ಕನ್ನಡ ರತ್ನ ಪುನೀತ್ ರಾಜ್‌ಕುಮಾರ್, ೨೫ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, 'ಗಂಧದ ಗುಡಿ' ಸಾಕ್ಷ್ಯಚಿತ್ರ ನಿರ್ಮಿಸಿದ್ದರು. ನಟಿ ತಮನ್ನಾ ಜೊತೆ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ವಿಡಿಯೋ ಈಗ ವೈರಲ್ ಆಗಿದೆ. ಪತ್ನಿ ಅಶ್ವಿನಿ, ಪಿಆರ್‌ಕೆ ಪ್ರೊಡಕ್ಷನ್ಸ್ ಮೂಲಕ ಚಿತ್ರ ನಿರ್ಮಾಣ ಮುಂದುವರೆಸಿದ್ದಾರೆ. ಅಪ್ಪು ಇನ್ನೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿದ್ದಾರೆ.
ಕನ್ನಡದ ಕಣ್ಮಣಿ, ಕರ್ನಾಟಕ ರತ್ನ ಪುನೀತ್ ರಾಜ್‌ಕುಮಾರ್ (Puneeth Rajkumar) ಅವರು ನಮ್ಮನ್ನಗಲಿ ಕೆಲವು ವರ್ಷಗಳೇ ಕಳೆದು ಹೋಗಿದ್ದರೂ, ಈಗಲೂ ಕೂಡ ಅವರನ್ನು ನೆನಪಿಸಿಕೊಳ್ಳುತ್ತಲೇ ಇರುತ್ತಾರೆ. ವಿಶ್ವದೆಲ್ಲೆಡೆ ಅಪ್ಪುಗೆ ಅಭಿಮಾನಿಗಳು ಇದ್ದಾರೆ. ಸಿನಿಮಾ ಮೂಲಕ ಮಾತ್ರವಲ್ಲ ತಮ್ಮ ಸಮಾಜ ಸೇವೆಯ ಮೂಲಕ ಕೂಡ ಜನರನ್ನು ಆಕರ್ಷಿಸಿಕೊಂಡಿರುವ ಪುನೀತ್, ಸಾವಿನೊಂದಿಗೆ ಸತ್ತಿಲ್ಲ, ನೆನಪಾಗಿ ಇನ್ನೂ ಜನಮಾನಸದಲ್ಲಿ ಉಳಿದುಕೊಂಡಿದ್ದಾರೆ. ಅಪ್ಪು 25 ಸಿನಿಮಾಗಳಲ್ಲಿ ನಟಿಸಿ, 'ಗಂಧದ ಗುಡಿ' ಎಂಬ ಸಾಕ್ಷ್ಯಚಿತ್ರವನ್ನು ಕನ್ನಡಿಗರಿಗೆ ಕೊಟ್ಟು ಮತ್ತೆ ಬಾರದ ಲೋಕಕ್ಕೆ ಪ್ರಯಾಣ ಮಾಡಿದ್ದಾರೆ. ಆದರೆ, ಅವರ ಸವಿನೆನಪನ್ನು ಬಿಟ್ಟು ಹೋಗಿದ್ದಾರೆ.
ಕನ್ನಡ ಸೇರಿದಂತೆ ಹಲವು ಭಾಷೆಯ ನಟನಟಿಯರು ಅವರೊಂದಿಗೆ ತೆರೆ ಹಂಚಿಕೊಂಡಿದ್ದರು. ನಾಯಕಿಯರಾಗಿ ಅವರೊಂದಿಗೆ ಸ್ಟಾರ್ ನಟಿ ತ್ರಿಷಾ ಕೂಡ ನಟಿಸಿದ್ದಾರೆ. ಇಂದು ಭಾರತದ ನಂಬರ್ ಒನ್ ನಟಿಯಾಗಿರುವ ರಶ್ಮಿಕಾ ಮಂದಣ್ಣ ಕೂಡ ಪುನೀತ್ ರಾಜ್‌ಕುಮಾರ್ ಜೊತೆ ನಟಿಸಿದ್ದಾರೆ. ಅಚ್ಚರಿಯಾದರೂ ಸತ್ಯ ಸಂಗತಿ ಏನೆಂದರೆ, ಬಾಹುಬಲಿ ಖ್ಯಾತಿಯ ಬಾಲಿವುಡ್ ಹಾಗೂ ಟಾಲಿವುಡ್ ನಟಿ ತಮನ್ನಾ ಭಾಟಿಯಾ (Tamannaah Bhatia) ಕೂಡ ಕನ್ನಡದ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಹಾಗಿದ್ದರೆ ಅದು ಯಾವ ಸಿನಿಮಾ? ನಮಗೆ ಗೊತ್ತೇ ಇಲ್ಲವಲ್ಲ! ಎಂದೆಲ್ಲಾ ಯೋಚಿಸಿ ಕಂಗಾಲಾಗ್ಬೇಡಿ.. ಅದು ಸಿನಿಮಾ ಅಲ್ಲ.. ಹಾಗಿದ್ರೆ ಮತ್ತೇನು ಅಂತೀರ...!
'ಯಾವನೋ ಇವ್ನು, ಹೆಲ್ಮೆಟ್ ಹಾಕ್ಕೊಂಡು ಸೈಕಲ್ ಓಡಿಸ್ತವ್ನೇ'..! ಈ ಮಾತಿಗೆ ಅಪ್ಪು ರಿಯಾಕ್ಷನ್ ನೋಡಿ..!
ಹೌದು, ಬಾಹುಬಲಿ ಖ್ಯಾತಿಯ ನಟಿ ತಮನ್ನಾ ಹಾಗೂ ಪುನೀತ್ ರಾಜ್‌ಕುಮಾರ್ ಅವರಿಬ್ಬರೂ ಒಂದು ಟಿವಿ ಜಾಹೀರಾತಿಗೆ ಒಟ್ಟಿಗೇ ನಟಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ಈ ಆಡ್ ಟಿವಿಯಲ್ಲಿ ನಿರಂತರವಾಗಿ ಪ್ರಸಾರ ಆಗಿತ್ತು. ಈಗ ಅದು ಸೋಷಿಯಲ್ ಮೀಡಿಯಾ ಮೂಲಕ ಓಡಾಡುತ್ತಿದೆ. ಅದೀಗ ಪುನೀತ್ ಅಭಿಮಾನಿಗಳವರೆಗೂ ತಲುಪಿ ಮತ್ತಷ್ಟು ಇನ್ನಷ್ಟು ವೈರಲ್ ಅಗುತ್ತಿದೆ. ಈ ಜಾಹೀರಾತು ಅಭಿಮಾನಿಗಳಿಗೆ ಮತ್ತೆ ನಟ ಪುನೀತ್ ನೆನಪನ್ನು ಹೆಚ್ಚು ಮಾಡುತ್ತಿವೆ ಎಂದರೆ ಅತಿಶಯೋಕ್ತಿಯಲ್ಲ. ಫ್ಯಾನ್ಸ್ ಯಾವತ್ತೂ ತಮ್ಮ ನೆಚ್ಚಿನ ನಟರನ್ನು ಮರೆಯೋದಿಲ್ಲ ಬಿಡಿ. ಆದರೆ, ಕೆಲವು ಸಂಗತಿಗಳ ಮೂಲಕ ಹೆಚ್ಚು ನೆನಪಾಗುತ್ತಾರೆ ಅಷ್ಟೇ!
ಅಂದಹಾಗೆ, ನಟ ಪುನೀತ್ ಅವರು ಹುಟ್ಟುಹಾಕಿದ್ದ ಪಿಆರ್‌ಕೆ ಪ್ರೊಡಕ್ಷನ್ಸ್ ಅನ್ನು ಅವರ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ನಿರ್ಮಾಣ ಸಂಸ್ಥೆ ಮೂಲಕ ಕೆಲವು ಧಾರಾವಾಹಿಗಳು, ಕಿರುಚಿತ್ರಗಳು ಹಾಗೂ ಸಿನಿಮಾಗಳು ನಿರ್ಮಾಣ ಕಂಡಿವೆ ಹಾಗೂ ಕಾಣುತ್ತಿವೆ. ಪತಿ ಪುನೀತ್ ಸವಿನೆನಪಲ್ಲಿ ನಿರ್ಮಾಣ ಕಾರ್ಯವನ್ನು ನಡೆಸಿಕೊಂಡು ಹೋಗುತ್ತಿರುವ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ತಮ್ಮ ಅತ್ತೆ ಪಾರ್ವತಮ್ಮ ರಾಜ್‌ಕುಮಾರ್ ಅವರು ನಡೆದ ದಾರಿಯಲ್ಲೇ ಸಾಗುತ್ತಿದ್ದಾರೆ ಎನ್ನಬಹುದು. ಒಟ್ಟಿನಲ್ಲಿ, ತಮನ್ನಾ-ಪುನೀತ್ ಜಾಹೀರಾತು ಈಗ ಸೋಷಿಯಲ್ ಮೀಡಿಯಾ ತುಂಬ ಹರಿದಾಡುತ್ತಿದೆ, ಬೇಕಾದ್ರೆ ನೀವೂ ಒಮ್ಮೆ ನೋಡಿ..
ಕಿಚ್ಚ ಸುದೀಪ್ ಪುತ್ರಿ ಸಾನ್ವಿಗೆ ಮಾರುಹೋಗಿದ್ದು ಯಾರು? ಟಾಲಿವುಡ್‌ನಲ್ಲಿ ಕನ್ನಡತಿ ಹವಾ!
