ರಾಜ್ಯದಲ್ಲಿನ ವಿಫಲ ಸರ್ಕಾರ ಇನ್ನು ಬಹಳ ದಿನ ಇರಲ್ಲ. ನಾನು ಸಿಎಂ ಆಗಬೇಕು.. ನಾನು ಸಿಎಂ ಆಗಿ ಇರಬೇಕು ಅಂತ ಡಿಕೆಶಿ, ಸಿದ್ರಾಮಯ್ಯ ನಡುವೆ ಕಿತ್ತಾಟ ನಡೆದಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. 

ಕಲಬುರಗಿ (ಏ.19): ರಾಜ್ಯದಲ್ಲಿನ ವಿಫಲ ಸರ್ಕಾರ ಇನ್ನು ಬಹಳ ದಿನ ಇರಲ್ಲ. ನಾನು ಸಿಎಂ ಆಗಬೇಕು.. ನಾನು ಸಿಎಂ ಆಗಿ ಇರಬೇಕು ಅಂತ ಡಿಕೆಶಿ, ಸಿದ್ರಾಮಯ್ಯ ನಡುವೆ ಕಿತ್ತಾಟ ನಡೆದಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು. ಈಗ ಸಿದ್ರಾಮಯ್ಯ ಅವರ ಸಿಎಂ ಅವಧಿ ಕೇವಲ 220 ದಿನ ಮಾತ್ರ ಉಳಿದಿದೆ. ಆ ನಂತರ ಸಿಎಂ ಆಗಿ ಸಿದ್ರಾಮಯ್ಯ ಇರ್ತಾರಾ ? ಮಾಜಿ ಆಗ್ತಾರಾ ? ಡಿಕೆ ಶಿವಕುಮಾರ ಸಿಎಂ ಆಗ್ತಾರಾ? ಗೊತ್ತಿಲ್ಲ. ಗಂಡ ಹೆಂಡತಿ ಜಗಳದಲ್ಲಿ ಮೂರನವೇಯವರನ್ನು ನುಗ್ಗಿಸಲು ಮಲ್ಲಿಕಾರ್ಜುನ ಖರ್ಗೆ ಪ್ಲ್ಯಾನ್ ಮಾಡ್ತಿದ್ದಾರೆ. ಡಿಕೆಶಿ, ಸಿದ್ರಾಮಯ್ಯ ಜಗಳದಲ್ಲಿ ಅವರ ಮಗ ಪ್ರಿಯಾಂಕ್ ಖರ್ಗೆರನ್ನು ಮಧ್ಯದಲ್ಲಿ ತೂರಿಸಿ ಸಿಎಂ ಮಾಡಲು ಮಲ್ಲಿಕಾರ್ಜುನ ಖರ್ಗೆ ಅವರೇ ಸ್ವತಃ ಸರ್ಕಾರ ಬೀಳಿಸ್ತಾರೆಂದು ರಾಮುಲು ಬಾಂಬ್‌ ಹಾಕಿದರು.

ಪ್ರಿಯಾಂಕ್‌ರಿಂದ ಕ.ಕ ಉದ್ಧಾರ ಆಗಲ್ಲ: ಮೇಲ್ಮನೆ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ ಮಾತನಾಡಿ, ಪ್ರಿಯಾಂಕ್ ಖರ್ಗೆ ಅವರೇ ನೀವಿರೋವರೆಗೆ ಕಲ್ಯಾಣ ಕರ್ನಾಟಕ ಉದ್ದಾರ ಆಗಲ್ಲ, ನಿಮಗೆ ಆ ದೂರದೃಷ್ಟಿ ಇಲ್ಲ. ನೀವು ಬರೀ ದ್ವೇಷದ ರಾಜಕಾರಣ ಮಾಡುತ್ತಿದ್ದಿರಿ ಎಂದು ತಿವಿದರು. ಹಾಲಿ ಬೆಲೆ 9 ರು. ಏರಿಕೆ ಆಗಿದ್ದು ಕರ್ನಾಟಕದಲ್ಲಿ ಮಾತ್ರ. ದೇಶದ ಯಾವ ರಾಜ್ಯದಲ್ಲೂ ಈ ರೀತಿ ಇಲ್ಲ ಈ ಸರ್ಕಾರ 50 ವಸ್ತುಗಳ ಮೇಲೆ ಟಾಕ್ಸ್ ಹಾಕಿ ಬೆಲೆ ಹೆಚ್ಚಳ ಮಾಡಿದ್ದಾರೆ. ಖರ್ಗೆ, ಸೋನಿಯಾ, ರಾಹುಲ್ ಒಕ್ಕೂಟ ಇವರಿಗೆ ಎಷ್ಟು ಟ್ಯಾಕ್ಸ್ ಹಾಕ್ತಿರೋ ಹಾಕಿ ಅಂತ ಪರ್ಮಿಷನ್ ಕೊಟ್ಟಿದೆ ಅನ್ನಿಸುತ್ತೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಬಡ ಜನರ ಜೀವನ ವಿರೋಧಿ ಸರ್ಕಾರ ಎಂದರು.

5 ವರ್ಷಗಳಲ್ಲಿ 58 ಲಕ್ಷ ಕೋಟಿ ಬಂಡವಾಳ ಹೂಡಿಕೆ: ಸಂಸದ ಗೋವಿಂದ ಕಾರಜೋಳ

ಪರೀಕ್ಷೆಯಲ್ಲಿ ಎಲ್ಲರೂ ದಾರ ಹಾಕಿಕೊಂಡು ಹೋಗ್ತಿವಿ: ಬೀದರ್‌ನಲ್ಲಿ ವಿದ್ಯಾರ್ಥಿಯೊಬ್ಬ ಸಿಇಟಿ ಬರೆಯಲು ಹೋದ್ರೆ ಜನೀವಾರ ಹಾಕಿದ್ದಕ್ಕೆ ಅವಕಾಶ ಕೊಟ್ಟಿಲ್ಲ. ಮುಂದಿನ ಪರೀಕ್ಷೆಯಲ್ಲಿ ಎಲ್ಲರೂ ದಾರ ಹಾಕಿಕೊಂಡು ಹೋಗ್ತಿವಿ. ಅನುಮತಿ ಕೊಡ್ತಿರೋ ಕೊಡಲ್ವೋ ನೋಡ್ತಿವಿ. ಈ ಸರ್ಕಾರ ಈ ರೀತಿ ಮಾಡ್ತಿದೆ ಅಂದ್ರೆ ಇವರಿಗೆ ತಲೆ ಕೆಟ್ಟಿದೆ ಎಂದು ರವಿಕುಮಾರ ಆಕ್ರೋಶ ಹೊರಹಾಕಿದರು. ವಿಪಕ್ಷ ನಾಯಕ ಆರ್‌ ಅಶೋಕ, ಪಿ ರಾಜೀವ್‌ ಯಾತ್ರೆಯಲ್ಲಿ ಪಾಲ್ಗೊಂಡಿರಲಿಲ್ಲ. ಜನಾಕ್ರೋಶ ಯಾತ್ರೆಯಲ್ಲಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಶಾಸಕರಾದ ಬಸವರಾಜ್ ಮತ್ತಿಮೂಡ, ಶಶಿಲ್‌ ನಮೋಶಿ, ಸುನೀಲ ವಲ್ಯಾಪೂರೆ, ಬಿಜಿ ಪಾಟೀಲ್‌, ಡಾ. ಅವಿನಾಶ ಜಾಧವ್‌, ಮಾಜಿ ಸಂಸದ ಉಮೇಶ ಜಾಧವ್‌, ರಾಜಕುಮಾರ್‌ ಪಾಟೀಲ್‌ ತೇಲ್ಕೂರ್‌, ದತ್ತಾತ್ರೇಯ ಪಾಟೀಲ್‌ ರೇವೂರ್‌, ಸುಭಾಸ ಗುತ್ತೇದಾರ್‌, ನಗರಾಧ್ಯಕ್ಷ ಚಂದು ಪಾಟೀಲ್‌, ಅವ್ವಣ್ಣ ಮ್ಯಾಕೇರಿ, ಸಚಿನ್ ಕಡಗಂಚಿ ಜಗದೇವ ಗುತ್ತೇದಾರ ಬಸವರಾಜ್ ಮುನ್ನಳಿ ಶಿವಾನಂದ್ ಪಿಸ್ತಿ ಮಲ್ಲು ಉದ್ನೂರ್ ರಾಜು ದೇವದುರ್ಗಾ ಹೊನ್ನಾಳಿ ಶ್ರೀನಿವಾಸ್ ದೇಸಾಯಿ ರಾಮು ಗುಮ್ಮಟ್ ಮಹೇಶ್ ಚವಾಣ್ ವಿರು ರಾಯ್ ಕೋಡ್, ಮಹಿಳಾ ಮೋರ್ಚಾ ಪದಾಧಿಕಾರಿಗಳು ಸವಿತಾ ಪಾಟೀಲ್ ರಾಜೇಶ್ವರಿ ಮೈತ್ರಿ ಸುವರ್ಣ ವಾಡೆ ಇದ್ದರು.

ಹೊಂದಾಣಿಕೆ ರಾಜಕಾರಣ ಬೇಡ: ಇಲ್ಲಿನ ಕಾಂಗ್ರೆಸ್‌ನ ಕೆಟ್ಟ ರಾಜಕಾರಣಕ್ಕೆ ಬಿಜೆಪಿ, ಹಿಂದೂ ಕಾರ್ಯಕರ್ತರು ಜೀವ ಬಿಟ್ಟಿದ್ದಾರೆ. ನಮ್ಮ ಕಾರ್ಯಕರ್ತರು, ಹಿಂದೂ ಕಾರ್ಯಕರ್ತರ ಜೀವದ ಜೊತೆ ಚಲ್ಲಾಟ ಆಡುವ ಕೆಲಸ ನಮ್ಮ ಪಕ್ಷದ ಯಾರೊಬ್ಬ ಮುಖಂಡರೂ ಮಾಡಬಾರದು. ನಮ್ಮ ಕಾರ್ಯಕರ್ತರಿಗೆ ಅಪಮಾನ ಆಗದ ರೀತಿಯಲ್ಲಿ ನಾವು ಕೆಲಸ ಮಾಡಬೇಕಿದೆ ಎಂದು ವಿಜಯೇಂದ್ರ ತಮ್ಮ ಪಕ್ಷದ ಮುಖಂಡರಿಗೆ ಎಚ್ಚರಿಕೆ ಕೊಟ್ಟರು. ಇನ್ನುಳಿದ ಮೂರು ವರ್ಷ ಹೋರಾಟದ ಪರ್ವ ನಡೆಯಲಿ ಎಂದು ಜಿಲ್ಲೆಯ ಮುಖಂಡರಿಗೆ ಆಗ್ರಹಿಸುವೆ. ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ನಮ್ಮ ಕಾರ್ಯಕರ್ತರ ರಕ್ಷಣೆ ಮಾಡುವ ಕೆಲಸ ಮಾಡಿ. ನಮ್ಮ ಕಾರ್ಯಕರ್ತರ ತಂಟೆಗೆ ಬರುವ ಯಾವ ಗಂಡಸಿದಾನೋ ಪಾಲಿಟಿಕ್ಸನಲ್ಲಿ ನಾನೂ ನೋಡ್ತೆನೆ. ಇಲ್ಲಿ ಅಡ್ಜಸ್ಟಮೆಂಟ್ ರಾಜಕಾರಣ ಮಾಡಲು ನಮ್ಮ ಕಾರ್ಯಕರ್ತರೆನೂ ಪುಕ್ಕಟ್ಟೆ ಬಂದಿಲ್ಲ. ಯಾವನೇ ಬರಲಿ ಅವನ ಶಕ್ತಿ ಮೆಟ್ಟಿ ನಿಲ್ಲುವ ಶಕ್ತಿ ಬಿಜೆಪಿ ಕಾರ್ಯಕರ್ತರಿಗೆ ಇದೆ. ನೀವು ಒಗ್ಗಟ್ಟಾಗಿ ಕೆಲಸ ಮಾಡಿ ಎಂದು ಬಿಜೆಪಿ ಮುಖಂಡರಿಗೆ ವೇದಿಕೆಯಲ್ಲೇ ವಿಜಯೇಂದ್ರ ಖಡಕ್‌ ಸಂದೇಶ ರವಾನಿಸಿದರು.

ದಲಿತರ ಉದ್ದಾರಕ್ಕೆ ನೀವೇನು ಮಾಡಿದ್ದಿರಿ?: ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ದಲಿತರ ಉದ್ದಾರಕ್ಕೆ ನೀವೇನು ಮಾಡಿದ್ದೀರಿ?. ಖರ್ಗೆ ಅವರೇ ಉತ್ತರ ಕೊಡಿ, ಈ ದೇಶದಲಿ ದಲಿತರನ್ನ ಬಿಜೆಪಿ ಗೌರವಿಸುತ್ತೆ. ಈ ಭಾಗದಲ್ಲಿ ದಲಿತರು ಯಾವುದೋ ಕಾರಣಕ್ಕೆ ಭಯಪಟ್ಟು ನಮ್ಮಿಂದ ದೂರ ನಿಂತಿದ್ದಾರೆ. ಸಾಮಾಜಿಕ ನ್ಯಾಯ ಅಂಬೇಡ್ಕರ್ ಚಿಂತನೆಯೇ ಹೊರತು ಕಾಂಗ್ರೆಸ್ ಚಿಂತನೆ ಅಲ್ಲ ಎಂದು ತಿವಿದರು. ಮೋದಿ‌ ಅವರು ತ್ರೀವಳಿ ತಲಾಕ್ ಕಿತ್ತು ಬಿಸಾಕಿದ್ರು. ಆ ಮೂಲಕ ಮುಸ್ಲಿಂ ಮಹಿಳೆಯರಿಗೆ ರಕ್ಷಣೆ ಕೊಟ್ಟಿದ್ದು ಮೋದಿಜಿ ಮುಸ್ಲಿಂರಿಗೆ ಶೇ .4ರಷ್ಟು ಮೀಸಲಾತಿ ಕೊಡಲಿಕ್ಕೆ ಬರೋದೆ ಇಲ್ಲ. ಈ ವಿಚಾರ ಕಾಂಗ್ರೆಸ್ ನವರಿಗೂ ಗೊತ್ತು. ಓಟ್ ಬ್ಯಾಂಕ್ ಆಗಿ ಅವರನ್ನು ಉಳಿಸಿಕೊಳ್ಳಲು ಪ್ಲ್ಯಾನ್ ಮಾಡಿದ್ದಾರಷ್ಟೆ ಎಂದರು.

ಜಾತಿ ಸಮೀಕ್ಷೆ ಅವೈಜ್ಞಾನಿಕ ಅನ್ನೋದು ಸರಿಯಲ್ಲ: ಸಚಿವ ಕೃಷ್ಣ ಬೈರೇಗೌಡ

ವಕ್ಫ್‌ ಜಮೀನನ್ನು ಶ್ರೀಮಂತ ವರ್ಗದ ಮುಸ್ಲಿಂರು ಮೌಲ್ವಿಗಳು ಅದನ್ನೆಲ್ಲಾ ಹೊಡೆದುಕೊಂಡು ತಿಂತಿದಾರೆ. ಮಾನಪ್ಪಾಡಿ ರಿಪೋರ್ಟ್‌ನಲ್ಲಿ ಕಲಬುರಗಿ ಜಿಲ್ಲೆಯಲ್ಲಿನ ದೊಡ್ಡ ದೊಡ್ಡ ನಾಯಕರು ಲೂಟಿ ಮಾಡಿರುವ ಹೆಸರಿದೆ. ಇದನ್ನು ತಪ್ಪಿಸಬೇಕು. ಮುಸ್ಲಿಂನಲ್ಲಿರುವ ಬಡವರಿಗೆ ಅನುಕೂಲ ಆಗಬೇಕು ಅನ್ನೋ ಕಾರಣಕ್ಕೆ ಮೋದಿ ಈ ಕ್ರಮ ಕೈಗೊಂಡಿದ್ದಾರೆ. ವಕ್ಫ್‌ನ ಜಮೀನು ನಾವು ಒಂದು ಇಂಚೂ ಕಿತ್ತುಕೊಳ್ಳಲ್ಲ. ಅದನ್ನು ಅದೇ ಕಮುನಿಟಿಯ ಬಡವರಿಗೆ ಮೋದಿ ಹಂಚಿ ಬಿಡ್ತಾರೆಂದರು. ಜಾತಿ ಗಣತಿಯಲ್ಲಿ ಮೊದಲು ಲಿಂಗಾಯತರೇ ನಂಬರ್ ಒನ್ ಅಂದ್ರಿ? ಎರಡನೇ ಪಟ್ಟಿಯಲ್ಲಿ ದಲಿತರು ಅತಿ ಹೆಚ್ಚು ಅಂದ್ರಿ, ಈಗ ಮುಸ್ಲಿಂ ಅತಿ ಹೆಚ್ಚು ಅಂತಿದಿರಿ ಅಂದ್ರೆ ಅತಿ ಹೆಚ್ಚು ಅಂದ ಮೇಲೆ ಅಲ್ಪಸಂಖ್ಯಾತು ಹೆಂಗೆ ಆಗ್ತಿರಿ?. ಇದು ಕಾಂಗ್ರೆಸ್ ಕುತಂತ್ರ. ಅವರ ಉದ್ದೇಶ ನಿಮ್ಮ ಉದ್ದಾರ ಅಲ್ಲ, ಮುಸ್ಲಿಂ ಬಂಧುಗಳು ಅರ್ಥ ಮಾಡಿಕೊಳ್ಳಿ ಎಂದರು.