ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ, 3 ತಿಂಗಳ ಮಗುವನ್ನು ತನ್ನದೆಂದು ಭಾವಿಸಿದ ಮಂಗವೊಂದು ಎರಡು ಗಂಟೆಗಳ ಕಾಲ ಬಿಗಿದಪ್ಪಿಕೊಂಡಿತ್ತು. ಕುಟುಂಬದವರ ಆತಂಕದ ನಡುವೆಯೂ, ಮಗುವಿಗೆ ಹಾನಿ ಮಾಡದೆ ಅಮ್ಮನಂತೆ ಪ್ರೀತಿ ತೋರಿದ್ದು, ಕೊನೆಗೆ ಪ್ರಾಣಿ ರಕ್ಷಕರು ಮಗುವನ್ನು ರಕ್ಷಿಸಿದರು.
ಮಂಗನಿಗೂ, ಮನುಷ್ಯರಿಗೂ ಅವಿನಾಭಾವ ಸಂಬಂಧವಿದೆ. ಅಷ್ಟಕ್ಕೂ ಮಂಗನಿಂದಲೇ ಮಾನವ ಎನ್ನುವುದು ಉಂಟು. ಮಂಗ ಹಾಗೂ ಮನುಷ್ಯನ ಸ್ವಭಾವದಲ್ಲಿ ಸಿಕ್ಕಾಪಟ್ಟೆ ಹೋಲಿಕೆಯೂ ಇದೆ. ಆದರೆ, ಇಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಅದ್ಯಾವ ಜನ್ಮದ ಬಂಧವೋ ಏನೋ. 3 ತಿಂಗಳ ಪುಟಾಣಿಯನ್ನು ತನ್ನದೇ ಮಗು ಎಂದು ಭಾವಿಸಿದ ಮಂಗವೊಂದು ಎರಡು ಗಂಟೆಗಳ ಕಾಲ ಆ ಶಿಶುವನ್ನು ಅಪ್ಪಿಕೊಂಡು ಯಾರಿಗೂ ಕೊಡದೇ ಆತಂಕದ ವಾತಾವರಣ ನಿರ್ಮಾಣ ಮಾಡಿದ ಘಟನೆ ಉತ್ತರ ಪ್ರದೇಶದ ಮುಜಫರ್ ನಗರದಲ್ಲಿ ನಡೆದಿದೆ. ಚರಥವಾಲ್ ಪಟ್ಟಣದ ಜಾಹಿದ್ ಶಾಲೆಯ ಹಿಂದೆ ವಾಸಿಸುವ ತಹ್ಸೀನ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಆ ಮಂಗ ಮಗುವನ್ನು ಏನು ಮಾಡಿಬಿಟ್ಟೀತು ಎನ್ನುವ ಭಯದ ನಡುವೆಯೇ, ಅಮ್ಮನ ಪ್ರೀತಿಯ ಮನಕಲುಕುವ ವಿಡಿಯೋ ಕೂಡ ಇದಾಗಿದೆ.
ಆಗಿದ್ದೇನು?
ಕುಟುಂಬದ ಸದಸ್ಯರು 3 ತಿಂಗಳ ಮಗುವನ್ನು ನೆಲದ ಮೇಲೆ ಮಲಗಿಸಿ ಅಲ್ಲಿಯೇ ಸಮೀಪ ಕೆಲಸಕ್ಕೆ ಹೋಗಿದ್ದರು. ದಿಢೀರನೆ ಅಲ್ಲಿ ಮಂಗ ಬಂದಿದೆ. ಮಗುವಿನ ಜೊತೆ ಆಟವಾಡುತ್ತಿದೆ. ಆದರೆ ಪಾಲಕರಿಗೆ ಇದು ತಿಳಿಯಲೇ ಇಲ್ಲ. ಏಕೆಂದರೆ ಆ ಮಗು ಕೂಡ ಅತ್ತಿರಲಿಕ್ಕಿಲ್ಲ. ಮಗು ಕೂಡ ಅದ ಜೊತೆ ಆಟವಾಡುತ್ತಲೇ ಇತ್ತು. ಮಗುವನ್ನು ಮುದ್ದಿಸುತ್ತಾ, ಅದಕ್ಕೆ ತಮಾಷೆಯಾಗಿ ಅಮ್ಮ ಹೊಡೆದಂತೆ ಹೊಡೆಯುತ್ತಾ ಆಟವಾಡುತ್ತಿತ್ತು. ಸ್ವಲ್ಪ ಸಮಯದ ನಂತರ, ಕುಟುಂಬದವರು ಮನೆಗೆ ಹಿಂದಿರುಗಿದಾಗ, ಅವರು ಭಯದಿಂದ ಗಾಬರಿಗೊಂಡರು. ಕೋತಿಯನ್ನು ಓಡಿಸಲು ನೋಡಿದು. ಇದನ್ನು ನೋಡಿ ಕೋತಿಗೆ ಸಿಕ್ಕಾಪಟ್ಟೆ ಸಿಟ್ಟುಬಂದಿತು. ತನ್ನ ಮಗುವನ್ನು ಯಾರಾದರೂ ಕಿಡ್ನ್ಯಾಪ್ ಮಾಡಲು ಬಂದರೆ ಅಮ್ಮನಿಗೆ ಹೇಗೆ ಕೋಪ ಬರುತ್ತದೆಯೋ ಅದೇ ರೀತಿ ಕೋತಿ ಆಕ್ರಮಣಕಾರಿಯಾಯಿತು ಮತ್ತು ಅವರ ಕಡೆಗೆ ಓಡಿಹೋಗಲು ಪ್ರಾರಂಭಿಸಿತು, ಅವರನ್ನು ಕಚ್ಚಲು ಪ್ರಯತ್ನಿಸಿತು. ಅಲ್ಲಿಯವರೆಗೆ ನಗುನಗುತ್ತಾ ಇದ್ದ ಕಂಡ ಇವೆಲ್ಲಾ ಘಟನೆಯಿಂದ ಜೋರಾಗಿ ಅಳಲು ಪ್ರಾರಂಭಿಸಿತು. ಇದನ್ನು ನೋಡಿ ಕೋತಿಗೆ ಮತ್ತಷ್ಟು ಜನರ ಮೇಲೆ ಕೋಪ ಬಂದಿತು. ತನ್ನ ಮಗುವಿಗೆ ಅಳಿಸಿದ್ರು ಎನ್ನುವುದು ಆ ಕೋಪವಾಗಿತ್ತೋ ಏನೋ.
ಕದಲದ ಕೋತಿ
ಕುಟುಂಬ ಸದಸ್ಯರು ಕೋತಿಯನ್ನು ಹೆದರಿಸಲು ಎಲ್ಲ ರೀತಿಯ ಪ್ರಯತ್ನ ಪಟ್ಟರು. . ಅವರು ಅದಕ್ಕೆ ಆಹಾರವನ್ನು ನೀಡಿದರು ಮತ್ತು ಕೋಲಿನಿಂದ ಬೆದರಿಸಿದರು, ಆದರೆ ಕೋತಿ ಅಲುಗಾಡಲಿಲ್ಲ. ಅದು ಮಗುವಿನ ಬಳಿಯೇ ಕುಳಿತಿತ್ತು. ಮಗು ಅಳುತ್ತಲೇ ಇತ್ತು, ಇಷ್ಟಾದರೂ ಕೋತಿ ಮಗುವಿಗೆ ಹಾನಿ ಮಾಡಲಿಲ್ಲ; ಅದು ಅದನ್ನು ಹಿಡಿದಿಟ್ಟುಕೊಂಡಿತು. ನಂತರ, ಕುಟುಂಬವು ಪ್ರಾಣಿ ರಕ್ಷಕರನ್ನು ಸಂಪರ್ಕಿಸಿತು, ಅವರು ಮನೆಗೆ ಬಂದರು.
ವಿಡಿಯೋ ವೈರಲ್
ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ವನ್ಯಜೀವಿ ವೀಡಿಯೊಗಳನ್ನು ತೋರಿಸುವ ಮೂಲಕ ಕೋತಿಯ ಗಮನವನ್ನು ಬೇರೆಡೆಗೆ ಸೆಳೆದರು. ಕೋತಿ ಮೊಬೈಲ್ ಕಡೆಗೆ ಚಲಿಸಿದ ತಕ್ಷಣ, ಮಗುವನ್ನು ಅವರು ತಮ್ಮ ಹತ್ತಿರ ತೆಗೆದುಕೊಂಡರು. ಜಿಲ್ಲಾ ಕೇಂದ್ರದಿಂದ 15 ಕಿ.ಮೀ ದೂರದಲ್ಲಿರುವ ಚರಥವಾಲ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ಇದರ ವಿಡಿಯೋ ವೈರಲ್ ಆಗಿದೆ. ಇದರಲ್ಲಿ, ಕೋತಿ ಮಗುವಿನ ಬಳಿ ಕುಳಿತು, ಮಗುವಿನ ಕೈಯನ್ನು ಒಂದು ಕೈಯಿಂದ ಹಿಡಿದು ಇನ್ನೊಂದು ಕೈಯನ್ನು ಮಗುವಿನ ಹೊಟ್ಟೆಯ ಮೇಲೆ ಇರಿಸಿದ್ದನ್ನು ನೋಡಬಹುದು. ಮಗು ತನ್ನ ಕುಟುಂಬದ ಕಡೆಗೆ ಕೈ ಚಾಚಿದಾಗಲೆಲ್ಲಾ, ಕೋತಿ ಅದನ್ನು ತಕ್ಷಣವೇ ಹಿಂದಕ್ಕೆ ಎಳೆಯುವುದನ್ನು ಕಾಣಬಹುದಾಗಿದೆ.


