ಧಾರವಾಡದಲ್ಲಿ ಗಾಂಜಾ ಸೇವನೆಯ ಸುಳ್ಳು ಆರೋಪದ ಮೇಲೆ ಪೊಲೀಸರಿಂದ ವಶಕ್ಕೆ ಪಡೆಯಲ್ಪಟ್ಟಿದ್ದ ಆದಿತ್ಯ ಮ್ಯಾಗೇರಿ ಎಂಬ ವಿದ್ಯಾರ್ಥಿ, ಮರ್ಯಾದೆಗೆ ಅಂಜಿ ಸಾವಿಗೆ ಶರಣಾಗಿದ್ದಾನೆ. ಇದರ ಜೊತೆಗೆ ಕೇಸ್‌ನಿಂದ ಬಿಡುಗಡೆ ಮಾಡಲು ಪೊಲೀಸರು ಸಾವಿರಾರು ರೂ ಲಂಚ ಕೇಳಿದ ಆರೋಪ ಕೇಳಿ ಬಂದಿದೆ.
ಮರ್ಯಾದೆಗೆ ಅಂಜಿ ವಿದ್ಯಾರ್ಥಿ ಸಾವಿಗೆ ಶರಣು:
ಧಾರವಾಡ: ಮರ್ಯಾದೆಗೆ ಅಂಜಿ ವಿದ್ಯಾರ್ಥಿ ಸಾವಿಗೆ ಶರಣಾದ ಮನಕಲುಕುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಗಿರಿನಗರದ ಮನೆಯೊಂದರಲ್ಲಿ 20 ವರ್ಷದ ಯುವಕ ಆದಿತ್ಯ ಮ್ಯಾಗೇರಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ. ಮೃತ ಆದಿತ್ಯ ಕಿಟಲ್ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ. ಕಳೆದ ಶನಿವಾರದಂದು ವಿದ್ಯಾಗಿರಿ ಪೊಲೀಸರು ಆದಿತ್ಯ ಮ್ಯಾಗೇರಿಯನ್ನು ವಶಕ್ಕೆ ಪಡೆದಿದ್ದರು. ಆದಿತ್ಯ ಮ್ಯಾಗೇರಿ ಗಾಂಜಾ ಸೇವಿಸಿದ್ದಾನೆ ಎಂದು ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆದರೆ ಗಾಂಜಾ ಸೇವನೆ ಬಗ್ಗೆ ಟೆಸ್ಟ್ ನಡೆಸಿದಾಗ ನೆಗೆಟಿವ್ ರಿಪೋರ್ಟ್ ಬಂದಿತ್ತು.
40ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದಿದ್ದ ಪೊಲೀಸರು
ಈ ಸಮಯದಲ್ಲಿ ಪೊಲೀಸರು ಸುಮಾರು 40ಕ್ಕೂ ಹೆಚ್ಚು ಯವಕರನ್ನು ವಶಕ್ಕೆ ಪಡೆದಿದ್ದರು. ಗಾಂಜಾ ಕೇಸ್‌ನಲ್ಲಿ ನೆಗೆಟಿವ್ ಬಂದಿದ್ದರು. ಆದಿತ್ಯ ಮ್ಯಾಗೇರಿ ಕೈಯಿಂದ ಪೊಲೀಸರು 2 ಸಾವಿರ ರೂಪಾಯಿಯನ್ನು ಪಡೆದಿದ್ದರು. ಮೊದಲಿಗೆ 10 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದ ಪೊಲೀಸರು ನಂತರ 2 ಸಾವಿರ ರೂಪಾಯಿಯನ್ನುತೆಗೆದುಕೊಂಡಿದ್ದರು. ಇದಾದ ಬಳಿಕ ಗಾಂಜಾ ಕೇಸ್‌ನಲ್ಲಿ ಸಿಲುಕಿ ಮರ್ಯಾದೇ ಹೋಯ್ತು ಅಂತ ನೊಂದ ಆದಿತ್ಯ ಮ್ಯಾಗೇರಿ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ.
ಮಗನ ಶವದ ಮುಂದೆ ಕಣ್ಣೀರಿಟ್ಟ ತಾಯಿ
ಮಗನ ಸಾವಿನಿಂದಾಗಿ ಆದಿತ್ಯ ಮ್ಯಾಗೇರಿ ತಾಯಿ ತೀವ್ರ ಆಘಾತಕ್ಕೊಳಗಾಗಿದ್ದು, ನನ್ನ ಮಗ ಸಾಯಲು ಪೊಲೀಸರೇ ಕಾರಣ ಎಂದು ಕಣ್ಣೀರಿಟ್ಟಿದ್ದಾರೆ. ಮಗನ ಶವವಿದ್ದ ಶವಗಾರದ ಮುಂದೆ ಆದಿತ್ಯ ತಾಯಿ ಕಣ್ಣೀರಾಕಿದ್ದಾರೆ.
ಮತ್ತೊಂದೆಡೆ ಗಾಂಜಾ ಟೆಸ್ಟ್ ವೇಳೆ ಪಾಸಿಟಿವ್ ಬಂದವರ ಹತ್ರ ಪೊಲೀಸರು 25,000 ದಿಂದ 30,000 ರೂ.ವರೆಗೆ ಪೋನ್ ಪೇ ಮುಖಾಂತರ ಹಾಗೂ ಮೂರನೇ ವ್ಯಕ್ತಿ ಮುಖಾಂತರ ಹಣ ಹಾಕಿಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಣ ಕೊಡದೆ ಇದ್ದರ ಬೇರೆ ಕೇಸ್‌ನಲ್ಲಿ ಹಾಕಿ ಪಿಟ್ ಮಾಡುತ್ತೇವೆ ಎಂದು ಪೊಲೀಸರು ಬೆದರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ತಪ್ಪಿತಸ್ಥ ಪೇದೆಗಳ ಮೆಲೆ ಕ್ರಮ ಆಗಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಮೃತ ಅಕ್ಕನ ಖಾತೆಯಲ್ಲಿದ್ದ ಹಣ ಬಿಡಿಸಲು ಆಕೆಯ ಅಸ್ಥಿಪಂಜರವನ್ನೇ ಬ್ಯಾಂಕ್‌ಗೆ ಹೊತ್ತು ತಂದ ತಮ್ಮ


