಾಗುತ್ತಿದೆ. ಇಲ್ಲಿಯವರೆಗಿನ ಅತಿ ಹೆಚ್ಚು ಕಾಲ ಪ್ರಸಾರ ಆಗಲಿರುವ ಬಿಗ್ಬಾಸ್ ಎಂದೂ ಇದು ಕರೆಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಅಂದಹಾಗೆ ಇದು ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿಯ ಬಿಗ್ಬಾಸ್ ಮಾತು. ಕಳೆದ ಕೆಲವು ತಿಂಗಳುಗಳಿಂದ, ಸಲ್ಮಾನ್ ಖಾನ್ ಹೋಸ್ಟ್ ಮಾಡುವ ಕಾರ್ಯಕ್ರಮದ ಬಗ್ಗೆ ಹಲವಾರು ಊಹಾಪೋಹಗಳು ಹಬ್ಬಿದ್ದವು. ಮೇ ತಿಂಗಳಲ್ಲಿ, ಈ ವರ್ಷ ಬಿಗ್ ಬಾಸ್‌ನ ಹೊಸ ಸೀಸನ್ ನಿಜಕ್ಕೂ ನಡೆಯಲಿದೆ ಎಂದು ಘೋಷಿಸಲಾಯಿತು; ಆದಾಗ್ಯೂ, ಈ ಬಾರಿ ಕಾರ್ಯಕ್ರಮದ ಸುತ್ತಲೂ ಬಹಳಷ್ಟು ಬದಲಾಗಿದೆ. ಆಗಸ್ಟ್‌ನಲ್ಲಿ ಕಾರ್ಯಕ್ರಮವು ಸ್ಟ್ರೀಮಿಂಗ್ ಪ್ರಾರಂಭವಾಗಲಿದೆ ಎನ್ನಲಾಗಿದೆ.
ಸದ್ಯ ಬಂದಿರುವ ಮಾಹಿತಿಯ ಪ್ರಕಾರ ಹಿಂದಿಯ ಬಿಗ್ಬಾಸ್ ಆಗಸ್ಟ್‌ನ ಕೊನೆಯ ವಾರಾಂತ್ಯದಲ್ಲಿ ಅಂದರೆ ಆಗಸ್ಟ್ 29 ಮತ್ತು 30 ರಂದು ಕಾರ್ಯಕ್ರಮವು ನೇರ ಪ್ರಸಾರವಾಗಲಿದೆ. ಆದರೆ ಇದನ್ನು ಟಿವಿಗೂ ಮೊದಲು OTT platformನಲ್ಲಿ ಪ್ರಸಾರ ಮಾಡಲಿದ್ದಾರೆ. ಮೊದಲ ಕೆಲವು ಕಂತುಗಳು ಓಟಿಟಿಯಲ್ಲಿ ಮೊದಲು ಪ್ರಸಾರವಾದರೆ, ಬಳಿಕ ಟಿವಿ ಮತ್ತು ಓಟಿಟಿ ಎರಡೂ ಕಡೆಗಳಲ್ಲಿ ಏಕಕಾಲದಲ್ಲಿ ಪ್ರಸಾರವಾಗಲಿದೆ. ಹೊಸ ಕಂತುಗಳು ಮೊದಲು ಜಿಯೋ ಹಾಟ್‌ಸ್ಟಾರ್‌ನಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಒಂದೂವರೆ ಗಂಟೆಗಳ ನಂತರ, ಅದೇ ಕಂತು ಕಲರ್ಸ್ ಟಿವಿಯಲ್ಲಿ ಕಾಣಿಸಿಕೊಳ್ಳುತ್ತದೆ. ಸ್ಪರ್ಧಿಗಳಿಗೆ ಆಡಿಷನ್‌ಗಳು ನಡೆಯುತ್ತಿವೆ ಮತ್ತು ಶೀಘ್ರದಲ್ಲೇ ಒಪ್ಪಂದಗಳನ್ನು ಪ್ರಕಟಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇದರ ನಡುವೆಯೇ ಇದೀಗ ಕುತೂಹಲದ ಮಾಹಿತಿಯೊಂದು ಹೊರಬಿದ್ದಿದೆ. ಅದೇನೆಂದರೆ, ಈ ಸೀಸನ್‌ಗೆ ನಿರೂಪಕ ಸಲ್ಮಾನ್ ಖಾನ್ ಅವರ ಸಂಭಾವನೆಯ ಬಗ್ಗೆ ಮತ್ತೊಂದು ಅಪ್‌ಡೇಟ್ ಬಂದಿದೆ. ಒಂದು ಮೂಲದ ಪ್ರಕಾರ, ಈ ಸೀಸನ್‌ಗೆ ಸಲ್ಮಾನ್ ಖಾನ್ 120-150 ಕೋಟಿ ರೂಪಾಯಿಗಳನ್ನು ಪಡೆದುಕೊಳ್ಳಲಿದ್ದಾರೆ. ಒಟ್ಟು 15 ವಾರಗಳ ಕಾಲ ನಿರೂಪಣೆ ಮಾಡಲಿದ್ದಾರೆ ಮತ್ತು ವಾರಾಂತ್ಯಕ್ಕೆ ಸುಮಾರು 8 ರಿಂದ 10 ಕೋಟಿ ರೂ.ಗಳನ್ನು ಸಂಭಾವನೆ ಪಡೆಯಲಿದ್ದಾರೆ. ಇದರ ಅರ್ಥ ಸದ್ಯದ ಅಂಕಿಅಂಶ ಪ್ರಕಾರ, ಭಾರತದ ಜನಸಂಖ್ಯೆ 143 ಕೋಟಿ. ಅದನ್ನು ಗಣನೆಗೆ ತೆಗೆದುಕೊಂಡರೆ, ಇವರು ಒಂದೇ ಒಂದುಬಿಗ್ಬಾಸ್ ಸೀಸನ್ನಲ್ಲಿ ಪಡೆಯುವ ಮೊತ್ತದಿಂದ ದೇಶದ ಪ್ರತಿ ನಾಗರಿಕರಿಗೂ ಒಂದು ಕೋಟಿ ರೂಪಾಯಿಗಳನ್ನು ನೀಡಬಹುದಾಗಿದೆ!
ಕೇಂದ್ರ ಸರ್ಕಾರ ಯಾವುದಾದರೊಂದು ಯೋಜನೆಗೆ ಇಂತಿಷ್ಟು ಹಣ ಮೀಸಲು ಇಟ್ಟಿರುವುದಾಗಿ ಘೋಷಣೆ ಮಾಡಿದಾಗ, ಇದನ್ನು ಬಡವರಿಗೆ ಕೊಟ್ಟರೆ ಆಗುತ್ತಿತ್ತು. ಬಾಹ್ಯಾಕಾಶಕ್ಕೆ ಹೋಗುವ ಅಗತ್ಯವೇನಿತ್ತು, ರಾಕೆಟ್ ಉಡಾವಣೆ ಮಾಡುವ ಅಗತ್ಯವೇನಿತ್ತು, ಸೇತುವೆ ನಿರ್ಮಾಣ, ಅಷ್ಟೊಂದು ಹೆದ್ದಾರಿ ನಿರ್ಮಾಣ ಮಾಡುವುದು ಬೇಕಿತ್ತೆ, ಈ ಹಣವನ್ನು ಜನರಿಗೆ ಕೊಟ್ಟರೆ ದೇಶ ಉದ್ಧಾರ ಆಗುತ್ತಿತ್ತು ಎಂಬೆಲ್ಲಾ ಮಾತುಗಳು ಆಗಾಗ್ಗೆ ಕೇಳಿಬರುವುದು ಉಂಟು. ಆ ಲೆಕ್ಕಾಚಾರದಲ್ಲಿ ಹೋಗುವುದಾದರೆ, ಇದೀಗ ಸಲ್ಮಾನ್ ಖಾನ್ ಒಂದು ಬಿಗ್ಬಾಸ್ಗೆ ಪಡೆಯುವ ಸಂಭಾವನೆಯನ್ನು ಈ ರೀತಿ ಲೆಕ್ಕಾಚಾರ ಹಾಕಿ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಶೇರ್ ಮಾಡುತ್ತಿದ್ದಾರೆ.
ಅಷ್ಟಕ್ಕೂ, ಬಿಗ್ ಬಾಸ್ OTT 2 ಅನ್ನು ಆಯೋಜಿಸಿದ್ದ ಸಲ್ಮಾನ್ ಆಗ 96 ಕೋಟಿ ರೂ.ಗಳನ್ನು ಪಡೆದಿದ್ದರು. ಬಿಗ್ ಬಾಸ್ 18 ರ ಅವರ ಶುಲ್ಕ 250 ಕೋಟಿ ರೂ. ಎಂದು ವರದಿಯಾಗಿದ್ದರೆ, ಬಿಗ್ ಬಾಸ್ 17 ರಲ್ಲಿ ಅದು 200 ಕೋಟಿ ರೂ.ಗಳಾಗಿದ್ದು, ಇವೆರಡೂ ಟಿವಿಗೆ. ಈ ಬಾರಿ, ಇತರ ನಿರೂಪಕರು ಸಹ ಇರುವುದಾಗಿ ಹೇಳಲಾಗುತ್ತಿದೆ.


