ಧರ್ಮಸ್ಥಳದ ಬಗ್ಗೆ ಅವಹೇಳನಕಾರಿ ವಿಡಿಯೋಗಳ ಹಿಂದೆ 40ಕ್ಕೂ ಹೆಚ್ಚು ಯೂಟ್ಯೂಬರ್‌ಗಳು, 500 ಟ್ರೋಲ್ ಪೇಜ್‌ಗಳು ಮತ್ತು 50 ಕಂಟೆಂಟ್ ಕ್ರಿಯೇಟರ್‌ಗಳ ಷಡ್ಯಂತ್ರ ಇರುವ ಶಂಕೆ ವ್ಯಕ್ತವಾಗಿದೆ. ಯೂಟ್ಯೂಬರ್ ಅಭಿಷೇಕ್ ಸೇರಿ ಎಲ್ಲರಿಗೂ ಹಣದ ಫಂಡಿಂಗ್ ಆಗಿರುವ ಅನುಮಾನವಿದೆ. ಸುಮಂತ್, ಚಂದನ್‌ಗೌಡ ಪಾತ್ರವೇನು ನೋಡಿ.

ಬೆಂಗಳೂರು (ಸೆ.05): ಧರ್ಮಸ್ಥಳದ ಬಗ್ಗೆ ಅವಹೇಳನ ಮಾಡುವ ಹಾಗೂ ಧರ್ಮಸ್ಥಳದ ಬಗ್ಗೆ ಷಡ್ಯಂತ್ರ ಮಾಡುವುದಕ್ಕಾಗಿ 40ಕ್ಕೂ ಅಧಿಕ ಯೂಟೂಬರ್, 400-500 ಟ್ರೋಲ್ ಪೇಜರ್‌ಗಳು ಹಾಗೂ 60ಕ್ಕೂ ಅಧಿಕ ಕಂಟೆಂಟ್ ಕ್ರಿಯೇಟರ್‌ಗಳು ಕೂಡ ಕೆಲಸ ಮಾಡಿದ್ದು, ಅವರೆಲ್ಲರಿಗೂ ಹಣ ಫಂಡಿಂಗ್ ಮಾಡಲಾಗಿದೆ ಎಂಬ ಅನುಮಾನ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಯುನೈಟೆಡ್ ಮೀಡಿಯಾ ಯೂಟ್ಯೂಬ್ ಚಾನೆಲ್ ಮಾಲೀಕ ಅಭಿಷೇಕ್‌ನನ್ನು ಕಳೆದ 3 ದಿನಗಳಿಂದ ವಿಚಾರಣೆ ಕೂಡ ಮಾಡಲಾಗುತ್ತಿದೆ. ಕೇರಳದ ಮಾಫ್‌ಗೂ ನೋಟೀಸ್ ನೀಡಲಾಗಿದೆ. ಇದರಲ್ಲಿ ಚಂದನ್‌ಗೌಡ, ಸುಮಂತ್ ಪಾತ್ರವೇನು ನೀವೇ ನೋಡಿ..

ಧರ್ಮಸ್ಥಳ ವಿರುದ್ಧ ವಿಡಿಯೋ ಮಾಡುವಂತೆ ಅಭಿಷೇಕ್ ನನಗೆ ಆಫರ್ ನೀಡಿದ್ದನು ಎಂದು ಗೋಲ್ಡನ್ ಕನ್ನಡಿಗ ಚಾನೆಲ್ ಯೂಟೂಬರ್ ಸುಮಂತ್ ಸ್ಪೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಕಳೆದ 2 ವರ್ಷಗಳಿಂದ ಅಭಿಷೇಕ್ ನನಗೆ ಪರಿಚಯವಾಗಿದ್ದಾನೆ. ಚಂದನ್‌ಗೌಡ ಅವರ ಬಟ್ಟೆ ಅಂಗಡಿಯೊಂದರ ಉದ್ಘಾಟನೆ ವೇಳೆ ಅಭಿಷೇಕ್ ನನಗೆ ಸಿಕ್ಕಿದ್ದನು. ಆಗ ನಾನು ಸಮೀರ್ ವಿಡಿಯೋ ಹೇಗೆ ಇಷ್ಟೊಂದು ವೈರಲ್ ಆಗಿತ್ತು ಎಂದು ಕೇಳಿದ್ದೆನು. ಆದರೆ, ನೀನು ವಿಡಿಯೋ ವೈರಲ್ ಆಗಿರುವುದನ್ನು ನೋಡ್ತಿದ್ದೀಯ, ಅದರ ಹಿಂದೆ ಯಾರಿದ್ದಾರೆ ನಿನಗೆ ಗೊತ್ತಿಲ್ಲ ಎಂದು ಹೇಳಿದ್ದನು.

ಇದನ್ನೂ ಓದಿ: ಧರ್ಮಸ್ಥಳದ ವಿರುದ್ಧ ಮಾಡಿದ ಯೂಟೂಬ್, ಎಐ ನಿರ್ಮಿತ ವಿಡಿಯೋ ಡಿಲೀಟ್ ಮಾಡಿ; ಕೇಂದ್ರ ಸಚಿವರಿಗೆ ನಿಖಿಲ್ ಪತ್ರ!

ನಾವು ಕೊಡುವ ಕಂಟೆಂಟ್ ಅನ್ನು ನೀನು ಹಾಕಬೇಕು ಎಂದು ಸುಮಂತ್‌ಗೆ ಯೂಟೂಬರ್ ಅಭಿಷೇಕ್ ಹೇಳಿದ್ದನು. ನಿನಗೆ ವಾಸವಿರಲು ರೂಮು, ಊಟ, ತಿಂಡಿ ವ್ಯವಸ್ಥೆ ಮಾಡುವುದಕ್ಕೂ ಹಣ ನೀಡುವುದಾಗಿ ತಿಳಿಸಿದ್ದನು. ಆಗ ನಾನು ನಿನಗೆ ಯಾರು ಫಂಡಿಂಗ್ ಮಾಡ್ತಾರೆ ಎಂದು ಅಭಿಷೇಕ್‌ಗೆ ಕೇಳಿದ್ದಕ್ಕೆ, ಮಹೇಶ್ ತಿಮರೋಡಿ, ಗಿರೀಶ್ ಮಟ್ಟೆಣ್ಣನವರ್ ಹಾಗೂ ನಮ್ಮ ಬಾಸ್ ಕೊಡ್ತಾರೆ ಎಂದು ಅಭಿಷೇಕ್, ಸುಮಂತ್‌ಗೆ ಹೇಳಿದ್ದನು ಎಂಬುದು ಬಯಲಾಗಿದೆ. ಧರ್ಮಸ್ಥಳದ ಬಗ್ಗೆ ಅವಹೇಳನ ಮಾಡುವುದಕ್ಕೆ ತನಗೂ ಆಫರ್ ಬಂದಿದ್ದಾಗಿ ಹೇಳಿದ ಸುಮಂತ್ ಹೇಳಿಕೆ ರಾಜ್ಯದಲ್ಲಿ ದೊಡ್ಡ ಬಿರುಗಾಳಿ ಎದ್ದಿದೆ.

ಇನ್ನು ಯೂಟೂಬರ್ ಚಂದನ್‌ ಗೌಡಗೂ ಕೂಡ ಹಣವನ್ನು ಫಂಡಿಂಗ್ ಮಾಡಲಾಗಿದೆ. ಚಂದನ್ ಎಲೆಕ್ಷನ್‌ಗೆ ನಿಂತಿದ್ದಾಗ ತನ್ನ ಗೋಲ್ಡ್ ಚೈನ್ ಅಡವಿಟ್ಟಿದ್ದನು. ಆದರೆ, ಇದಾದ ನಂತರ ಚಂದನ್‌ಗೌಡ ₹50 ಲಕ್ಷ ಮೌಲ್ಯದ ಬಟ್ಟೆ ಅಂಗಡಿಯನ್ನು ಆರಂಭಿಸಿದ್ದಾನೆ. ಯೂಟೂಬ್‌ನಿಂದ ಇಷ್ಟೊಂದು ಹಣ ಬರುವುದಿಲ್ಲ. ಇದಕ್ಕೆಲ್ಲಾ ಹಣ ಎಲ್ಲಿಂದ ಬಂದಿದೆ ಎಂಬುದನ್ನು ನೋಡಿದರೆ, ಅಭಿಷೇಕ್‌ನೇ ಚಂದನ್‌ಗೌಡಗೆ ಮಾಡಿದ್ದಾನೆ ಎಂದು ಸುಮಂತ್ ಆರೋಪ ಮಾಡಿದ್ದಾನೆ. ಇನ್ನು ಸಮೀರ್ ಎಐ ವಿಡಿಯೋ ಮಾಡುವುದಕ್ಕೂ ಲಕ್ಷಾಂತರ ರೂ. ಹಣ ಬೇಕು. ಇದಕ್ಕೆ ಹಣ ಎಲ್ಲಿಂದ ಬಂತು ಎಂಬುದು ಕೂಡ ಯಕ್ಷ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಧರ್ಮಸ್ಥಳ ಕೇಸ್ ಯೂಟ್ಯೂಬರ್ ಸಮೀರ್ ಮನೆ ಮಹಜರು; ಇದೆಲ್ಲಾ ಸುಳ್ಳು ಕೇಸ್ ಎಂದ ಮಟ್ಟಣ್ಣನವರ್

ಯೂಟ್ಯೂಬರ್ ಅಭಿಷೇಕ್ ಗೆ ಮುಂದುವರಿದ ಎಸ್ಐಟಿ ಡ್ರಿಲ್ ಮಾಡಿದ್ದಾರೆ. ನಿನ್ನೆ ತಡರಾತ್ರಿವರೆಗೆ ಅಭಿಷೇಕ್ ಅವರನ್ನು ವಿಚಾರಣೆ ಮಾಡಲಾಗಿದ್ದು, ಇಂದು ಕೂಡ ಎಸ್ಐಟಿ ವಿಚಾರಣೆ‌ ಮುಂದುವರೆಸಿದ್ದಾರೆ. ಇನ್ನೂ ಎಸ್.ಐ.ಟಿ ಠಾಣೆಯಲ್ಲೇ ಇರೋ ಅಭಿಷೇಕ್. ಇಂದು ಮೂರನೇ ದಿನದ ವಿಚಾರಣೆ ಮಾಡಲಾಗುತ್ತಿದೆ. ಬೆಳ್ತಂಗಡಿಯಲ್ಲಿರೋ ಎಸ್ಐಟಿ ಪೊಲೀಸ್ ಠಾಣೆಯಲ್ಲಿ ಅಭಿಷೇಕ್ ಇದ್ದಾನೆ. ನಿನ್ನೆ ತಡರಾತ್ರಿ 2.30 ರವರೆಗೂ ಜಯಂತ್ ವಿಚಾರಣೆ ಮಾಡಲಾಗಿದೆ. ನಿನ್ನೆ ಎಸ್ಐಟಿ ಕಚೇರಿಗೆ ಬಂದಿದ್ದ ಜಯಂತ್.ಟಿ ಅವರನ್ನೂ ತಡರಾತ್ರಿ 2.30ರವರೆಗೆ ವಿಚಾರಣೆ ಮಾಡಲಾಗಿದ್ದು, ಇಂದು ಮತ್ತೆ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.