ಈ ಜರ್ಮನ್ ಶೆಫರ್ಡ್ ಶ್ವಾನಗಳು ಮನೆಯ ಪುಟ್ಟ ಮಕ್ಕಳು ಹಾಗೂ ಮನೆಯ ಮಾಲೀಕರ ಜೊತೆಗೆ ಅದು ಹೊಂದಿರುವ ಸಂಬಂಧ ಬಹಳ ಅನೋನ್ಯ ಹಾಗೂ ಬಹಳ ಭಾವುಕತೆಯಿಂದ ಕೂಡಿರುವಂತಹದ್ದು, ಹಾಗೆಯೇ ಇಲ್ಲೊಂದು ಪುಟ್ಟ ಬಾಲಕಿ ಹಾಗೂ ಜರ್ಮನ್‌ ಶೆಫರ್ಡ್ ನಾಯಿಯ ಒಡನಾಟದ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.

ಶ್ವಾನಗಳು ಬುದ್ಧಿವಂತ ಸ್ವಾಮಿನಿಷ್ಠ ಪ್ರಾಣಿಗಳು, ಅದರಲ್ಲೂ ಜರ್ಮನ್ ಶೆಫರ್ಡ್ ಶ್ವಾನಗಳು ಬುದ್ಧಿವಂತಿಕೆಗೆ ಸಾಟಿ ಇಲ್ಲ, ಪುಟಾಣಿ ಮಕ್ಕಳು ಮನೆಯಲ್ಲಿದ್ದಾರೆ ಎಂದರೆ ಸದಾ ಜಾಗರೂಕವಾಗಿರುವ ಈ ಜರ್ಮನ್‌ ಶೆಫರ್ಡ್ ಶ್ವಾನಗಳು ಅಷ್ಟೇ ಪ್ರಾಮಾಣಿಕ ನಂಬಿಕಸ್ಥ ಪ್ರಾಣಿಯೂ ಹೌದು. ಜರ್ಮನಿಯಲ್ಲಿ ಆರಂಭದಲ್ಲಿ ಕುರಿಗಳನ್ನು ಮೇಯಿಸುವುದಕ್ಕೆ ಹಾಗೂ ಪರಭಕ್ಷಕಗಳಿಂದ ಅವುಗಳನ್ನು ರಕ್ಷಿಸುವುದಕ್ಕೆ ಈ ಜರ್ಮನ್ ಶೆಫರ್ಡ್ ಶ್ವಾನಗಳನ್ನು ಕುರಿಗಾಹಿಗಳು ಬಳಸುತ್ತಿದ್ದರು. ಕುರಿಗಳನ್ನು ಮೇಯಿಸುವುದಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಈ ತಳಿ ಹೊಂದಿದೆ ಎಂದು ಆಗಲೇ ಗುರುತಿಸಲಾಯ್ತು. ಅವುಗಳ ವೇಗ, ಶಕ್ತಿ ಮತ್ತು ವಾಸನೆ ಗ್ರಹಿಸುವಿಕೆಯ ತೀಕ್ಷ್ಣ ಪ್ರಜ್ಞೆಯಿಂದಾಗಿ ಈ ಶ್ವಾನಗಳು ಕುರಿಗಳನ್ನು ಮೇಯಿಸುವ ಸಾಮರ್ಥ್ಯ ಹೊಂದಿವೆ ಎಂದು ಗ್ರಹಿಸಲಾಯ್ತು. ಆದರೆ ಅವು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ನೋಟ ಮತ್ತು ಸಾಮರ್ಥ್ಯ ಎರಡರಲ್ಲೂ ಗಮನಾರ್ಹವಾಗಿ ಭಿನ್ನವಾಗಿದ್ದವು. ಅದೇನೆ ಇರಲಿ ಈ ಜರ್ಮನ್ ಶೆಫರ್ಡ್ ಶ್ವಾನಗಳು ಮನೆಯ ಪುಟ್ಟ ಮಕ್ಕಳು ಹಾಗೂ ಮನೆಯ ಮಾಲೀಕರ ಜೊತೆಗೆ ಅದು ಹೊಂದಿರುವ ಸಂಬಂಧ ಬಹಳ ಅನೋನ್ಯ ಹಾಗೂ ಬಹಳ ಭಾವುಕತೆಯಿಂದ ಕೂಡಿರುವಂತಹದ್ದು, ಹಾಗೆಯೇ ಇಲ್ಲೊಂದು ಪುಟ್ಟ ಬಾಲಕಿ ಹಾಗೂ ಜರ್ಮನ್‌ ಶೆಫರ್ಡ್ ನಾಯಿಯ ಒಡನಾಟದ ವೀಡಿಯೋ ಈಗ ಇಂಟರ್‌ನೆಟ್‌ನಲ್ಲಿ ಭಾರಿ ವೈರಲ್ ಆಗಿದೆ.

Truth Route News ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಸಾಮಾನ್ಯವಾಗಿ ನಾಯಿಗಳು ಮನುಷ್ಯನ ಆಗಮನವನ್ನು ಕೆಲವು ಮೀಟರ್ ದೂರದಿಂದಲೇ ಗುರುತಿಸುತ್ತವೆ. ಹಾಗೆಯೇ ಇಲ್ಲಿ ವೀಡಿಯೋದಲ್ಲಿ ಕಾಣುವಂತೆ ಶಾಲೆಯಿಂದ ಬಂದ ಪುಟ್ಟ ಬಾಲಕಿ ಹೋಮ್‌ ವರ್ಕ್‌ ಮಾಡುವುದನ್ನು ಬಿಟ್ಟು ಟಿವಿ ನೋಡುತ್ತಾ ಕುಳಿತಿರುತ್ತಾಳೆ. ಆಕೆಯ ಪಕ್ಕದಲ್ಲೇ ನೆಲದಲ್ಲೇ ಜರ್ಮನ್ ಶೆಫರ್ಡ್‌ ಶ್ವಾನವೊಂದು ಮಲಗಿದೆ. ಕೆಲ ಸೆಕೆಂಡ್‌ಗಳಲ್ಲಿ ಎದ್ದು ನಿಂತ ಶ್ವಾನ ಬೊಗಳುವುದಕ್ಕೆ ಶುರು ಮಾಡಿದೆ. ಟಿವಿ ನೋಡುತ್ತಿದ್ದ ಬಾಲಕಿಗೆ ಎಚ್ಚರಿಕೆ ನೀಡಿದೆ. ಆದರೆ ಬಾಲಕಿ ಮಾತ್ರ ಟಿವಿ ನೋಡುವುದರಲ್ಲೇ ಮುಳುಗಿ ಹೋಗಿದ್ದಾಳೆ. ನಂತರ ಶ್ವಾನ ಆಕೆಯ ಬಳಿ ಬಂದು ಆಕೆಯ ಕೈಯನ್ನು ತನ್ನ ಮುಂಗಾಲಿನಿಂದ ಟಚ್ ಮಾಡುವ ಮೂಲಕ ಆಕೆಯನ್ನು ಎಚ್ಚರಿಸುತ್ತದೆ.

ಕೂಡಲೇ ಬಾಲಕಿ ರಿಮೋಟ್‌ನಿಂದ ಟಿವಿ ಆಫ್ ಮಾಡಿ ಹೋಮ್‌ ವರ್ಕ್ ಮಾಡುವುದಕ್ಕೆ ಪಕ್ಕದಲ್ಲಿದ್ದ ಪುಟ್ಟ ಚೇರ್ ಮೇಲೆ ಕುಳಿತುಕೊಳ್ಳುತ್ತಾಳೆ. ಅಷ್ಟರಲ್ಲಿ ಬಾಲಕಿಯ ತಂದೆ ಬಾಗಿಲು ತೆರೆದು ಮನೆಗೆ ಬಂದಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದ್ದು, ವೀಡಿಯೋ ಶೇರ್ ಮಾಡಿದ Truth Route News ಪ್ರಕಾರ ಸಿಸಿಟಿವಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದೆ.

ಇದನ್ನೂ ಓದಿ : ನಾ ಚೆನ್ನಾಗಿಲ್ಲ, ನಾ ಬಿಳಿ ಇಲ್ಲ, ನನ್ನ ಕುರೂಪಿ ಅಂತಾರೆ: ಪುಟ್ಟ ಮಗಳ ಅಳು ಕೇಳಲಾಗದೇ ನೆಟ್ಟಿಗರ ಸಲಹೆ ಕೇಳಿದ ತಾಯಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊದಲ್ಲಿ ಜರ್ಮನ್ ಶೆಫರ್ಡ್ ನಾಯಿಯೊಂದು ತನ್ನ ಮಾಲೀಕ ಬಾಗಿಲಿಗೆ ಬಂದ ಕ್ಷಣದಲ್ಲಿ ಬಾಲಕಿಗೆ ಎಚ್ಚರಿಕೆ ನೀಡುತ್ತಿರುವುದನ್ನು ತೋರಿಸಲಾಗಿದೆ. ಬಾಲಕಿಯ ತಂದೆ ಹಂಚಿಕೊಂಡಿರುವ ಈ ಕ್ಲಿಪ್ ಭದ್ರತಾ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆ ದೃಶ್ಯಾವಳಿ ಇಲ್ಲದಿದ್ದರೆ, ತಾನು ಆ ಕ್ಷಣವನ್ನು ನಂಬುತ್ತಿರಲಿಲ್ಲ ಎಂದು ಅವರು ಹೇಳುತ್ತಾರೆ. ನಾಯಿ ಬೇಗನೆ ಪ್ರತಿಕ್ರಿಯಿಸಿ ಹುಡುಗಿಗೆ ಸಂಕೇತ ನೀಡುವುದನ್ನು ವೀಡಿಯೊ ತೋರಿಸುತ್ತದೆ ನಂತರ ಹುಡುಗಿ ಟಿವಿ ಆಫ್ ಮಾಡಿ ಹೊರಡಲು ಸಿದ್ಧಳಾಗುತ್ತಾಳೆ ಎಂದು Truth Route News ಇನ್ಸ್ಟಾದಲ್ಲಿ ಬರೆದುಕೊಂಡಿದೆ.

ಇದನ್ನೂ ಓದಿ: ವಾರ್ಷಿಕೋತ್ಸವದ ವೇಳೆ ಮಕ್ಕಳು ಡಾನ್ಸ್ ಸ್ಟೆಪ್ ತಪ್ಪಿಸಬಾರದು ಎಂದು ಟೀಚರ್‌ ಏನ್ ಮಾಡಿದ್ರು ನೋಡಿ

ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಇಬ್ಬರು ಸ್ನೇಹಿತರರ ಮಧ್ಯೆ ಒಳ್ಳೆಯ ಅರ್ಥ ಮಾಡಿಕೊಳ್ಳುವಿಕೆ ಇದ್ದಾಗ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಶ್ವಾನ ನಿಜವಾಗಿಯೂ ಹೀರೋ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಮನೆಗೆ ಬಂದ ಅಪ್ಪ ಮಗಳನ್ನಾಗಲಿ ಶ್ವಾನವನ್ನಾಗಲಿ ಮಾತನಾಡಿಸದೇ ಸೀದಾ ಹೋಗಿರುವುದನ್ನು ಗಮನಿಸಿದ್ದು, ಇಲ್ಲೇನೋ ಕೊರತೆ ಇದೆ ಎಂದು ಕಾಮೆಂಟ್ ಮಾಡಿದ್ದಾರೆ. ಅದಕ್ಕೆ ಕೆಲವರು ಪ್ರತಿಕ್ರಿಯಿಸಿ ಬಹುಶಃ ಆತ ಮರೆತು ಹೋಗಿ ವಾಪಸ್ ಬಂದಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಶ್ವಾನ ಬೆಸ್ಟ್ ಫ್ರೆಂಡ್ ಎಂದು ಇನ್ನೂ ಹಲವರು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ..

View post on Instagram