Bengaluru Women Nidhi Job Terminate: ಇಂದು ಸಾಕಷ್ಟು ಜನರು ಕಾರ್ಪೋರೇಟ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುತ್ತಾರೆ. ಒಂದಿನ ತಕ್ಷಣ ಲೇಆಫ್ ಅಥವಾ ಟರ್ಮಿನೇಟ್ ಎಂದು ಹೇಳಿ ಕೆಲಸದಿಂದ ತೆಗೆದು ಹಾಕಲಾಗುವುದು. ಹೀಗೆ ಟರ್ಮಿನೇಟ್ ಆದ ಬೆಂಗಳೂರಿನ ಹುಡುಗಿಯೊಬ್ಬರು ಏನು ತಪ್ಪು ಮಾಡಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ನಿಧಿ ಎನ್ನುವವರು ಕಾರ್ಪೋರೇಟ್ ಕಂಪೆನಿಯಲ್ಲಿ ಕೆಲಸ ( A Bengaluru employee was allegedly fired ) ಕಳೆದುಕೊಂಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿಷಯ ಹಂಚಿಕೊಂಡಿದ್ದಾರೆ. ನಾನು ಏನು ತಪ್ಪು ಮಾಡಿದೆ ಎಂದು ಅವರು ಹೇಳಿದ್ದಾರೆ.
ಯಾಕೆ ಕೆಲಸ ಹೋಗುತ್ತದೆ?
ಕೆಲಸ ಚೆನ್ನಾಗಿ ಮಾಡಿಲ್ಲ ಎಂದಾಗಲೂ ಕೂಡ ಕೆಲಸ ಹೋಗೋದು ಸಹಜ ಆಗಿದೆ. ಇನ್ನೂ ಕೆಲವೊಮ್ಮೆ ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ಕೂಡ, ಆಫೀಸ್ನ ಒಣ ರಾಜಕೀಯಕ್ಕೆ ಕೆಲಸ ಹೋಗುವಂಥ ಪರಿಸ್ಥಿತಿ ಬರುತ್ತದೆ. ಇನ್ನೂ ಕೆಲವೊಮ್ಮೆ ಸಂಬಳ ಹೆಚ್ಚಿದ್ದರೂ, ಇನ್ಯಾವುದೋ ಬೇಡಿಕೆಗೆ ಒಪ್ಪಿಲ್ಲ ಎಂದಾಗ, ಮ್ಯಾನೇಜರ್ ಹೇಳಿದಂತೆ ಕೇಳಿಲ್ಲ ಎಂದಾಗಲೂ ಕೂಡ ಕೆಲಸ ಹೋಗುವುದು.
ಮ್ಯಾನೇಜರ್ ಮೊಂಡು ಹಠಕ್ಕೋ ಅಥವಾ ಅರ್ಥವಿಲ್ಲದ ಹೇಳಿಕೆಗೆ ಜೈ ಎಂದಿಲ್ಲ ಅಂದಾಗಲೂ ಕೂಡ ಕೆಲಸ ಹೋಗುವುದು. ಅಷ್ಟೇ ಯಾಕೆ? ಇನ್ಯಾವುದೋ ಉದ್ಯೋಗಿಯನ್ನು ಓಲೈಸಲು ಹೋಗಿ ಕೂಡ ಕೆಲಸ ಹೋಗುವುದು. ಆಡುಭಾಷೆಯಲ್ಲಿ ಹೇಳುವಂತೆ ಬಕೆಟ್ ಹಿಡಿದಿಲ್ಲ ಎಂದಾಗಲೂ ಕೆಲಸ ಹೋಗುವುದು.
ಕಾರ್ಪೋರೇಟ್ ಕೆಲಸದ ಮಧ್ಯೆ ನಿಧಿ ಏನೇನು ತಪ್ಪು ಮಾಡಿದೆ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ
ಕೆಲಸವೇ ಅಸ್ತಿತ್ವ ಎಂದುಕೊಂಡೆ
ನನಗೂ ವೈಯಕ್ತಿಕ ಜೀವನ ಇದೆ ಎಂದು ಮರೆತು ಹೋದೆ, ಕೆಲಸವೇ ನನ್ನ ಅಸ್ತಿತ್ವ ಎಂದುಕೊಂಡೆ ಎಂದು ನಿಧಿ ಹೇಳಿದ್ದಾರೆ.
ಆರೋಗ್ಯಕ್ಕೆ ಗಮನ ಕೊಡಲಿಲ್ಲ
ನಾನು ನನಗೂ ಆರೋಗ್ಯ ಇದೆ, ಬದುಕಬೇಕು ಎನ್ನೋದು ಮರೆತೆ. ನನ್ನ ದಿನಚರಿ ಕಡೆಗೆ ಗಮನವೇ ಕೊಡಲಿಲ್ಲ. ಸರಿಯಾಗಿ ಊಟ-ತಿಂಡಿ ಕೂಡ ಮಾಡಲಿಲ್ಲ. ಪೌಷ್ಟಿಕ ಆಹಾರ ತಿನ್ನುತ್ತಿರಲಿಲ್ಲ, ವ್ಯಾಯಾಮ ಮಾಡುತ್ತಿರಲಿಲ್ಲ.
ಒತ್ತಡದಲ್ಲಿ ಬದುಕುತ್ತಿದ್ದೆ
ಆಫೀಸ್ಗೆ ಹೋಗಬೇಕು, ಕೆಲಸ ಆಗಿಲ್ಲ, ಟಾರ್ಗೆಟ್ ರೀಚ್ ಆಗಬೇಕು ಎಂದು ನಾನು ಒತ್ತಡದಲ್ಲಿ ಬದುಕುತ್ತಿದ್ದೆ. ಆಫೀಸ್ಗೆ ಹೋಗೋದು, ಮನೆಗೆ ಬರೋದು ಆಗುತ್ತಿತ್ತು. ಇದರ ಮಧ್ಯೆ ಮಾನಸಿಕವಾಗಿ ಕೂಡ ನನಗೆ ರೆಸ್ಟ್ ಬೇಕು ಎನ್ನೋದು ಮರೆತಿದ್ದೆ ಎಂದು ಹೇಳಿದ್ದಾರೆ.
ಲೈಫ್ಸ್ಟೈಲ್ ಮರೆತಿದ್ದೆ
ಆಫೀಸ್ ಕೆಲಸದ ಮಧ್ಯೆ ಆಹಾರ, ವ್ಯಾಯಾಮದ ಕಡೆಗೆ ಗಮನವೇ ಕೊಡಲಿಲ್ಲ, ಇತರ ಕೌಶಲಗಳನ್ನು ಅಳವಡಿಸಿಕೊಳ್ಳಲು ಯೋಚಿಸಿರಲಿಲ್ಲ. ಅಷ್ಟೇ ಅಲ್ಲದೆ ಸ್ನೇಹಿತರನ್ನು ಭೇಟಿ ಆಗೋದು, ಕುಟುಂಬದ ಕಾರ್ಯಕ್ರಮಗಳಲ್ಲಿ ಭಾಗಿ ಆಗೋದನ್ನು ಬಿಟ್ಟಿದ್ದೆ ಎಂದು ಅವರು ಹೇಳಿದ್ದಾರೆ.


