ದಿ ಡೆವಿಲ್ ದರ್ಶನಕ್ಕೆ ಇನ್ನೊಂದು ತಿಂಗಳಿಗಿಂತ ಕಡಿಮೆ ಸಮಯ ಬಾಕಿ ಇದೆ. ಭಾನುವಾರ ಸಿನಿಮಾದ ಮೂರನೇ ಹಾಡು ರಿಲೀಸ್ ಆಗ್ತಾ ಇದೆ. ಎನಿ ವೇ ಸದ್ಯ ದಿ ಡೆವಿಲ್ ಸಿನಿಮಾ ಹಾಡಿಗಿಂತ ವಿಜಯಲಕ್ಷ್ಮೀ ಶೇರ್ ಮಾಡಿದ 'ಕಡಲಂತೆ ಕಾದ ಕಣ್ಣು' ಹಾಡೇ ಹೆಚ್ಚು ಸೌಂಡ್ ಮಾಡ್ತಾ ಇದೆ ಅಂದ್ರೆ ತಪ್ಪಾಗಲ್ಲ..!

ಕಡಲಂತೆ ಕಾದ ಕಣ್ಣು

ವಿಜಯಲಕ್ಷ್ಮೀ ದರ್ಶನ್.. ತಾನು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸ್ತಾ ಇರೋ ಪಾಪದ ಹೆಣ್ಣು ಅಂದ್ರೆ ತಪ್ಪಾಗಲ್ಲ. ದರ್ಶನ್ ಅದೆಷ್ಟೇ ತಪ್ಪು ಮಾಡಿದ್ರೂ ಪತಿಯ ಪರ ಹೋರಾಟ ನಡೆಸುತ್ತಾ ಬಂದಿರೋ ವಿಜಯಲಕ್ಷ್ಮೀ (Vijayalakshmi Darshan) ಈಗ ತನ್ನ ಪತಿಗಾಗಿ ಕಾದು ಕುಳಿತಿದ್ದಾರೆ. ದರ್ಶನ್ ಎಂದು ಆರೋಪಿ ಸ್ಥಾಣದಿಂದ ಆಗಬಹುದು 'ಮುಕ್ತ ಮುಕ್ತ' ಅಂತ ಕಣ್ಣುಬಿಟ್ಟು ಕಾಯ್ತಿದ್ದಾರೆ.

ಕಡಲಂತೆ ಕಾದ ಕಣ್ಣು.. ಪತಿಗಾಗಿ ಕಾದಿರುವ ವಿಜಯಲಕ್ಷ್ಮೀಗೆ ನೋವಿನ ದರ್ಶನ!

ಯೆಸ್ ವಿಜಯಲಕ್ಷ್ಮೀ ದರ್ಶನ್ ಪೋಸ್ಟ್ ವೊಂದನ್ನ ಶೇರ್ ಮಾಡಿದ್ದಾರೆ. ದರ್ಶನ್ ಜೊತೆ ಸೈಕಲ್ ಸವಾರಿ ಮಾಡ್ತಾ ಇರೋ ಮುದ್ದಾದ ಫೋಟೋ ಅದರ ಜೊತೆಗೆ ಕಡಲಂತೆ ಕಾದ ಕಣ್ಣು ಅನ್ನೋ ಹಾಡನ್ನ ಹಂಚಿಕೊಂಡಿದ್ದಾರೆ,

ವಿಜಯಲಕ್ಷ್ಮೀ ಅಕ್ಷರಶಃ ಪತಿಗಾಗಿ ಕಾಯ್ತಾ ಇದ್ದಾರೆ. ಈ ಕಾಯುವಿಕೆಗೆ ಕೊನೆ ಎಂದು ಖಂಡಿತ ಯಾರಿಗೂ ಗೊತ್ತಿಲ್ಲ. ಈಗಾಗ್ಲೇ ದರ್ಶನ್​ ಮೇಲೆ ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಬರೊಬ್ಬರಿ 11 ಸೆಕ್ಷನ್ ಹಾಕಲಾಗಿದೆ. ಈ ಕೇಸ್ ಎಷ್ಟು ಕಾಲ ನಡೆಯುತ್ತೋ, ದರ್ಶನ್​ಗೆ ಅದೇನು ಶಿಕ್ಷೆಯಾಗುತ್ತೋ ಬಲ್ಲವರಿಲ್ಲ.

ದರ್ಶನ್ ತಪ್ಪು ಮಾಡಿ ಶಿಕ್ಷೆ ಅನುಭವಿಸ್ತಾ ಇದ್ರೆ, ಏನೊಂದು ತಪ್ಪು ಮಾಡದೇ ಶಿಕ್ಷೆ ಅನುಭವಿಸ್ತಾ ಇರೋದು ವಿಜಯಲಕ್ಷ್ಮೀ. ಪ್ರೀತಿಸಿ ವರಿಸಿದ ಪತಿಯ ಎಲ್ಲಾ ತಪ್ಪುಗಳನ್ನ ಕ್ಷಮಿಸಿಕೊಂಡು ಬಂದವರು ವಿಜಯಲಕ್ಷ್ಮೀ. ಆದ್ರೆ ಈ ಬಾರಿ ತಪ್ಪನ್ನ ಪತ್ನಿ ಕ್ಷಮಿಸಿದ್ರೂ ಕಾನೂನು ಕ್ಷಮಿಸೋದಿಲ್ಲ. ಸೋ ದಾಸನ ಜೊತೆಗೆ ವಿಜಯಲಕ್ಷ್ಮೀ ಕೂಡ ಶಿಕ್ಷೆ ಅನುಭವಿಸುವ ಸ್ಥಿತಿ ಬಂದಿದೆ.

'ದಿ ಡೆವಿಲ್' ಪ್ರಚಾರಕ್ಕೆ ಸಿದ್ದವಾದ ವಿಜಯಲಕ್ಷ್ಮೀ, ಭಾನುವಾರ ದಿ ಡೆವಿಲ್ 3ನೇ ಸಾಂಗ್ ರಿಲೀಸ್!

ಹೌದು ದರ್ಶನ್ ಅನುಪಸ್ಥಿತಿಯಲ್ಲಿ ದಾಸನ ದಿ ಡೆವಿಲ್ ಸಿನಿಮಾದ ಪ್ರಚಾರವನ್ನ ಕೂಡ ತಾವೇ ಮಾಡೋ ಜವಾಬ್ದಾರಿ ವಹಿಸಿಕೊಂಡಿದ್ದಾರೆ ವಿಜಯಲಕ್ಷ್ಮೀ. ದರ್ಶನ್ ಸೋಷಿಯಲ್ ಮಿಡಿಯಾವನ್ನ ಕೂಡ ಹ್ಯಾಂಡಲ್ ಮಾಡ್ತಾ ಇದ್ದು ಡೆವಿಲ್ ಸಿನಿಮಾದ ಅಪ್​ಡೇಟ್ ಹಂಚಿಕೊಳ್ತಾ ಇದ್ದಾರೆ.

ದಿ ಡೆವಿಲ್ ದರ್ಶನಕ್ಕೆ ಇನ್ನೊಂದು ತಿಂಗಳಿಗಿಂತ ಕಡಿಮೆ ಸಮಯ ಬಾಕಿ ಇದೆ. ಈಗಾಗ್ಲೇ ಸಿನಿಮಾದ ಎರಡು ಹಾಡುಗಳು ರಿಲೀಸ್ ಆಗಿದ್ದು ಭಾನುವಾರ ಸಿನಿಮಾದ ಮೂರನೇ ಹಾಡು ರಿಲೀಸ್ ಆಗ್ತಾ ಇದೆ.

ಎನಿ ವೇ ಸದ್ಯ ದಿ ಡೆವಿಲ್ ಸಿನಿಮಾ ಹಾಡಿಗಿಂತ ವಿಜಯಲಕ್ಷ್ಮೀ ಶೇರ್ ಮಾಡಿದ ಕಡಲಂತೆ ಕಾದ ಕಣ್ಣು ಹಾಡೇ ಹೆಚ್ಚು ಸೌಂಡ್ ಮಾಡ್ತಾ ಇದೆ ಅಂದ್ರೆ ತಪ್ಪಾಗಲ್ಲ..! ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..