ಸುಮನ್ ನಗರ್ಕರ್ (Suman Nagarkar) ಅನ್ನೋ ಬೆಳದಿಂಗಳ ಬಾಲೆ ಕನ್ನಡ ಚಿತ್ರಗಳಲ್ಲಿ ನಟಿಸದೇ ಅದೆಷ್ಟೋ ಕಾಲವಾಗಿದೆ. ಈ ನಟಿಗೆ ನಟನೆ ಮಾತ್ರವಲ್ಲದೇ ಲೈಫ್‌ಸ್ಟೈಲ್ ಬಗ್ಗೆ ಅಭಿರುಚಿ ಇದೆ. ಈ ಪ್ರತಿಭಾವಂತೆ ಇದೀಗ ಹೊಸ ವಿಷಯವೊಂದನ್ನು ರಿವೀಲ್ ಮಾಡಿದ್ದಾರೆ. ಅದು ಎವರೆಸ್ಟ್ ಕನಸು. 

ಸುಮನ್ ನಗರ್ಕರ್ ಅವರ ವಯಸ್ಸು ಈಗ 54 ವರ್ಷಗಳು. ಈ ವಯಸ್ಸಿನಲ್ಲಿ ಹೆಚ್ಚಿನ ಹೆಣ್ಮಕ್ಕಳು ಮಂಡಿನೋವು, ಸೊಂಟ ನೋವು ಎಂದು ಒದ್ದಾಡುತ್ತಿದ್ದರೆ ಈ ಹೂಮಳೆ ಬೆಡಗಿ ಎತ್ತರದ ಪರ್ವತ ಏರುವ ಹುಮ್ಮಸ್ಸಿನಲ್ಲಿದ್ದಾರೆ. ಸುಮನ್ ನಗರ್ಕರ್ ಅನ್ನೋ ಬೆಳದಿಂಗಳ ಬಾಲೆ ಕನ್ನಡ ಚಿತ್ರಗಳಲ್ಲಿ ನಟಿಸದೇ ಅದೆಷ್ಟೋ ಕಾಲವಾಗಿದೆ. ಈ ನಟಿಗೆ ನಟನೆ ಮಾತ್ರವಲ್ಲದೇ ಲೈಫ್‌ಸ್ಟೈಲ್ ಬಗ್ಗೆ ಅಭಿರುಚಿ ಇದೆ. ಆಗಾಗ ಹೊಸ ಅಪ್‌ಡೇಸ್ಟ್‌ ಕೊಡುತ್ತಿರುತ್ತಾರೆ. ಅಂದಹಾಗೆ ಇವರು ಈಗ ಏರಬೇಕು ಅಂತಿರೋದು ಜಗತ್ತಿನ ಅತೀ ಎತ್ತರದ ಬೆಟ್ಟ ಎಂದೇ ಹೆಸರಾದ ದಿ ಗ್ರೇಟ್ ಮೌಂಟ್ ಎವರೆಸ್ಟ್‌ಗೆ . ಆದರೆ ಎವರೆಸ್ಟ್ ಏರಲು ಸಾಕಷ್ಟು ಫಿಟ್ನೆಸ್ ಬೇಕು. ಹೀಗಾಗಿ ಹೆಚ್ಚಿನವರು ಡಿಫಿಕಲ್ಟ್ ಲೆವೆಲ್ ಕೊಂಚ ಕಡಿಮೆ ಇರುವ ಮೌಂಟ್ ಎವರೆಸ್ಟ್‌ನ ಬೇಸ್ ಕ್ಯಾಂಪ್ಗೆ ಟ್ರೆಕ್ಕಿಂಗ್ ಹೋಗುತ್ತಾರೆ. ಈ ಹಿಂದೆ ಕನ್ನಡದ ಕಿರುತೆರೆಯಲ್ಲಿ ಹೆಸರು ಮಾಡಿರುವ 'ಭಾಗ್ಯ ಲಕ್ಷ್ಮೀ' ಖ್ಯಾತಿಯ ಸುಷ್ಮಾ ರಾವ್ ಬೇಸ್ ಕ್ಯಾಂಪ್ ಟ್ರೆಕ್ ಮಾಡಿಬಂದು ಆ ವಿವರಗಳನ್ನು ಸೋಷಲ್ ಮೀಡಿಯಾದಲ್ಲಿ ದಾಖಲಿಸಿದ್ದರು.

ಎವರೆಸ್ಟ್‌ ಬೇಸ್‌ ಕ್ಯಾಂಪ್‌ ಟ್ರೆಕ್‌ ಕೂಡ‌ ಟಫ್!

ಎವರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ ಸಹ ನಾವು ಅಂದುಕೊಂಡಷ್ಟು ಸುಲಭವಲ್ಲ. ಅದಕ್ಕೆ ಸಾಕಷ್ಟು ಪ್ರಾಕ್ಟೀಸ್ನ ಅಗತ್ಯವಿದೆ. ಹೀಗಾಗಿ ಸದ್ಯ ಸುಮನ್ ನಗರ್ಕರ್ ಈ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಎವೆರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ಗೆ ಮಾಡಿಕೊಳ್ಳುತ್ತಿರುವ ತಯಾರಿ ಬಗ್ಗೆಯೂ ಅಪ್ಡೇಟ್ ನೀಡಿದ್ದಾರೆ.

"ನಮ್ಮ ಮನೆಯಿಂದ ಅರ್ಧ ಮೈಲಿ ನಡೆದರೆ ಒಂದು ಸುಂದರವಾದ trail ಇದೆ, American river trail ಅಂತ. ಈ trail American river ಹಾಗೂ Lake Natoma ಪಕ್ಕದಲ್ಲೇ ಸಾಗುತ್ತದೆ. ಇದರ ಸುತ್ತ ನಡೆದು ಮನೆಗೆ ಬಂದರೆ ಸುಮಾರು 20km ಆಗತ್ತೆ. ಇವತ್ತು ಬೆಳಿಗ್ಗೆ ನಾನೊಬ್ಬಳೆ ಈ 20km walk ಮಾಡಿದೆ. Weather ತುಂಬಾ ಚೆನ್ನಾಗಿತ್ತು. ಈ ತರಹದ trail ಮನೆ ಹತ್ತಿರ ಇರುವುದು ನಿಜವಾದ ಭಾಗ್ಯ. ಪ್ರಕೃತಿಯ ಜೊತೆಗಿನ ಈ walk ಮನಸ್ಸಿಗೆ ತುಂಬಾ ಮುದ ನೀಡಿತು ' ಎಂದಿದ್ದಾರೆ.

ಅಂದರೆ ನಿತ್ಯ ಇವರು ಇಪ್ಪತ್ತು ಕಿಮೀ ವಾಕ್ ಮಾಡುತ್ತಾರೆ. ಅದು ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ ಮಾಡಲು ಅನಿವಾರ್ಯ. ಜೊತೆಗೆ ಹೈಕಿಂಗ್ ಕ್ರೇಜ್ ಇರುವ ಸುಮನ್ ಥರದವರು ಇಂಥಾದ್ದನ್ನು ಬಹಳ ಎನ್ಜಾಯ್ ಮಾಡುತ್ತಾರೆ.

'ನಿಷ್ಕರ್ಷ', ‘ನಮ್ಮೂರ ಮಂದಾರ ಹೂವೆ, ‘ಬೆಳದಿಂಗಳ ಬಾಲೆಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ ಚೆಲುವೆ ಸುಮನ್ ನಗರ್ಕರ್. ದಾಂಪತ್ಯ ಜೀವನಕ್ಕೆ ಕಾಲಿಟ್ಮೇಲೆ ಪತಿ ಗುರುದೇವ್ ನಾಗರಾಜ ಜೊತೆ ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಸದ್ಯ ಯುನೈಟೆಡ್ ಸ್ಟೇಟ್ಸ್ನ ಕ್ಯಾಲಿಫೋರ್ನಿಯಾದಲ್ಲಿರುವ ಫೋಲ್ಸಮ್ನಲ್ಲಿ ಸುಮನ್ ನಗರ್ಕರ್ ನೆಲೆಸಿದ್ದಾರೆ.

ಅವರು ಹೈಕಿಂಗ್ ಪ್ಲಾನ್ನಲ್ಲಿರುವುದಂತೂ ಸರಿ. ಆದರೆ ಯಾವಾಗ ಎವೆರೆಸ್ಟ್ ಹೈಕಿಂಗ್ಗೆ ಹೋಗ್ತಿದ್ದಾರೆ. ಯಾವ ದಾರಿಯಾಗಿ ಹೋಗ್ತಾರೆ, ಆ ಅನುಭವಗಳನ್ನೂ ಹಂಚಿಕೊಳ್ತಾರ ಅಂತ ಅವರ ಅಭಿಮಾನಿಗಳು ಕೇಳುತ್ತಿದ್ದಾರೆ.

ನಾಲ್ಕು ವರ್ಷಗಳ ಕೆಳಗೆ ಇವರು ಸ್ಟಾಕರ್, ರಂಗಪ್ರವೇಶ ಎಂಬ ಎರಡು ಸಿನಿಮಾಗಳಲ್ಲಿ ನಟಿಸಿದ್ದರು. ಆ ಬಳಿಕ ತಾನಾಯ್ತು, ತನ್ನ ಹವ್ಯಾಸಗಳಾಯ್ತು ಅಂತ ಅಮೆರಿಕಾದಲ್ಲೇ ಆರಾಮಾಗಿದ್ದಾರೆ. ಆದರೆ ಈ ಬೆಳದಿಂಗಳ ಬಾಲೆ ಮೌಂಟ್ ಎವರೆಸ್ಟ್ ಪರ್ವತದ ಬುಡ ಮುಟ್ಟಿ ಬಂದ ಮೇಲಾದರೂ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿ. ಅವರ ನಟನೆಯ ಮೂಲಕ ಕನ್ನಡಿಗರನ್ನು ಮನರಂಜಿಸುತ್ತಲೇ ಇರಲಿ ಎಂಬುದು ಅವರ ಸಿನಿಮಾಗಳನ್ನು ನೋಡುತ್ತ ಬಂದ ಅನೇಕರ ಆಶಯ. ಅದನ್ನು ಈ ಹೂಮಳೆ ಹುಡುಗಿ ಈಡೇರಿಸುತ್ತಾರ ಅನ್ನೋದು ಪ್ರಶ್ನೆ.

View post on Instagram