ರಾಗಿಣಿ ದ್ವಿವೇದಿ 'ಸಿಂಧೂರಿ' ಚಿತ್ರದ ಮೂಲಕ ಮತ್ತೆ ಬೆಳ್ಳಿತೆರೆಗೆ ಮರಳಿದ್ದಾರೆ. ಚಿತ್ರದಲ್ಲಿ ಆಕ್ಷನ್ ದೃಶ್ಯಗಳಲ್ಲಿ ನಟಿಸಿರುವ ರಾಗಿಣಿ, ಹೆಣ್ಣುಮಕ್ಕಳ ಸವಾಲುಗಳ ಕುರಿತು ಮಾತನಾಡಿದ್ದಾರೆ. ಹಲವು ಸ್ಟಾರ್ ನಟರೊಂದಿಗೆ ನಟಿಸಿ, ವಿವಾದಗಳನ್ನು ಎದುರಿಸಿರುವ ರಾಗಿಣಿ, ಧೃತಿಗೆಡದೆ ಮತ್ತೆ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಮಿಂಚಿರುವ ನಟಿಯರ ಪೈಕಿ ರಾಗಿಣಿ ದ್ವಿವೇದಿ (Ragini Dwivedi) ಕೂಡ ಒಬ್ಬರು. ಈ ಮೊದಲು ಬೇರೆ ಬೇರೆ ಕಾರಣಗಳಿಗೆ ಸುದ್ದಿಯಾಗಿದ್ದ ನಟಿ ರಾಗಿಣಿ ಈಗ ಸಿನಿಮಾ ಮೂಲಕ ಮತ್ತೆ ಸುದ್ದಿಗೆ ಬಂದಿದ್ದಾರೆ. ನಟಿ ರಾಗಿಣಿ ದ್ವಿವೇದಿಯವರ ಹೊಸ ಸುದ್ದಿ ಏನಿರಬಹುದು ಎಂಬ ನಿಮ್ಮ ನಿರೀಕ್ಷೆಗೆ ಉತ್ತರ ಇಲ್ಲಿದೆ ನೋಡಿ..
ದುರ್ಗೆ, ಸರಸ್ವತಿ, ಲಕ್ಷ್ಮಿ ಅವರನ್ನು ಒಂದೇ ಸಿನಿಮಾದಲ್ಲಿ ತಂದ್ದಿದ್ದಾರೆ ನಟಿ ರಾಗಿಣಿ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ನಟಿ ರಾಗಿಣಿ ಮಾತುಕತೆ ನಡೆಸಿದ್ದಾರೆ. 'ಸಿಂಧೂರಿ' ಅಂದ್ರೆ 'ಫೈಯರ್' ಎಂದು 'ತುಪ್ಪದ ಹುಡುಗಿ' ಖ್ಯಾತಿಯ ನಟಿ ರಾಗಿಣಿ ಹೇಳಿದ್ದಾರೆ! ಅಷ್ಟೇ ಅಲ್ಲ, 'ಆ್ಯಕ್ಷನ್ ಮಾಡೋದು ನನಗೆ ತುಂಬಾ ಇಷ್ಟ; ಎಂದು ಕೂಡ ಹೇಳಿದ್ದಾರೆ.
ಕಾಣಬಾರದ್ದೆಲ್ಲಾ ಕಂಡೋಯ್ತಮ್ಮಾ, ಈಗೇನ್ ಡ್ರೆಸ್ ಸರಿಮಾಡ್ಕೋತ್ಯಾ? ತುಪ್ಪದ ಬೆಡಗಿ ರಾಗಿಣಿ ಟ್ರೋಲ್- ವಿಡಿಯೋ ವೈರಲ್
ಜೊತೆಗೆ, ಈಗ ಪ್ರಪಂಚದಲ್ಲಿ ಪ್ರೀತಿ ಅನ್ನೋದೇ ಇಲ್ಲ.. ಬರೀ ಕೊಲೆ ಸುಲಿಗೆ ಮೋಸ ತುಂಬಿದೆ, ಹೆಣ್ಣು ಮಕ್ಕಳ ಜೀವನ ಪ್ರತಿ ದಿನ ಹೋರಾಟ, ಹೆಣ್ಣು ಮಕ್ಕಳು ನಮಗೇ ನಾವೇ ಜೀವನಕ್ಕೆ ಹೋರಾಟ ಮಾಡಬೇಕು, ನಾನು ಒಬ್ಬ ಹೆಣ್ಣು ಮಗಳಾಗಿ ತುಂಬಾನೇ ಕಷ್ಟ ನೋಡಿದ್ದೇನೆ ಸವಾಲು ಎದುರಿಸಿದ್ದೇನೆ..' ಎಂದಿದ್ದಾರೆ 'ಸಿಂಧೂರಿ' ಸಿನಿಮಾದಲ್ಲಿ ನಾಯಕಿ ಆಗಿರೋ ನಟಿ ರಾಗಿಣಿ ದ್ವಿವೇದಿ. ಹೌದು, ನಟಿ ರಾಗಿಣಿ ಈಗ ಸಿಂಧೂರಿ ಚಿತ್ರದ ಮೂಲಕ ಮತ್ತೊಮ್ಮೆ ಸದ್ಯದಲ್ಲೇ ಸ್ಯಾಂಡಲ್‌ವುಡ್ ಸಿನಿಪ್ರೇಕ್ಷಕರ ಮುಂದೆ ಬರಲಿದ್ದಾರೆ.

ನಟಿ ರಾಗಿಣಿ ಅವರ ಬಗ್ಗೆ ಗೊತ್ತಿಲ್ಲ ಎನ್ನುವ ಕನ್ನಡಿಗರು ಕಡಿಮೆ ಎನ್ನಬಹುದು. ಕಿಚ್ಚ ಸುದೀಪ್ ಸೇರಿದಂತೆ ಹಲವು ಸ್ಟಾರ್ ನಟರುಗಳ ಜೊತೆ ನಟಿಸಿದ್ದಾರೆ ನಟಿ ರಾಗಿಣಿ. ಕೆಂಪೇಗೌಡ ಚಿತ್ರದಲ್ಲಿ ಸುದೀಪ್ ಜೊತೆ 'ತರ ತರ ಅನಿಸಿದೆ..' ಎಂದು ಕುಣಿದ ರಾಗಿಣಿಯನ್ನು, 'ತುಪ್ಪ ಬೇಕಾ ತುಪ್ಪಾ..' ಎಂದು ಹಾಡಿ ಕುಣಿದ ಈ ಬೆಡಡೆಗಿಯನ್ನು ಮರೆಯುವವರು ಉಂಟೇ? ಜೊತೆಗೆ, ಕೆಲವು ವಿವಾದಗಳು ಅವರನ್ನು ಸುತ್ತಿಕೊಂಡು ಜೈಲು ಕಂಬಿಯನ್ನೂ ಎಣಿಸಿ ಬಂದಿದ್ದಾರೆ ನಟಿ ರಾಗಿಣಿ. 'ಜೀವನ ಎಂದರೆ ಹೀಗೇನೇ, ಎಲ್ಲರ ಪಾಲಿಗೂ ಅದು ಹೂವಿನ ಹಾಸಿಗೆ ಆಗಿರಲ್ಲ' ಎಂಬುದನ್ನು ಅನುಭವದ ಮೂಲಕವೂ ಅರ್ಥ ಮಾಡಿಕೊಂಡಿದ್ದಾರೆ ರಾಗಿಣಿ.
ಆರಾಧ್ಯಾ ನೋಡಿ ಅಮ್ಮನ 'ಕಾರ್ಬನ್ ಕಾಪಿ' ಎಂದವರು ಯಾರು? ಕೊಟ್ಟ ಸಾಕ್ಷಿ ಏನು?
ಲೈಫಲ್ಲಿ ಅದೇನೇ ಬಂದರೂ ಧೈರ್ಯಗುಂದದೇ ಎದುರಿಸುತ್ತ, ಇಲ್ಲೆ ಕನ್ನಡದ ನೆಲದಲ್ಲೇ ಮತ್ತೆ ಮತ್ತೆ ಸಿನಿಮಾದಲ್ಲಿ ನಟಿಸುತ್ತ ಚಾಲ್ತಿಯಲ್ಲಿ ಇನ್ನೂ ಇದ್ದಾರೆ ನಟಿ ರಾಗಿಣಿ. ಸದ್ಯಕ್ಕೆ 'ಸಿಂಧೂರಿ' ಸಿನಿಮಾದ ಮೂಲಕ ಕನ್ನಡ ಸಿನಿಪ್ರೇಕ್ಷಕರ ಮುಂದೆ ಹಾಜರಾಗಲು ತರುದಿಗಾಲಲ್ಲಿ ನಿಂತಿದ್ದಾರೆ ನಟಿ ರಾಗಿಣಿ.
ಅಂದಹಾಗೆ, ನಟಿ ರಾಗಿಣಿ ದ್ವಿವೇದಿ ಅವರು ಆಗಾಗ ಬಗೆಬಗೆಯ ಡ್ರೆಸ್‌ನಲ್ಲಿ ಫೋಟೋಶೂಟ್ ಮಾಡಿಸಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಇನ್ನೊಂದು ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲಿ, ನಟಿ ರಾಗಿಣಿ ದ್ವಿವೇದಿ ಅವರು ಮಲ್ಲಿಗೆ ಹೂವನ್ನೇ ಬ್ಲೌಸ್ ಮಾಡಿಕೊಂಡಿದ್ದಾರೆ. ಬಂಗಾರದ ಬಣ್ಣದ ಡ್ರೆಸ್‌ನಲ್ಲಿ ಅವರು ಮಿಂಚಿದ್ದಾರೆ.ರಾಗಿಣಿ ದ್ವಿವೇದಿ ಅವರು ಮಲ್ಲಿಗೆ ಹೂವನ್ನೇ ಬ್ಲೌಸ್ ಮಾಡಿಕೊಂಡಿದ್ದಾರೆ. ಬಂಗಾರದ ಬಣ್ಣದ ಡ್ರೆಸ್‌ನಲ್ಲಿ ಅವರು ಮಿಂಚಿದ್ದಾರೆ.
ದೊಡ್ಮನೆ ಕುಡಿಗೆ ದುನಿಯಾ ವಿಜಯ್ ಪುತ್ರಿ ನಾಯಕಿ; ಸೆಟ್ಟೇರಿತು ಸೂರಿ-ಯುವ ಸಿನಿಮಾ!
ರಾಗಿಣಿ ದ್ವಿವೇದಿ ಅವರ ಈ ಫೋಟೋಶೂಟ್‌ಗೆ ಬಹಳಷ್ಟು ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಯುಗಾದಿ ಹಬ್ಬಕ್ಕೆ ಅವರು ವಿಭಿನ್ನವಾಗಿ ಫೋಟೋಶೂಟ್ ಮಾಡಿಸಿದ್ದಾರೆ. ರಾಗಿಣಿ ದ್ವಿವೇದಿ ಅವರ ಈ ಫೋಟೋಶೂಟ್‌ಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. 'ಹೊಸ ವರ್ಷ, ಹೊಸ ಚಾಪ್ಟರ್, ನಿರೀಕ್ಷೆಯೊಂದಿಗೆ- ಪ್ರತಿ ಮುಂಜಾವು ಹೊಸ ಅವಕಾಶಗಳನ್ನು ನೀಡುತ್ತದೆ. ಇದನ್ನೇ ಅದ್ಭುತವಾಗಿ ಮಾಡಿಕೊಳ್ಳಿ. ನಿಮ್ಮ ಬದುಕಿನಲ್ಲಿ ಯಶಸ್ಸು, ಸಮೃದ್ಧಿ ಸಿಗಲಿ' ಎಂದು ನಟಿ ರಾಗಿಣಿ ದ್ವಿವೇದಿ ಹೇಳಿದ್ದಾರೆ.
ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ನಟಿ ರಾಗಿಣಿ ದ್ವಿವೇದಿ. ಜತೆಗೆ, ಐಟಂ ಡ್ಯಾನ್ಸ್‌ಗಳಲ್ಲಿ ಕೂಡ ಮಿಂಚುತ್ತಿದ್ದಾರೆ.ಇತ್ತೀಚೆಗೆ ʼಅವಳ ಬೂ ಇಷ್ಟ, ಅವಳ ವ್ಯೂ ಇಷ್ಟʼ ಎಂಬ ಆಲ್ಬಮ್ ಸಾಂಗ್‌ನಲ್ಲಿ ಅವರು ಕಾಣಿಸಿಕೊಂಡಿದ್ದರು. ಈ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತ್ತು. ಇನ್ನು, ಸದ್ಯದಲ್ಲೇ ಅವರು 'ಸಿಂಧೂರಿ'ಯಾಗಿ ಕನ್ನಡ ಸಿನಿಪ್ರೇಕ್ಷಕರ ಮುಂದೆ ಬರಲಿದ್ದಾರೆ, ಸ್ವಾಗತಿಸಲು ಸಿದ್ಧರಾಗಿ..!
ರಿಸ್ಕ್ ತೆಗೆದುಕೊಳ್ಳಲು ಮುಂದಾದ ಸಮಂತಾ; ಹೀಗ್ಯಾಕೆ ಮಾಡ್ತೀರಾ 'ಓ ಬೇಬಿ' ಎಂದ ಫ್ಯಾನ್ಸ್!


