ಚಂದನ್ ಶೆಟ್ಟಿ ಇಷ್ಟು ದಿನ ಕನ್ನಡದಲ್ಲಿ ಸೂಪರ್ ಹಿಟ್​ರಾಪ್ ಹಾಡುಗಳನ್ನ ಕೊಟ್ಟಿದ್ದಾರೆ. ಚಂದನ್ ಬತ್ತಳಿಕೆಯಲ್ಲಿ ಬಂದ ಒಂದೊಂದು ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗಿವೆ. ಈಗ ಚಂದನ್ ಕನಸು ಮತ್ತಷ್ಟು ದೊಡ್ಡದಾಗಿದ್ದು, ಇಂಗ್ಲೀಷ್​​ನಲ್ಲಿ ರಾಪ್​ ಹಾಡೊಂದನ್ನ ರೆಡಿ ಮಾಡಿದ್ದಾರೆ. ಆ ಸಾಂಗ್​​ ‘ಡಯಾನಾ-ಮೈಟ್’

ಬ್ಯೂಟಿಫುಲ್ ಹುಡುಗಿಯೊಬ್ಳು ಜೊತೆಯಾಗಿದ್ದಾರೆ

ಸ್ಯಾಂಡಲ್‌ವುಡ್ ರಾಪ್ ಸ್ಟಾರ್​ಚಂದನ್ ಶೆಟ್ಟಿ (Chandan Shetty) ಎರಡನೇ ಮ್ಯಾರೇಜ್ ಬಗ್ಗೆ ಇತ್ತೀಚೆಗೆ ಭಾರಿ ಚರ್ಚೆ ಆಗಿತ್ತು. 'ಈಗ ಒಕೆ, ಆದ್ರೆ ವಯಸ್ಸಾದ ಮೇಲೆ ಒಂಟಿತನ ಕಾಡುತ್ತೆ' ಅಂತ ಮದುವೆ ಬಗ್ಗೆ ಫಿಲಾಸಫಿ ಮಾತಾಡಿದ್ರು ಚಂದನ್ ಶೆಟ್ಟಿ. ಇದೀಗ ಚಂದನ್ ತನ್ನ ಜೀವನದಲ್ಲಿ ಹೊಸದೊಂದು ಹೆಜ್ಜೆ ಇಟ್ಟಿದ್ದಾರೆ. ಈ ಹೆಜ್ಜೆಯ ಜೊತೆ ಬ್ಯೂಟಿಫುಲ್ ಹುಡುಗಿಯೊಬ್ಳು ಜೊತೆಯಾಗಿದ್ದಾರೆ. ಹಾಗಾದ್ರೆ ಏನಿದು ಚಂದನ್​ನವ ಜೀವನದ ಕತೆ ನೋಡೋಣ ಬನ್ನಿ.

ರಾಪ್ ಸ್ಟಾರ್​ಜೀವನದಲ್ಲಿ ಬ್ಯೂಟಿಫುಲ್ ಬಿರುಗಾಳಿ; ಚಂದನ್ ಶೆಟ್ಟಿಗೆ ಸಿಕ್ಕೇ ಬಿಟ್ರು ಹೊಸ ಜೊತೆಗಾರ್ತಿ..!

ಹೌದು, ಕನ್ನಡ ಸಂಗೀತ ಲೋಖಕ್ಕೆ ರಾಪ್ ಅನ್ನೋ ಹೊಸ ಅನುಭವ ಕೊಟ್ಟು ಗೆದ್ದು ಈಗಲೂ ಗೆಲ್ಲುತ್ತಿರೋ ಸ್ಟಾರ್ ಸಿಂಗರ್, ಬಿಗ್​ ಮ್ಯೂಜಿಷಿಯನ್​ಅಂದ್ರೆ ಅದು ಚಂದನ್ ಶೆಟ್ಟಿ. ಎಷ್ಟೇ ಜನ ರಾಪರ್ಸ್​ಬಂದ್ರೂ ಕೂಡ ತನ್ನ ಅದೇ ಕಂನ್ಸೆಸ್ಟೆನ್ಸಿಯನ್ನ ಕಂಟಿನ್ಯೂ ಮಾಡಿರೋ ಚಂದನ್ ಶೆಟ್ಟಿ ಕನ್ನಡದ ರಾಪ್ ಲೋಕದ ನಂಬರ್ ಒನ್ ಸಿಂಗರ್.. ಇದೀಗ ಚಂದನ್ ಶೆಟ್ಟಿ ಱಪ್ ಜೀವನದಲ್ಲಿ ಹೊಂದೊಂದು ಬ್ಯೂಟಿಫುಲ್ ಆಗಿರೋ ಬಿರುಗಾಳಿ ಎಂಟ್ರಿ ಆಗಿದೆ.

ರಾಪ್ ಲೋಕದಲ್ಲಿ ಚಂದನ್​ ಶೆಟ್ಟಿ ಹೊಸ ಅಧ್ಯಾಯ; ಚಂದನ್​ ಕನಸು ನನಸು ಮಾಡಿದ ಬ್ಯೂಟಿ ಡಯಾನಾ!

ಹೌದು, ಚಂದನ್ ಶೆಟ್ಟಿ ಇಷ್ಟು ದಿನ ಕನ್ನಡದಲ್ಲಿ ಸೂಪರ್ ಹಿಟ್​ ರಾಪ್ ಹಾಡುಗಳನ್ನ ಕೊಟ್ಟಿದ್ದಾರೆ. ಚಂದನ್ ಬತ್ತಳಿಕೆಯಲ್ಲಿ ಬಂದ ಒಂದೊಂದು ಹಾಡುಗಳು ಒಂದಕ್ಕಿಂತ ಒಂದು ಸೂಪರ್ ಹಿಟ್ ಆಗಿವೆ. ಈಗ ಚಂದನ್ ಕನಸು ಮತ್ತಷ್ಟು ದೊಡ್ಡದಾಗಿದ್ದು, ಇಂಗ್ಲೀಷ್​​ನಲ್ಲಿ ರಾಪ್​ ಹಾಡೊಂದನ್ನ ರೆಡಿ ಮಾಡಿದ್ದಾರೆ. ಆ ಸಾಂಗ್​​ಗೆ ಡಯಾನಾ-ಮೈಟ್ ಎಂದು ಹೆಸರಿಟ್ಟಿದ್ದಾರೆ. ಡಯಾನಾ ಮೈಟ್ ಸಿಕ್ಕಿದ್ದೇಗೆ ಚಂದನ್ ಸ್ಚಚ್ಚಂದವಾಗಿ ಹೇಳಿದ್ದಾರೆ.

ಚಂದನ್ ಶೆಟ್ಟಿ, ರಾಪ್ ಸಿಂಗರ್.. ಮೈಸೂರಿನ ಬಣ್ಣದ ಚಿಟ್ಟೆ ಈ ಡಯಾನಾ

ಚಂದನ್​ರಾಪ್ ಹಾಡಿನಲ್ಲಿ ಬರುತ್ತಿರೋ ಈ ಬಣ್ಣದ ಚಿಟ್ಟೆ ಮೈಸೂರಿನ ಹುಡುಗಿ. ಚಂದನ್ ಗೂ ಮೈಸೂರಿಗೂ ಅದೇನು ನಂಟೋ ಏನೋ. ಡಿವೋರ್ಸ್ ಕೊಟ್ಟಿರೋ ಮಾಜಿ ಪತ್ನಿ ನಿವೇದಿತಾ ಕೂಡ ಮೈಸೂರು ಹುಡುಗಿ. ಈಗ ಚಂದನ್ ತನ್ನ ಡ್ರೀಮ್ ಪ್ರಾಜೆಕ್ಟ್​ ಇಂಗ್ಲೀಷ್​​ನ ಱಪ್​ ಹಾಡಿಗೆ ಸಿಕ್ಕಿರೋ ಈ ಡಯಾನಾ ಕೂಡ ಮೈಸೂರಿನವರೇ.

ಮೈಸೂರಿನ ಈ ಡಯಾನಾ ಚಂದನ್ ಗೆ ಸಿಕ್ಕಿದ್ದೇಗೆ ಗೊತ್ತಾ..?

ಡಯಾನಾ ಸೋಷಿಯಲ್ ಮೀಡಿಯಾ ಪೇಜ್ ಅಲ್ಲಿ ಚಂದನ್ ಶೆಟ್ಟಿಗೆ ಕನೆಕ್ಟ್ ಆಗಿದ್ದಂತೆ. ಈ ಪರಿಚಯ ಇಬ್ಬರು ಬೇಟಿಯಾಗಿದ್ರಂತೆ. ಕೊನೆಗೆ ಈ ಡಯಾನಾ ಒಳ್ಳೆ ರಾಪ್​ ಸಿಂಗರ್​ ಅಂತ ಗೊತ್ತಾಗಿ ಈಗ ಬರುತ್ತಿರೋ ಇಂಗ್ಲೀಷ್ ಹಾಡನ್ನ ಅವರಿಂದಲೇ ಹಾಡಿಸಿದ್ದಾರೆ. ಹೀಗಾಗಿ ಡಯಾನಾ ಅನ್ನೋ ಹೆಸರನ್ನೆ ತಮ್ಮ ಆಲ್ಬಂಗೆ ಇಟ್ಟಿದ್ದಾರೆ. ಡಯಾನಾ ಜೊತೆಗೆ ಮೈಟ್ ಅನ್ನೋದನ್ನು ಸೇರಿಸಿದ್ದಾರೆ. ಹಾಗಾಗಿಯೇ 'ಡಯಾನಾ ಮೈಟ್' ಅನ್ನುವ ಹೆಸರು ಬಂದಿದೆ. ಇದೇ ಏಪ್ರಿಲ್ 23ರಕ್ಕೆ ಆ ಡಯಾನಾ ಮೈಟ್​ ಱಪ್ ಆಲ್ಬಂ ಹೊರ ಬರ್ತಾ ಇದೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ & ವಿಡಿಯೋ ನೋಡಿ..