- Home
- News
- State
- Assembly Bypolls 2026 Live: ಉಪಚುನಾವಣೆ ಕಣದಲ್ಲಿ ರಾಜಾರೋಷವಾಗಿ ಕಾಂಗ್ರೆಸ್ ಹಣ ಹಂಚಿಕೆ, 500 ರೂ ಸಾಕಾಗೊಲ್ಲ, ವೈರಲ್ ಆಯ್ತು ವಿಡಿಯೋ!
Assembly Bypolls 2026 Live: ಉಪಚುನಾವಣೆ ಕಣದಲ್ಲಿ ರಾಜಾರೋಷವಾಗಿ ಕಾಂಗ್ರೆಸ್ ಹಣ ಹಂಚಿಕೆ, 500 ರೂ ಸಾಕಾಗೊಲ್ಲ, ವೈರಲ್ ಆಯ್ತು ವಿಡಿಯೋ!

ಬೆಂಗಳೂರು (ಏ.9): ಕರ್ನಾಟಕದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಪ್ರಕ್ರಿಯೆ ಇಂದು (ಏಪ್ರಿಲ್ 9) ಬೆಳಿಗ್ಗೆಯಿಂದಲೇ ಆರಂಭವಾಗಿದೆ. ಹಿರಿಯ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪ ಮತ್ತು ಎಚ್.ವೈ. ಮೇಟಿ ಅವರ ನಿಧನದಿಂದ ತೆರವಾಗಿದ್ದ ಈ ಸ್ಥಾನಗಳಿಗೆ ಇಂದು ಅಂತಿಮ ಕದನ ನಡೆಯುತ್ತಿದ್ದು, ಒಟ್ಟು 34 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಇವಿಎಂ ಯಂತ್ರಗಳಲ್ಲಿ ಭದ್ರಪಡಿಸಲಿದ್ದಾರೆ.
Karnataka Assembly by election 2026 Live:ಉಪಚುನಾವಣೆ ಕಣದಲ್ಲಿ ರಾಜಾರೋಷವಾಗಿ ಕಾಂಗ್ರೆಸ್ ಹಣ ಹಂಚಿಕೆ, 500 ರೂ ಸಾಕಾಗೊಲ್ಲ, ವೈರಲ್ ಆಯ್ತು ವಿಡಿಯೋ!
Karnataka Assembly by election 2026 Live:ಬಾಗಲಕೋಟೆ ಉಪಚುನಾವಣೆ - ಕಲ್ಲು ತೂರಾಟ ನಡೆದ ಕಿಲ್ಲಾ ಓಣಿಯಲ್ಲಿ ಬಿಗಿ ಭದ್ರತೆ; ಮುಂಜಾಗ್ರತೆಗಾಗಿ ದೇವಸ್ಥಾನವೇ ಬಂದ್!
ಬಾಗಲಕೋಟೆ ಉಪಚುನಾವಣೆಯ ಅಂಗವಾಗಿ ಅತಿ ಸೂಕ್ಷ್ಮ ಪ್ರದೇಶವಾದ ಕಿಲ್ಲಾ ಓಣಿಯಲ್ಲಿ ಬಿಗಿ ಭದ್ರತೆಯ ನಡುವೆ ಬಿರುಸಿನ ಮತದಾನ ನಡೆಯುತ್ತಿದೆ. ಹಿಂದಿನ ಗಲಾಟೆಗಳ ಹಿನ್ನೆಲೆಯಲ್ಲಿ ಬಿಎಸ್ಎಫ್ ಯೋಧರನ್ನು ನಿಯೋಜಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಗಣೇಶ ಮಂದಿರಕ್ಕೆ ಬೀಗ ಹಾಕಲಾಗಿದೆ.
Karnataka Assembly by election 2026 Live:ಬಾಗಲಕೋಟೆ ಉಪಚುನಾವಣೆ: ಅಮೀನಗಡದಲ್ಲಿ ಮತದಾನದ ವೇಳೆ ಅವ್ಯವಸ್ಥೆ, ಬಿಸಿಲಿಗೆ ವೃದ್ಧೆ ಅಸ್ವಸ್ಥ!
ಬಾಗಲಕೋಟೆ ಉಪಚುನಾವಣೆಯ ಮತದಾನ ಪ್ರಕ್ರಿಯೆ ನಡೆಯುತ್ತಿರುವ ಬೆನ್ನಲ್ಲೇ ಅಮೀನಗಡದ ಮತಗಟ್ಟೆಗಳಲ್ಲಿ ಕನಿಷ್ಠ ಮೂಲಭೂತ ಸೌಲಭ್ಯಗಳ ಕೊರತೆ ಕಂಡುಬಂದಿದ್ದು, ಮತದಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ನೆರಳಿನ ಆಸರೆಯಾಗಲಿ ಅಥವಾ ಕುಡಿಯುವ ನೀರಿನ ವ್ಯವಸ್ಥೆಯಾಗಲಿ ಇಲ್ಲದ ಕಾರಣ ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರು ಹೈರಾಣಾಗಿದ್ದಾರೆ. ಈ ಅವ್ಯವಸ್ಥೆಯ ನಡುವೆ ಮತದಾನಕ್ಕೆ ಬಂದಿದ್ದ ವೃದ್ಧೆಯೊಬ್ಬರು ಬಿಸಿಲಿನ ತಾಪ ತಾಳಲಾರದೆ ಕುಸಿದು ಬಿದ್ದ ಘಟನೆ ನಡೆದಿದ್ದು, ತಕ್ಷಣ ಸ್ಥಳೀಯರು ಧಾವಿಸಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಚುನಾವಣಾ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

Karnataka Assembly by election 2026 Live:ಬಾಗಲಕೋಟೆ ಉಪಚುನಾವಣೆ - ಮಗನ ಬದಲು ತಂದೆಯ ಹೆಸರಿಗೆ ಮಾರ್ಕ್ ಮಾಡಿದ ಚುನಾವಣಾ ಸಿಬ್ಬಂದಿ!
ಬಾಗಲಕೋಟೆ ವಿಧಾನಸಭಾ ಉಪಚುನಾವಣೆಯಲ್ಲಿ ಚುರುಕಿನ ಮತದಾನ ನಡೆದಿದ್ದು, ಮತಗಟ್ಟೆಯೊಂದರಲ್ಲಿ ಸಿಬ್ಬಂದಿ ಎಡವಟ್ಟಿನಿಂದ ಗೊಂದಲ ಸೃಷ್ಟಿಯಾಯಿತು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಹೊರಗಿನವರು ಹಣ, ಹೆಂಡ ಹಂಚಿ ಗೂಂಡಾಗಿರಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
Karnataka Assembly by election 2026 Live:ದಾವಣಗೆರೆ, ಬಾಗಲಕೋಟೆ ಮತದಾನ ಪ್ರಮಾಣ

Karnataka Assembly by election 2026 Live:ದಾವಣಗೆರೆ: ಅತಿಸೂಕ್ಷ್ಮ ಮತಗಟ್ಟೆ ಪರಿಶೀಲನೆ
ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾಣೆಗೆ ಮತದಾನ. ಅತಿಸೂಕ್ಷ್ಮ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ಡಿಸಿಎಸ್‌ಪಿ. 284 ಮತಗಟ್ಟೆಗಳಲ್ಲಿ 74 ಅತಿಸೂಕ್ಷ್ಮ ಮತಗಟ್ಟೆಗಳು. ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ, ಎಸ್ಪಿ ಶೇಖರ್ ಹೆಚ್.ಡಿ. ಮತಗಟ್ಟೆಗಳಿಗೆ ಭೇಟಿ. ದಾವಣಗೆರೆ ನಗರದ ಬಾಷಾ ನಗರದ ಮಿಲ್ಲತ್ ಸಂಸ್ಥೆಯ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆಗಳಿಗೆ ಭೇಟಿ. ಮತಗಟ್ಟೆ ಸಂಖ್ಯೆ 94, 95, 96ಕ್ಕೆ ಭೇಟಿ ನೀಡಿ ಪರಿಶೀಲನೆ. ಎಲ್ಲ ಮತಗಟ್ಟೆಗಳಲ್ಲಿ ಶಾಂತಿಯುತ ಮತದಾನ ನಡೆಯುತ್ತಿದೆ.
ಜನರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಮತದಾನ ಮಾಡುತ್ತಿದ್ದಾರೆ. ಎಲ್ಲಾ ಮತಗಟ್ಟೆಗಳಲ್ಲಿ ಉತ್ತಮ ಮತದಾನ ನಡೆಯುತ್ತಿದೆ. ಮತದಾನ ಪ್ರಮಾಣ ಕಡಿಮೆ ಇರುವ ಮತಗಟ್ಟೆಗಳ ವ್ಯಾಪ್ತಿಯಲ್ಲಿ ಜನಜಾಗೃತಿ ಎಂದ ಡಿಸಿ ಗಂಗಾಧರಸ್ವಾಮಿ. ಅತಿಸೂಕ್ಷ್ಮ ಮತಗಟ್ಟೆಗಳ ಬಳಿ ಬಿಗಿ ಬಂದೋಬಸ್ತ್ ಮಾಡಿದ್ದೇವೆ. ಸಿಎಪಿಎಫ್ ತುಕಡಿಗಳನ್ನು ನಿಯೋಜಿಸಿದ್ದೇವೆ ಎಂದ ಎಸ್‌ಪಿ ಶೇಖರ್ ಹೆಚ್.ಟಿ.
Karnataka Assembly by election 2026 Live:ಯುವಕರೇ ನಾಚಿಸುವಂತೆ ಹಿರಿಯರಿಂದ ದಾವಣೆಗರೆಯಲ್ಲಿ ಮತದಾನ
ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮತದಾನ ಮಾಡೋದ್ರಲ್ಲಿ ಹಿರಿಯ ಮತದಾರರೇ ಮುಂದು. ವೃದ್ದಾಪ್ಯ, ಅನಾರೋಗ್ಯ, ದೈಹಿಕ ಸಮಸ್ಯೆಗಳಿದ್ದರೂ ಬಂದು ಉತ್ಸಾಹದಿಂದ ಮತದಾನ. ದಾವಣಗೆರೆ ದಕ್ಷಿಣ ಕ್ಷೇತ್ರದ ಹದಡಿ ಗ್ರಾಮದಲ್ಲಿ ಸರತಿ ಸಾಲಿನಲ್ಲಿ ಕುಳಿತು ಹಿರಿಯ ಮತದಾರರಿಂದ ಮತದಾನ. ಹದಡಿ ಗ್ರಾಮದ ಸರ್ಕಾರಿ ಹಿರಿಯ ಪ್ರೌಡ ಶಾಲೆಯಲ್ಲಿರೋ 5 ಭೂತ್ ಗಳಲ್ಲಿ ಬಿರುಸಿನ ಮತದಾನ. ನಮ್ಮ ಕರ್ತವ್ಯ, ಬೆಳಿಗ್ಗೆ 5 ಗಂಟೆ ಗೆ ಬನ್ನಿ ಅಂದರೂ ನಾವು ಓಟ್ ಮಾಡ್ತೀವಿ ಎಂದ ಹಿರಿಯ ಮತದಾರರು
Karnataka Assembly by election 2026 Live:ಬಾಗಲಕೋಟೆ ಸಮರ: ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ ಚರಂತಿಮಠ
ಬಾಗಲಕೋಟೆ: ಹಳದಿ ಶಾಲು ಹಾಕಿಕೊಂಡು ಪತ್ನಿ ಹಾಗೂ ಕುಟುಂಬ ಸಮೇತ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರು ಮತಗಟ್ಟೆ ಸಂಖ್ಯೆ 166ರಲ್ಲಿ ಮತದಾನ ಮಾಡಿದರು.
ಏಷಿಯಾನೆಟ್ ಸುವರ್ಣನ್ಯೂಸ್ ಜೊತೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಉತ್ತಮವಾಗಿ ಮತದಾನ ಆಗ್ತಿದೆ. ಸಿಎಂ ಸೇರಿ ಎಲ್ಲರೂ ಪ್ರಚಾರ ಮಾಡಿ ಹೋದ್ರು. ಬಂದವರೆಲ್ಲಾ ಹೋಗಲೇಬೇಕಲ್ಲ. ಆದ್ರೆ ಕ್ಷೇತ್ರದಲ್ಲಿರೋರು ಅವರು ಮತದಾನ ಮಾಡ್ತಿದ್ದಾರೆ. ಸಿಎಂ ಇಲ್ಲೇನೂ ಮತದಾನ ಮಾಡೋದಿಲ್ಲ. ಕೆಲವರು ಬೆಳಗಾವಿ ಸೇರಿ ಹೊರ ಜಿಲ್ಲೆಯವರು ಇಲ್ಲಿರೋ ಮಾಹಿತಿ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಲಾಡ್ಜ್ ನಲ್ಲಿ ಬಿಡಿಸಿ ಕಳಿಸಿದ್ದಾರೆ.
ಆದ್ರೆ ಕೆಲವರು ಮನೆ ಮಾಡಿಕೊಂಡಿದ್ದಾರೆ. ಸರಾಯಿ, ಹಣ ಹಂಚುವ ಕೆಲಸ ಮಾಡ್ತಿದ್ದಾರೆ. ಗೂಂಡಾಗಿರಿ ಮಾಡಿ ಇಲ್ಲಿ ಗಲಾಟೆ ಮಾಡಿಸಬೇಕು ಅಂತ ಅವರನ್ನು ಕರೆತಂದಿದ್ದಾರೆ. ಚುನಾವಣೆ ವೇಳೆ ಗೃಹಲಕ್ಷ್ಮೀ ಹಣ ಹಾಕಿದ್ದಕ್ಕೆ ಚುನಾವಣೆ ಆಯೋಗ ಪ್ರಶ್ನೆ ಮಾಡಿದೆ.
ಸಿಎಂ ಸಿದ್ದರಾಮಯ್ಯ ಚುನಾವಣೆ ಆಯೋಗದ ಹೇಳಿಕೆಗೆ ಬಗ್ಗಲ್ಲ ಅಂತ ಹೇಳಿದ್ದಾರೆ. ಇದು ಸಿಎಂ ಅವರ ದುಹಂಕಾರದ ವರ್ತನೆ ತೋರಿಸುತ್ತೆ. ಚುನಾವಣೆ ಆಯೋಗ ಸ್ವತಂತ್ರವಾಗಿರೋದು, ಎಲ್ಲರೂ ಮಾನ್ಯ ಮಾಡಬೇಕು. ರಾಜ್ಯದ ಸಿಎಂ ಆಗಿ ಈ ರೀತಿ ಮಾತಾಡೋದು ಶೋಭೆ ತರುವುದಿಲ್ಲ. ಈ ಬಾರಿ ಯುವಕರು ಸೇರಿ ಎಲ್ಲರೂ ಒಳ್ಳೆಯ ಮತದಾನ ಮಾಡಬೇಕು. ಈ ಸಲ ಗೆಲುವು ನಮ್ಮದೇ ಎಂದು ವಿಶ್ವಾಸ ವ್ಯಕ್ತಪಡಿಸಿದ ವೀರಣ್ಣ ಚರಂತಿಮಠ.

Karnataka Assembly by election 2026 Live:ದಾವಣಗೆರೆ ದಕ್ಷಿಣದಲ್ಲಿ ಬೆ.9 ಗಂಟೆಯವರೆಗೆ ಶೇ. 8.90ರಷ್ಟು ವೋಟಿಂಗ್
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 9 ಗಂಟೆಯವರೆಗೆ 8.90% ಮತದಾನ. ದಾವಣಗೆರೆಯ 284 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ. ನಗರ ಪ್ರದೇಶದ 234, ಗ್ರಾಮೀಣ ಪ್ರದೇಶದ 50 ಮತಗಟ್ಟೆಗಳಲ್ಲಿ ವೋಟಿಂಗ್
Karnataka Assembly by election 2026 Live:ದಾವಣಗೆರೆ ಉಪಚುನಾವಣೆ - ಸಖಿ ಮತಗಟ್ಟೆಯಲ್ಲಿ ಮತದಾನ ಸಂಭ್ರಮ, ಹಿರಿಯರು-ಅಂಗವಿಕಲರ ವೋಟಿಂಗ್
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಚುರುಕಿನಿಂದ ಸಾಗಿದ್ದು, ಶಿರ್ಮಗೊಂಡನಹಳ್ಳಿಯ ಆಕರ್ಷಕ ಸಖಿ ಮತಗಟ್ಟೆ ಎಲ್ಲರ ಗಮನ ಸೆಳೆದಿದೆ. ಯುವಕರು, ಹಿರಿಯರು ಹಾಗೂ ಅಂಗವಿಕಲರು ಸೇರಿದಂತೆ ಎಲ್ಲರೂ ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು.
Karnataka Assembly by election 2026 Live:ದಾವಣಗೆರೆ: ಕಾಲೇಜು ಆರಂಭಕ್ಕೂ ಮುನ್ನವೇ ಬಂದು ಮತ ಚಲಾಯಿಸಿದ ವಿದ್ಯಾರ್ಥಿಗಳು;
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಮತದಾನ ಪ್ರಕ್ರಿಯೆ ಇಂದು ಆರಂಭವಾಗಿದ್ದು, ಯುವ ಸಮೂಹ ಅಭೂತಪೂರ್ವ ಆಸಕ್ತಿ ತೋರುತ್ತಿದೆ. ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ತಮ್ಮ ತರಗತಿಗಳು ಆರಂಭವಾಗುವ ಮುನ್ನವೇ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸುವ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

Karnataka Assembly by election 2026 Live:Bagalkote By-election 2026: ಬಾಗಲಕೋಟೆ ಉಪಕದನ, ಅಭ್ಯರ್ಥಿಗಳ ಹಣೆಬರಹ ಇಂದು ನಿರ್ಧಾರ
ತೀವ್ರ ಜಿದ್ದಾಜಿದ್ದಿನಿಂದ ಕೂಡಿರುವ ಬಾಗಲಕೋಟೆ ವಿಧಾನಸಭಾ ಉಪಚುನಾವಣೆಗೆ ಗುರುವಾರ ಮತದಾನ ನಡೆಯಲಿದ್ದು, ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಜಿಲ್ಲಾಡಳಿತ ಶಾಂತಿಯುತ ಮತದಾನಕ್ಕಾಗಿ 322 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಚುನಾವಣಾ ಸಿಬ್ಬಂದಿ ಅಗತ್ಯ ಸಾಮಗ್ರಿಗಳೊಂದಿಗೆ ತಮ್ಮ ಕರ್ತವ್ಯಕ್ಕೆ.
Karnataka Assembly by election 2026 Live:ರಾಜ್ಯದ 2 ಕ್ಷೇತ್ರಕ್ಕೆ ಇಂದು ಉಪಕದನ - ದಾವಣಗೆರೆ, ಬಾಗಲಕೋಟೇಲಿ ಮತದಾನ । ಮೇ 4ಕ್ಕೆ ಫಲಿತಾಂಶ , ಕಾಂಗ್ರೆಸ್- ಬಿಜೆಪಿ ನಡುವೆ ಭರ್ಜರಿ ಪೈಪೋಟಿ
ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮತದಾನ ನಡೆಯಲಿದ್ದು, ಇದು ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ನೇರ ಹಣಾಹಣಿ. ಕಾಂಗ್ರೆಸ್ ಹಿರಿಯ ನಾಯಕರ ನಿಧನದಿಂದ ತೆರವಾದ ಈ ಕ್ಷೇತ್ರಗಳಲ್ಲಿ, ಅನುಕಂಪದ ಅಲೆ ಮತ್ತು ಸರ್ಕಾರದ ಗ್ಯಾರಂಟಿಗಳು ಫಲಿತಾಂಶದ ಮೇಲೆ ಪ್ರಭಾವ ಬೀರಲಿವೆಯೇ?