01:30 PM (IST) Feb 17

Karnataka News Live 17 February 2026US Ambassador - ಸಿಎಂ ಸಿದ್ದರಾಮಯ್ಯ ಭೇಟಿಯಾದ ಅಮೆರಿಕ ರಾಯಭಾರಿ; ಬೆಂಗಳೂರೇ ಇಂಡೋ-ಯುಎಸ್ ಸಂಬಂಧದ ಕಿರೀಟ!

ಭಾರತದಲ್ಲಿರುವ ಅಮೆರಿಕ ರಾಯಭಾರಿ ಸರ್ಜಿಯೋ ಗೋರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಪರಸ್ಪರ ಹಿತಾಸಕ್ತಿಯ ವಿಷಯಗಳ ಬಗ್ಗೆ ಚರ್ಚಿಸಿದರು. ಅಲ್ಲದೇ ಸಂಸದ ತೇಜಸ್ವಿ ಸೂರ್ಯ ಅವರನ್ನು ಭೇಟಿಯಾಗಿ, ಸೇನೆಯ ವೆಸ್ಟರ್ನ್ ಕಮಾಂಡ್‌ಗೆ ಭೇಟಿ ನೀಡಿ ರಕ್ಷಣಾ ಸಹಭಾಗಿತ್ವದ ಬಗ್ಗೆ ಚರ್ಚಿಸಿದರು.

Read Full Story
01:29 PM (IST) Feb 17

Karnataka News Live 17 February 2026ಸ್ವಿಗ್ಗಿ, ಜೊಮಾಟೋಗೆ ರಾಜ್ಯ ಸರ್ಕಾರದ ಬರೆ, ಶೇ.1ರಷ್ಟು ಕಲ್ಯಾಣ ಶುಲ್ಕ ವಿಧಿಸಲು ಅಧಿಸೂಚನೆ!

karnataka govt notifies 1 percent welfare fee ಕರ್ನಾಟಕ ಸರ್ಕಾರವು ಗಿಗ್ ಕಾರ್ಮಿಕರ ಕಲ್ಯಾಣಕ್ಕಾಗಿ ಹೊಸ ಶುಲ್ಕವನ್ನು ಅಧಿಸೂಚಿಸಿದೆ. ಇದರ ಅಡಿಯಲ್ಲಿ, ಸ್ವಿಗ್ಗಿ, ಜೊಮಾಟೊ, ಓಲಾ, ಉಬರ್‌ನಂತಹ ಅಗ್ರಿಗೇಟರ್‌ಗಳು ಪ್ರತಿ ವಹಿವಾಟಿನ ಮೇಲೆ ನಿಗದಿತ ಶುಲ್ಕವನ್ನು ಪಾವತಿಸಬೇಕಾಗುತ್ತದೆ. 

Read Full Story
01:27 PM (IST) Feb 17

Karnataka News Live 17 February 2026ಹೊಸ ಸಾಹಸಕ್ಕಿಳಿದ ಶೈನ್‌ ಶೆಟ್ಟಿ; ಶಂಕರಾಭರಣ ಬಸ್‌ ಹತ್ತಿದ Bigg Boss 7 ವಿಜೇತ!

Actor Shine Shetty Movie: ರಂಗಸ್ಥಳ ಸ್ಟುಡಿಯೋಸ್ ನಿರ್ಮಾಣದ ಹೊಸ ಕನ್ನಡ ಸಿನಿಮಾ ಶಂಕರಾಭರಣ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಶೈನ್‌ ಶೆಟ್ಟಿ, ದಿವಾಕರ್‌ ಶೆಟ್ಟಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

Read Full Story
01:21 PM (IST) Feb 17

Karnataka News Live 17 February 2026ಶಿವಮೊಗ್ಗ ರೈತನ ಸೇಡು - ಲಂಚಕ್ಕೆ ಕೈಯೊಡ್ಡಿ ಜೈಲು ಸೇರಿದ ಸರ್ಕಾರಿ ಅಧಿಕಾರಿಗೆ ಬಾಳೆಹಣ್ಣು, ಸೊಳ್ಳೆಬತ್ತಿ ಕೊಟ್ಟ ರೈತ!

ಲಂಚ ಪಡೆದು ಜೈಲು ಪಾಲಾದ ಭೂಸ್ವಾಧೀನಾಧಿಕಾರಿ ಸಿದ್ದಲಿಂಗರೆಡ್ಡಿಯನ್ನು ನೋಡಲು ರೈತ ವಿಶುಕುಮಾರ್ ಜೈಲಿಗೆ ಭೇಟಿ ನೀಡಿದ್ದಾರೆ. ತನ್ನ ಶ್ರೀಗಂಧದ ಮರಕ್ಕೆ ಕಡಿಮೆ ಬೆಲೆ ನಿಗದಿಪಡಿಸಿದ್ದ ಅಧಿಕಾರಿಗೆ ಸೊಳ್ಳೆಬತ್ತಿ, ಬ್ರೆಡ್ ನೀಡಿ, ವ್ಯಂಗ್ಯವಾಗಿ ಪ್ರತಿಭಟಿಸಿ, ಸಾರ್ವಜನಿಕವಾಗಿ ಮಾನ ಹರಾಜು ಹಾಕಿದ್ದಾರೆ.

Read Full Story
12:54 PM (IST) Feb 17

Karnataka News Live 17 February 2026ಕೊಪ್ಪಳದಲ್ಲಿ ತಪ್ಪಿದ ಭಾರಿ ಅನಾಹುತ - ಕಾರ್ಯಕ್ರಮಕ್ಕೂ ಮುನ್ನವೇ ನೆಲಕ್ಕುರುಳಿದ ಗ್ಯಾರಂಟಿ ಉತ್ಸವದ ಬೋರ್ಡ್!

ಕೊಪ್ಪಳದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ 'ಗ್ಯಾರಂಟಿ ಉತ್ಸವ'ದ ವೇಳೆ, ಕಾರ್ಯಕ್ರಮಕ್ಕೆ ಸ್ವಾಗತ ಕೋರುವ ಬೃಹತ್ ಬೋರ್ಡ್ ಏಕಾಏಕಿ ಕುಸಿದು ಬಿದ್ದಿದೆ. ಈ ಘಟನೆಯಲ್ಲಿ ನೂರಾರು ಜನರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Read Full Story
12:45 PM (IST) Feb 17

Karnataka News Live 17 February 2026ಮಕ್ಕಳು ಕಲ್ಲು ತೂರಿಲ್ಲ, ಪಾನಿಪುರಿ ತಿನ್ನೋಕೆ ಹೋಗಿದ್ರು - ಅಪ್ರಾಪ್ತರ ಕುಟುಂಬದ ಹೇಳಿಕೆ

ಚಿಕ್ಕಮಗಳೂರಿನ ವಿಜಯಪುರದಲ್ಲಿ ನಡೆದ ಕಲ್ಲು ತೂರಾಟದ ನಂತರ ಕೋಮು ಘರ್ಷಣೆ ನಡೆದಿದ್ದು, ಇಬ್ಬರು ಅಪ್ರಾಪ್ತರು ಹಲ್ಲೆಗೊಳಗಾಗಿದ್ದಾರೆ. ಪಾನಿಪುರಿ ತಿನ್ನಲು ಹೋದಾಗ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಸಂತ್ರಸ್ತರು ಮತ್ತು ಅವರ ಪೋಷಕರು ಆರೋಪಿಸಿದ್ದಾರೆ.

Read Full Story
12:43 PM (IST) Feb 17

Karnataka News Live 17 February 2026ಶೂ ಒಳಗಡೆ ಮನೆ ಬೀಗ ಇಟ್ಟು ಹೋಗುತ್ತೀರಾ? ಎಚ್ಚರವಿರಲಿ, ಮನೆ ಬಾಡಿಗೆ ಹುಡುಕಿಕೊಂಡು ಬಂದು ಕೀ ನೋಡಿ ಕಳ್ಳನಾದವನ ಕಥೆ!

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕಲು ಬಂದ ಫೋಟೋಗ್ರಾಫರ್, ಶೂ ರ್ಯಾಕ್‌ನಲ್ಲಿದ್ದ ಕೀಲಿಯನ್ನು ಬಳಸಿ ಮನೆಗೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕದ್ದಿದ್ದಾನೆ. ಕಳ್ಳತನದ ನಂತರ ಪಶ್ಚಾತ್ತಾಪದಿಂದ ದೇವಸ್ಥಾನಕ್ಕೆ ತೆರಳಿದ್ದ ಆರೋಪಿಯನ್ನು ಪೊಲೀಸರು ಸಿಸಿಟಿವಿ ಸಹಾಯದಿಂದ ಪತ್ತೆಹಚ್ಚಿ ಬಂಧಿಸಿದ್ದಾರೆ.

Read Full Story
12:32 PM (IST) Feb 17

Karnataka News Live 17 February 2026ಮಹಿಳೆಯ ಮಾಂಗಲ್ಯ ಕಿತ್ತು ಪರಾರಿ ಯತ್ನ; 1 ಕಿಮೀ ಚೇಸ್ ಮಾಡಿ ಕಳ್ಳನ ಕಳ್ಳನ ಹೆಡೆಮುರಿ ಕಟ್ಟಿದ ಪೊಲೀಸ್!

ಬೆಂಗಳೂರಿನಲ್ಲಿ ಮಹಿಳೆಯ ಸರ ಕಿತ್ತು ಪರಾರಿಯಾಗುತ್ತಿದ್ದ ಕಳ್ಳನನ್ನು, ಪೊಲೀಸ್ ಕಾನ್ಸ್‌ಟೇಬಲ್ ಹಣಮಂತ ಪುಟಾಣಿ ಸುಮಾರು ಒಂದು ಕಿಲೋಮೀಟರ್ ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದಿದ್ದಾರೆ. ಬಂಧಿತ ಆರೋಪಿ ಸೈಯದ್ ಜಾಫರ್‌ನಿಂದ 6 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ.

Read Full Story
12:02 PM (IST) Feb 17

Karnataka News Live 17 February 2026NIMHANS - ದೇಶದ ಮೊದಲ ಸಂಯೋಜಿತ ಚಿಕಿತ್ಸಾ ವಿಭಾಗ ಈಗ ನಿಮ್ಹಾನ್ಸ್‌ನಲ್ಲಿ! ಈ ಹೊಸ ವಿಭಾಗದ ವಿಶೇಷತೆ ಏನು?

ನಿಮ್ಹಾನ್ಸ್‌ನ ಸಂಯೋಜಿತ ಚಿಕಿತ್ಸಾ ವಿಭಾಗವು ಆಯುರ್ವೇದ, ಯೋಗ ಮತ್ತು ಆಧುನಿಕ ವೈದ್ಯಕೀಯ ಪದ್ಧತಿಯನ್ನು ಸಮನ್ವಯಗೊಳಿಸಿ ಮನೋರೋಗ ಹಾಗೂ ನರರೋಗಗಳಿಗೆ ಚಿಕಿತ್ಸೆ ನೀಡುತ್ತಿದೆ. ದೇಶದಲ್ಲೇ ಮೊದಲನೆಯದಾದ ಈ ವಿಭಾಗದಲ್ಲಿ, ಕಳೆದ ಐದು ವರ್ಷಗಳಲ್ಲಿ 10,000ಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದಿದ್ದಾರೆ.

Read Full Story
11:54 AM (IST) Feb 17

Karnataka News Live 17 February 2026ಪ್ರಿಯಾ ಸುದೀಪ್ ಗೆ ಕಾರ್ ರೇಸ್ ಹುಚ್ಚು ಹಿಡಿಸಿದ್ದು ಯಾರು? ಇಂಟರೆಸ್ಟಿಂಗ್ ವಿಷ್ಯ ಹೊರ ಹಾಕಿದ ಕಿಚ್ಚನ ಮಡದಿ

ಕಿಚ್ಚನ ಪ್ರೀತಿಯ ಮಡದಿ ಪ್ರಿಯಾ ಸುದೀಪ್ ಎಲ್ಲದ್ರಲ್ಲೂ ಎತ್ತಿದ ಕೈ. ಸಿನಿಮಾ, ಕ್ರಿಕೆಟ್ ನಲ್ಲಿ ಮಾತ್ರವಲ್ಲ ಕಾರ್ ರೇಸ್ ನಲ್ಲೂ ಆಸಕ್ತಿ ಹೊಂದಿರುವ ಪ್ರಿಯಾ ಸುದೀಪ್ ಗೆ ಇಷ್ಟವಾಗುವ ಕಾರ್ ಯಾವ್ದು ಗೊತ್ತಾ?

Read Full Story
11:39 AM (IST) Feb 17

Karnataka News Live 17 February 2026ಪ್ರತ್ಯೇಕ ಅಗ್ನಿ ಅವಘಡ - ದಾವಣಗೆರೆಯಲ್ಲಿ ಕಾರುಗಳು, ಇಳಕಲ್‌ನಲ್ಲಿ ಬೈಕ್‌ಗಳು ಸುಟ್ಟು ಕರಕಲು - ಲಕ್ಷಾಂತರ ರೂ. ಹಾನಿ!

ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಗ್ನಿ ದುರಂತಗಳಲ್ಲಿ ಗ್ಯಾರೇಜ್‌ಗಳಲ್ಲಿದ್ದ ವಾಹನಗಳು ಸುಟ್ಟು ಕರಕಲಾಗಿವೆ. ದಾವಣಗೆರೆಯಲ್ಲಿ ಕಾರುಗಳು ಭಸ್ಮವಾದರೆ, ಇಳಕಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೈಕ್‌ಗಳು ಬೆಂಕಿಗಾಹುತಿಯಾಗಿವೆ.
Read Full Story
11:28 AM (IST) Feb 17

Karnataka News Live 17 February 2026ಬಿಎಂಟಿಸಿ ನಿವೃತ್ತ ಕಂಡಕ್ಟರ್ ಗೆ ಕೋಟಿಗಟ್ಟಲೆ ಆಸ್ತಿ ತಂದ ಕುತ್ತು, ಇಂದಿರಾನಗರದಲ್ಲಿ ಮಕ್ಕಳಿಂದಲೇ ತಂದೆ ಹತ್ಯೆ!

ಬೆಂಗಳೂರಿನ ಇಂದಿರಾನಗರದಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ, ನಿವೃತ್ತ ಬಿಎಂಟಿಸಿ ಕಂಡಕ್ಟರ್ ಮುನಿಕೃಷ್ಣಪ್ಪ ಅವರನ್ನು ಅವರ ಮಕ್ಕಳೇ ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ.

Read Full Story
11:15 AM (IST) Feb 17

Karnataka News Live 17 February 2026ಇವತ್ತು ಜಿಂಬಾಬ್ವೆ ಎದುರು ಐರ್ಲೆಂಡ್ ಗೆಲ್ಲಲಿ ಎಂದು ಬೇಡಿಕೊಳ್ಳುತ್ತಿದೆ ಆಸ್ಟ್ರೇಲಿಯಾ! ಕಾಂಗರೂ ಪಡೆಗೆ ಇದೆಂಥಾ ಪರಿಸ್ಥಿತಿ

ಬೆಂಗಳೂರು: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ ಹಲವು ಅಚ್ಚರಿ ಫಲಿತಾಂಶಗಳು ಹೊರಬಿದ್ದಿವೆ. ಇದೀಗ ಮಾಜಿ ನಾಯಕ ಆಸ್ಟ್ರೇಲಿಯಾ, ಇಂದು ನಡೆಯಲಿರುವ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಐರ್ಲೆಂಡ್ ಗೆಲ್ಲಲಿ ಎಂದು ಬೇಡಿಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿದೆ.

Read Full Story
10:58 AM (IST) Feb 17

Karnataka News Live 17 February 2026Bengaluru - ಪೊಲೀಸ್ ಯುನಿಫಾರ್ಮ್ ಧರಿಸಿ 20 ಲಕ್ಷ ರು. ನಗದು, 500 ಗ್ರಾಂ ಚಿನ್ನಾಭರಣ ಸುಲಿಗೆ

ಬೆಂಗಳೂರಿನ ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ, ಪೊಲೀಸ್ ಸಮವಸ್ತ್ರ ಧರಿಸಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿದ್ದಾರೆ. ಚಾಕು ತೋರಿಸಿ ದಂಪತಿಯನ್ನು ಬೆದರಿಸಿ, 20 ಲಕ್ಷ ರು. ನಗದು ಹಾಗೂ 500 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
Read Full Story
10:37 AM (IST) Feb 17

Karnataka News Live 17 February 20262ನೇ ಪತ್ನಿ, ಮೊದಲ ಪತ್ನಿ ಮಗಳು ಗೌರಿ ನಡುವಿನ ಸಂಬಂಧ ಹೇಗಿದೆ? ಎಸ್‌ ಮಹೇಂದರ್‌ ಮಾತು ಕೇಳಿದ್ರೆ ದಿಗ್ಬ್ರಮೆ ಆಗುತ್ತೆ

Director S Mahendar: ಕನ್ನಡದ ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಎಸ್‌ ಮಹೇಂದರ್‌ ಅವರು ನಟ ಕೂಡ ಹೌದು, ಅವರು ಎರಡನೇ ಮದುವೆಯಾಗಿ, ಮಗ ಕೂಡ ಇದ್ದಾನೆ. ಈಗ ಎಸ್‌ ಮಹೇಂದರ್‌ ಅವರು ಎರಡನೇ ಪತ್ನಿ ಹಾಗೂ ಮಗಳು ಗೌರಿ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

Read Full Story
10:29 AM (IST) Feb 17

Karnataka News Live 17 February 2026ಏನಾಗ್ತಿದೆ ರಾಜ್ಯದಲ್ಲಿ? ಒಂದಲ್ಲ ಎರಡಲ್ಲ, ಮಂಡ್ಯ ಸೇರಿ 10 ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ!

ಮಂಡ್ಯ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು. ನ್ಯಾಯಾಧೀಶರು, ವಕೀಲರು ಸೇರಿದಂತೆ ಎಲ್ಲರನ್ನೂ ಹೊರಕಳುಹಿಸಿ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ತಪಾಸಣೆ ನಡೆಸಲಾಯಿತು. ತಪಾಸಣೆ ಬಳಿಕ ಇದೊಂದು ಹುಸಿ ಬೆದರಿಕೆ ಎಂದು ಖಚಿತಪಟ್ಟಿದ್ದು, 

Read Full Story
10:23 AM (IST) Feb 17

Karnataka News Live 17 February 2026ಚಿರಂಜೀವಿ ಜತೆ ರೊಮ್ಯಾನ್ಸ್ ಅನ್ನು ಎಂಜಾಯ್ ಮಾಡಲು ನನಗೆ ಆಗುತ್ತಿರಲಿಲ್ಲ ಎಂದ ನಟಿ! ಯಾರು ಆ ನಟಿ? ಏನದು ಘಟನೆ?

ಚಿರಂಜೀವಿ ಜೊತೆ ಡಾನ್ಸ್ ಮಾಡುವಾಗ ಒಬ್ಬ ನಟಿ ಸಖತ್ ಪೈಪೋಟಿ ನೀಡುತ್ತಿದ್ದರಂತೆ. ಇದನ್ನು ಗಮನಿಸಿದ ಚಿರಂಜೀವಿ, ಆಕೆಗೆ ಒಂದು ಸ್ವೀಟ್ ವಾರ್ನಿಂಗ್ ಕೊಟ್ಟಿದ್ದರು. ಅಷ್ಟಕ್ಕೂ ಆ ನಟಿ ಯಾರು? ಏನಿದು ಘಟನೆ? ಇಲ್ಲಿದೆ ವಿವರ.
Read Full Story
10:14 AM (IST) Feb 17

Karnataka News Live 17 February 2026ಬಾಂಗ್ಲಾ ಸರ್ಕಾರ ಕೆಡವಿದ ಜೆನ್‌-ಝೀಗಳೇನಾದರು ?

ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಒಂದು ಸಾಲಿನಲ್ಲಿ ಈ ರೀತಿ ವಿಶ್ಲೇಷಿಸಬಹುದು. ಅಲ್ಲಿ ಕಳೆದ ವಾರ ನಡೆದ ಚುನಾವಣೆಗೆ ಪ್ರಮುಖ ಕಾರಣವೇ- 2024ರ ಆಗಸ್ಟ್‌ನ ಜೆನ್‌-ಝೀ ಹೋರಾಟ.

Read Full Story
09:57 AM (IST) Feb 17

Karnataka News Live 17 February 2026ಪದೇ ಪದೇ‌ ಕಾರ್ತಿಕ್‌ ಮಹೇಶ್‌ ಜೊತೆ ಲವ್‌ ಗಾಸಿಪ್; ಕೊನೆಗೂ ಸತ್ಯ ಹೇಳಿದ Karna Serial ನಮ್ರತಾ ಗೌಡ

Actress Namratha Gowda Love Gossip: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಸ್ಪರ್ಧಿಗಳಾದ ನಮ್ರತಾ ಗೌಡ ಹಾಗೂ ಕಾರ್ತಿಕ್‌ ಮಹೇಶ್‌ ಅವರು ಲವ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಈ ಬಗ್ಗೆ ನಮ್ರತಾ ಗೌಡ ಅವರು ಸೋಶಿಯಲ್‌ ಮೀಡಿಯಾದಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ.

Read Full Story
09:56 AM (IST) Feb 17

Karnataka News Live 17 February 2026ಸುರಂಗ ಮಾರ್ಗ, ಫ್ಲೈಓವರ್ ಆಗುಂಬೆ ಘಾಟಿಗೆ ಮಹಾ ಯೋಜನೆ? ಬದಲಾಗಲಿದೆ ಮಲೆನಾಡಿನ ದಾರಿ

ಮಲೆನಾಡು-ಕರಾವಳಿ ಸಂಪರ್ಕದ ಕೊಂಡಿಯಾಗಿರುವ ಆಗುಂಬೆ ಘಾಟಿ ರಸ್ತೆಯನ್ನು ಸುರಂಗ ಅಥವಾ ಫ್ಲೈಓವರ್ ಮೂಲಕ ವಿಸ್ತರಿಸುವ ಯೋಜನೆ ಸಿದ್ಧವಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಪ್ರಯಾಣಿಕರ ತಂಗುದಾಣ, ಬೈಪಾಸ್ ರಸ್ತೆ ಮತ್ತು ಹೆದ್ದಾರಿ ವಿಸ್ತರಣೆಯಂತಹ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

Read Full Story