‘ಸಾಕಷ್ಟು ಟೀನ್ ಏಜ್ ಹುಡುಗಿಯರು, ಮದುವೆ ವಯಸ್ಸಿಗೆ ಬಂದಿರುವ ಹುಡುಗಿಯರು ಅಂಕಲ್‌ಗಳ ಪ್ರೇಮಪಾಶಕ್ಕೆ ಸಿಲುಕಲು ಮುಖ್ಯ ಕಾರಣ ಅವರಲ್ಲಿರುವ ಅದೊಂದು ಭಾವನೆ ಅಂತಾರೆ. ಅದು- ಈಗಾಗಲೇ ಮದುವೆಯಾಗಿ ಯಶಸ್ವಿಯಾಗಿ ಸಂಸಾರ ಮಾಡುತ್ತಿರೋ ಅಂಕಲ್‌ಗಳು ಅಂದರೆ ಅವರು ’ಸೂಪರ್ ಮ್ಯಾನ್‌ಗಳು' ಎಂಬ ತಪ್ಪು ತಿಳುವಳಿಕೆ.
ಅಂಕಲ್‌ಗಳು ಸೂಪರ್ ಮ್ಯಾನ್‌ಗಳಾ?
ಕೆಲವು ಕಾಲೇಜ್ ಹುಡುಗಿಯರು (College Girls), ಸಾಕಷ್ಟು ಸಿನಿಮಾ-ಸೀರಿಯಲ್ ತಾರೆಯರು ಯಾಕೆ ಮಧ್ಯವಯಸ್ಕ ಅಂಕಲ್‌ಗಳ ಪ್ರೇಮಪಾಶದಲ್ಲಿ ಬೀಳ್ತಾರೆ? ಅಷ್ಟೇ ಅಲ್ಲ, ಮದುವೆ ಕೂಡ ಆಗ್ತಾರೆ? ಇದು ಜಗತ್ತಿನಲ್ಲಿ ಬಹಳ ಕಾಲದಿಂದಲೂ ನಡೆಯುತ್ತಿದೆ. ಅದರಲ್ಲೂ ಮುಖ್ಯವಾಗಿ ಭಾರತದಲ್ಲಿ ಶತಮಾನಗಳಿಂದಲೂ ಇದು ನಡೆಯುತ್ತಲೇ ಇದೆ. ಈ ಮೊದಲು ಅದು ಅಷ್ಟೊಂದು ಸುದ್ದಿಯಾಗುತ್ತಿರಲಿಲ್ಲ. ಆದರೆ, ಈಗ ಸೋಷಿಯಲ್ ಮಾಧ್ಯಮಗಳು, ಮಾಧ್ಯಮಗಳ ಮೂಲಕ ಇದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೀಗಾಗಿ ಈ ಬಗ್ಗೆ ಸಮಾಜದಲ್ಲಿ ಕುಡ ಚರ್ಚೆ ಶುರುವಾಗಿದೆ. ಹಾಗಿದ್ರೆ ಈ ಮ್ಯಾಟರ್ ಹಿಂದಿನ ಮರ್ಮವೇನು?
ಹೌದು, ಕೆಲವು ಕಾಲೇಜ್ ಹುಡುಗಿಯರು, ಟೀನೇಜ್ ಗರ್ಲ್ಸ್, ಸಿನಿಮಾ-ಸೀರಿಯಲ್ ಸೆಲೆಬ್ರಿಟಿಗಳು ಹೀಗೆ ಅನೇಕ ಹುಡುಗಿಯರು ತಮ್ಮ ವಯೋಮಾನದವರು, ತಮಗಿಂತ ಸ್ವಲ್ಪ ಹಿರಿಯ-ಕಿರಿಯ ವಯಸ್ಸಿನವರ ಬದಲು ತೀರಾ ಹಿರಿಯರಾದ ಮಧ್ಯವಯಸ್ಕ ಪುರುಷರು ಅಥವಾ ಮಧ್ಯವಯಸ್ಸು ಕೂಡ ದಾಟಿರುವ ಪುರುಷರನ್ನು ಇಷ್ಟಪಟ್ಟು ಅವರೊಂದಿಗೆ ಲಿವ್ ಇನ್ ರಿಲೇಶನ್‌ಶಿಪ್ ಅಥವಾ ಮದುವೆ ಮಾಡಿಕೊಂಡಿದ್ದಾರೆ. ಬಳಿಕ ಅವರು ಸುಖಸಂಸಾರ ನಡೆಸುತ್ತಿದ್ದಾರೋ ಅಥವಾ ಏನೋ ಅದು ಅವರಿಗೇ ಗೊತ್ತು. ಅಷ್ಟೇ ಅಲ್ಲ, ಸಾಕಷ್ಟು ಹರೆಯದ ಹುಡುಗಿಯರು ಈಗಾಗಲೆ ಮದುವೆಯಾಗಿ ಮಕ್ಕಳಿರುವ ಸಂಸಾರಸ್ಥ ಪರಪುರುಷರನ್ನು ಇಷ್ಟಪಟ್ಟು, ಅವರ ಸಂಸಾರವನ್ನು ಹಳಿತಪ್ಪಿಸಿ, ತಮ್ಮ ಜೀವನವನ್ನೂ ಹಾಳುಮಾಡಿಕೊಂಡಿರುವ ಉದಾಹರಣೆಗಳೂ ಬೇಕಾದಷ್ಟಿವೆ.
ಪರಪುರುಷರೊಂದಿಗೆ ಅನೈತಿಕ ಸಂಬಂಧ!?
ಕಾಲೇಜ್ ಹುಡುಗಿಯರು ಅಂಕಲ್‌ಗಳೊಂದಿಗೆ ಇಟ್ಟುಕೊಂಡಿರುವ ಸಂಬಂಧಗಳ ಬಗ್ಗೆ ಹೊರಜಗತ್ತಿಗೆ ಗೊತ್ತಾಗುವುದು ತೀರಾ ಕಡಿಮೆ. ಏಕೆಂದರೆ, ಸೋಷಿಯಲ್ ಮೀಡಿಯಾಗಳು ಹಾಗೂ ಮೀಡಿಯಾಗಲೂ ಅಥವರ ಬಗ್ಗೆ ಸುದ್ದಿ ಮಾಡುವುದಿಲ್ಲ. ಆದರೆ, ಸಿನಿಮಾ-ಸೀರಿಯಲ್ ತಾರೆಯರು ಸಾಕಷ್ಟು ಸುದ್ದಿಯಾಗುತ್ತಾರೆ. ಪರಪುರುಷರೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡು ಅವರೊಂದಿಗೆ ಮದುವೆ ಮಾಡಿಕೊಂಡು ಸಂಸಾರ ಮಾಡಿರುವ ಸಿನಿಮಾತಾರೆಯರ ದೊಡ್ಡ ಲಿಸ್ಟೇ ನಮ್ಮ ಕಣ್ಣಮುಂದಿದೆ. ಶ್ರೀದೇವಿ, ಕರೀನಾ ಕಪೂರ್, ರೇಖಾ ಹೀಗೆ ಹೇಳುತ್ತಾ ಹೋದರೆ ಅದು ದೊಡ್ಡ ಪಟ್ಟಿಯೇ ಆಗುತ್ತದೆ. ಅವರೆಲ್ಲಾ ಸಿನಿಮಾ ತಾರೆಯರು, ಹೀಗಾಗಿ ಹೊರಜಗತ್ತಿಗೆ ಗೊತ್ತು. ಆದರೆ ಸಾಮಾನ್ಯ ಜನರಲ್ಲಿ ಕೂಡ ಇಂತಹ ಸಂಬಂಧಗಳು, ಅನೈತಿಕ ಸಂಬಂಧಗಳು ಬಹಳಷ್ಟಿವೆ. ಇಂತಹ ಸಂಬಂಧಗಳು ಈಗ ಹೆಚ್ಚುತ್ತಿರಬಹುದು. ಆದರೆ, ಮೊದಲಿನಿಂದಲೂ ಇತ್ತು, ಈಗಲೂ ಇದೆ. ಆದರೆ, ಇತ್ತೀಚೆಗೆ ಅದು ಮೀಡಿಯಾಗಳ ಮೂಲಕ ಹೆಚ್ಚು ಪ್ರಚಾರ ಪಡೆಯುತ್ತಿವೆ ಅಷ್ಟೇ.
ಹಾಗಿದ್ದರೆ ಯಾಕೆ ಹೀಗೆ? ಈ ಪ್ರಶ್ನೆಗೆ ಉತ್ತರ ಕೂಡ ಎರಡು ದಾರಿಯಲ್ಲಿ ಇದೆ. ಒಂದು ಮನಶಾಸ್ತ್ರಜ್ಞರು ಹೇಳೋದು, ಇನ್ನೊಂದು ಸಮೀಕ್ಷೆಗಳ ವರದಿ. ಸಮೀಕ್ಷೆಗಳು ಹೇಳೋ ಪ್ರಕಾರ, ಇತ್ತೀಚೆಗೆ ಸಮಾಜ ಅವಿಭಕ್ತ ಕುಟುಂಬಗಳಿಂದ ದೂರು ಸರಿಯುತ್ತಿದ್ದು, ಜನರು ಸ್ವತಂತ್ರ ಬದುಕನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ನನಗೆ ಬೇಕಾದಂತೆ ಇರುತ್ತೇನೆ, ನನಗೆ ಇಷ್ಟವಾದವರೊಂದಿಗೆ ಇರುತ್ತೇನೆ ಎಂಬ ಭಾವನೆ ಹೆಚ್ಚುತ್ತಿರುವುದು. ಜೊತೆಗೆ, ವಿದೇಶಿ ಸಂಸ್ಕೃತಿಯ ವ್ಯಾಮೋಹ ಹಾಗೂ ಸ್ವದೇಶಿ ಸಂಸ್ಕೃತಿಯ ಬಗೆಗಿನ ತಾತ್ಸಾರ ಇದಕ್ಕೆ ಕಾರಣ ಎನ್ನುತ್ತಿವೆ. ಈ ಮೊದಲು ಕೂಡ ಇಂತಹ ಸಂಬಂಧಗಳು ಇದ್ದವಲ್ಲ ಎಂದರೆ, ಅದಕ್ಕೆ ಕಾರಣ, ಕೆಲವರಿಗೆ ಹುಟ್ಟಿನಿಂದಲೇ ಬಂದ ಇನ್‌ಸ್ಟಿಂಕ್ಟ್, ಹಾಗೂ ಕೆಲವರಿಗೆ ಕುಟುಂಬ ಹಾಗೂ ಸಮಾಜದ ಮಾರ್ಗದರ್ಶನದ ಕೊರತೆ ಅಂತಾವೆ ಸಮೀಕ್ಷೆಗಳು. ಆದರೆ, ಮನಃಶಾಸ್ತ್ರಜ್ಞರು ಹೇಳೋದೇ ಬೇರೆ.
ಮನಃಶಾಸ್ತ್ರಜ್ಞರ ಪ್ರಕಾರ- 'ಸಾಕಷ್ಟು ಟೀನ್ ಏಜ್ ಹುಡುಗಿಯರು, ಮದುವೆ ವಯಸ್ಸಿಗೆ ಬಂದಿರುವ ಹುಡುಗಿಯರು ಅಂಕಲ್‌ಗಳ ಪ್ರೇಮಪಾಶಕ್ಕೆ ಸಿಲುಕಲು ಮುಖ್ಯ ಕಾರಣ ಅವರಲ್ಲಿರುವ ಅದೊಂದು ಭಾವನೆ ಅಂತಾರೆ. ಅದು- ಈಗಾಗಲೇ ಮದುವೆಯಾಗಿ ಯಶಸ್ವಿಯಾಗಿ ಸಂಸಾರ ಮಾಡುತ್ತಿರೋ ಅಂಕಲ್‌ಗಳು ಅಂದರೆ ಅವರು ನಿಜವಾದ ಗಂಡಸರು ಎಂಬ ತಪ್ಪು ತಿಳುವಳಿಕೆ. ಅವರೇ ಸೂಪರ್‌ಮ್ಯಾನ್‌ಗಳು, ಪಕ್ಕಾ ಪುರುಷರು ಎಂಬ ಭ್ರಮೆ. ಜೊತೆಗೆ, - ಒಬ್ಬ ಮಹಿಳೆ ಶಕ್ತಿವಂತನಾದ, ಸ್ಟ್ರಾಂಗ್ ಪುರುಷನನ್ನೇ ತನ್ನ ಸಂಗಾತಿಯಾಗಿ ಆಯ್ಕೆ ಮಾಡಿಕೊಳ್ಳುವುದು- ಎಂಬ ಅಲ್ಲಿ ಇಲ್ಲಿ ಓದಿಕೊಂಡಿರುವ ಎಡಬಿಡಂಗಿ ಹೇಳಿಕೆಗಳು ಇಂತಹ ಸಂಬಂಧ ಸಮಾಜದಲ್ಲಿ ಮೂಡಲು ಮುಖ್ಯ ಕಾರಣ' ಅಂತಾರೆ.
ಮದುವೆ ಆಗದವರು ಗಂಡಸರಲ್ಲವೇ?
ಅಚ್ಚರಿ ಎಂದರೆ, ಮದುವೆಯಾಗಿ ಸಂಸಾರ ಮಾಡುತ್ತಿರುವ ಪುರುಷರು ಗ್ಯಾರಂಟಿ ಗಂಡಸರು ಎಂಬುದು ಅವರ ನಂಬಿಕೆಯಾದರೆ, ಮದುವೆ ಆಗದವರು ಗಂಡಸರಲ್ಲ ಅಂತ ಅವರು ನಿರ್ಧರಿಸುವುದು ಎಷ್ಟು ಸರಿ? ಹಾಗಂತ ಅವರಿಗೆ ಹೇಳಿದ್ದು ಯಾರು? ಇವೆಲ್ಲಾ ಕೇವಲ ಊಃಆಪೋಹಗಳು ಹಾಗು ತಪ್ಪುತಿಳುವಳಿಕೆಗಳು ಅಷ್ಟೇ. ಇಂತಹ ತಪ್ಪು ತಿಳುವಳಿಕೆಗಳಿಂದ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದು ಅಷ್ಟೇ ಅಲ್ಲ, ಸಾಕಷ್ಟು ಸಂಸಾರಗಳನ್ನು ಹಾಳು ಮಾಡುತ್ತಾರೆ ಇಂತಹ ಹುಡುಗಿಯರು ಎನ್ನುತ್ತದೆ ಸಮೀಕ್ಷೆ. ಜೊತೆಗೆ, ಬಾಲ್ಯದಿಂದಲೇ ಸರಿಯಾದ ಜೀವನಪಾಠ ಇಂತಹ ಹುಡುಗಿಯರಿಗೆ ಸಿಕ್ಕಿರುವುದಿಲ್ಲ ಎನ್ನುತ್ತವೆ ಹಲವು ಸಮೀಕ್ಷೆಗಳ ವರದಿ.
ಒಟ್ಟಿನಲ್ಲಿ, ಅಂಕಲ್‌ಗಳಿಗೆ ಬೀಳುವ, ಮಧ್ಯವಯಸ್ಕರು ಹಾಗೂ ಆ ಏಜನ್ನೂ ದಾಟಿದ ಪರಪುರುಷರ ಮೇಲೆ ಕಣ್ಣುಹಾಕಿ ತಮ್ಮವರನ್ನಾಗಿ ಮಾಡಿಕೊಳ್ಳುವ ಕೆಲವು ಹುಡುಗಿಯರ ಕೆಲಸ ಅನೈತಿಕ ಹಾಗು ಸಮಾಜದ ಸ್ವಾಸ್ಥ ಕೆಡಿಸುವ ಕಾಯಕ ಅನ್ನೋದು ಸಮಾಜದ ನಂಬಿಕೆ. ಆದರೆ, ಇದಕ್ಕೆ ಸದ್ಯಕ್ಕೆ ಯಾವುದೇ ಕಡಿವಾಣ ಇಲ್ಲ. ಸಮೀಕ್ಷೆಗಳು ಹಾಗೂ ಮನಃಶಾಸ್ತ್ರಜ್ಞರು ಕಾರಣವನ್ನು ಹುಡುಕಿಹುಡುಕಿ ಹೇಳುತ್ತಿದ್ದಾರೆಯೇ ವಿನಃ ಅದನ್ನು ತಪ್ಪಿಸುವ ಅವರ ಗುರಿಯಿನ್ನೂ ಕೆಲಸ ಶುರುಮಾಡಿಲ್ಲ. ಹೀಗಾಗಿ ಸಮಾಜದಲ್ಲಿ ಅಂತಹ ಸಂಬಂಧಗಳು ನಡೆಯುತ್ತಲೇ ಇವೆ, ಅದರ ಪರಿಣಾಮಗಳೂ ಕೂಡ ಸಮಾಜದವನ್ನು ಬಾಧಿಸುತ್ತಲೇ ಇವೆ. ಇದಕ್ಕೆ ಕೊನೆ ಎಂದಾದರೂ ಬರಬಹುದೇ?


