‘ದಿನಕ್ಕೊಂದು ಆ್ಯಪಲ್ ತಿಂದ್ರೆ ರೋಗ ಬರಲ್ಲ ಅಂತಾರೆ ಡಾಕ್ಟ್ರು. ಈ ಆ್ಯಪಲ್ ಕಟ್ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆಯೂ ಆರೋಗ್ಯಪೂರ್ಣವಾಗಿರಲಿ’ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಶುಭ ಹಾರೈಸಿದ್ದಾರೆ.
‘ದಿನಕ್ಕೊಂದು ಆ್ಯಪಲ್ ತಿಂದ್ರೆ ರೋಗ ಬರಲ್ಲ ಅಂತಾರೆ ಡಾಕ್ಟ್ರು. ಈ ಆ್ಯಪಲ್ ಕಟ್ ಸಿನಿಮಾದ ಬಾಕ್ಸ್ ಆಫೀಸ್ ಗಳಿಕೆಯೂ ಆರೋಗ್ಯಪೂರ್ಣವಾಗಿರಲಿ’ ಎಂದು ಗೋಲ್ಡನ್ ಸ್ಟಾರ್ ಗಣೇಶ್ ಶುಭ ಹಾರೈಸಿದ್ದಾರೆ. ಸಿಂಧೂ ಗೌಡ ನಿರ್ದೇಶನದ ‘ಆ್ಯಪಲ್ ಕಟ್’ ಸಿನಿಮಾ ಟ್ರೇಲರ್‌ಗೆ ಚಾಲನೆ ನೀಡಿ ಮಾತನಾಡಿದ ಗಣೇಶ್, ‘ನಿರ್ದೇಶಕಿ ಸಿಂಧೂ ಉತ್ತಮ ಕಥಾಹಂದರದ ಸೈಕಲಾಜಿಕಲ್ ಥ್ರಿಲ್ಲರ್ ಕಥೆಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಥೇಟರ್‌ನಲ್ಲೂ ಸಿನಿಮಾ ಥ್ರಿಲ್ ನೀಡಲಿ’ ಎಂದರು.
ನಿರ್ದೇಶಕಿ ಸಿಂಧೂ ಗೌಡ, ‘ಸೈಕಲಾಜಿಕಲ್ ಥ್ರಿಲ್ಲರ್ ಜೊತೆಗೆ ನಮ್ಮ ಚಿತ್ರ ಮರ್ಡರ್ ಮಿಸ್ಟ್ರಿಯನ್ನೂ ಒಳಗೊಂಡಿದೆ. 5 ಜನ ಗೆಳೆಯರ ನಡುವಿನ ಕಥೆ. ಸದ್ಯ ಟ್ರೆಂಡ್ ಆಗಿರುವ ಡೇಟಿಂಗ್‌ನಿಂದಾಗುವ ದುಷ್ಪರಿಣಾಮಗಳ ಬಗೆಗೆ ಹೇಳಿದ್ದೇವೆ’ ಎಂದರು. ನಾಯಕ ಸೂರ್ಯ, ‘ಚಿತ್ರದಲ್ಲಿ ಮಾನವ ಶಾಸ್ತ್ರದ ಪ್ರೊಫೆಸರ್ ಪಾತ್ರದಲ್ಲಿದ್ದೇನೆ. ಹೂತಿರುವ ಮೃತದೇಹ ಹೊರತೆಗೆದು ಅದನ್ನು ಗುರುತಿಸುವಂಥಾ ಅಪರೂಪದ ಪ್ರೊಫೆಶನ್’ ಎಂದರು. ನಾಯಕಿ ಅಶ್ವಿನಿ ಪೋಲೆಪಲ್ಲಿ, ‘ಮಾನವಶಾಸ್ತ್ರದ ಬಗ್ಗೆ ಸಾಕಷ್ಟು ರೀಸರ್ಚ್ ಮಾಡಿರುವ ಸಿನಿಮಾ ನಮ್ಮದು’ ಎಂದರು. ಶಿಲ್ಪಾ ಪ್ರಸನ್ನ ಈ ಸಿನಿಮಾದ ನಿರ್ಮಾಪಕಿ.
ಮೇಕಿಂಗ್ ವಿಡಿಯೋ ಬಿಡುಗಡೆ: ಕನ್ನಡಕ್ಕೆ ಹಲವು ಹಿಟ್ ಚಿತ್ರಗಳನ್ನು ಕೊಟ್ಟ ಹಿರಿಯ ನಿರ್ದೇಶಕ ದಿ.ರಾಜ್‌ಕಿಶೋರ್ ಅವರ ಪುತ್ರಿ ಸಿಂಧು ಗೌಡ ನಿರ್ದೇಶನದ ‘ಆ್ಯಪಲ್ ಕಟ್’ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆ ಆಗಿದೆ. ಮೆಡಿಕಲ್, ಹಾರರ್, ಮಾನವ ಶಾಸ್ತ್ರ, ಕೊಲೆ, ಕ್ರೈಮ್... ಇತ್ಯಾದಿ ಅಂಶಗಳ ಸುತ್ತಾ ಸಾಗುವ ಈ ಚಿತ್ರದಲ್ಲಿ ಹಾಸ್ಯ ನಟ ಅಪ್ಪಣ್ಣ ರಾಮದುರ್ಗ, ಸೂರ್ಯ ಗೌಡ, ಅಶ್ವಿನಿ ಪೋಲೆಪಲ್ಲಿ, ಅಮೃತಾ, ಬಾಲ ರಾಜವಾಡಿ ನಟಿಸಿದ್ದಾರೆ. ಶಿಲ್ಪಾ ಪ್ರಸನ್ನ ನಿರ್ಮಾಣದ ಚಿತ್ರವಿದು. ಸಿನಿಮಾ ಕುರಿತು ನಿರ್ದೇಶಕಿ ಸಿಂಧೂ ಗೌಡ, ‘ಇದೊಂದು ಕ್ರೈಮ್ ಥ್ರಿಲ್ಲರ್. ಧಾರಾವಾಹಿಗಳಲ್ಲಿ ನಟಿಸುತ್ತಿರುವಾಗಲೇ ಈ ಕತೆ ಮಾಡಿಕೊಂಡೆ. ಕನ್ನಡದ ಮಟ್ಟಿಗೆ ಇದೊಂದು ಹೊಸ ರೀತಿಯ ಸಿನಿಮಾ ಎನ್ನಬಹುದು’ ಎಂದರು.
ಆನ್‌ಲೈನ್ ಜಗತ್ತಿನ ಕರಾಳತೆಯನ್ನು ಬಿಚ್ಚಿಡುವ ಡಾರ್ಕ್ ವೆಬ್ ಸಿನಿಮಾ 'ಕಪಟಿ' ಟ್ರೇಲರ್ ಬಂತು!
ವೀರ್ ಸಮರ್ಥ ಸಂಗೀತವಿದೆ. ಯೋಗರಾಜ್ ಭಟ್, ಸತ್ಯಪ್ರಕಾಶ್ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ವಾಸುಕಿ ವೈಭವ್, ವಿಜಯಶ್ರೀ ಹಾಡಿದ್ದಾರೆ. ರಾಜೇಶ್ ಗೌಡ ಛಾಯಾಗ್ರಹಣ ಇದೆ. ಚಿತ್ರದ ನಾಯಕ ಸೂರ್ಯ ಗೌಡ, ‘ನಾನು ಈ ಚಿತ್ರದಲ್ಲಿ ಮಾನವಶಾಸ್ತ್ರ ಪ್ರೊಫೆಸರ್ ಪಾತ್ರ ಮಾಡಿದ್ದೇನೆ. ಹಲವಾರು ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ಬಂದಿದ್ದು, ಮೊದಲಬಾರಿಗೆ ಮುಖ್ಯ ಪಾತ್ರ ನಿರ್ವಹಿಸಿದ್ದೇನೆ’ ಎಂದರು. ‘ನಾನು ಮೂಲತಃ ಬಾಗೆಪಲ್ಲಿ ಹುಡುಗಿ. ನಾನು ಸೈಕಾಲಜಿ ಸ್ಟುಡೆಂಟ್ ಆಗಿ ನಟಿಸಿದ್ದೇನೆ’ ಎಂದರು ನಾಯಕಿ ಅಶ್ವಿನಿ ಪೋಲೆಪಲ್ಲಿ.
