ಲೈಂಗಿಕ ಶಿಕ್ಷಕಿ ಸೀಮಾ ಆನಂದ್ (Seema Anand) ಅವರ ಪ್ರಕಾರ ಹೆಚ್ಚಿನ ಪುರುಷರು ಉಭಯಲಿಂಗಕಾಮಿಗಳು. ಇದಕ್ಕೆ ಅವರು ಕೆಲವು ಗಂಡು ವೇಶ್ಯೆಯರ ಅನುಭವಗಳನ್ನು ಉಲ್ಲೇಖವಾಗಿ ನೀಡಿದ್ದಾರೆ. ಅದು ಕುತೂಹಲಕರವಾಗಿದೆ. ಓದಿ ನೋಡಿ.
ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಚಾಲ್ತಿಯಲ್ಲಿರುವ ಒಂದು ಹೆಸರೆಂದರೆ ಸೀಮಾ ಆನಂದ್. ಇವರು ಮಾತಾಡಿದ ಕಂಟೆಂಟ್ಗಳು ವೇಗವಾಗಿ ವೈರಲ್ ಆಗುತ್ತವೆ. ಈಕೆ 63 ವರ್ಷದ ಮಹಿಳೆ- ಆದ್ರೂ ಈಕೆ ಫೇಮಸ್ಸು ಯಾಕಂದರೆ ಈಕೆ ಲೈಂಗಿಕ ಶಿಕ್ಷಕಿ, ಲೇಖಕಿ, ಕಂಟೆಂಟ್ ಕ್ರಿಯೇಟರ್. ಲೈಂಗಿಕ ವಿಚಾರಗಳ ಬಗೆಗೆ ತುಂಬಾ ಮುಕ್ತವಾಗಿ ಮಾತನಾಡುತ್ತಾರೆ. ಕೆಲವು ದಿನಗಳ ಹಿಂದೆ ಶುಭಂಕರ್ ಮಿಶ್ರಾ ಅವರ ಪಾಡ್ಕ್ಯಾಸ್ಟ್ನಲ್ಲಿ ಸೀಮಾ ತಮ್ಮ ಜೀವನದ ಕೆಲವು ರಹಸ್ಯ ವಿಷಯಗಳ ಬಗ್ಗೆ ಮಾತನಾಡಿದ್ದರು. ಅದಕ್ಕೆ ಅವರು ಟ್ರೋಲ್ಗೂ ಒಳಗಾಗಿದ್ದರು. ಇದೀಗ ಅದೇ ಶುಭಂಕರ್ ಮಿಶ್ರಾ ಚಾನೆಲ್ನಲ್ಲಿ ಇನ್ನೊಂದು ವಿಚಾರದ ಬಗ್ಗೆ ಮಾತನಾಡಿದ್ದಾರೆ.
ಆಕೆಯ ಹೇಳಿಕೆ ಏನೆಂದರೆ- ಹೆಚ್ಚಿನ ಪುರುಷರು ಉಭಯಲಿಂಗಕಾಮಿಗಳಂತೆ. ಅಂದರೆ ಬೈಸೆಕ್ಷುಯಲ್- ಹೆಣ್ಣು ಹಾಗೂ ಗಂಡು ಇಬ್ಬರಿಂದಲೂ ಕಾಮಸುಖ ಬಯಸುವವರು. ಇದಕ್ಕೆ ಅವರು ಉದಾಹರಣೆಗಳನ್ನೂ ನೀಡಿದ್ದಾರೆ. ಲೈಂಗಿಕ ವಿಚಾರಗಳಲ್ಲಿ ಅಧ್ಯಯನ ನಡೆಸುವ ಅವರು ಕೆಲವರನ್ನು ಇದಕ್ಕಾಗಿ ಮಾತಾಡಿಸಿದ್ದಾರೆ. ಅದರಲ್ಲಿ ಇಬ್ಬರು ಗಂಡು ವೇಶ್ಯೆಯರು- ಇವರನ್ನು ಗಿಗೊಲೊ ಎನ್ನುತ್ತಾರೆ. ಈ ಗಿಗೊಲೊಗಳ ಬಳಿಗೆ ಹೆಣ್ಣುಗಳು ಮಾತ್ರವಲ್ಲ, ಗಂಡುಗಳೂ ಬರುತ್ತಾರಂತೆ. ಮಾತ್ರವಲ್ಲ, ಗಂಡುಗಳ ಸಂಖ್ಯೆಯೇ 80 ಶೇಖಡಾದಷ್ಟಿದೆಯಂತೆ!
ಅಂಥ ಕೆಲವರನ್ನು ಸೀಮಾ ಆನಂದ್ ಮಾತಾಡಿಸಿದ್ದಾರೆ. ಅವರಲ್ಲೊಬ್ಬ ಹೇಳಿದ- ಅವನ ಪತ್ನಿ ಇತ್ತೀಚೆಗೆ ತೀರಿಕೊಂಡಳಂತೆ. ಅವನು ಪೂರ್ತಿಯಾಗಿ ಸ್ಟೈಟ್ (ಪರಲಿಂಗಕಾಮಿ) ಆಗಿಯೇ ಇದ್ದವನು. ಆದರೆ ಪತ್ನಿ ಸತ್ತ ಬಳಿಕ ದೇಹಸುಖಕ್ಕಾಗಿ ಗಿಗೊಲೊ ಹತ್ರ ಬಂದಿದ್ದಾನೆ. ಅವನಿಗೆ ಎಮೋಷನಲ್ ಸಪೋರ್ಟ್- ಭಾವಾತ್ಮಕ ಬೆಂಬಲ ಅಗತ್ಯವಿಲ್ಲವಂತೆ. ಬರೀ ದೇಹಸುಖ ಬೇಕು. ಅದಕ್ಕೆ ಗಂಡು ವೇಶ್ಯೆ ಅವನ ಆಯ್ಕೆ. ಇನ್ನೊಬ್ಬ ಎಕ್ಸ್ಪೆರಿಮೆಂಟ್ ಮಾಡಲು ಬಂದವನು. ಅವನಿಗೆ ಹೆಣ್ಣಿಗಿಂತಲೂ ಹೆಚ್ಚು ಸುಖ ಗಂಡು ವೇಶ್ಯೆಯ ಬಳಿ ಸಿಕ್ಕಿತಂತೆ. ಆಗ ಅವನಿಗೆ ಜ್ಞಾನೋದಯ ಆಯ್ತಂತೆ- ಬೈಸೆಕ್ಸುಯಾಲಿಟಿ ಅನ್ನೋದು ಭಯಪಡೋ ವಿಷಯ ಅಲ್ಲ ಅಂತ.
ಪ್ರತೀ ಗಂಡಸಿಗೂ ಅದು ಸಾಧ್ಯ!
ಸೀಮಾ ಆನಂದ್ ಹೇಳೋ ಪ್ರಕಾರ, ಪ್ರತಿಯೊಬ್ಬ ಗಂಡಸೂ ಬೈಸೆಕ್ಸುಯಾಲಿಟಿಯ ಸುಖವನ್ನು ಸವಿಯಬಲ್ಲ. ಎಲ್ಲರೂ ಆ ಸ್ಪೆಕ್ಟ್ರಮ್ ಅಥವಾ ಪರಿಧಿಯ ಒಳಗೆ ಇರ್ತಾರೆ. ಅದೇನೂ ಭಯಪಡುವ ಅಥವಾ ಮುಜುಗರಪಡುವ ವಿಷ್ಯ ಅಲ್ಲ. ಆದ್ರೆ ನಮ್ಮ ಸಮಾಜ ಅದನ್ನು ಟ್ಯಾಬೂ ಅಥವಾ ತುಚ್ಚೀಕಾರದ ಸಂಗತಿಯಾಗಿ ನೋಡುತ್ತೆ ಅಂತಾರೆ.
ಮೊದಲನೆಯದಾಗಿ, ಉಭಯಲಿಂಗ ಕಾಮ ಎಂಬ ಪದವನ್ನು ನಾವು ಸಾಂಪ್ರದಾಯಿಕ ಅರ್ಥದಲ್ಲಿ ಮಾತ್ರ ಹಿಡಿದರೆ “ಎರಡೂ ಲಿಂಗಗಳೊಂದಿಗೆ ನಿರಂತರ, ಸ್ಪಷ್ಟ ಲೈಂಗಿಕ ಸಂಬಂಧ ಬಯಸುವವರು” ಎಂದು ಹೇಳಿದರೆ ಅಂಥವರ ಸಂಖ್ಯೆ ಅಲ್ಪವೇ. ಆದರೆ, ಮಾನವ ಲೈಂಗಿಕತೆಯನ್ನು ಮನೋವೈಜ್ಞಾನಿಕ ಮತ್ತು ಅನುಭವಾತ್ಮಕ ಮಟ್ಟದಲ್ಲಿ ನೋಡಿದರೆ, ಕಥೆಯೇ ಬೇರೆ. ಲೈಂಗಿಕತೆ ಅಂದ್ರೆ ಗುರುತಲ್ಲ. ಅದು ಅನುಭವಗಳ ಸಮೂಹ. ಬಹುತೇಕ ಪುರುಷರು ತಮ್ಮನ್ನು ಹೆಟೆರೋಸೆಕ್ಸುವಲ್ ಎಂದು ಗುರುತಿಸಿಕೊಳ್ಳುತ್ತಾರೆ. ಅದರೆ ಅವರ ಜೀವನದಲ್ಲಿ ಇನ್ನೊಬ್ಬ ಗಂಡಸಿನ ದೇಹದ ಬಗ್ಗೆ ಮೆಚ್ಚುಗೆ, ಕುತೂಹಲ, ಆಲೋಚನೆಗಳು, ಫ್ಯಾಂಟಸಿಗಳು, ಭಾವನಾತ್ಮಕ ಆಕರ್ಷಣೆ, ಅಥವಾ ಕನಿಷ್ಠ “ಅದು ಹೇಗಿರಬಹುದು?” ಎಂಬ ಪ್ರಶ್ನೆ ಇವುಗಳಲ್ಲಿ ಯಾವುದಾದರೂ ಒಂದು ಕಾಣಿಸಿಕೊಂಡಿರುತ್ತದೆ.
ಈ ಹಂತದಲ್ಲಿ ಅವರು ತಮ್ಮನ್ನು ಬೈಸೆಕ್ಸುಯಲ್ ಎಂದು ಕರೆದುಕೊಳ್ಳುವುದಿಲ್ಲ. ಆದರೆ ಆಕರ್ಷಣೆ ಮಾತ್ರ ಉಭಯ ದಿಕ್ಕಿನಲ್ಲಿ ಹರಿದಿರುತ್ತದೆ. ಇದರಿಂದಲೇ “ಹೆಚ್ಚಿನ ಪುರುಷರು ಪ್ರಾಯೋಗಿಕವಾಗಿ ಉಭಯಲಿಂಗ ಕಾಮಿಗಳು” ಎಂದು ಹೇಳಲು ಸಾಧ್ಯ. ಆಧುನಿಕ ಮನಶಾಸ್ತ್ರ ಹೇಳುವುದೇನೆಂದರೆ, ಮಾನವ ಲೈಂಗಿಕತೆ ON / OFF ಸ್ವಿಚ್ ಅಲ್ಲ. ಶುದ್ಧ ಹೆಟೆರೋ ಪುರುಷರು ಬಹಳ ಕಡಿಮೆ. ಶುದ್ಧ ಹೋಮೋ ಪುರುಷರೂ ಅಷ್ಟೇ ಕಡಿಮೆ. ಮಧ್ಯದಲ್ಲಿರುವ ದೊಡ್ಡ ಗುಂಪು — ಸಂದರ್ಭ, ವಯಸ್ಸು, ಅನುಭವದ ಮೇಲೆ ಆಕರ್ಷಣೆ ಬದಲಾಗುವವರು. ಈ “ಮಧ್ಯಭಾಗ”ದ ಬಹುಪಾಲು ಪುರುಷರು ಅನುಭವದ ಮಟ್ಟದಲ್ಲಿ ಅವರು ಉಭಯಲಿಂಗ ಕಾಮದ ಸ್ಪಂದನೆ ಹೊಂದಿರುವವರು.

