ಹಾಲಿ ವರ್ಷದ ಶ್ರೇಷ್ಠ ಥ್ರೋ ಮೂಲಕ ನೀರಜ್‌ ಚೋಪ್ರಾ ಪ್ಯಾರಿಸ್‌ ಒಲಿಂಪಿಕ್ಸ್‌ನ ಜಾವೆಲಿನ್‌ ಥ್ರೋ ವಿಭಾಗದ ಫೈನಲ್‌ಗೇರಿದ್ದಾರೆ. ಫೈನಲ್‌ ನಾಳೆ ನಡೆಯಲಿದೆ.

ಪ್ಯಾರಿಸ್‌ (ಆ.6): ಹಾಲಿ ಒಲಿಂಪಿಕ್‌ ಚಾಂಪಿಯನ್‌ ನೀರಜ್‌ ಚೋಪ್ರಾ ಪ್ಯಾರಿಸ್‌ ಒಲಿಂಪಿಕ್ಸ್‌ನ ಜಾವೆಲಿನ್‌ ಥ್ರೋ ವಿಭಾಗದಲ್ಲಿ ಫೈನಲ್‌ಗೇರಿದ್ದಾರೆ. ಮಂಗಳವಾರ ನಡೆದ ಕ್ವಾಲಿಫಿಕೇಷನ್‌ ಸ್ಪರ್ಧೆಯಲ್ಲಿ ಹಾಲಿ ವರ್ಷದ ಶ್ರೇಷ್ಠ ನಿರ್ವಹಣೆ ತೋರಿದ ನೀರಜ್‌ ಚೋಪ್ರಾ, ಅಗ್ರ ಅಥ್ಲೀಟ್‌ ಆಗಿ ಫೈನಲ್‌ ಸಾಧನೆ ಮಾಡಿದ್ದಾರೆ. ಗ್ರೂಪ್‌ ಎ ವಿಭಾಗದ ಅರ್ಹತಾ ಹಂತದಲ್ಲಿ ಸ್ಪರ್ಧೆ ಮಾಡಿದ್ದ ಭಾರತದ ಮತ್ತೊಬ್ಬ ಸ್ಪರ್ಧಿ ಕಿಶೋರ್‌ ಜೆನಾ 9ನೇ ಸ್ಥಾನ ಪಡೆದುಕೊಂಡು ಫೈನಲ್‌ಗೇರಲು ವಿಫಲರಾದರು. ನೀರಜ್‌ ಚೋಪ್ರಾ ತಮ್ಮ ಮೊದಲ ಎಸೆತದಲ್ಲಿಯೇ ಜಾವೆಲಿನ್‌ ಅನ್ನು 89.34 ಮೀಟರ್‌ ದೂರ ಎಸೆಯುವ ಮೂಲಕ ಫೈನಲ್‌ಗೆ ಅರ್ಹತೆ ಪಡೆದರು. ಇದು ನೀರಜ್‌ ಚೋಪ್ರಾ ಅವರ ವರ್ಷದ ಬೆಸ್ಟ್‌ ಥ್ರೋ ಆಗಿದೆ. ಇದನ್ನೂ ಮುನ್ನ ದೋಹಾ ಡೈಮಂಡ್‌ ಲೀಗ್‌ನಲ್ಲಿ 88.36 ಮೀಟರ್‌ ದೂರ ಜಾವೆಲಿನ್‌ ಎಸೆದಿದ್ದು ಅವರ ಶ್ರೇಷ್ಠ ಥ್ರೋ ಆಗಿತ್ತು.

ಈವರೆಗೂ ಭಾರತ ಒಲಿಂಪಿಕ್ಸ್‌ನಲ್ಲಿ 3 ಕಂಚಿನ ಪದಕ ಗೆದ್ದಿದೆ. ಬೆಳ್ಳಿ ಹಾಗೂ ಚಿನ್ನದ ಪದಕದ ನಿರೀಕ್ಷೆ ಇನ್ನೂ ಹೆಚ್ಚಾಗುತ್ತಲೇ ಸಾಗಿದೆ. ಇದರ ನಡುವೆ ಕುಸ್ತಿ, ವೇಟ್‌ಲಿಫ್ಟಿಂಗ್‌ ಹಾಗೂ ಜಾವೆಲಿನ್‌ ಥ್ರೋ ವಿಭಾಗದ ಸ್ಪರ್ಧೆಗಳು ಆರಂಭವಾಗಿರುವ ಕಾರಣ ಭಾರತ ಟಾಪ್‌ 2 ಪದಕಗಳ ನಿರೀಕ್ಷೆಯಲ್ಲಿದೆ. ಅದರಲ್ಲೂ ನೀರಜ್‌ ಚೋಪ್ರಾರಿಂದ ಮತ್ತೊಂದು ಚಿನ್ನದ ಪದಕದ ನಿರೀಕ್ಷೆ ಹೆಚ್ಚಿದೆ. ಗ್ರೂಪ್‌ ಬಿ ವಿಭಾಗದ ಕ್ವಾಲಿಫಿಕೇಶನ್‌ನಲ್ಲಿ ಸ್ಪರ್ಧೆ ಮಾಡಿದ ನೀರಜ್‌ ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲುಯೇ 89.34 ಮೀಟರ್‌ ದೂರ ಜಾವೆಲಿನ್‌ ಎಸೆದು ಫೈನಲ್‌ಗೆ ಲಗ್ಗೆ ಇಟ್ಟಿದ್ದರು.

ಪ್ಯಾರಿಸ್ ಒಲಿಂಪಿಕ್ಸ್‌ ಪದಕ ವಿಜೇತರಿಗೆ ನೀಡುತ್ತಿರುವ ನಿಗೂಢ ಗಿಫ್ಟ್‌ ಬಾಕ್ಸ್‌ನಲ್ಲಿ ಅಂತದ್ದೇನಿದೆ?

2022ರಲ್ಲಿ ಸ್ಟಾಕ್‌ಹೋಮ್‌ ಡೈಮಂಡ್‌ ಲೀಗ್‌ನಲ್ಲಿ 89.94 ಮೀಟರ್‌ ದೂರ ಎಸೆದಿರುವುದು ನೀರಜ್‌ ಚೋಪ್ರಾ ಅವರ ಶ್ರೇಷ್ಠ ಎಸೆತ ಹಾಗೂ ರಾಷ್ಟ್ರೀಯ ದಾಖಲೆಯೂ ಆಗಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಚಿನ್ನವನ್ನು ಗಳಿಸಿದ ನಂತರ ಜಾವೆಲಿನ್ ಸೂಪರ್‌ಸ್ಟಾರ್ ಎರಡು ಬಾರಿ 85 ಮೀಟರ್‌ಗಿಂತ ಕೆಳಗೆ ಜಾವೆಲಿನ್‌ ಎಸೆದಿದ್ದಾರೆ.

Paris Olympics 2024 ಲಕ್ಷ್ಯ ಸೇನ್ ಗೆಲುವನ್ನು ಡಿಲೀಟ್ ಮಾಡಿದ ಪ್ಯಾರಿಸ್ ಒಲಿಂಪಿಕ್ಸ್..! ಕಾರಣವೇನು?