ರೀಲ್ಸ್ ಮಾಡಲು 'ಅಕ್ಕ' ಎಂದು ಕರೆಯುತ್ತಿದ್ದ ಕ್ವಾಜಾ ಅಲಿಯಾಸ್ ಮುಕಳೆಪ್ಪ, ತನ್ನ ಮಗಳು ಗಾಯತ್ರಿಯ ಮನಸ್ಸು ಬದಲಿಸಿ ಮದುವೆಯಾಗಿದ್ದಾನೆ ಎಂದು ತಾಯಿ ಶಿವಕ್ಕ ಜಾಲಿಹಾಳ ಆರೋಪಿಸಿದ್ದಾರೆ. ಸಾಂತ್ವನ ಕೇಂದ್ರದಲ್ಲಿರುವ ಮಗಳು ತನ್ನೊಂದಿಗೆ ಮಾತನಾಡಲು ನಿರಾಕರಿಸುತ್ತಿದ್ದಾರೆ.

ಧಾರವಾಡ (ಸೆ.23): ಅಕ್ಕ.., ಅಕ್ಕಾರ.., ಅಂತಾ ರೀಲ್ಸ್ ಮಾಡೋಕಂತಾ ನನ್ನ ಮಗಳನ್ನ ಕರೆದುಕೊಂಡು ಹೋಗ್ತಿದ್ದ ಮುಕಳೆಪ್ಪ ಈಗ ನನ್ನ ಮಗಳ ಮನಸ್ಸ ಹಾಳುಮಾಡಿ ಮದುವೆ ಆಗ್ಯಾನ. ಈಗ ಸಾಂತ್ಬನ ಕೇಂದ್ರದಲ್ಲಿರೋ ನನ್ನ ಮಗಳನ್ನು ಮಾತನಾಡಿಸಲು ಬಂದರೆ, ಆಕೆ ನಂಜೊತೆ ಮಾತನಾಡುತ್ತಿಲ್ಲ ಗಾಯತ್ರಿ ಜಾಲಿಹಾಳ ಅವರ ತಾಯಿ ಶಿವಕ್ಕ ಜಾಲಿಹಾಳ ಅಳಲು ತೋಡಿಕೊಂಡಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಶಿವಕ್ಕ ಜಾಲಿಹಾಳ ಅವರು, ಕ್ವಾಜಾ ಅಲಿಯಾಸ್ ಮುಕಳೆಪ್ಪ ಎಂಬ ಯುವಕನೊಂದಿಗೆ ಮದುವೆಯಾಗಿರುವ ಗಾಯತ್ರಿ ಪ್ರಕರಣದ ಸುತ್ತ ಗೊಂದಲ ಮತ್ತು ಭಾವನಾತ್ಮಕ ಕ್ಷಣಗಳು ಹೆಚ್ಚಾಗುತ್ತಿವೆ. ಗಾಯತ್ರಿ ತಾಯಿ ಶಿವಕ್ಕ ಜಾಲಿಹಾಳ ಅವರು ತಮ್ಮ ಮಗಳು ಸಂಪೂರ್ಣವಾಗಿ ಬದಲಾಗಿದ್ದು, ತಮ್ಮನ್ನು ಭೇಟಿಯಾಗಲೂ ನಿರಾಕರಿಸುತ್ತಿದ್ದಾಳೆ. ಮೊದಲಿಗೆ ಕ್ವಾಜಾ ಮತ್ತು ಗಾಯತ್ರಿ ನಡುವೆ ಕೇವಲ ಸಾಮಾಜಿಕ ಮಾಧ್ಯಮದ ರೀಲ್ಸ್‌ಗಾಗಿ ಸ್ನೇಹ ಬೆಳೆದಿತ್ತು. "ಆರಂಭದಲ್ಲಿ ಮುಕಳೆಪ್ಪ ನನ್ನ ಮಗಳಿಗೆ 'ಅಕ್ಕ' ಎಂದು ಕರೆಯುತ್ತಾ, ರೀಲ್ಸ್ ಮಾಡಲು ಆಗಾಗ್ಗೆ ಮನೆಗೆ ಬರುತ್ತಿದ್ದ. ನಾನೂ ಅವರನ್ನು ಉತ್ತಮ ವ್ಯಕ್ತಿ ಎಂದು ಭಾವಿಸಿ ನನ್ನ ಮಗಳನ್ನು ಕಳುಹಿಸುತ್ತಿದ್ದೆ" ಎಂದು ತಾಯಿ ಹೇಳಿದರು. ಆದರೆ, ಕ್ವಾಜಾ ತಮ್ಮ ಮಗಳ ಮನಸ್ಸನ್ನು ಸಂಪೂರ್ಣವಾಗಿ ಬದಲಾಯಿಸಿ, ಮದುವೆಯಾಗಿದ್ದಾನೆ ಎಂದು ಅವರು ಆರೋಪಿಸಿದರು.

ಮೋಸದ ಮದುವೆಯಿಂದ ಮಗಳು ದೂರಾದಳು:

ಸಾಂತ್ವಾನ ಕೇಂದ್ರದಲ್ಲಿ ತನ್ನ ಮಗಳನ್ನು ಭೇಟಿಯಾಗಲು ಹೋದಾಗ, ಗಾಯತ್ರಿ ತಮ್ಮೊಂದಿಗೆ ಮಾತನಾಡುವಂತೆ ನಿರಾಕರಿಸಿದ್ದಾಳೆ. ಮುಕಳೆಪ್ಪ ನನ್ನ ಮಗಳ ಮನಸ್ಸನ್ನು ಸಂಪೂರ್ಣವಾಗಿ 'ಮೈಂಡ್‌ವಾಶ್' ಮಾಡಿದ್ದಾನೆ. ಅವಳು ಮೊದಲಿನಂತೆ ಇಲ್ಲ. ನಮ್ಮ ಎರಡು ಕುಟುಂಬಗಳ ಮಧ್ಯೆ ಒಳ್ಳೆಯ ಸಂಬಂಧವಿತ್ತು. ಆದರೆ ಮುಕಳೆಪ್ಪ ಧಮಕಿ ಹಾಕಿ ನನ್ನ ಮಗಳನ್ನು ಕರೆದುಕೊಂಡು ಹೋಗಿದ್ದಾನೆ. ಅವರು ಮುಂಡಗೋಡದಲ್ಲಿ ಮದುವೆಯಾಗಿದ್ದಾರೆ. ಅವರ ಮದುವೆಗೆ ಯಾವುದೇ ಸರಿಯಾದ ದಾಖಲೆಗಳಿಲ್ಲದೆ ಹೇಗೆ ಮದುವೆಯಾದರು ಎಂದು ನನಗೆ ಗೊತ್ತಿಲ್ಲ. ಅವನು ಎಲ್ಲಿದಾನೋ ಗೊತ್ತಿಲ್ಲ, ನಾನು ದೂರು ಕೊಟ್ಟಿದ್ದೆನೆ ಎಂದು ಶಿವಕ್ಕ ಹೇಳಿದರು.

ನಾನು ಮಗಳನ್ನ ಅವನ ಜೋಡಿ ಕಳಿಸಂಗಿಲ್ಲ:

ಹಿಂದೂಪರ ಸಂಘಟನೆಯವರು ನನ್ನ ತಾಯಿಗೆ ಒತ್ತಡ ಹಾಕುತ್ತಿದ್ದಾರೆ ಎಂಬ ಗಾಯತ್ರಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ನನಗೆ ಯಾರು ಒತ್ತಡ ಹಾಕಿಲ್ಲ, ಅವಳ ತಲಿ ಕೆಟ್ಟಿದೆ. ಅವಳು ಹುಚ್ಚಿತರಹ ಮಾತಾಡ್ತಾ ಇದಾಳೆ. ಇಷ್ಟೆಲ್ಲ ನಡೆದ್ರೂ ಅವಳ ಹಿಂದೆ ಯಾರು ಇಲ್ಲ. ನನಗೆ ನನ್ನ ಮಗಳ ಮುಖ ನೋಡಿ ಸಂಕಟ ಆಗುತ್ತಿದೆ. ತಂದೆ-ತಾಯಿಗೆ ಬೇಟಿಯಾಗದಂತೆ ಅವಳಿಗೆ ಮುಕಳೆಪ್ಪ ಕುಟುಂಬ ದೂರ ಮಾಡಿದೆ. ನಾನು ಅವನ ಜೊತೆ ಇರಲು ಬಿಡಲ್ಲ, ನಮ್ಮ ಮಗಳು ನಮಗೆ ಬೇಕು ಎಂದು ಗಾಯತ್ರಿ ತಾಯಿ ಶಿವಕ್ಕ ಕಣ್ಣೀರಿಟ್ಟರು.