ನಾವು ಮಕ್ಕಳಿದ್ದಾಗ ನಮಗೆ ಓದು ಮುಖ್ಯ. ಎಜ್ಯುಕೇಷನ್ ಮುಗಿತಾ ಇದ್ದಂಗೆ ಕೆಲ್ಸದ ಒತ್ತಡ ಶುರುವಾಗುತ್ತೆ. ಒಂದು ವಯಸ್ಸಿಗೆ ಕೈತುಂಬಾ ಸಂಬಳ, ಮದುವೆ, ಮಕ್ಕಳಾದ್ರೆ ಆತನನ್ನು ಪರ್ಫೆಕ್ಟ್ ಮ್ಯಾನ್ ಅಂತ ಈ ಸಮಾಜ ಗುರುತಿಸುತ್ತೆ. ಆದ್ರೆ ಆ ಪರ್ಫೆಕ್ಟ್ ವ್ಯಕ್ತಿಯಾಗಲು ಹೋಗಿ ಆತ ಏನೆಲ್ಲ ನೋವು ತಿಂತಾನೆ ಅನ್ನೋದು ಯಾರಿಗೂ ಗೊತ್ತಾಗೋದಿಲ್ಲ. ಈಗ ಎಕ್ಸ್ ನಲ್ಲಿ ಒಂದು ಪೋಸ್ಟ್ ವೈರಲ್ ಆಗಿದೆ.
ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ತಪ್ಪೊಪ್ಪಿಗೆಗಳು ಮತ್ತು ವಾಸ್ತವಗಳು ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಸ್ಟೋರಿ ಒಬ್ಬ ಪರ್ಫೆಕ್ಟ್ ವ್ಯಕ್ತಿಯಾಗಲು ಓಡುವ ಪುರುಷನ ಭಾವನೆಗಳನ್ನು ತೆರೆದಿಡ್ತಿದೆ. ಮಧ್ಯವಯಸ್ಸಿನಲ್ಲಿ ಪುರುಷ ಏನೆಲ್ಲ ಸಮಸ್ಯೆ ಎದುರಿಸಬಲ್ಲ ಎಂಬುದನ್ನು ಇದು ಸ್ಪಷ್ಟಡಿಸಿದೆ.
ಆಫೀಸ್ ನಲ್ಲಿ ಬಾಸ್ – ಮನೆಯಲ್ಲಿ ಡ್ಯಾಡಿ, ಎಲ್ಲ ಇದ್ದೂ ಪರ್ಫೆಕ್ಟ್ ಮ್ಯಾನ್ ಒಂಟಿ
42 ವರ್ಷದ ವ್ಯಕ್ತಿ ಬಳಿ ಏನೆಲ್ಲ ಇದೆ, ಏನೆಲ್ಲ ಇಲ್ಲ ಎಂಬುದನ್ನು ಅವರು ವಿವರಿಸಿದ್ದಾರೆ. ಪೋಸ್ಟ್ ಪ್ರಕಾರ ಚೆನ್ನೈನಲ್ಲಿ ಐಟಿ ವಲಯದಲ್ಲಿ ಹಿರಿಯ ಹುದ್ದೆಯಲ್ಲಿ ಅವರು ಕೆಲ್ಸ ಮಾಡ್ತಿದ್ದಾರೆ. ಅವರ ಹೆಂಡತಿ ಅವರಿಗೆ ಸಪೋರ್ಟ್ ಮಾಡ್ತಿದ್ದಾರೆ. ಇಬ್ಬರು ಮುದ್ದಾದ ಮಕ್ಕಳಿದ್ದಾರೆ. 55 ಲಕ್ಷ ಸಂಬಳ ಬರ್ತಿದೆ. ಎಲ್ಲರೂ ಅವರನ್ನು ಪರ್ಫೆಕ್ಟ್ ಜೀವನ ನಡೆಸುತ್ತಿರುವ ವ್ಯಕ್ತಿ ಅಂತ ಭಾವಿಸ್ತಾರೆ. ಸಮಾಜದ ಅನೇಕ ಪುರುಷರಿಗೆ ಇವರು ಮಾದರಿ ವ್ಯಕ್ತಿಯಂತೆ ಕಾಣ್ತಿದ್ದಾರೆ. ಸಮಾಜ ಬಯಸುವ ಎಲ್ಲವನ್ನೂ ಈ ವ್ಯಕ್ತಿ ಪಡೆದಿದ್ದಾರೆ. ಆದ್ರೆ ಒಳಗೊಳಗೆ ನೋವು ತಿನ್ನುತ್ತಿದ್ದಾರೆ.
ಮೇಲ್ಜಾತಿ ಅಥವಾ 80 ಲಕ್ಷದ ವೇತನ: ವರನಿಗಿರಬೇಕಾದ ಅರ್ಹತೆ ಬಗ್ಗೆ IPS ಅಧಿಕಾರಿ ಪುತ್ರಿಯ ಬೇಡಿಕೆ ಬಗ್ಗೆ ಭಾರಿ ಚರ್ಚೆ
ಅವರ 20ನೇ ವಯಸ್ಸು ಭಿನ್ನವಾಗಿತ್ತು, ಸಮಯ ಕಳೆಯಲು ಸ್ನೇಹಿತರಿದ್ರು. ಮರೀನಾ ಬೀಚ್ನಿಂದ ಬಸಂತ್ ನಗರ ಬೀಚ್ಗೆ ಒಟ್ಟಿಗೆ ಓಡಾಡ್ತಿದ್ದರು. ರೋಹಿಣಿ, ಉದಯಂ ಮತ್ತು ಕಾಶಿ ಚಿತ್ರಮಂದಿರಗಳಲ್ಲಿ ಒಟ್ಟಿಗೆ ಸಿನಿಮಾ ನೋಡುತ್ತಿದ್ದರು. RX100 ಕಾರಿನಲ್ಲಿ ಮೌಂಟ್ ರಸ್ತೆಯಲ್ಲಿ ಓಡಾಡ್ತಿದ್ದರು. 30 ವರ್ಷದಲ್ಲಿ ಜೀವನ ಭಿನ್ನವಾಗಿತ್ತು. ಕೆಲ್ಸದ ಬಿಡುವಿನಲ್ಲಿ ಸ್ನೇಹಿತರು, ಸಹೋದ್ಯೋಗಿಗಳ ಜೊತೆ ಮಾತನಾಡ್ತಿದ್ದರು. ಆದ್ರೆ ಈಗ 42 ವರ್ಷ ಸಂಪೂರ್ಣ ಭಿನ್ನವಾಗಿದೆ ಜೀವನ ಎನ್ನುತ್ತಾರೆ ಅವರು.
40 ರ ದಿನ ಹೀಗಿದೆ
ಈಗ ಫೋನ್ನಲ್ಲಿ ವೈಯಕ್ತಿಕ ಕರೆ ಬರೋದೇ ಅಪರೂಪ. ಒಂದು ಆಫೀಸ್ ನಿಂದ ಇಲ್ಲ ಬ್ಯಾಂಕ್ ಗಳಿಂದ. ಅಪರೂಪಕ್ಕೆ ಹೆಂಡ್ತಿ ಫೋನ್ ಮಾಡಿ ಹಾಲು ತರುವಂತೆ ಹೇಳ್ತಾರೆ. ಈ ಒಂಟಿತನ ವಿಚಿತ್ರವಾಗಿದೆ. ನಾನು ದೈಹಿಕವಾಗಿ ಒಂಟಿಯಲ್ಲ, ಯಂತ್ರವಾಗಿದ್ದೇನೆ ಅಂತ ಅವರು ಬರೆದಿದ್ದಾರೆ. ಆಫೀಸ್ ನಲ್ಲಿ ಎಲ್ಲರೂ ಅವರನ್ನು ಬಾಸ್ ರೀತಿ ನೋಡ್ತಾರೆ. ಎಲ್ಲ ಸಮಸ್ಯೆಗೆ ಇವರ ಬಳಿ ಉತ್ತರ ಇದೆ ಅಂದ್ಕೊಂಡಿದ್ದಾರೆ. ಹೊಸ ಟೆಕ್ನಾಲಜಿ ಜೊತೆ ಹೋರಾಟ ಕಷ್ಟವಾಗ್ತಿದ್ರೂ ಹೇಳಿಕೊಳ್ಳುವಂತಿಲ್ಲ. ಸುಸ್ತಾಗಿದೆ ಅಂತ ಟೀಂಗೆ ಹೇಳೋಹಾಗೂ ಇಲ್ಲ. ಭವಿಷ್ಯದ ಬಗ್ಗೆ ಚಿಂತೆ ಇದ್ರೂ ಎಲ್ಲರ ಮುಂದೆ ಆತ್ಮವಿಶ್ವಾಸ ತೋರಿಸ್ಬೇಕು. ಇನ್ನು ಮನೆಗೆ ಬಂದ್ರೆ ಅಪ್ಪನ ಸ್ಥಾನ ತುಂಬಬೇಕು. ಮನೆಯಲ್ಲಿ ಮಕ್ಕಳು ಪ್ರೀತಿ ತೋರಿಸ್ತಾರೆ ಆದ್ರೆ ಅವರ ಸ್ಕೂಲ್ ಶುಲ್ಕ ತುಂಬೋದು, ವೈ ಫೈ ರಿಪೇರಿ ಇಂಥ ಕೆಲ್ಸ ಮಾಡ್ಬೇಕು. ಮಕ್ಕಳು ಟಿನೇಜರ್ ಆಗಿರೋದ್ರಿಂದ ಅವರ ರೂಮಿನಲ್ಲಿ ಬ್ಯುಸಿ. ಹೆಂಡ್ತಿ ಮಕ್ಕಳನ್ನು ನೋಡಿಕೊಳ್ಳೋದ್ರಲ್ಲಿ ಬ್ಯುಸಿ. ನಾನು ಕುಟುಂಬಕ್ಕೆ ಸೌಕರ್ಯ ಒದಗಿಸುವ ವ್ಯಕ್ತಿ.
ನಾನು ಪ್ರೆಗ್ನೆಂಟ್ ಆದಾಗಲೇ ನನಗೆ ಲವ್ ಇರೋದು ಗೊತ್ತಾಗಿದ್ದು! ನೇಹಾ ಧೂಪಿಯಾ ವಿಚಿತ್ರ ಲವ್ ಸ್ಟೋರಿ ಹೇಗಿತ್ತು?!
ಈಗ ಸ್ನೇಹಿತರಿಲ್ಲ. ಅಪರೂಪಕ್ಕೆ ಸಿಗುವ ಅವರ ಮಾತು, ಮಕ್ಕಳು, ಕೆಲ್ಸದ ಮೇಲಿರುತ್ತೆ. ಮದುವೆ, ಬರ್ತ್ ಡೇ ಗೆ ವಾಟ್ಸ್ ಅಪ್ ನಲ್ಲಿ ವಿಶ್ ಮಾಡಲಷ್ಟೇ ಸ್ನೇಹ ಸೀಮಿತವಾಗಿದೆ. ಆಪೀಸ್ ನಿಂದ ಮನೆಗೆ ಬರುವಾಗ ನಿಧಾನವಾಗಿ ಕಾರು ಓಡಿಸೋ ನಾನು ನನಗಾಗಿ ಸಮಯ ತೆಗೆದಿಡ್ತಿದ್ದೇನೆ. ನನ್ನಿಷ್ಟದ ಹಾಡು ಕೇಳ್ತಾ ಅಪ್ಪನಾಗ್ದೆ, ಬಾಸ್ ಆಗ್ದೆ ನಾನು ನಾನಾಗಿರ್ತೇನೆ. ಈ ವಿಷ್ಯವನ್ನು ಮನೆಯಲ್ಲಿ ಹೇಳಿದ್ರೆ ಅವರು ಅಚ್ಚರಿಗೊಳ್ತಾರೆ. ನಾವೆಲ್ಲ ಇದ್ದೇವಲ್ಲ ಎನ್ನುತ್ತಾರೆ. ಎಲ್ಲರೂ ಇದ್ದು ನಿರ್ಜನ ದ್ವೀಪದಲ್ಲಿ ನಾನಿದ್ದೇನೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳೋದಿಲ್ಲ. ಕುಟುಂಬಕ್ಕೆ ಹಣ, ಭದ್ರತೆ ಒದಗಿಸಿದ್ರೆ ನೀನು ಪರ್ಫೆಕ್ಟ್ ಎನ್ನುವ ಸಮಾಜ, ಈ ಜೀವನದಲ್ಲಿ ಬರುವ ಮೌನ ಹೇಗೆ ಎದುರಿಸಬೇಕು ಎಂಬುದನ್ನು ಕಲಿಸಿಲ್ಲ ಅಂತ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ.


