ಇತ್ತೀಚಿಗಷ್ಟೇ ತನ್ನ ಐದನೇ ಮದುವೆಯ ಕಾರಣಕ್ಕಾಗಿ ಹಿರಿಹಿರಿ ಹಿಗ್ಗಿದ್ದ 92ರ ಅಜ್ಜ, ಮಾಧ್ಯಮ ದೊರೆ ರುಪರ್ಟ್‌ ಮುರ್ಡೋಕ್‌ಗೆ ಬ್ರೇಕ್‌ಅಪ್‌ ಆಗಿದೆ. ಆಕೆಯ ಅತಿಯಾದ ಧಾರ್ಮಿಕ ನಂಬಿಕೆಯನ್ನು ಸಹಿಸೋಕೆ ಸಾಧ್ಯವಿಲ್ಲ ಎಂದು ಆನ್‌ ಲೆಸ್ಲಿ ಜೊತೆಗಿನ ಮದುವೆಯನ್ನು ರದ್ದು ಮಾಡಿದ್ದಾರೆ. 

ನವದೆಹಲಿ (ಏ.7): ಎಳೆ ವಯಸ್ಸಿನ ಹುಡುಗರಿಗೆ ಬ್ರೇಕ್‌ಅಪ್‌ ಆದ್ರೆ ತಡೆದುಕೊಳ್ಳೋಕೆ ಆಗೋದಿಲ್ಲ. ಅಂಥದ್ದರಲ್ಲಿ ಇಳಿ ವಯಸ್ಸಿನಲ್ಲಿ ಪ್ರೀತಿಸಿದ ಹುಡುಗಿಯ ಜೊತೆ ಬ್ರೇಕ್‌ ಅಪ್‌ ಆಯ್ತು ಅಂದ್ರೆ ತಲೆಬಿಸಿ ಆಗೋದಿಲ್ವಾ? ಹೌದು, ಜಗತ್ತಿನ ಮಾಧ್ಯಮ ಲೋಕವನ್ನು ಆಳುತ್ತಿರುವ ಮಾಧ್ಯಮ ದೊರೆ ರುಪರ್ಟ್‌ ಮುರ್ಡೋಕ್‌ 92ನೇ ವಯಸ್ಸಿನಲ್ಲಿ ಪ್ರೀತಿಸಿದ ಹುಡುಗಿಯಿಂದ ಬ್ರೇಕ್‌ಅಪ್‌ ಮಾಡಿಕೊಂಡಿದ್ದಾರೆ. ಕಳೆದ ತಿಂಗಳಷ್ಟೇ ಆನ್‌ ಲೆಸ್ಲಿ ಜೊತೆಗೆ ಮದುವೆಯಾಗುವುದಾಗಿ ಘೋಷಣೆ ಮಾಡಿದ್ದ ರುಪರ್ಟ್‌ ಮುರ್ಡೋಕ್‌, ತಾವೇ ಖುದ್ದಾಗಿ ತಂದ ವಜ್ರದ ಉಂಗುರವನ್ನು ಆಕೆಗೆ ತೊಡಿಸಿದ್ದರು. ನೋಡ್ತಾ ಇರಿ ಕೆಲವೇ ದಿನಗಳಲ್ಲಿ ನಾವು ಮದುವೆಯಾಗೋ ಚಿತ್ರಗಳನ್ನೂ ನೋಡ್ತೀರಿ. ನನಗೆ ಬಹಳ ವಯಸ್ಸಾಗಿದೆ. ಬಹುಶಃ ಇದು ನನ್ನ ಕೊನೆಯ ಲವ್‌ ಹಾಗೂ ಕೊನೆಯ ಮದುವೆ ಎಂದು ಅದಾಗಲೇ ನಾಲ್ಕು ಮದುವೆಯಾಗಿ, ವಿಚ್ಛೇದನವನ್ನೂ ಎದುರಿಸಿದ್ದ ರುಪರ್ಟ್‌ ಮುರ್ಡೋಕ್‌ ಹೇಳಿದ್ದರು. ಹೀಗೆಲ್ಲಾ ಇರುವಾಗ ಆನ್‌ ಲೆಸ್ಲಿಯ ಜೊತೆಗಿನ ನಿಶ್ಚಿತಾರ್ಥವನ್ನು ರುಪರ್ಟ್‌ ಮುರ್ಡೋಕ್‌ ತಾವೇ ಖುದ್ದಾಗಿ ರದ್ದು ಮಾಡಿದ್ದಾರಂತೆ. ಅದಕ್ಕೆ ಕಾರಣ, ಆಕೆಯ ಅತಿಯಾದ ಧಾರ್ಮಿಕತೆ. ಫ್ಯಾಕ್ಸ್‌ ಕಾರ್ಪೋರೇಷನ್‌ನ ಚೇರ್ಮನ್‌ ಆಗಿರುವ ರುಪರ್ಟ್‌ ಮುರ್ಡೋಕ್‌ನ ಆಪ್ತರು ಈ ವಿಚಾರವನ್ನು ವ್ಯಾನಿಟಿ ಫೇರ್‌ ಮ್ಯಾಗಝೀನ್‌ಗೆ ತಿಳಿಸಿದ್ದಾರೆ. ರೇಡಿಯೋ ನಿರೂಪಕಿಯೂ ಆಗಿರುವ 66 ವರ್ಷದ ಆನ್‌ ಲೆಸ್ಲಿ ಅವರ ಅತಿಯಾದ ಧಾರ್ಮಿಕತೆ ಸಹಿಸೋಕೆ ಆಗುತ್ತಿಲ್ಲ. ಇದರಿಂದ ನನಗೆ ಹಿತ ಅನಿಸುತ್ತಿಲ್ಲ ಎಂದು ರುಪರ್ಟ್‌ ಮುರ್ಡೋಕ್‌ ಹೇಳಿದ್ದಾರಂತೆ.

ಸೋಶಿಯಲ್‌ ಮೀಡಿಯಾಗಳಲ್ಲಿ ಹೈಜಿನ್‌ ಹಾಗೂ ಡಯಟ್‌ ಪ್ಲ್ಯಾನ್‌ ಬಗ್ಗೆ ಮಾತನಾಡುವ ಆನ್‌ ಲೆಸ್ಲಿ ಸ್ಮಿತ್‌ ಜೊತೆ ಇದೇ ಬೇಸಿಗೆಯಲ್ಲಿ ಮರ್ಡೋಕ್‌ ಮದುವೆಯಾಗಬೇಕಿತ್ತು. ತನ್ನ ನಾಲ್ಕನೇ ಪತ್ನಿ ಜೆರ್ರಿ ಹಾಲ್‌ರಿಂದ ವಿಚ್ಛೇದನ ಪಡೆದುಕೊಂದು ಕೆಲವೇ ತಿಂಗಳಲ್ಲಿ ರುಪರ್ಟ್‌ ಮುರ್ಡೋಕ್‌ ತನ್ನ ಹೊಸ ಸಂಗಾತಿಯನ್ನು ಘೋಷಿಸಿದ್ದು ಮಾತ್ರವಲ್ಲದೆ, ಆಕೆಯೊಂದಿಗೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು. ಮಾಜಿ ಮಾಡೆಲ್‌ ಕೂಡ ಆಗಿರುವ ಆನ್‌ ಲೆಸ್ಲಿಗೆ 25 ಲಕ್ಷ ರೂಪಾಯಿ ಮೌಲ್ಯದ 11 ಕ್ಯಾರಟ್‌ ವಜ್ರದ ಉಂಗುರವನ್ನು ಮುರ್ಡೋಕ್‌ ತೊಡಿಸಿದ್ದರು ಎಂದು ಡೇಲಿ ಮೇಲ್‌ ಪತ್ರಿಕೆ ವರದಿ ಮಾಡಿತ್ತು.

ಈ ವರ್ಷದ ಜನವರಿಯಲ್ಲಿ ಮುರ್ಡೋಕ್‌ ಹಾಗೂ ಆನ್‌ ಲೆಸ್ಲಿ ಜೊತೆಯಾಗಿ ಬಾರ್ಬೋಡೋಸ್‌ನಲ್ಲಿ ಸುಖಕರ ಸಮಯವನ್ನು ಕಳೆದಿದ್ದರು. ಫೆಬ್ರವರಿಯಲ್ಲಿ, ಸೆಂಟ್ರಲ್ ಪಾರ್ಕ್ ಸೌತ್‌ನಲ್ಲಿ 6,500-ಚದರ-ಅಡಿ ಮನೆಯನ್ನು ಸುಮಾರು $30 ಮಿಲಿಯನ್‌ ಅಮೆರಿಕನ್‌ ಡಾಲರ್‌ಗೆ ಖರೀದಿ ಮಾಡಲು ಯೋಜನೆ ರೂಪಿಸುತ್ತಿದ್ದಾರೆ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ಸುದ್ದಿ ಪ್ರಕಟ ಮಾಡಿತ್ತು.

ಆ ಬಳಿಕ ನ್ಯೂಯಾರ್ಕ್‌ ಟೈಮ್ಸ್‌ನ ಸಿಂಡಿ ಆಡಮ್ಸ್‌ ಜೊತೆಗಿನ ಸಂದರ್ಶನದಲ್ಲಿ ಆನ್‌ ಲೆಸ್ಲಿ ಜೊತೆಗೆ ನಿಶ್ಚಿತಾರ್ಥವಾಗಿದ್ದನ್ನು ಸ್ವತಃ ಮುರ್ಡೋಕ್‌ ಖಚಿತಪಡಿಸಿದ್ದರು. 'ನಾನು ಬಹಳ ನರ್ವಸ್‌ ಆಗಿದ್ದೆ. ಪ್ರೀತಿಯಲ್ಲಿ ಬೀಳೋದು ನನಗೆ ಸಾಮಾನ್ಯವಾಗಿದೆ. ಆದರೆ, ನನಗೆ ಗೊತ್ತು ಬಹುಶಃ ಇದು ನನ್ನ ಕೊನೆ ಪ್ರೀತಿ. ಹಾಗೆ ಆಗಿದ್ದರೆ ಒಳ್ಳೆಯದು. ನನಗೆ ಖುಷಿಯಂತೂ ಇದೆ' ಎಂದು ಹೇಳಿದ್ದರು. ಇದೇ ವೇಳೆ ಸೇಂಟ್‌ ಪ್ಯಾಟ್ರಿಕ್ಸ್‌ ಡೇಯಂದು ಆನ್‌ ಲೆಸ್ಲಿಗೆ ಪ್ರಪೋಸ್‌ ಮಾಡಿದ್ದನ್ನು ಖಚಿತಪಡಿಸಿದ್ದರು.

'ಇದೇ ಲಾಸ್ಟು..' ಅಂದ್ಕೊಂಡು 92ನೇ ವರ್ಷದಲ್ಲಿ ಐದನೇ ಬಾರಿ ಮದುವೆಯಾದ ರುಪರ್ಟ್‌ ಮುರ್ಡೋಕ್‌!

14 ವರ್ಷದ ಹಿಂದೆ ಪತಿಯ ಮರಣದ ಬಳಿಕ ಆನ್‌ ಲೆಸ್ಲಿ ಹೆಚ್ಚಾಗಿ ಸಾಮಾಜಿಕ ಕಾರ್ಯಗಳಲ್ಲಿಯೇ ತೊಡಗಿಕೊಂಡಿದ್ದರು. ಮುರ್ಡೋಕ್‌ ಜೊತೆಗಿನ ಮದುವೆ ವಿಚಾರವಾಗಿ ಮಾತನಾಡಿದ್ದು ಅವರು, ಕೊನಗೂ ನನ್ನ ಜೀವನದಲ್ಲಿ ಸರಿಯಾದ ಸಮಯ ಬಂದಿದೆ. ಇಷ್ಟು ವರ್ಷಗಳ ಕಾಲ ಕಾದಿದ್ದು ಸಾರ್ಥಕವಾಗಿದೆ. ನನ್ನ ಜೀವನದ ಕೊನೆಯ ಹಾಫ್‌ಅನ್ನು ಎದುರಿಸಲು ಉತ್ಸುಕಳಾಗಿದ್ದೇನೆ ಎಂದಿದ್ದರು.

'ಹಾರ್ಟ್‌ಬ್ರೇಕ್‌ ಇನ್ಶುರೆನ್ಸ್‌ ಫಂಡ್‌' ಮಾಡಿಸಿದ್ದ ಲವರ್ಸ್‌, ಬ್ರೇಕ್‌ಅಪ್‌ ಆದಾಗ ಹುಡುಗನಿಗೆ ಸಿಕ್ತು 25 ಸಾವಿರ!

ಅವರ ಸಂಬಂಧದ ಅಂತ್ಯವು ಅವರ ಸಂಬಂಧವು ಸೃಷ್ಟಿಸಿದ ಉತ್ಸಾಹವನ್ನು ಸಹ ಕೊನೆಗೊಳಿಸಿದೆ. 92 ವರ್ಷ ವಯಸ್ಸಿನ ಮುರ್ಡೋಕ್‌ ಮತ್ತೊಮ್ಮೆ ಪ್ರೀತಿಯನ್ನು ಹುಡುಕುತ್ತಾರೋ ಅಥವಾ ಅವರು ತಮ್ಮ ವ್ಯವಹಾರದತ್ತ ಗಮನ ಹರಿಸುತ್ತಾರೋ ಕಾದು ನೋಡಬೇಕಾಗಿದೆ.