ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ವರ್ಸಸ್ ಯತ್ನಾಳ್ ನಡುವಿನ  ಸಮರ ದಿನದಿಂದ ದಿನಕ್ಕೆ ಜೋರಾಗಿದೆ.ವಿಜಯೇಂದ್ರ ಪರವಾಗಿ ಈಗಾಗಲೇ ಬ್ಯಾಟಿಂಗ್ ಮಾಡುತ್ತಿರುವ ರೇಣುಕಾಚಾರ್ಯ ಟೀಂ ಇಂದು ಕಾಫಿನಾಡಿನಲ್ಲಿ ಸ್ವಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ದ ಕಿಡಿಕಾರಿದ್ರು.

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.08): ರಾಜ್ಯ ಬಿಜೆಪಿಯಲ್ಲಿ ವಿಜಯೇಂದ್ರ ವರ್ಸಸ್ ಯತ್ನಾಳ್ ನಡುವಿನ ಸಮರ ದಿನದಿಂದ ದಿನಕ್ಕೆ ಜೋರಾಗಿದೆ.ವಿಜಯೇಂದ್ರ ಪರವಾಗಿ ಈಗಾಗಲೇ ಬ್ಯಾಟಿಂಗ್ ಮಾಡುತ್ತಿರುವ ರೇಣುಕಾಚಾರ್ಯ ಟೀಂ ಇಂದು ಕಾಫಿನಾಡಿನಲ್ಲಿ ಸ್ವಪಕ್ಷದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ವಿರುದ್ದ ಕಿಡಿಕಾರಿದ್ರು. ವೀರಶೈವ ಲಿಂಗಾಯತ ಸಮುದಾಯದ ಮಹಾಸಂಗಮ ಹೆಸರಿನಲ್ಲಿ ನಡೆದ ಸಭೆಯಲ್ಲಿ ನಾವು ಮಾಜಿ ಸಿಎಂ ಯಡಿಯೂರಪ್ಪ ಕುಟುಂಬದೊಂದಿಗೆ ಇದ್ದೇವೆ ಎಂಬ ಸಂದೇಶವನ್ನು ಕಾಫಿನಾಡಿನಿಂದ ರವಾನಿಸಿದ್ದಾರೆ. 

ಯತ್ನಾಳ್ ವಿರುದ್ದ ವಾಗ್ದಾಳಿ: ರಾಜ್ಯ ಬಿಜೆಪಿಯಲ್ಲಿ ಯತ್ನಾಳ್ ಹಾಗೂ ವಿಜೇಂದ್ರ ನಡುವಿನ ಬಡಿದಾಟ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ ಎರಡು ದಿನದ ಹಿಂದಸ್ಟೇ ವಿಜಯೇಂದ್ರ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವ ತನಕ ನಾನು ವಿರಮಿಸುವುದಿಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ರು. ಇದರ ಬೆನ್ನಲ್ಲೇ ಫುಲ್ ಆಕ್ಟಿವ್ ಆಗಿರುವ ವೀರಶೈವ ಲಿಂಗಾಯತರು ಚಿಕ್ಕಮಗಳೂರಿನ ರೇಣುಕಾಚಾರ್ಯ ಕಲ್ಯಾಣ ಮಂಟಪದಲ್ಲಿ ಮಹಾಸಂಗಮದ ಹೆಸರಿನಲ್ಲಿ ಸಭೆ ನಡೆಸಿ ವಿಜಯೇಂದ್ರ ಪರ ಬ್ಯಾಟ್ ಬೀಸಿದ್ದಾರೆ. ಸಭೆಯಲ್ಲಿ ಮಾಜಿ ಸಚಿವರಾದ ರೇಣುಕಾಚಾರ್ಯ ಬಿ.ಸಿ ಪಾಟೀಲ್ ಹಾಗೂ ವಿವಿಧ ಮಠಾಧೀಶರು ಭಾಗಿಯಾಗಿದ್ರು. ಸಭೆಯಲ್ಲಿ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ ಮಿಸ್ಟರ್ ಯತ್ನಾಳ್ ನಿನ್ನನ್ನು ಬಲಿಪಶು ಮಾಡುತ್ತಾರೆ. 

ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಿದ ಸಿದ್ದರಾಮಯ್ಯ ಸರ್ಕಾರ: ಬಿ.ವೈ.ವಿಜಯೇಂದ್ರ

ಮಾರಿಹಬ್ಬದಲ್ಲಿ ಪ್ರಾಣಿಗಳನ್ನು ಬಲಿಕೊಡುವಾಗ ಕುಂಕುಮ ಹಚ್ಚಿ ನೀರು ಹಾಕುತ್ತಾರಲ್ಲ ಅದೇ ರೀತಿ ನಿನ್ನನ್ನು ಬಲಿ ಪಶು ಮಾಡುತ್ತಾರೆ. ಎಂದು ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದರು. ಎಲುಬಿಲ್ಲದ ನಾಲಿಗೆ ರೀತಿಯಲ್ಲಿ ಯತ್ನಾಳ್ ಮಾತನಾಡುತ್ತಿದ್ದಾನೆ, ಮಿಸ್ಟರ್ ಯತ್ನಾಳ್ ನಿನಗೆ ನಾಚಿಕೆ ಆಗಬೇಕು, ಮಠಾಧೀಶರ ಬಗ್ಗೆ ಅಪಮಾನ ಆಗೋ ರೀತಿಯಲ್ಲಿ ಮಾತನಾಡಿದ ನಿಮಗೆ ಜನ ಪಾಠ ಕಲಿಸುತ್ತಾರೆ, ನಿಮ್ಮದು ನಾಲಿಗೆನ ಅಥವಾ ಎಕ್ಕಡನೋ ಈ ಸಂದರ್ಭದಲ್ಲಿ ಎಚ್ಚರಿಕೆ ಕೊಡಬೇಕಾಗುತ್ತದೆ ಎಂದರು. ಅನಿವಾರ್ಯ ಕಾರಣಗಳಿಂದ ಯಡಿಯ್ಯೂರಪ್ಪನವರು ಕೆಜೆಪಿ ಕಟ್ಟುವ ಪರಿಸ್ಥಿತಿ ನಿರ್ಮಾಣವಾಯಿತು.ಯಡಿಯೂರಪ್ಪನವರ ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿ ಹೋಗುತ್ತೆ ಅಂತ ಸ್ವಾಮೀಜಿಗಳು ಹೇಳಿದ್ರು.ವೀರಶೈವ, ಲಿಂಗಾಯತ ಸಮುದಾಯದ ನಮ್ಮ ಮುಖಂಡರಾದ ವಿಜಯೇಂದ್ರ ಅವರಿಗೆ ನಮ್ಮ ಬೆಂಬಲವಿದೆಯಡಿಯೂರಪ್ಪನವರಿಗೆ ವಿಜಯೇಂದ್ರ ಅವರಿಗೆ ತೊಂದರೆಯಾದಾಗ ನಾವು ಸುಮ್ಮನೇ ಇರಬೇಕಾ, ಈ ಹಿನ್ನೆಲೆ ನಾವು ಸಭೆ ನಡೆಸಿ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದೇವೆ ಎಂದರು.

ಮುಂದಿನ ಚುನಾವಣೆ ವಿಜಯೇಂದ್ರ ನೇತೃತ್ವದಲ್ಲಿ: ನಂತರ ಮಾತನಾಡಿದ ಮಾಜಿ ಸಚಿವ ಬಿ ಸಿ ಪಾಟೀಲ್, ಯತ್ನಾಳ್ ರಾಜ್ಯದ್ಯಕ್ಷ ವಿಜಯೇಂದ್ರ ವಿರುದ್ಧ ಎಷ್ಟೇ ಮಾತಾಡಿದ್ರು ವಿಜಯೇಂದ್ರ ಅವರ ಹೇಳಿಕೆಗೆ ಪ್ರತಿ ಹೇಳಿಕೆ ಕೊಡುತ್ತಿಲ್ಲ, ಹೇಳಿಕೆಗೆ ಪ್ರತಿ ಹೇಳಿಕೆ ಕೊಡುವ ವ್ಯಕ್ತಿತ್ವವೂ ವಿಜಯೇಂದ್ರದಲ್ಲ ಎಂದು ಬಿ.ಸಿ ಪಾಟೀಲ್ ವಿಜಯೇಂದ್ರ ಪರ ಬ್ಯಾಟ್ ಬೀಸಿದ್ರು. ಪಕ್ಷದಲ್ಲಿ ಎಲ್ಲರನ್ನ ಸಮಾನವಾಗಿ ತೆಗೆದುಕೊಂಡು ಹೋಗಲು ವಿಜಯೇಂದ್ರ ಪ್ರಯತ್ನಿಸುತ್ತಿದ್ದಾರೆ ಮುಂದೆ ವಿಜಯೇಂದ್ರ ಎತ್ತರದ ಸ್ಥಾನಕ್ಕೆ ಬೆಳೆಯುವ ಅವಕಾಶವಿದೆ , ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆಯನ್ನು ಎದುರಿಸಿ , ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದರು. 

3 ವರ್ಷ ಹಿಂದಿನ ಚುನಾವಣೆಯ ಮರು ಮತ ಎಣಿಕೆ ಕಾರ್ಯ: ಉಪಸಭಾಪತಿ ಎಂ.ಕೆ ಪ್ರಾಣೇಶ್ ಶಾಸಕ ಸ್ಥಾನಕ್ಕೆ ಸಂಕಷ್ಟ?

ಸಭೆಯಲ್ಲಿ ಯಳನಾಡು ಸಿದ್ದರಾಮೇಶ್ವರ ಸ್ವಾಮೀಜಿ, ಶಂಕರದೇವರು ಮಠದ ಸ್ವಾಮೀಜಿ, ಹುಲಿಕೆರೆ ಸ್ವಾಮೀಜಿ, ಬೇರುಗಂಡಿ ಮಠದ ಸ್ವಾಮೀಜಿ ಸೇರಿದಂತೆ ವಿವಿಧ ಮಠದ ಸ್ವಾಮೀಜಿಗಳು ಸೇರಿದಂತೆ ತರೀಕೆರೆ ತಾಲೂಕಿನ ಮಾಜಿ ಶಾಸಕರಾದ ಸುರೇಶ್ , ನಾಗರಾಜ್ ಸೇರಿದಂತೆ ಸ್ಥಳೀಯ ಕಾಂಗ್ರೆಸ್, ಬಿಜೆಪಿ ಪಕ್ಷದ ಮುಖಂಡರು ಭಾಗಿಯಾಗಿದ್ದರು. ಒಟ್ಟಿನಲ್ಲಿ ಯತ್ನಾಳ್ ವರ್ಸಸ್ ವಿಜಯೇಂದ್ರ ನಡುವಿನ ಸಮರದಲ್ಲಿ ವೀರಶೈವ ಲಿಂಗಾಯತರು ನಮ್ಮ ಬೆಂಬಲ ಯಡಿಯೂರಪ್ಪ ಕುಟುಂಬಕ್ಕೆ ಎಂಬ ಸಂದೇಶವನ್ನು ರವಾನಿಸಿದ್ದು ಮುಂದೆ ಇದು ರಾಜ್ಯ ರಾಜಕಾರಣದಲ್ಲಿ ಯಾವ ತಿರುವು ಪಡೆದುಕೊಳ್ಳುತ್ತದೆ ಅನ್ನೋದನ್ನ ಕಾದು ನೋಡಬೇಕಿದೆ.