ರೈತ ಪ್ರತಿಭಟನೆ ವೇಳೆ ಮಾಡಿದ್ದ ಟ್ವೀಟ್​ಗೆ ಸಂಬಂಧಿಸಿದಂತೆ ನಟಿ ಕಂಗನಾ ರಣಾವತ್​ ಅವರಿಗೆ ಸುಪ್ರೀಂ ಕೋರ್ಟ್​ನಿಂದ ಹಿನ್ನಡೆಯಾಗಿದೆ. ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವ ಅವರ ಅರ್ಜಿಯನ್ನು ಸುಪ್ರೀಂ ಕೋರ್ಟ್​ ತಿರಸ್ಕರಿಸಿದೆ. 

ನಟಿ, ಸಂಸದೆ ಕಂಗನಾ ರಣಾವತ್​ (kangana ranaut) ಅವರಿಗೆ ಇಂದು ಸುಪ್ರೀಂಕೋರ್ಟ್​ನಿಂದ ಭಾರಿ ಹಿನ್ನಡೆಯಾಗಿದೆ. ಅವರ ಅರ್ಜಿಯನ್ನು ತುರ್ತಾಗಿ ಆಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ (Farmers Protest) ಭಾಗವಹಿಸಿದ್ದ ಮಹಿಳೆಯೊಬ್ಬರ ಬಗ್ಗೆ ಟ್ವೀಟ್ ಮಾಡಿದ್ದಕ್ಕಾಗಿ ಮಹಿಳೆ ಇವರ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಮಾನನಷ್ಟ ಮೊಕದ್ದಮೆ ದಾಖಲೆ ಅದಾಗಿದೆ. ಅದನ್ನು ರದ್ದುಗೊಳಿಸುವಂತೆ ಕೋರಿ ಕಂಗನಾ ಸುಪ್ರೀಂಕೋರ್ಟ್​ ಮೊರೆ ಹೋಗಿದ್ದಾರೆ. ಆದರೆ, ಇಂದು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಅವರ ವಿರುದ್ಧದ ಮಾನನಷ್ಟ ಮೊಕದ್ದಮೆಯನ್ನು ಇಂದು ರದ್ದು ಮಾಡಲು ಒಪ್ಪದ ಕೋರ್ಟ್​, ಕಂಗನಾ ಅವರ ಟ್ವೀಟ್ ಕೇವಲ ರೀಟ್ವೀಟ್ ಅಲ್ಲ, ಬದಲಾಗಿ ಬದಲಿಗೆ ಅದಕ್ಕೆ ಮಸಾಲೆ ಸೇರಿಸಿ ಬರೆದ ರೀಟ್ವೀಟ್​ ಎಂದು ಕೋರ್ಟ್​ ಹೇಳಿದೆ.

ಕಂಗನಾ ವಿರುದ್ಧ ಪ್ರಕರಣ ದಾಖಲಿಸಿದವರು ಯಾರು?

ನಿಮ್ಮ ಟ್ವೀಟ್ ವಿಚಾರಣೆಯ ಮೇಲೆ ಪರಿಣಾಮ ಬೀರುವುದರಿಂದ ನಾವು ಅದರ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಇದು ಕೇವಲ ರೀಟ್ವೀಟ್ ಅಲ್ಲ, ಇದರಲ್ಲಿ ನಿಮ್ಮ ಮಸಾಲೆ ಹಾಕಿರುವ ಕಮೆಂಟ್ ಕೂಡ ಸೇರಿದೆ ಎಂದು ಕೋರ್ಟ್​ ಹೇಳಿದೆ. ಅಂದಹಾಗೆ ಸಂಸದೆ ವಿರುದ್ಧ ಈ ಮಾನಹಾನಿ ದೂರನ್ನು 2021 ರಲ್ಲಿ ಪಂಜಾಬ್‌ನ ಬಟಿಂಡಾ ನ್ಯಾಯಾಲಯದಲ್ಲಿ 73 ವರ್ಷದ ಮಹಿಂದರ್ ಕೌರ್ ದಾಖಲಿಸಿದ್ದಾರೆ. ಕಂಗನಾ ರೀಟ್ವೀಟ್‌ನಲ್ಲಿ ತಮ್ಮ ವಿರುದ್ಧ ಮಾನಹಾನಿಕರ ಆರೋಪಗಳನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಕಂಗನಾ ತಮ್ಮ ರೀಟ್ವೀಟ್‌ನಲ್ಲಿ, ಮಹಿಂದರ್ ಕೌರ್ ಅವರ ಫೋಟೋದೊಂದಿಗೆ ಟ್ವೀಟ್ ಅನ್ನು ಮರುಟ್ವೀಟ್ ಮಾಡಿ, ಶಾಹೀನ್ ಬಾಗ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಿಲ್ಕಿಸ್ ಬಾನೋ ದಾದಿ ಅವರೇ ಎಂದು ಸಂಬೋಧಿಸಿದ್ದೇ ತಪ್ಪಾಗಿದೆ.

ಇದನ್ನೂ ಓದಿ:ರೇ*ಪ್​ ಮಾಡಿದ್ರೇನು, ಸಿನಿಮಾದಲ್ಲಿ ಛಾನ್ಸ್​ ಕೊಡಲ್ವಾ? ಶಾಕಿಂಗ್​ ವಿಡಿಯೋ ಸಹಿತ Kangana ರಿವೀಲ್​!

ನ್ಯಾಯಾಲಯ ಏನು ಹೇಳಿದೆ?

ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳು, ಕಂಗನಾ ಅವರ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿತು. ಅದನ್ನು ಹಿಂಪಡೆಯಲು ಸಲಹೆ ನೀಡಿತು. ವಿಚಾರಣೆ ಪ್ರಾರಂಭವಾದ ತಕ್ಷಣ, ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರು ಟ್ವೀಟ್‌ನಲ್ಲಿ ಮಾಡಿದ ಕಮೆಂಟ್‌ಗಳಿಗೆ ಆಕ್ಷೇಪ ವ್ಯಕ್ತಪಡಿಸಿ, 'ಇದು ಕೇವಲ ಸರಳ ರೀಟ್ವೀಟ್ ಅಲ್ಲ. ನೀವು ನಿಮ್ಮ ಕಮೆಂಟ್‌ಗಳನ್ನು ಸೇರಿಸಿದ್ದೀರಿ. ನೀವು ಅದನ್ನು ಮಸಾಲೆ ಹಾಕಿದ್ದೀರಿ' ಎಂದು ಹೇಳಿದರು. ಕಂಗನಾ ಪರವಾಗಿ ವಕೀಲರು ವಿವರಣೆ ನೀಡಬಯಸಿದ್ದಾರೆ ಎಂದು ಹೇಳಿದಾಗ, ಈ ವಿವರಣೆಯನ್ನು ಕೆಳ ನ್ಯಾಯಾಲಯದಲ್ಲಿ ನೀಡಬಹುದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು. ಕಂಗನಾ ಅವರು ಕೋರ್ಟ್​ಗೆ ಖುದ್ದು ಹಾಜರಾಗುವುದರಿಂದ ವಿನಾಯಿತಿ ಕೋರಿದ್ದರಿಂದ ಅದಕ್ಕೆ ಕೋರ್ಟ್​ ಅನುಮತಿ ನೀಡಿತು. ಜೊತೆಗೆ, ಸುಪ್ರೀಂಕೋರ್ಟ್​ಗೆ ಹಾಕಿರುವ ಅರ್ಜಿಯನ್ನು ವಾಪಸ್​ ಪಡೆದುಕೊಳ್ಳುವಂತೆ ಸೂಚಿಸಿತು. ಅದರಂತೆ ಕಂಗನಾ ಅರ್ಜಿಯನ್ನು ವಾಪಸ್​ ಪಡೆದುಕೊಂಡರು.

ಟ್ವೀಟ್​ನಲ್ಲಿ ಏನು ಹೇಳಿದ್ದರು ನಟಿ?

2021 ರಲ್ಲಿ ರೈತರ ಪ್ರತಿಭಟನೆಯ ಸಮಯದಲ್ಲಿ, ಕಂಗನಾ ರಣಾವತ್​ ಅವರು ಟ್ವೀಟ್ ಅನ್ನು ಮರುಟ್ವೀಟ್ ಮಾಡಿದ್ದರು ಮತ್ತು ವಯಸ್ಸಾದ ಮಹಿಳಾ ಪ್ರತಿಭಟನಾಕಾರ ಮಹಿಂದರ್ ಕೌರ್ ಬಗ್ಗೆ ಕಮೆಂಟ್ ಮಾಡಿದ್ದರು. 'ಟೈಮ್ ಮ್ಯಾಗಜೀನ್‌ನಲ್ಲಿ ಅತ್ಯಂತ ಶಕ್ತಿಶಾಲಿ ಭಾರತೀಯ ಎಂದು ವಿವರಿಸಲಾದ ಅದೇ ಅಜ್ಜಿ ಇವರು ಮತ್ತು ಅವರು ₹ 100 ಗೆ ಲಭ್ಯವಿದ್ದಾರೆ ಎಂದಿದ್ದರು. ತನಿಖೆಯ ನಂತರ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕಂಗನಾ ಅವರ ವಿರುದ್ಧ ಆದೇಶ ನೀಡಿತ್ತು. ಇದರ ವಿರುದ್ಧ ಕಂಗನಾ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಲ್ಲಿ ಕೂಡ ಅದನ್ನು ವಜಾಗೊಳಿಸಲಾಗಿತ್ತು. ಇದೀಗ ಸುಪ್ರೀಂಕೋರ್ಟ್​ ಮೊರೆ ಹೋಗಿರುವುದರಿಂದ ಕೆಳ ಹಂತದ ಕೋರ್ಟ್​ನಲ್ಲಿಯೇ ವಾದ ಮುಂದಿಡುವಂತೆ ಕೋರ್ಟ್​ ಹೇಳಿದೆ.

ಇದನ್ನೂ ಓದಿ: ಹೀರೊಗಳು ಕರೆದಕೂಡ್ಲೇ ಕೋಣೆಗೆ ಹೋಗ್ಬೇಕು- ಬಾಲಿವುಡ್​ ಕರಾಳ ಮುಖ ಬಿಚ್ಚಿಟ್ಟ Kangana Ranaut