9 ಇನ್ಸ್ಪೆಕ್ಟರ್ ವರ್ಗಾವಣೆ, ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರದ ಆದೇಶ ಹೊರಡಿಸಲಾಗಿದೆ. ತಕ್ಷಣದಿಂದಲೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶದಲ್ಲಿ ಸೂಚಿಸಲಾಗಿದೆ. ಯಾವ ಪೊಲೀಸ್ ಇನ್ಸ್ಪೆಕ್ಟರ್ಗಳ ವರ್ಗಾವಣೆ?
ಬೆಂಗಳೂರು (ಏ.23) ರಾಜ್ಯ ಸರ್ಕಾರದ ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆ ವಿಚಾರದಲ್ಲಿ ಮಹತ್ವದ ಆದೇಶ ಹೊರಡಿಸಿದೆ. 9 ಮಂದಿ ಇನ್ಸ್ಪೆಕ್ಟರ್ಗಳ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇಷ್ಟೇ ಅಲ್ಲ ಈ ಪೊಲೀಸ್ (ಸಿವಿಲ್) ಇನ್ಸ್ಪೆಕ್ಟರ್ ತಕ್ಷಣದಿಂದ ಜಾರಿಗೆ ಬರುವಂತೆ ನಿಯುಕ್ತಿಗೊಳಿಸಿದ ಸ್ಥಳಗಳಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶದಲ್ಲಿ ಸೂಚಿಸಲಾಗಿದೆ.
ಯಾವೆಲ್ಲಾ ಇನ್ಸ್ಪೆಕ್ಟರ್ ವರ್ಗಾವಣೆ?
1.ಜಹೀರ್ ಅಹಮದ್ ಮೊಕಾಶಿ
ರಾಜ್ಯ ಗುಪ್ತವಾರ್ತೆ ಯಿಂದ ಪೊಲೀಸ್ ತರಬೇತಿ ಶಾಲೆ ಖಾನಾಪುರ
2.ರಾಜಕುಮಾರ್ ವೈ ಬೀಳಗಿ
ಸಿ ಐ ಡಿ ಯಿಂದ ಸಿ.ಎಸ್.ಪಿ
3.ನಿಶ್ಚಲಕುಮಾರ್ ಡಿ ಎಂ
ಸಿ.ಎಸ್.ಪಿ ಯಿಂದ ಸಿ ಐ ಡಿ
4.ಬಸವರಾಜ್ ಎ ಕಾಮನಬೈಲ್
ವಿವಿಐಪಿ ಭದ್ರತೆ, ಬೆಂಗಳೂರುನಗರ ಇಲ್ಲಿಗೆ ವರ್ಗಾವಣೆ ಆದೇಶದಲ್ಲಿರುವವರು ಕರ್ನಾಟಕ ಲೋಕಾಯುಕ್ತಕ್ಕೆ
5.ಶಶಿಕಲಾ ಎಸ್
ಚೆಸ್ಕಾಂ ಜಾಗೃತದಳ, ಚಾಮರಾಜನಗರ ಯಿಂದ ಕರ್ನಾಟಕ ಲೋಕಾಯುಕ್ತ.
6.ನಿಂಗನಗೌಡ ಎ ಪಾಟೀಲ
ಮಹಿಳಾ ಪೊ.ಠಾಣೆ-1 ಬಸವನಗುಡಿ, ಬೆಂಗಳೂರು ನಗರದಿಂದ ಕರ್ನಾಟಕ ಲೋಕಾಯುಕ್ತ.
7.ರೋಹಿಣಿ ರಾಜೇಂದ್ರ ಪಾಟೀಲ
ಸಿ ಐ ಡಿ ಯಿಂದ ಆಂತರಿಕ ಭದ್ರತಾ ವಿಭಾಗ
8.ಮುರಳಿ ಎಂ.ಎನ್
ಡಿ ಸಿ ಆರ್ ಇ ಯಿಂದ ಎ.ಎನ್.ಟಿ.ಎಫ್., ಪೊಲೀಸ್ ಪ್ರಧಾನ ಕಛೇರಿ
9.ನಾರಾಯಣ ಸ್ವಾಮಿ ಸಿ ಎ
ಕರ್ನಾಟಕ ಲೋಕಾಯುಕ್ತದಿಂದ ಆಂತರಿಕ ಭದ್ರತಾ ವಿಭಾಗ
ವರ್ಗಾವಣೆಗೊಂಡಿರುವ ಇನ್ಸ್ಪೆಕ್ಟರ್ಗಳನ್ನು ಹಾಲಿ ವಿಭಾಗಳಿಂದ ತಕ್ಷಣದಿಂದಲೇ ಮುಕ್ತಿಗೊಳಿಸಲು ಆದೇಶದಲ್ಲಿ ಸೂಚಿಸಲಾಗಿದೆ. ಇಷ್ಟೇ ಅಲ್ಲ ಈ 9 ಮಂದಿ ನಿಯುಕ್ತಿಗೊಳಿಸಿದ ಸ್ಥಾನಕ್ಕೆ ಯಾವುದೇ ಕಾಲಾವಕಾಶಕ್ಕೆ ಅಕಾಶವಿಲ್ಲದೆ ತಕ್ಷಣವೇ ಹಾಜರಾಗುವಂತೆ ಸೂಚಿಸಲಾಗಿದೆ.


